Thursday, September 29, 2022

ಪುತ್ತೂರು: ಅಪ್ರಾಪ್ತೆಯನ್ನು ಗುಡ್ಡೆಗೆ ಕರೆದೊಯ್ದು ಲೈಂಗಿಕ ಕಿರುಕುಳ- ಪೋಕ್ಸೋ ಪ್ರಕರಣದಡಿ ಆರೋಪಿ ಬಂಧನ

ಪುತ್ತೂರು: ಅಪ್ರಾಪ್ತ ಬಾಲಕಿಯನ್ನು ಬಲವಂತವಾಗಿ ಗುಡ್ಡೆಗೆ ಕರೆದೊಯ್ದು ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಪೋಕ್ಸೋ ಪ್ರಕರಣದಡಿ ಓರ್ವನನ್ನು ಸುಳ್ಯ ಪೊಲೀಸರು ಬಂಧಿಸಿದ್ದಾರೆ. ಆರೋಪಿಗೆ 10 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಆರೋಪಿಯನ್ನು ರಕ್ಷಿತ್‌ ಎಂದು ಗುರುತಿಸಲಾಗಿದೆ.

ಘಟನೆ ಹಿನ್ನೆಲೆ
ಪುತ್ತೂರಿನ ಖಾಸಗಿ ಕಾಲೇಜಿನಲ್ಲಿ ಪಿಯುಸಿ ವಿದ್ಯಾಭ್ಯಾಸ ನಡೆಸುತ್ತಿದ್ದ ಅಪ್ರಾಪ್ತ ಬಾಲಕಿಯು ಹಾಸ್ಟೆಲ್‌ನಲ್ಲಿ ತಂಗುತ್ತಿದ್ದಳು.

ಸುಳ್ಯ ಐವರ್ನಾಡು ಗ್ರಾಮದ ರಕ್ಷಿತ್‌ ಎಂಬಾತನು ಪ್ರೀತಿಸುತಿದ್ದನು. ಈ ಬಗ್ಗೆ ವಿರೋಧ ವ್ಯಕ್ತಪಡಿಸಿ ಆತನಿಗೆ ಬುದ್ದಿವಾದ ಹೇಳಿದ್ದಾರೆ. ಸುಳ್ಯ ಪೊಲೀಸ್ ಠಾಣೆಯಲ್ಲಿ ಆತನ ವಿರುದ್ಧ ಕುಟುಂಬಸ್ಥರು ದೂರು ದಾಖಲಿಸಿದ್ದರು.

ಈ ಮಧ್ಯೆ ಒಂದು ದಿನ ಹಾಸ್ಟೆಲ್‌ ವಾರ್ಡನ್‌ಗೆ ಬಾಲಕಿಯ ಅಣ್ಣನೆಂದು ರಕ್ಷಿತ್‌ ಸುಳ್ಳು ಹೇಳಿ ಪೋನ್‌ ಮಾಡಿದ್ದನು. ಈ ವೇಳೆ ಆಕೆಯ ಜೊತೆ ಮಾತನಾಡಿ,

ಹೊರಗಡೆ ಎಲ್ಲಾದರೂ ಭೇಟಿಯಾಗುವಂತೆ ತಿಳಿಸಿದ್ದಾನೆ. ಈ ವೇಳೆ ಬಾಲಕಿಯು ಬರುವುದಿಲ್ಲ ಎಂದು ಹೇಳುತ್ತಿದ್ದಾಗ, ನೀನು ಬಾರದೇ ಇದ್ದಲ್ಲಿ ನಿನ್ನನ್ನು ಸಾಯಿಸುತ್ತೇನೆ ಎಂದು ಬೆದರಿಕೆ ಹಾಕಿದ್ದನು.

ಅದಕ್ಕೆ ಹೆದರಿ ಬಾಲಕಿ ಬೀರಮಲೆಗುಡ್ಡೆಗೆ ಬರುವುದಾಗಿ ಹೇಳಿದ್ದಳು. ಫೆ. 27 ರಂದು ಬೀರಮಲೆಗುಡ್ಡೆಗೆ ಹೋಗಿದ್ದಾಗ ಅಲ್ಲಿಗೆ ಬಂದ ಆರೋಪಿ ರಕ್ಷಿತನು ಆಕೆಯನ್ನು ಲೈಂಗಿಕವಾಗಿ ಕಿರುಕುಳ ನೀಡಿದ್ದನು.

ಈ ವೇಳೆ ಆತನಿಂದ ತಪ್ಪಿಸಿಕೊಂಡು ಆಕೆ ಹಾಸ್ಟೆಲ್‌ಗೆ ಬಂದಿದ್ದಾಳೆ. ಈ ಬಗ್ಗೆ
ನೊಂದ ಬಾಲಕಿ ಪುತ್ತೂರು ಮಹಿಳಾ ಠಾಣೆಗೆ ದೂರು ನೀಡಿದ್ದಳು.

ಸದ್ಯ ರಕ್ಷಿತ್‌ನನ್ನು ಬಂಧಿಸಿರುವ ಪೊಲೀಸರು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ಆರೋಪಿಗೆ 10 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

LEAVE A REPLY

Please enter your comment!
Please enter your name here

Hot Topics

ಉಡುಪಿ: ಮೀನುಗಾರಿಕಾ ಜೆಟ್ಟಿ ಕುಸಿತ-ಅವೈಜ್ಞಾನಿಕ ಕಾಮಗಾರಿ ವಿರುದ್ಧ ಮೀನುಗಾರರ ಆರೋಪ

ಉಡುಪಿ: ಮೀನುಗಾರಿಕಾ ಬಂದರು ಪ್ರದೇಶದಲ್ಲಿ ನೂತನ ಜೆಟ್ಟಿ ನಿರ್ಮಾಣವಾಗುತ್ತಿರುವ ತಾಣದಲ್ಲಿ 150 ಮೀಟರಿಗೂ ಅಧಿಕ ಉದ್ಧದ ಮೀನುಗಾರಿಕಾ ಜೆಟ್ಟಿ ಕುಸಿತವಾದ ಘಟನೆ ಉಡುಪಿ ಜಿಲ್ಲೆಯ ಗಂಗೊಳ್ಳಿಯಲ್ಲಿ ಇಂದು ನಡೆದಿದೆ.ಇದರಿಂದ ಮೀನುಗಾರರು ಸಂಕಷ್ಟ ಎದುರಿಸುವಂತಾಗಿದೆ....

ಕೇರಳದ ರೈಲು ಅಪಘಾತದಲ್ಲಿ ವಿಟ್ಲದ ಯುವಕ ದಾರುಣ ಅಂತ್ಯ..

ವಿಟ್ಲ: ಬಂಟ್ವಾಳದ ವಿಟ್ಲ ಸಮೀಪದ ಕಡಂಬುವಿನ ಯುವಕ ಕೇರಳದಲ್ಲಿ ನಡೆದ ರೈಲು ಅಪಘಾತದಲ್ಲಿ ದಾರುಣವಾಗಿ ಮೃತಪಟ್ಟ ಘಟನೆ ನಡೆದಿದೆ.ಇಲ್ಲಿನ ಕಡಂಬು ಸಮೀಪದ ಪಿಲಿವಲಚ್ಚಿಲ್ ನಿವಾಸಿ ಅಶ್ರಫ್ (19) ಮೃತಪಟ್ಟ ಯುವಕ.ವೃತ್ತಿಯಲ್ಲಿ ಎಸಿ ಮೆಕಾನಿಕ್...

ಎಸ್‌ಡಿಪಿಐ, ಒವೈಸಿಯ ಪಕ್ಷಗಳೊಂದಿಗೆ ವಕ್ಫ್ ಬೋರ್ಡನ್ನೂ ನಿಷೇಧಿಸಿ : ಹಿಂದೂ ಮಹಾಸಭಾ

ಮಂಗಳೂರು : ಆಡಳಿತದಲ್ಲಿರುವ ಸರಕಾರ ಪಿಎಫ್ ಐ ಹಾಗೂ ಅದರ ಸಹವರ್ತಿ ಸಂಘಟನೆಗಳನ್ನು ನಿಷೇಧಿಸಿರುವುದನ್ನು ಅಖಿಲ ಭಾರತ ಹಿಂದೂ ಮಹಾಸಭಾ ಸ್ವಾಗತಿಸುತ್ತದೆ. ಇದು ಹಿಂದುತ್ವಕ್ಕೆ ಸಿಕ್ಕ ಗೆಲುವು ಎಂದು ರಾಜ್ಯಾಧ್ಯಕ್ಷ ರಾಜೇಶ್ ಪವಿತ್ರನ್...