Connect with us

    LATEST NEWS

    ಪಿಪಿಇ ಕಿಟ್ ನೊಂದಿಗೆ ನರ್ತಿಸಿ ರೋಗಿಗಳ ಮನರಂಜಸಿದ ವೈದ್ಯ..!

    Published

    on

    ಪಿಪಿಇ ಕಿಟ್ ನೊಂದಿಗೆ ನರ್ತಿಸಿ ರೋಗಿಗಳ ಮನರಂಜಸಿದ ವೈದ್ಯ..!

    ನವದೆಹಲಿ : ಕೊರೊನಾ ವಿರುದ್ಧ ಜೀವದ ಹಂಗು ತೊರೆದು ಹೋರಾಡುತ್ತಿರೋ ವೈದ್ಯರ ಕರ್ತವ್ಯ ನಿಷ್ಠೆಗೆ ಎಷ್ಟು ಸಲಾಂ ಹೇಳಿದರೂ ಕೂಡ ಕಡಿಮೆಯೇ. ಚಿಕಿತ್ಸೆ ನೀಡಿ ಜನರ ಪ್ರಾಣ ಕಾಪಾಡೋದ್ರ ಜೊತೆ ಜೊತೆಗೆ ಆಸ್ಸಾಂನ ವೈದ್ಯರೊಬ್ಬರು ನೃತ್ಯ ಮಾಡುವ ಮೂಲಕ ರೋಗಿಗಳನ್ನ ರಂಜಿಸಿದ್ದಾರೆ.

    ಡಾ. ಸೈಯದ್​ ಅಹಮದ್​​ ಎಂಬವರು ಶೇರ್​ ಮಾಡಿರುವ ವಿಡಿಯೋದಲ್ಲಿ ಪಿಪಿಇ ಕಿಟ್​ ಹಾಕಿದ ವೈದ್ಯ ಅನುಪ್​ ಸೇನಾಪತಿ ವಾರ್​ ಸಿನಿಮಾದ ಹಾಡಿಗೆ ಗುಂಗ್ರೂ ಡ್ಯಾನ್ಸ್ ಮಾಡಿ ಕೊರೊನಾ ರೋಗಿಗಳನ್ನ ಚಿಯರ್​ ಅಪ್ ಮಾಡಿದ್ದಾರೆ.

    ಈ ರೀತಿ ಪಿಪಿಇ ಕಿಟ್​ ಹಾಕಿ ವೈದ್ಯರು ನೃತ್ಯ ಮಾಡಿದ್ದು ಇದೇ ಮೊದಲಲ್ಲ. ಈ ಹಿಂದೆ ಡಾ. ರಿಚಾ ನೇಗಿ ಎಂಬವರು ತಮ್ಮ ಇನ್ಸ್​ಟಾಗ್ರಾಂ ಖಾತೆಯಲ್ಲಿ ಸ್ಟ್ರೀಟ್​ ಡ್ಯಾನ್ಸರ್​ ಫಿಲಂನ ಹಾಡೊಂದಕ್ಕೆ ನೃತ್ಯ ಮಾಡ್ತಿರೋ ವಿಡಿಯೋವೊಂದನ್ನ ಪೋಸ್ಟ್ ಮಾಡಿದ್ದರು.

    ಡಾ. ಅನೂಪ್​ ಸೇನಾಪತಿ ನೃತ್ಯ ಮಾಡಿರೋ ಈ ವಿಡಿಯೋ ಈಗಾಗಲೇ ಲಕ್ಷಕ್ಕೂ ಹೆಚ್ಚು ವೀವ್ಸ್ ಪಡೆದುಕೊಂಡಿದೆ ಹಾಗೂ 2400 ಮಂದಿ ಈ ವಿಡಿಯೋಗೆ ಕಮೆಂಟ್​ ಮತ್ತು 11300 ಮಂದಿ ಲೈಕ್​ ಕೊಟ್ಟಿದ್ದಾರೆ.

    `ವಾರ್’ ಚಿತ್ರದಲ್ಲಿ ಈ ಹಾಡಿಗೆ ಕುಣಿದಿದ್ದ ನಟ ಹೃತಿಕ್ ರೋಶನ್ ಕೂಡ ಟ್ವೀಟ್ ಮಾಡಿ ವೈದ್ಯರನ್ನು ಪ್ರಶಂಸಿಸಿದ್ದಾರೆ. “ಅವರಂತೆಯೇ ಹೆಜ್ಜೆ ಹಾಕಿ ಕುಣಿಯಲು ಮುಂದೊಂದು ದಿನ ಅಸ್ಸಾಂನಲ್ಲಿ ನಾನು ಕಲಿಯುತ್ತೇನೆ ಎಂದು ಡಾ. ಅರುಪ್ ಅವರಿಗೆ ಹೇಳಿ, ಟೆರ್ರಿಫಿಕ್ ಸ್ಪಿರಿಟ್,” ಎಂದು ಹೃತಿಕ್ ಬರೆದಿದ್ದಾರೆ.

    ಸಿಲ್ಚಾರ್ ಮೆಡಿಕಲ್ ಕಾಲೇಜು ಆಸ್ಪತ್ರೆಯ ರಿಕವರಿ ಕೊಠಡಿಯಲ್ಲಿ ಕೆಲ ರೋಗಿಗಳು ಹಾಗೂ ವೈದ್ಯರ ತಂಡದೆದುರು ಈ ನೃತ್ಯ ಮಾಡಿದೆ.

    ಒಂದು ವಾರ ಅವಿರತ ಕರ್ತವ್ಯದ ಬಳಿಕ ನಾವೆಲ್ಲರೂ ಮರುದಿನದಿಂದ ಕಡ್ಡಾಯ ಕ್ವಾರಂಟೈನ್ ನಲ್ಲಿರಬೇಕಿತ್ತು.

    ಆ ದಿನ ನಾನು ನೃತ್ಯ ಮಾಡಬೇಕೆಂದು ಸಹೋದ್ಯೋಗಿಗಳು ಹೇಳಿದ್ದರು, ಎಲ್ಲರೂ ಖುಷಿ ಪಟ್ಟರು,” ಎಂದು ಅವರು ಹೇಳಿದ್ದಾರೆ.

    ಕಾಲೇಜು ದಿನಗಳಿಂದಲೇ ವೈದ್ಯರು ನೃತ್ಯಪಟುವಾಗಿದ್ದು ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನೂ ಗಳಿಸಿದ್ದಾರೆ.

    DAKSHINA KANNADA

    ರಾಜ್ಯ ಮಟ್ಟದ ತ್ರೋಬಾಲ್ ನಲ್ಲಿ ದ್ವಿತೀಯ ಸ್ಥಾನ ಪಡೆದ ದರ್ಬೆ ಬೆಥನಿ ಶಾಲೆ ವಿದ್ಯಾರ್ಥಿಗಳಿಗೆ ಸನ್ಮಾನ

    Published

    on

    ಪುತ್ತೂರು: ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಕೋಲಾರ ಜಿಲ್ಲೆಯ ಕೆಜಿಎಫ್ ಪ್ರೌಢ ಶಾಲೆಯಲ್ಲಿದಿನಾಂಕ 8/9ರಂದು ನಡೆದ ಪ್ರಾಥಮಿಕ ಶಾಲಾ ಬಾಲಕಿಯರ ವಿಭಾಗದ ತ್ರೋಬಾಲ್ ಪಂದ್ಯಾಟದಲ್ಲಿ ದ್ವಿತೀಯ ಸ್ಥಾನ ವನ್ನು ಪಡೆದ ಪುತ್ತೂರು ದರ್ಬೆಯ ಬೆಥನಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

    ಆದ್ಯ ಕೆ, ಶಾನ್ವಿ ಪ್ರೀಷ್ಮ, ಫಾತಿಮಾತ್ ಮುನವರ, ಫಾತಿಮಾತ್ ಝುಲ್ಫ, ನಿರೀಕ್ಷಾ H ಶೆಟ್ಟಿ , ಸ್ನಿಗ್ಧ, ಆಯಿಷಾತ್ ಹಿಬಾ ಸಮನ್ವಿ, ಹಿತಾಶ್ರೀ, ಜೆರುಷ, ರೇಯ ಇವರಿಗೆ ಶಾಲಾ ಸಂಚಾಲಕಿ ಭಗಿಣಿ ಪ್ರಶಾಂತಿ ಬಿ ಎಸ್ ಇವರ ನೇತೃತ್ವ ದಲ್ಲಿ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

    ಈ ಕಾರ್ಯಕ್ರಮದಲ್ಲಿ ಪ್ರೌಢ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷರು ಗಳು, ಮಕ್ಕಳ ಹಕ್ಕುಗಳ ರಕ್ಷಣಾ ಸಮಿತಿಯ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಗಳು ಹಾಗೂ ಎರಡು ವಿಭಾಗದ ಮುಖ್ಯಪಾಧ್ಯಾಯರು ಗಳು ಭಾಗವಹಿಸಿದ್ದರು. ಜೊತೆಗೆ ರಾಜ್ಯಮಟ್ಟದಲ್ಲಿ ಸಾಧನೆಗೈದ ಮಕ್ಕಳ ಪೋಷಕರು ಕೂಡ ಭಾಗವಹಿಸಿದ್ದರು…ಮಕ್ಕಳು ರಾಜ್ಯಮಟ್ಟದಲ್ಲಿ ಉತ್ತಮ ಸಾಧನೆಯನ್ನು ಮಾಡಲು ಕಾರಣಕರ್ತರದ ಸಂಸ್ಥೆಯ ದೈಹಿಕ ಶಿಕ್ಷಕರಾದ ಶ್ರೀಯುತ ನಿರಂಜನ್, ಅಕ್ಷಯ್ ಹಾಗೂ ಹರೀಶ್ ಇವರನ್ನು ಕೂಡ ಸನ್ಮಾನಿಸಲಾಯಿತು. ಶಿಕ್ಷಕಿ ಪವಿತ್ರ ಇವರು ಸ್ವಾಗತ ಮಾಡಿದರು, ಅನಿತಾ ರೋಡ್ರಿ ಗಸ್ ವಂದನಾರ್ಪಣೆ ಗೈದರು,ಶಿಕ್ಷಕಿ ಸೌಮ್ಯ ಇವರು ಕಾರ್ಯಕ್ರಮವನ್ನು ನಿರೂಪಿಸಿದರು

    Continue Reading

    BANTWAL

    ರಸ್ತೆ ಬದಿ ನಿಲ್ಲಿಸಿದ್ದ ಸ್ಕೂಟರಿಗೆ ಕಾರು ಢಿಕ್ಕಿ; ಸವಾರ ದುರ್ಮರಣ

    Published

    on

    ಬಂಟ್ವಾಳ : ಕಾರೊಂದು ಢಿಕ್ಕಿಯಾದ ಪರಿಣಾಮ ಸ್ಕೂಟರ್ ಸವಾರ ಗಂಭಿರ ಗಾಯಗೊಂಡು ಮೃತಪಟ್ಟ ಘಟನೆ ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿನ ಬಂಟ್ವಾಳ ತಾಲೂಕಿನ ಪೆರಮುಗೇರು ಸತ್ತಿಕಲ್ಲು ಎಂಬಲ್ಲಿ ಬುಧವಾರ ಸಂಜೆ ನಡೆದಿದೆ.

    ಬಂಟ್ವಾಳ ತಾಲೂಕಿನ ಕೆದಿಲ ಗ್ರಾಮದ ಕುದ್ಮಾನ್ ನಿವಾಸಿ ಅಬ್ಬಾಸ್ ಎಂಬವರ ಪುತ್ರ ಉಸ್ಮಾನ್ (24) ಮೃತರು ಎಂದು ಗುರುತಿಸಲಾಗಿದೆ. ವೃತ್ತಿಯಲ್ಲಿ ಪೈಂಟರ್ ಆಗಿದ್ದ ಉಸ್ಮಾನ್ ಅವರು ತನ್ನ ಸ್ಕೂಟರ್ ನಲ್ಲಿ ಮನೆಗೆ ತೆರಳುತ್ತಿದ್ದು ಸತ್ತಿಕಲ್ಲಿನಲ್ಲಿ ರಸ್ತೆ ಬದಿಯಲ್ಲಿ ಸ್ಕೂಟರ್ ನಿಲ್ಲಿಸಿ ಮೊಬೈಲ್ ನಲ್ಲಿ ಮಾತನಾಡುತ್ತಿರುವ ವೇಳೆ ನೋಂದಣಿಯಾಗದ ಕಾರೊಂದು ಏಕಾಏಕಿ ಅವರ ಸ್ಕೂಟರ್ ಗೆ ಢಿಕ್ಕಿಯಾಗಿತ್ತು.

    ಇದನ್ನೂ ಓದಿ: ಬೈಕ್‌ಗಳು ಪರಸ್ಪರ ಮು*ಖಾಮು*ಖಿ ; ಬಾಲಕಿ ಸಾ*ವು

    ಈ ಸಂದರ್ಭ ಸ್ಕೂಟರ್ ನಲ್ಲಿ ಕುಳಿತಿದ್ದ ಉಸ್ಮಾನ್ ಅವರು ರಸ್ತೆಗೆಸೆಯಲ್ಪಟ್ಟು ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಘಟನೆಯಿಂದ ಕಾರು ಮತ್ತು ಬೈಕ್ ರಸ್ತೆ ಬದಿಯ ಚರಂಡಿಗೆ ಉರುಳಿ ಬಿದ್ದಿದೆ. ಪುತ್ತೂರು ಸಂಚಾರಿ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

    Continue Reading

    LATEST NEWS

    ಅ*ಪಘಾ*ತದಲ್ಲಿ ಗಾ*ಯಗೊಂಡವರನ್ನು ರಕ್ಷಿಸಿದ್ರೆ ಸಿಗುತ್ತೆ ಸ್ಪೆಶಲ್ ಕ್ಯಾಶ್ ಪ್ರೈಸ್

    Published

    on

    ಮಂಗಳೂರು/ನಾಗಪುರ : ಅ*ಪಘಾ*ತದಲ್ಲಿ ಗಾ*ಯಗೊಂಡವರಿಗೆ ಸಹಾಯ ಮಾಡುವ ಪರೋಪಕಾರಿಗಳಿಗೆ ರೂ.25 ಸಾವಿರವನ್ನು ಬಹುಮಾನವಾಗಿ ನೀಡಲಾಗುವುದು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಘೋಷಿಸಿದ್ದಾರೆ.

    ನಾಗಪುರದಲ್ಲಿ ನಡೆದ ರಸ್ತೆ ಸುರಕ್ಷಾ ಕಾರ್ಯಕ್ರಮದಲ್ಲಿ ಮಾತನಾಡಿದ ಗಡ್ಕರಿ , “ಅ*ಪಘಾ*ತವಾದಾಗ ಮೊದಲ 1 ಗಂಟೆ ನಿರ್ಣಾಯಕವಾಗಿದ್ದು, ಆ ಅವಧಿಯಲ್ಲಿ ಸಂತ್ರಸ್ತರನ್ನು ಆಸ್ಪತ್ರೆಗಳಿಗೆ ಸಾಗಿಸುವ ವ್ಯಕ್ತಿಗೆ ಈಗ ನೀಡುತ್ತಿರುವ ಸಾವಿರ ರೂ.ಬಹುಮಾನ ಸಾಲುತ್ತಿಲ್ಲ. ಹೀಗಾಗಿ ಅವರಿಗೆ 25 ಸಾವಿರ ರೂ. ನೀಡಲಾಗುವುದು ಎಂದು ಘೋಷಣೆ ಮಾಡಿದ್ದಾರೆ. ಕೇಂದ್ರ ಸರಕಾರವು, ಅಪಘಾತಗಳಲ್ಲಿ ಗಾಯಗೊಂಡವರಿಗೆ ಮೊದಲ 7 ದಿನಗಳವರೆಗೆ 1.5 ಲಕ್ಷರೂ. ವರೆಗಿನ ಆಸ್ಪತ್ರೆ ವೆಚ್ಚವನ್ನು ಸಹ ಭರಿಸಲಿದೆ. ಇದು ರಾಜ್ಯ ಹೆದ್ದಾರಿಗಳಲ್ಲಿ ಗಾಯಗೊಂಡರೂ ಅನ್ವಯಿಸುತ್ತದೆ” ಎಂದು ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.

    ಅಪಘಾತದಲ್ಲಿ ಗಾಯಗೊಂಡವರಿಗೆ ನೆರವಾಗುವವರಿಗೆ ಬಹುಮಾನ ನೀಡುವ ಯೋಜನೆಯ ಪ್ರಕಾರ, ಮಾರಣಾಂತಿಕ ಅಪಘಾತಕ್ಕೊಳಗಾದವರ ಜೀವವನ್ನು ತಕ್ಷಣದ ಸಹಾಯವನ್ನು ಒದಗಿಸುವ ಮೂಲಕ ಮತ್ತು ವೈದ್ಯಕೀಯ ಚಿಕಿತ್ಸೆಗಾಗಿ ಗೋಲ್ಡನ್ ಅವರ್ (ಅ*ಪಘಾ*ತದ ನಂತರದ ಮೊದಲ ಗಂಟೆ) ಒಳಗೆ ಆಸ್ಪತ್ರೆಗೆ ಸಾಗಿಸುವ ಮೂಲಕ ಉಳಿಸುವ ಜನರಿಗೆ ಬಹುಮಾನ ನೀಡಲಾಗುತ್ತದೆ.

    Continue Reading

    LATEST NEWS

    Trending