BANTWAL
ವಿಟ್ಲ: ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ- ಆಟೋ ಡ್ರೈವರ್ ಬಂಧನ
Published
3 years agoon
By
Adminವಿಟ್ಲ: ಅಪ್ರಾಪ್ತ ಬಾಲಕಿಯೋರ್ವಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಆಟೋ ಚಾಲಕನೋರ್ವನನ್ನು ವಿಟ್ಲ ಠಾಣಾ ಪೊಲೀಸರು ಬಂಧಿಸಿದ ಘಟನೆ ನಡೆದಿದೆ.
ಕಂಬಳಬೆಟ್ಟು ನಿವಾಸಿ ಅಬ್ದುಲ್ ನಾಸಿರ್ ಬಂಧಿತ ಆರೋಪಿ.
ಆರೋಪಿ ತನ್ನ ಪರಿಚಯದ ಅಪ್ರಾಪ್ತ ಬಾಲಕಿಯನ್ನು ತನ್ನ ಆಟೋದಲ್ಲಿ ಶಾಲೆಗೆ ಕರೆದೊಯ್ಯುತ್ತಿದ್ದ ಆ ಬಳಿಕ ಆಕೆಯ ಮನೆಗೆ ಆಗಾಗ ಬರುತ್ತಿದ್ದ.
ಮನೆಗೆ ಬಾರದಂತೆ ಆತನಿಗೆ ಎಚ್ಚರಿಕೆ ನೀಡಿ ಆಕೆಯನ್ನು ಮತ್ತಷ್ಟು ವಿಚಾರಣೆ ನಡೆಸಿದಾಗ ಆತ ಆಕೆಗೆ ಲೈಂಗಿಕ ಕಿರುಕುಳ ನೀಡಿರುವುದು ಬೆಳಕಿಗೆ ಬಂದಿದೆ ಎಂದು ಬಾಲಕಿಯ ತಾಯಿ ವಿಟ್ಲ ಠಾಣಾ ಪೊಲೀಸರಿಗೆ ನೀಡಿದ ದೂರಿನಲ್ಲಿ ವಿವರಿಸಿದ್ದಾರೆ.
ಫೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
BANTWAL
ರಸ್ತೆ ಬದಿ ನಿಲ್ಲಿಸಿದ್ದ ಸ್ಕೂಟರಿಗೆ ಕಾರು ಢಿಕ್ಕಿ; ಸವಾರ ದುರ್ಮರಣ
Published
6 days agoon
16/01/2025By
NEWS DESK3ಬಂಟ್ವಾಳ : ಕಾರೊಂದು ಢಿಕ್ಕಿಯಾದ ಪರಿಣಾಮ ಸ್ಕೂಟರ್ ಸವಾರ ಗಂಭಿರ ಗಾಯಗೊಂಡು ಮೃತಪಟ್ಟ ಘಟನೆ ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿನ ಬಂಟ್ವಾಳ ತಾಲೂಕಿನ ಪೆರಮುಗೇರು ಸತ್ತಿಕಲ್ಲು ಎಂಬಲ್ಲಿ ಬುಧವಾರ ಸಂಜೆ ನಡೆದಿದೆ.
ಬಂಟ್ವಾಳ ತಾಲೂಕಿನ ಕೆದಿಲ ಗ್ರಾಮದ ಕುದ್ಮಾನ್ ನಿವಾಸಿ ಅಬ್ಬಾಸ್ ಎಂಬವರ ಪುತ್ರ ಉಸ್ಮಾನ್ (24) ಮೃತರು ಎಂದು ಗುರುತಿಸಲಾಗಿದೆ. ವೃತ್ತಿಯಲ್ಲಿ ಪೈಂಟರ್ ಆಗಿದ್ದ ಉಸ್ಮಾನ್ ಅವರು ತನ್ನ ಸ್ಕೂಟರ್ ನಲ್ಲಿ ಮನೆಗೆ ತೆರಳುತ್ತಿದ್ದು ಸತ್ತಿಕಲ್ಲಿನಲ್ಲಿ ರಸ್ತೆ ಬದಿಯಲ್ಲಿ ಸ್ಕೂಟರ್ ನಿಲ್ಲಿಸಿ ಮೊಬೈಲ್ ನಲ್ಲಿ ಮಾತನಾಡುತ್ತಿರುವ ವೇಳೆ ನೋಂದಣಿಯಾಗದ ಕಾರೊಂದು ಏಕಾಏಕಿ ಅವರ ಸ್ಕೂಟರ್ ಗೆ ಢಿಕ್ಕಿಯಾಗಿತ್ತು.
ಇದನ್ನೂ ಓದಿ: ಬೈಕ್‌ಗಳು ಪರಸ್ಪರ ಮು*ಖಾಮು*ಖಿ ; ಬಾಲಕಿ ಸಾ*ವು
ಈ ಸಂದರ್ಭ ಸ್ಕೂಟರ್ ನಲ್ಲಿ ಕುಳಿತಿದ್ದ ಉಸ್ಮಾನ್ ಅವರು ರಸ್ತೆಗೆಸೆಯಲ್ಪಟ್ಟು ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಘಟನೆಯಿಂದ ಕಾರು ಮತ್ತು ಬೈಕ್ ರಸ್ತೆ ಬದಿಯ ಚರಂಡಿಗೆ ಉರುಳಿ ಬಿದ್ದಿದೆ. ಪುತ್ತೂರು ಸಂಚಾರಿ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
ಬಂಟ್ವಾಳ: ಬೈಕ್ ಗಳ ನಡುವೆ ಭೀ*ಕರ ಅ*ಪಘಾ*ತ ಸಂಭವಿಸಿ ಬೈಕ್ ನಲ್ಲಿ ಸಹ ಪ್ರಯಾಣಿಕೆಯಾಗಿದ್ದ ಬಾಲಕಿ ಮೃ*ತಪಟ್ಟ ಘಟನೆ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ರಾಮಲ್ ಕಟ್ಟೆ ಎಂಬಲ್ಲಿ ನಿನ್ನೆ (ಜ.14) ರಾತ್ರಿ ನಡೆದಿದೆ.
ಕುಕ್ಕಿಪಾಡಿ ಗ್ರಾಮದ ಕೊಡಂಬೆಟ್ಟು ನಿವಾಸಿ ಇಸ್ಮತ್ ಆಯಿಶಾ (13) ಮೃ*ತ ಬಾಲಕಿ ಎಂದು ಗುರುತಿಸಲಾಗಿದೆ.
ಬಾಲಕಿಯ ತಂದೆ ಬೈಕ್ ಚಾಲಕ ಅಬ್ದುಲ್ ರಹಮಾನ್ ಕೂಡ ಗಾ*ಯಗೊಂಡಿದ್ದು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನೂ ಓದಿ : ಮಂಗಳೂರು: ಕೈದಿಗಳಿಂದ ಜೈಲು ಅಧಿಕಾರಿ, ಸಿಬಂದಿಯ ಕರ್ತವ್ಯಕ್ಕೆ ಅಡ್ಡಿ
ರಾಮಲ್ ಕಟ್ಟೆಯಿಂದ ಹೆದ್ದಾರಿಯಲ್ಲಿ ರಾಂಗ್ ಸೈಡ್ ನಲ್ಲಿ ಬಂದ ನೆತ್ತರಕೆರೆ ನಿವಾಸಿ ರಂಜಿತ್ ಎಂಬಾತ ಬಿ.ಸಿ ರೋಡಿನ ಕಡೆಯಿಂದ ತುಂಬೆ ಕಡೆಗೆ ಸರಿಯಾದ ದಿಕ್ಕಿನಲ್ಲಿ ಬರುತ್ತಿದ್ದ ಬೈಕ್ ಗೆ ಡಿ*ಕ್ಕಿ ಹೊಡೆದಿದ್ದಾನೆ. ರಂಜಿತ್ ಗೆ ಕೂಡ ಗಾ*ಯವಾಗಿದ್ದು, ಆಸ್ಪತ್ರೆಯಲ್ಲಿ ದಾಖಲಾಗಿದ್ದಾನೆ.
ಅ*ಪಘಾ*ತ ನಡೆದ ರಭಸಕ್ಕೆ ಬೈಕ್ ಸಂಪೂರ್ಣ ಜ*ಖಂಗೊಂಡಿದೆ. ಘಟನಾ ಸ್ಥಳಕ್ಕೆ ಪಾಣೆಮಂಗಳೂರು ಟ್ರಾಫಿಕ್ ಎಸ್.ಐ ಸುತೇಶ್ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ನಿನ್ನೆ ಸಂಜೆ ಮತ್ತು ರಾತ್ರಿ ಮಳೆಯಾಗಿದ್ದು, ಕೆಲವೆಡೆ ಮಳೆಗಾಲದಂತೆ ಜೋರಾಗಿ ಮಳೆಯಾಗಿದೆ.
ಬೆಳ್ತಂಗಡಿ,ಸುಳ್ಯ ತಾಲೂಕಿನಲ್ಲಿ ಮಳೆಯಿಂದಾಗಿ ರೈತರು ಒಣ ಹಾಕಿದ್ದ ಅಡಿಕೆಗಳು ಒದ್ದೆಯಾಗಿ ನಷ್ಟ ಉಂಟಾಗಿದೆ. ಬಂಟ್ವಾಳದಲ್ಲಿ ಸಾಧಾರಣ ಮಳೆಯಾಗಿದ್ದು, ಮೆಲ್ಕಾರಿನಲ್ಲಿ ನಡೆಯುತ್ತಿದ್ದ ಕಟೀಲು ಯಕ್ಷಗಾನ ಬಯಲಾಟ ವೀಕ್ಷಣೆ ಮಾಡುತ್ತಿದ್ದವರು ಎದ್ದು ಮಳೆಯಿಂದ ರಕ್ಷಣೆ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: ಮಂಗಳೂರಿಗೆ ಆಗಮಿಸಲಿದ್ದಾರೆ ಡಾಲಿ ಚಾಯ್ ವಾಲ
ಮಂಗಳೂರು ಸುತ್ತಮುತ್ತ ಕೂಡಾ ಮಳೆಯಾಗಿದ್ದು ,ಉಳ್ಳಾಲದಲ್ಲಿ ಅರ್ಧಗಂಟೆಗೂ ಅಧಿಕ ಕಾಲ ಮಳೆ ಸುರಿದ ಬಗ್ಗೆ ಮಾಹಿತಿ ಲಭ್ಯವಾಗಿದೆ. ಮಧ್ಯ ಪಾಕಿಸ್ತಾನ ಮತ್ತು ಪಶ್ಚಿಮ ರಾಜಸ್ಥಾನದಲ್ಲಿ ಉಂಟಾದ ಹವಾಮಾನ ವೈಪರೀತ್ಯದಿಂದ ಈಶಾನ್ಯ ಅರೇಬಿಯನ್ ಸಮುದ್ರದಿಂದ ಪಶ್ಚಿಮ ಮಾರುತ ಬೀಸುತ್ತಿರುವುದು ಈ ಮಳೆಗೆ ಕಾರಣ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
LATEST NEWS
ಸ್ಯಾಂಡಲ್ವುಡ್ ಸ್ಟಾರ್ ನಟನ ಜೊತೆ ನಟಿಸಲಿರುವ ಮೊನಾಲಿಸಾ
ಶ್ವೇತಾ ಜ್ಯುವೆಲರ್ಸ್ನ ಮಾಲಿಕ ಅಶೋಕ್ ಶೇಟ್ ನಿ*ಧನ
ವೈವಾಹಿಕ ಜೀವನಕ್ಕೆ ಕಾಲಿಡಲಿರುವ ಬಿಗ್ ಬಾಸ್ ಸ್ಪರ್ಧಿ ಕೀರ್ತಿ ಮತ್ತು ಜೈತ್ರಾ ಕುಂದಾಪುರ: ಆಶೀಶ್ ಮೈಕಾಲ
ಡಾಲಿ ಚಾಯ್ ವಾಲಾ ಮಂಗಳೂರಿನವನಲ್ಲ, ಇಲ್ಲದಿದ್ದರೆ ಅವನ ಅಂಗಡಿ ಮೇಲೆ ಬುಲ್ಢೋಝರ್ ಹೋಗ್ತಿತ್ತು-ರಾಜ್ ಬಿ ಶೆಟ್ಟಿ
ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್; ಇನ್ಮುಂದೆ ಹಾಯಾಗಿ ಕಳೆಬಹುದು ನಿವೃತ್ತಿ ಜೀವನ
ಟರ್ಕಿಯ ಸ್ಕಿ ರೆಸಾರ್ಟ್ನಲ್ಲಿ ಅಗ್ನಿ ಅವಘಡ; ಮೃತರ ಸಂಖ್ಯೆ 76ಕ್ಕೆ ಏರಿಕೆ
Trending
- BIG BOSS2 days ago
ಬಿಗ್ ಬಾಸ್ ತೊರೆಯುವ ಬಗ್ಗೆ ಮತ್ತೊಮ್ಮೆ ಘೋಷಣೆ ಮಾಡಿದ ಕಿಚ್ಚ
- BIG BOSS4 hours ago
ಗೌತಮಿ-ಧನರಾಜ್ ಬೆನ್ನಲ್ಲೇ ಈ ವಾರ ಫಸ್ಟ್ ಎಲಿಮಿನೇಟ್ ಆಗೋದ್ಯಾರು ?
- FILM2 days ago
ಕಾಂತಾರ ಚಿತ್ರತಂಡಕ್ಕೆ ಎಚ್ಚರಿಕೆ ಕೊಟ್ಟ ಗ್ರಾಮಸ್ಥರು
- BIG BOSS2 days ago
ಬಿಗ್ ಬಾಸ್ ಸೀಸನ್ 11ರ ವಿನ್ನರ್ ಒಬ್ಬರಲ್ಲ ಇಬ್ಬರು… ಅಷ್ಟಕ್ಕೂ ಟ್ರೋಫಿ ನೀಡಿದ ಸುಳಿವೇನು ?