Friday, February 3, 2023

ನಿವೃತ್ತ ಪ್ರೊಫೆಸರ್ ಕೊಲೆ ಪ್ರಕರಣ : ಖ್ಯಾತ ಗಾಯಕಿ ಅನನ್ಯ ಭಟ್ ತಂದೆಯ ಬಂಧನ..!

ನಿವೃತ್ತ ಪ್ರೊಫೆಸರ್ ಕೊಲೆ ಪ್ರಕರಣ : ಖ್ಯಾತ ಗಾಯಕಿ ಅನನ್ಯ ಭಟ್ ತಂದೆಯ ಬಂಧನ..!

ಮೈಸೂರು: ಕೊಲೆ ಪ್ರಕರಣದ ಆರೋಪದಲ್ಲಿ ಸೋಜಿಗದ ಸೋಜಿಮಲ್ಲಿಗೆ ಖ್ಯಾತಿಯ ಗಾಯಕಿ ಅನನ್ಯ ಭಟ್ ತಂದೆ ವಿಶ್ವನಾಥ್ ಭಟ್ ನನ್ನು ಮೈಸೂರು ಪೊಲೀಸರು ಬಂಧಿಸಿದ್ದಾರೆ.

ನಿವೃತ್ತ ಪ್ರೊಫೆಸರ್ ಪರಶಿವಮೂರ್ತಿ ಹತ್ಯೆಗೆ 7 ಲಕ್ಷ ರೂ. ಸುಪಾರಿ ನೀಡಿರುವ ಆರೋಪ ವಿಶ್ವನಾಥ್ ಭಟ್ ವಿರುದ್ಧ ಕೇಳಿಬಂದಿದೆ. ಕೊಲೆಗಾಗಿ ಇತರ​ ಇಬ್ಬರ ಸಹಾಯವನ್ನು ಬಳಸಿದ್ದರು ಎನ್ನಲಾಗಿದೆ.

ವಿಶ್ವನಾಥ್ ಭಟ್‌ಗೆ ಸಹ ಶಿಕ್ಷಕ ಪರಶಿವ ಹಾಗೂ ಸ್ನೇಹಿತ್ ಸಿದ್ದರಾಜು ಸಾಥ್ ನೀಡಿದ್ದರು. ನಿರಂಜನ್ ಹಾಗೂ ನಾಗೇಶ್ ಎಂಬ ಹಂತಕರು ಸುಪಾರಿ ಪಡೆದು ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

20/09/2020ರಂದು ಮೈಸೂರಿನ ನಿವೇದಿತಾ ನಗರದಲ್ಲಿ ನಿವೃತ್ತ ಪ್ರೊಫೆಸರ್ ಪರಶಿವಮೂರ್ತಿ ಕೊಲೆಯಾಗಿತ್ತು.

ಈ ಸಂಬಂಧ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ವಿಶ್ವನಾಥ್ ಭಟ್ ಸೇರಿದಂತೆ ಇತರ ಆರೋಪಿಗಳನ್ನು ಬಂಧಿಸಿದ್ದಾರೆ.ಕೊಲೆಗೆ ಪರಶಿವಮೂರ್ತಿಯ ಕಿರುಕುಳ ಕಾರಣ ಎನ್ನಲಾಗಿದೆ.

ಪರಶಿವಮೂರ್ತಿ ಅವರು ಸಂಸ್ಕೃತ ಪಾಠ ಶಾಲೆಯ ಕಾರ್ಯದರ್ಶಿಯಾಗಿದ್ದರು. ಪ್ರತಿ ತಿಂಗಳು ಕಮಿಷನ್‌ಗಾಗಿ ಪೀಡಿಸುತ್ತಿದ್ದರು ಎಂಬ ಆರೋಪವಿದೆ. ಅಲ್ಲದೆ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ.

ಇದರಿಂದ ಮನನೊಂದು ವಿಶ್ವನಾಥ್ ಕೊಲೆಗೆ ಸುಪಾರಿ ನೀಡಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಎರಡು ವರ್ಷಗಳಿಂದ ಗಾಯಕಿ ಅನನ್ಯಭಟ್‌ರಿಂದ ವಿಶ್ವನಾಥ್​ ದೂರ ಇದ್ದಾರೆ. ವಿಶ್ವನಾಥ್​ ಪತ್ನಿ ಹಾಗೂ ಮಗಳನ್ನು ಬಿಟ್ಟು ಬೇರೆ ವಾಸವಿದ್ದರು.

LEAVE A REPLY

Please enter your comment!
Please enter your name here

Hot Topics

ಬಂಟ್ವಾಳ: ಬಿಸಿ ರೋಡ್ ಬಳಿ ಇಲೆಕ್ಟ್ರೋನಿಕ್ಸ್‌ ಶೋರೂಂನಲ್ಲಿ ಭಾರಿ ಬೆಂಕಿ ಅನಾಹುತ..!

ಬಂಟ್ವಾಳ : ಬಂಟ್ವಾಳ ತಾಲೂಕಿನಲ್ಲಿ ಕಳೆದ ಕೆಲವು ವರ್ಷಗಳಿಂದ ಕಾರ್ಯಚರಿಸುತ್ತಿರುವ ಪ್ರಖ್ಯಾತ ಎಲೆಕ್ಟ್ರಾನಿಕ್ಸ್ ಅಂಗಡಿಯೊಂದರಲ್ಲಿ ಇಂದು ಬೆಳಗ್ಗೆ ಭಾರೀ ಬೆಂಕಿ ಅವಘಡ ಸಂಭವಿಸಿದೆ.ಬಿಸಿರೋಡಿನ ಅನ್ನಪೂರ್ಣೇಶ್ವರಿ ದೇವಸ್ಥಾನದ ಮುಂಭಾಗದಲ್ಲಿ ಇರುವ ಪ್ರೀತಂ ಎಂಬವರಿಗೆ ಸೇರಿದ...

ಮಂಗಳೂರು : ವೈದ್ಯರ ಗಾಂಜಾ ಜಾಲ ಪ್ರಕರಣ:ವೈದ್ಯರು, ವೈದ್ಯ ವಿದ್ಯಾರ್ಥಿಗಳಿಗೆ ಜಾಮೀನು ಮಂಜೂರು..!

ಮಂಗಳೂರಿನಲ್ಲಿನ ವೈದ್ಯರ ಗಾಂಜಾ ಜಾಲ ಪ್ರಕರಣಕ್ಕೆ ಸಂಬಂಧಿದಂತೆ ಗಾಂಜಾ ಸೇವನೆ ಮತ್ತು ಮಾರಾಟ ಪ್ರಕರಣದಲ್ಲಿ ಬಂಧಿತರಾಗಿದ್ದ 4 ಮಂದಿ ವೈದ್ಯರು ಮತ್ತು 19 ವೈದ್ಯಕೀಯ ವಿದ್ಯಾರ್ಥಿಗಳಿಗೆ ನ್ಯಾಯಾಲಯ ಜಾಮೀನು ನೀಡಿದೆ.ಮಂಗಳೂರು :  ಮಂಗಳೂರಿನಲ್ಲಿನ...

ಉಳ್ಳಾಲ ಸಮುದ್ರದಲ್ಲಿ ಅಪರಿಚಿತ ಮಹಿಳೆ ಶವ ಪತ್ತೆ..!

ಉಳ್ಳಾಲ: ಉಳ್ಳಾಲದ ಮುಕ್ಕಚ್ಚೇರಿ ಸಮುದ್ರ ಕಿನಾರೆಯಲ್ಲಿ ಅಪರಿಚಿತ ವೃದ್ಧ ಮಹಿಳೆಯ ಮೃತದೇಹ ಇಂದು ಪತ್ತೆಯಾಗಿದೆ. ವಾರೀಸುದಾರರಿದ್ದಲ್ಲಿ ಉಳ್ಳಾಲ ಪೊಲೀಸ್‌ ಠಾಣೆ ಸಂಪರ್ಕಿಸುವಂತೆ ಕೋರಲಾಗಿದೆ.ಸುಮಾರು 60-70 ರ ಹರೆಯದ ಮಹಿಳೆ ಮೃತದೇಹ ಇದಾಗಿದೆ. ಸೀರೆ...