Home ಮಂಗಳೂರು ಪೋಸ್ಟ್ ಕಾರ್ಡ್ ಮಹೇಶ್ ವಿಕ್ರಂಗೆ ಮುಸ್ಲಿಂ ಯುವತಿಯಿಂದ ಪ್ರಶ್ನೆಗಳ ಕಿರಿಕ್

ಪೋಸ್ಟ್ ಕಾರ್ಡ್ ಮಹೇಶ್ ವಿಕ್ರಂಗೆ ಮುಸ್ಲಿಂ ಯುವತಿಯಿಂದ ಪ್ರಶ್ನೆಗಳ ಕಿರಿಕ್

ಖ್ಯಾತ ಪತ್ರಕರ್ತ ಅರ್ನಬ್ ಗೋಸ್ವಾಮಿಗೆ ವಿಮಾನದಲ್ಲಿ ಕಾಮಿಡಿಯನ್ ಕುನಾಲ್ ಕಾಮ್ರಾ ಒಂದಷ್ಟು ಪ್ರಶ್ನೆಗಳನ್ನು ಕೇಳಿದ್ದ ವಿಡಿಯೋ ವೈರಲ್ ಆದ ಬೆನ್ನಲ್ಲೇ, ಇದೀಗ ಮಂಗಳೂರಿನ ಪೋಸ್ಟ್‌ ಕಾರ್ಡ್ ಖ್ಯಾತಿಯ ಮಹೇಶ್ ವಿಕ್ರಂ ಹೆಗಡೆಗೂ ಇದೇ ರೀತಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಯುವತಿಯರು ಪ್ರಶ್ನೆ ಕೇಳಿ ತಲೆ ತಿಂದಿರುವ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಮುಸ್ಲಿಂ ಯುವತಿ ಹಾಗೂ ಆಕೆಯ ಇನ್ನಿತರೆ ಕೆಲವು ಸ್ನೇಹಿತರು ಮಹೇಶ್ ವಿಕ್ರಂ ಹೆಗಡೆ ಬಳಿ ಬಂದು ಕುಳಿತು ‘ವಂದೇ ಮಾತರಂ’ ಗೀತೆ ಹಾಡಿ ಎಂದು ಕೇಳುತ್ತಿರುವ ಒಂದೂವರೆ ನಿಮಿಷಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಪೋಸ್ಟ್‌ಕಾರ್ಡ್ ವೆಬ್‌ಸೈಟ್ ಮತ್ತು ಸಾಮಾಜಿಕ ಜಾಲತಾಣದ ಖಾತೆಗಳ ಮೂಲಕ ಹಿಂದೂ ಪರವಾದ ಪೋಸ್ಟಿಂಗ್‌ಗಳನ್ನು ಹಾಕುತ್ತಿರುವ ವಿಕ್ರಂ ಹೆಗಡೆ ಈ ಯುವತಿಯರಿಂದ ಪ್ರಶ್ನೆಗಳಿಗೆ ಒಳಗಾಗಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ನಿಮಗಿಷ್ಟ ಬಂದಂತೆ ಪೋಸ್ಟ್ ಹಾಕುತ್ತೀರುತ್ತೀರಿ, ಸಾಮಾಜಿಕ ಜಾಲತಾಣಗಳಲ್ಲಿ ಇಲ್ಲಸಲ್ಲದ ಪೋಸ್ಟ್ ಹಾಕಿ ನಮಗೆ ಟಾರ್ಚರ್ ನೀಡುತ್ತಿರುತ್ತೀರಿ. ಈಗ್ಯಾಕೆ ಮೌನ ತಾಳಿದ್ದೀರಿ. ಬಾಂಬ್ ಹಾಕಿ ಅಂತ ಹೇಳಿಕೊಡೋಕೆ ಆಗುತ್ತೆ ನಿಮಗೆ. ಭಾರಿ ರಾಷ್ಟ್ರೀಯವಾದಿಯಾಗಿರುವ ನೀವು ದೇಶವಿರೋಧಿಗಳ ಎದುರು ‘ವಂದೇ ಮಾತರಂ’ ಹಾಡಿ ತೋರಿಸಿ ನೋಡೋಣ ಎಂದು ಅಲ್ಲಿದ್ದ ಯುವತಿಯರು ಸವಾಲೆಸೆದಿರುವ ವಿಡಿಯೋ ಇದೀಗ ಎಲ್ಲರ ಗಮನ ಸೆಳೆಯುತ್ತಿದೆ. ಜೊತೆಗೆ ಟ್ವಿಟ್ಟರ್ ನಲ್ಲಿ ಕೂಡ ಈ ವಿಡಿಯೋ ಸಖತ್ ಟ್ರೆಂಡ್ ಆಗಿದೆ.

- Advertisment -

RECENT NEWS

ಜೂನ್ 8 ರಿಂದ ಮಸೀದಿಗಳಲ್ಲಿ ಪ್ರಾರ್ಥನೆಗೆ ಅವಕಾಶ….!!

 ಶೀತ, ಕೆಮ್ಮು ಇದ್ದವರಿಗೆ ನಮಾಝ್ ಗೆ ಪ್ರವೇಶ ನಿರಾಕರಣೆ ಮಂಗಳೂರು : ರಾಜ್ಯ ಸರಕಾರ ಜೂನ್‌ 8 ರಿಂದ ಧಾರ್ಮಿಕ ಕೇಂದ್ರಗಳನ್ನು ತೆರೆಯಲು ಅವಕಾಶ ನೀಡಿರುವ ಹಿನ್ನಲೆ ಜೂನ್ 8 ರಿಂದ ಮಸೀದಿಗಳಲ್ಲಿ...

ಜುಲೈವರೆಗೆ ಉಡುಪಿ ಕೃಷ್ಣನ ದರ್ಶನ ಭಾಗ್ಯ ಇಲ್ಲ

20 ರಿಂದ 30 ದಿನಗಳ ನಂತರ ಪರಿಸ್ಥಿತಿ ನೋಡಿ ಅವಕಾಶ ಉಡುಪಿ: ರಾಜ್ಯ ಸರಕಾರ ಈಗಾಗಲೇ ಜೂನ್ 8ರ ನಂತರ ಧಾರ್ಮಿಕ ಕೇಂದ್ರಗಳನ್ನು ತೆರೆಯಲು ಅವಕಾಶ ನೀಡಿದೆ. ಅದರಂತೆ ಈಗಾಗಲೇ ರಾಜ್ಯದ ಮುಜರಾಯಿ ಇಲಾಖೆ...

ಕೃಷ್ಣನಗರಿಯಲ್ಲಿ ನಿಲ್ಲದ ಕೊರೊನಾ ಪ್ರವಾಹ: ಇಂದು ಮತ್ತೆ 121 ಮಂದಿಗೆ ಪಾಸಿಟಿವ್..!

ಉಡುಪಿಗೆ ಕಂಟಕವಾದ ಮಹಾರಾಷ್ಟ್ರ: ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 889ಕ್ಕೆ ಏರಿಕೆ..! ಉಡುಪಿ: ಕೃಷ್ಣನಗರಿ ಉಡುಪಿಯಲ್ಲಿ ಹೆಮ್ಮಾರಿ ಕೊರೊನಾ ಪ್ರವಾಹ ತಣ್ಣಗಾಗುವ ಲಕ್ಷಣ ಕಾಣುತ್ತಿಲ್ಲ. ದಿನೇ ದಿನೇ ಕೋವಿಡ್-19 ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಇಂದು ಮತ್ತೆ 121...

ಮತ್ತೆ ಜಿಲ್ಲೆಯಲ್ಲಿ ಕೊರೊನಾ ಸದ್ದು: ಇಂದು 24 ಮಂದಿಗೆ ಕೊರೊನಾ ಸೋಂಕು ದೃಢ…..!!

ದ.ಕ ಜಿಲ್ಲೆಯಲ್ಲಿಂದು 24 ಮಂದಿಗೆ ಕೊರೊನಾ ಪಾಸಿಟಿವ್… ಸೋಂಕಿತರ ಸಂಖ್ಯೆ 167ಕ್ಕೆ ಏರಿಕೆ… ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಕೂಡ 24 ಮಂದಿಗೆ ಮಹಾಮಾರಿ ಕೊರೊನಾ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಒಟ್ಟು ಕೊರೊನಾ...