Connect with us

    DAKSHINA KANNADA

    ಯಕ್ಷಬೊಳ್ಳಿ ಕಡಬ ದಿನೇಶ್ ರೈ ಕಲಾಯಾನದ ರಜತ ಸಂಭ್ರಮ ದಿನ ಮುಂದೂಡಿಕೆ

    Published

    on

    ಮಂಗಳೂರು : ಯಕ್ಷಬೊಳ್ಳಿ ಅಭಿಮಾನಿ ಬಳಗ ಮತ್ತು ಯಕ್ಷಾಭಿಮಾನಿಗಳು ಕಡಬ ನೇತೃತ್ವದಲ್ಲಿ ಯಕ್ಷಗಾನ ಹಾಸ್ಯ ಕಲಾವಿದ ಯಕ್ಷಬೊಳ್ಳಿ ಕಡಬ ದಿನೇಶ್ ರೈ ‘ಕಲಾ ಯಾನದ ರಜತ ಸಂಭ್ರಮ- ಬೊಳ್ಳಿ ಪರ್ಬ- 25’ ಕಾರ್ಯಕ್ರಮ ಕಡಬ ಶ್ರೀ ದುರ್ಗಾಂಬಿಕಾ ಅಮ್ಮನವರ ಕ್ಷೇತ್ರದ ವಠಾರದಲ್ಲಿ ಆಯೋಜಿಸಲಾಗಿದ್ದು, ಇದೀಗ ಅನಿವಾರ್ಯ ಕಾರಣಗಳಿಂದ ಮುಂದೂಡಲಾಗಿದೆ.

    ಜನವರಿ 22ನೇ ತಾರೀಕು ಬುಧವಾರ ನಡೆಯಬೇಕಿದ್ದ ಕಾರ್ಯಕ್ರಮವನ್ನು ಇದೀಗ ಕಾರಣಾಂತರಗಳಿಂದ ಕಾರ್ಯಕ್ರಮವನ್ನು ಮುಂದೂಡಲಾಗಿದೆ. ಮುಂದಿನ ದಿನಾಂಕವನ್ನು ಶೀಘ್ರವೇ ಪತ್ರಿಕಾಗೋಷ್ಠಿಯಲ್ಲಿ ತಿಳಿಸಲಾಗುವುದು.

    ಕಡಬ ದಿನೇಶ ರೈ ಕಲಾಸೇವೆ ವಿವರ :

    ಕಡಬ ದಿನೇಶ ರೈ ಪ್ರಾರಂಭದಲ್ಲಿ ಶ್ರೀ ಧರ್ಮಸ್ಥಳ ಮೇಳದಲ್ಲಿ ಸೇವೆ ಸಲ್ಲಿಸಿ, ಬಳಿಕ ಶ್ರೀ ಕ್ಷೇತ್ರ ಕಟೀಲು, ಪುತ್ತೂರು ಮೇಳ, ಕುಂಟಾರು ಮೇಳ, ಮಂಗಳಾದೇವಿ ಮೇಳ, ತೆಂಕು – ಬಡಗು ಸಮ್ಮಿಶ್ರಗೊಂಡ ಹಿರಿಯಡ್ಕಮೇಳ, ತಳಕಲ ಮೇಳ, ಸುಂಕದಕಟ್ಟೆ ಮೇಳ, ಬಾಚಕೆರೆ ಮೇಳ, ಪ್ರಸ್ತುತ ಗೆಜ್ಜೆಗಿರಿ ಮೇಳದಲ್ಲಿ ಹಾಸ್ಯ ಕಲಾವಿದರಾಗಿ ಸೇವೆಗೈಯುತ್ತಿದ್ದಾರೆ.

    ರವಿ ಕುಮಾರ್ ಸುರತ್ಕಲ್ ರಚಿಸಿದ ನಾಗತಂಬಿಲದ ಕೂಸಮ್ಮ (ನಂಜುಂಡ)ನ ಪಾತ್ರ ಯಕ್ಷ ರಂಗದಲ್ಲಿ ಹೊಸ ತಿರುವು ತಂದು ಕೊಟ್ಟಿತ್ತು. ನಾಗರಪಂಚಮಿಯ ನೋಣಯ್ಯ, ವಜ್ರ ಕುಟುಂಬದ ಕಪಟ ಸ್ವಾಮೀಜಿ, ಪವಿತ್ರ ಪಲ್ಲವಿಯ ಪದ್ಮಾವತಿ, (ಪದ್ದು) ಚೆನ್ನಿ- ಚೆನ್ನಮ್ಮದ ಪುರುಷೋತ್ತಮ, ವಿಜಯಕೇಸರಿಯ ಮಾರುತಿ, ಜೀವನಚಕ್ರದ ನಿಷ್ಠಾವಂತ ಸೇವಕ, ಗುಳಿಗೋದ್ಭವ ಪಂಜುರ್ಲಿ – ಪ್ರತಾಪ ದ ಗೋಪಾಲ, ಹಾಗೂ ಚಂದ್ರ, ಮನ ಸೂರೆಗೊಂಡ ಪಾತ್ರಗಳು. ತೆಂಕು -ಬಡಗಿನಲ್ಲಿ ತುಳು – ಕನ್ನಡದಲ್ಲಿ ಪೌರಾ ಣಿಕ, ಸಾಮಾಜಿಕ, ಐತಿಹಾಸಿಕ ಯಾವುದೇ ಪ್ರಸಂಗವಾದರೂ ಕಥೆಗೆ ಲೋಪ ಬಾರದಂತೆ ತಮ್ಮದೇ ಶೈಲಿಯ ಹಾಸ್ಯದಲ್ಲಿ ಜನರನ್ನು ರಂಜಿಸುತ್ತಿದ್ದಾರೆ. ಯಕ್ಷಗಾನ ಮಾತ್ರವಲ್ಲದೆ ನಾಟಕ, ತುಳು ಸಿನೆಮಾ, ಧಾರಾವಾಹಿಗಳಲ್ಲಿ ನಟಿಸಿದ್ದಾರೆ.

    ತುಳು ಸಾಹಿತ್ಯ ಅಕಾಡೆಮಿ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದ ಕಡಬ ದಿನೇಶ ರೈ ಗೆ ಇರುವೈಲು ಶ್ರೀ ಸತ್ಯನಾರಾಯಣ ಪೂಜಾ ಸೇವಾ ಸಮಿತಿ ‘ಯಕ್ಷ ಬೊಳ್ಳಿ’ ಎಂಬ ಬಿರುದು ನೀಡಿ ಗೌರವಿಸಿದೆ.

    DAKSHINA KANNADA

    ಪುತ್ತೂರು : ಖತರ್ನಾಕ್ ಮನೆಗಳ್ಳ ಅರೆಸ್ಟ್; ತನಿಖೆ ವೇಳೆ ಬಹಿರಂಗವಾಯ್ತು ಹಲವು ಪ್ರಕರಣ

    Published

    on

    ಪುತ್ತೂರು : ಪುತ್ತೂರು ಗ್ರಾಮಾಂತರ, ವಿಟ್ಲ, ಕಡಬ ಪೊಲೀಸರು ಕಾರ್ಯಾಚರಣೆ ನಡೆಸಿ ಖತರ್ನಾಕ್ ಮನೆಗಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಾಸರಗೋಡಿನ ಸೂರಜ್ ಕೆ(36) ಬಂಧಿತ ಕಳ್ಳ.  ಡಿಸೆಂಬರ್ 20 ರಂದು ಭಕ್ತಕೋಡಿ ಎಂಬಲ್ಲಿ ಮನೆಯ ಹಿಂಬಾಗಿಲು ಮುರಿದು ಆರೋಪಿ ಸೂರಜ್ ಚಿನ್ನಾಭರಣಗಳನ್ನು ಕದ್ದಿದ್ದ. ಇದೇ ರೀತಿಯ ಪ್ರಕರಣಗಳು ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಬೆಳಕಿಗೆ ಬಂದಿತ್ತು.

    ಕಳ್ಳನ ಜಾಡು ಹಿಡಿದು ಹೊರಟ ಪೊಲೀಸರು ಕಾರು ಸಮೇತ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ತನಿಖೆ ವೇಳೆ ಆತ ಹಲವು ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎಂಬುದು ಬಯಲಾಗಿದೆ.  ಪುತ್ತೂರು ಗ್ರಾಮಾಂತರ ಠಾಣಾ ಸರಹದ್ದಿನ ಸರ್ವೆ ಗ್ರಾಮದ ಭಕ್ತಕೋಡಿ, ಕಡಬ ಠಾಣಾ ವ್ಯಾಪ್ತಿಯ ಆಲಂಗಾರು ಗ್ರಾಮದ ಕಲ್ಲೇರಿ, ಬಂಟ್ವಾಳ ಗ್ರಾಮಾಂತರ ವ್ಯಾಪ್ತಿಯ ಇರಾ, ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಕೊಳ್ನಾಡು ಗ್ರಾಮದ ಕುಂಟು ಕುಡೇಲು, ಮಂಕುಡೆ, ಕಾಡುಮಠ, ಇಡ್ಕಿದು ಗ್ರಾಮದ ಅಳಕೆ ಮಜಲು ಎಂಬಲ್ಲಿ ಆರೋಪಿ ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎಂಬುದಾಗಿ ತಿಳಿದುಬಂದಿದೆ.

    ಇದನ್ನೂ ಓದಿ : ಮಂಗಳೂರಿಗೆ ಮೊದಲು ರೈಲು ಬಂದದ್ದು ಯಾವಾಗ ಗೊತ್ತಾ..?

    ಆರೋಪಿಯಿಂದ 18,00000 ಮೌಲ್ಯದ 200 ಗ್ರಾಂ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ್ದ 3,00,000 ರೂ. ಮೌಲ್ಯದ ಕಾರು ಸೇರಿ ಒಟ್ಟು 21,00,000 ರೂ.ನ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

     

     

     

    Continue Reading

    DAKSHINA KANNADA

    ಮಂಗಳೂರಿಗೆ ಮೊದಲು ರೈಲು ಬಂದದ್ದು ಯಾವಾಗ ಗೊತ್ತಾ..?

    Published

    on

    ಮಂಗಳೂರು: ಭಾರತೀಯ ರೈಲ್ವೇಗೆ ಸುಮಾರು 170 ವರ್ಷಗಳ ಇತಿಹಾಸ ಇದೆ. 1853 ರಲ್ಲಿ ಭಾರತದ ರೈಲು ಸಂಪರ್ಕ ಆರಂಭವಾಯಿತು. ಇವತ್ತಿನ ಈ ದಿನ ದೇಶದಾದ್ಯಂತ ಸುಮಾರು 23 ಸಾವಿರಕ್ಕಿಂತಲೂ ಹೆಚ್ಚಿನ ರೈಲುಗಳಿವೆ. ರೈಲ್ವೇ ವ್ಯವಸ್ಥೆಯಲ್ಲಿ ಇಡೀ ಜಗತ್ತಿನಲ್ಲೇ ಭಾರತ ನಾಲ್ಕನೇ ಸ್ಥಾನದಲ್ಲಿದೆ. ಇದರೆಲ್ಲದರ ನಡುವೆ ಮಂಗಳೂರಿಗೆ ಮೊದಲು ರೈಲು ಯಾವಾಗ ಬಂದಿತು..? ಅದು ಯಾವುದು..? ತಿಳಿಯೋಣ ಬನ್ನಿ.

    ಭಾರತಕ್ಕೆ ರೈಲಿನ ಪರಿಚಯ ಆಗಿ 54 ವರ್ಷಗಳ ನಂತರ ಅಂದರೆ 1907 ರಲ್ಲಿ ನಮ್ಮ ಮಂಗಳೂರಿಗೆ ಮೊದಲ ರೈಲು ಬಂದಿತು. 1906 ರ ತನಕ ರೈಲ್ವೇ ಪಟ್ಟಿ ಕಾಂಞಂಗಾಡ್ ವರೆಗೆ ಮಾತ್ರ ಇತ್ತು. ತದನಂತರ ಕಾಸರಗೋಡು, ಕುಂಬ್ಳೆ ಆಗಿ ಮಂಗಳೂರಿಗೆ ಬರುತ್ತದೆ. 1907 ರಲ್ಲಿ ಕ್ಯಾಲಿಕಟ್ ನಿಂದ ಮಂಗಳೂರಿಗೆ ಮೊದಲ ರೈಲು ಬರುತ್ತದೆ. ಇದನ್ನು ಆಗದ ಮದ್ರಾಸ್ ಗವರ್ನರ್ ಹೆಚ್‌. ಇ. ಸರ್ ಆರ್ಥರ್ ಲವ್ಲಿ ಉದ್ಘಾಟನೆ ಮಾಡಿದರು.

    1910 ರಲ್ಲಿ ಮದ್ರಾಸ್‌ನಿಂದ ಮಂಗಳೂರಿಗೆ ರೈಲು ಬರಲು ಪ್ರಾರಂಭವಾಯಿತು. ಆ ರೈಲಿನಲ್ಲಿ ನಮ್ಮ ಮಂಗಳೂರಿನಲ್ಲಿ ಆಗಿತ್ತಿದ್ದ ಹಂಚುಗಳು ರವಾನೆ ಆಗುತ್ತಿದ್ದವು. ವಿಶೇಷವೆಂದರೆ 1929 ರಲ್ಲಿ ಮಂಗಳೂರಿನಿಂದ ಪಾಕಿಸ್ತಾನದ ಪೇಶಾವರಕ್ಕೆ ರೈಲ್ವೇ ವ್ಯವಸ್ಥೆ ಇದ್ದವು. ಆ ರೈಲಿನ ಹೆಸರು ಗ್ರಾಂಡ್ ಟ್ರಂಕ್ ಎಕ್ಸ್‌ಪ್ರೆಸ್. ಇದು ಭಾರೀ ಉದ್ದದ ರೈಲು ಜರ್ನಿ ಆಗಿದ್ದು, ಹೋಗಿ ಎತ್ತಲು 4 ರಿಂದ 5 ದಿನಗಳು ಬೇಕಿದ್ದವಂತೆ.

    1930ರ ನಂತರ ಮಂಗಳೂರಿನಲ್ಲಿ ಶಾಶ್ವತ ರೈಲ್ವೇ ಸ್ಟೇಷನ್ ಆಗುತ್ತದೆ. ಮಂಗಳೂರು ಸಿಟಿಯ ವಳಗೆ ಮಂಗಳೂರು ಸೆಂಟ್ರಲ್ ಮತ್ತು ಮಂಗಳೂರು ಜಂಕ್ಷನ್ ಎನ್ನುವ ಎರಡು ದೊಡ್ಡ ಸ್ಟೇಷನ್ ಗಳು ಆಗುತ್ತದೆ. ದಕ್ಷಿಣ ರೈಲ್ವೇ ವಲಯದ ಪಾಲಕ್ಕಾಡ್ ರೈಲ್ವೇ ವಿಭಾಗದಲ್ಲಿ ನಮ್ಮ ಮಂಗಳೂರಿನ ರೈಲ್ವೇ ಸ್ಟೇಷನ್ ಬರುತ್ತದೆ. ಇಲ್ಲಿಂದ ದೇಶದ ಮೂಲೆ ಮೂಲೆಗೆ ಹೋಗಲು ಒಂದಷ್ಟು ರೈಲುಗಳು ಇವೆ.

    Continue Reading

    DAKSHINA KANNADA

    ಕರಾವಳಿ ಉತ್ಸವದ ಅಂಗವಾಗಿ ಇಂದು ಬೀಚ್‌ ಉತ್ಸವ; ನೃತ್ಯೋತ್ಸವ, ಕದ್ರಿ ಮಣಿಕಾಂತ್ ಲೈವ್

    Published

    on

    ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾಡಳಿತದ ವತಿಯಿಂದ ನಡೆಯುತ್ತಿರುವ ಕರಾವಳಿ ಉತ್ಸವದ ಅಂಗವಾಗಿ ಬಹು ನಿರೀಕ್ಷಿತ ಬೀಚ್‌ ಉತ್ಸವ ಇಂದು ಆರಂಭವಾಗಲಿದೆ.

    ಇಂದು ಮತ್ತು ನಾಳೆ ಎರಡು ದಿನಗಳ ಕಾಲ ತಣ್ಣೀರು ಬಾವಿ ಬೀಚ್‌ ನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಸಂಜೆ 6 ಗಂಟೆಗೆ ನೃತ್ಯೋತ್ಸವ ಹಾಗೂ ರಾತ್ರಿ 7.30 ಕ್ಕೆ ಕದ್ರಿ ಮಣಿಕಾಂತ್ ಲೈವ್ ಕಾರ್ಯಕ್ರಮ ನಡೆಯಲಿದೆ.

    ಇದನ್ನೂ ಓದಿ: ಕರಾವಳಿ ಉತ್ಸವ ಪ್ರಯುಕ್ತ ಕದ್ರಿ ಪಾರ್ಕ್‌ನಲ್ಲಿ ಕಾರು-ಬೈಕ್‌ಗಳ ಪ್ರದರ್ಶನ

    ಇನ್ನುಮಂಗಳಾ ಕ್ರೀಡಾಂಗಣ ಬಳಿಯ ಕರಾವಳಿ ಉತ್ಸವ ವಸ್ತು ಪ್ರದರ್ಶನ ವೇದಿಕೆಯಲ್ಲಿ ಇಂದು ಸಂಜೆ 6 ರಿಂದ ಮಂಗಳೂರು ಬಾಯ್‍ಝೋನ್ ಡ್ಯಾನ್ಸ್ ಅಕಾಡೆಮಿ ವತಿಯಿಂದ ಫಿಲ್ಮಿ ಡ್ಯಾನ್ಸ್ ಹಾಗೂ ರಾತ್ರಿ 7.30 ರಿಂದ ಮಂಗಳೂರು ಪತ್ರಕರ್ತರ ಯಕ್ಷ ಮಾಧ್ಯಮದಿಂದ ಯಕ್ಷ ವೈವಿಧ್ಯ ನಡೆಯಲಿದೆ.

    ಇದಲ್ಲದೆ ಕದ್ರಿ ಪಾರ್ಕಿನಲ್ಲಿ ಕಲಾಪರ್ಬ ಚಿತ್ರ ಶಿಲ್ಪ ನೃತ್ಯ ಮೇಳ ಹಾಗೂ ಮಕ್ಕಳ ಚಿತ್ರ ಕಲಾ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.

    Continue Reading

    LATEST NEWS

    Trending