ಕಡಬ: ದುಷ್ಕರ್ಮಿಗಳಿಂದ ಹತ್ಯೆಯಾಗಿರುವ ಹಿಂದೂ ಮುಖಂಡ ಪ್ರವೀಣ್ ನೆಟ್ಟಾರು ಅವರ ಮನೆಗೆ ಭೇಟಿ ನೀಡಲು ಆಗಮಿಸಿದ್ದ ಹಿಂದೂ ಮುಖಂಡ, ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಸವಣೂರಿನ ಪದ್ಮಯ್ಯ ಗೌಡ ಪರಣೆ ಅವರ ಮನೆಗೆ ಭೇಟಿ ನೀಡಿದರು.
ಈ ಸಂದರ್ಭ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಪ್ರಮೋದ್ ಮುತಾಲಿಕ್ ಮತೀಯವಾದದ ವಿರುದ್ಧ, ಕಮ್ಯುನಿಸ್ಟ್ ವಾದದ ವಿರುದ್ಧ, ಭ್ರಷ್ಟ ವ್ಯವಸ್ಥೆಯ ವಿರುದ್ಧ ಯುವಕರು ಒಗ್ಗಟ್ಟಾಗಿ ಹೋರಾಟ ಮಾಡಬೇಕಿದೆ.
ಹಿಂದೂಗಳ ಮೇಲೆ ನಿರಂತರ ದಾಳಿಯಾಗುತ್ತಿದೆ. ಇದರ ವಿರುದ್ಧ ನಾವೆಲ್ಲರೂ ಒಗ್ಗಟ್ಟಾಗಬೇಕು. ಹಿಂದೂಗಳ ನಡುವೆ ಏನೇ ಅಭಿಪ್ರಾಯ ಬೇಧವಿದ್ದರೂ ಒಂದಾಗಬೇಕು.
ಕ್ಷಾತ್ರತ್ವದ ಮೂಲಕ ನಾವೆಲ್ಲರೂ ದುಷ್ಟರ ವಿರುದ್ಧ ಹೋರಾಡಬೇಕು. ದೇಶದ ಅಖಂಡತೆಗೆ ನಾವೆಲ್ಲರೂ ಒಂದಾಗಬೇಕಿದೆ.
ಪ್ರಮೋದ್ ಮುತಾಲಿಕ್ ಅವರನ್ನು ಪದ್ಮಯ್ಯ ಗೌಡ ಪರಣೆ, ಮನೆಯವರು ಸ್ವಾಗತಿಸಿದರು. ಈ ಸಂದರ್ಭ ಸವಣೂರು ,ಪುತ್ತೂರು,ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು, ಬೆಳ್ಳಾರೆಯ ಬಜರಂಗದಳದ ಕಾರ್ಯಕರ್ತರು ಸೇರಿದಂತೆ ನೂರಾರು ಮಂದಿ ಉಪಸ್ಥಿತರಿದ್ದರು.