Connect with us

International news

ಶಸ್ತ್ರಾಸ್ತ್ರಗಳ ಬಳಕೆಯನ್ನು ನಿಲ್ಲಿಸುವಂತೆ ಪೋಪ್ ಫ್ರಾನ್ಸಿಸ್ ಕ್ರಿಸ್ಮಸ್ ಸಂದೇಶ !

Published

on

ಮಂಗಳೂರು/ವ್ಯಾಟಿಕನ್ ಸಿಟಿ: ಜಗತ್ತಿನಲ್ಲಿ ಯುದ್ದದ ಭೀಕರತೆ ಜಾಸ್ತಿಯಾಗುತ್ತಿದ್ದು, ಈ ಬಗ್ಗೆ ಪೋಪ್ ಫ್ರಾನ್ಸಿಸ್ ಕಲವಳ ವ್ಯಕ್ತಪಡಿಸಿದ್ದಾರೆ.

ಕ್ರಿಸ್ಮಸ್ ಸಂದರ್ಭದಲ್ಲಿ ಪೋಪ್ ಫ್ರಾನ್ಸಿಸ್ ಅವರು, ವ್ಯಾಟಿಕನ್ ನಗರದ ಸೈಂಟ್ ಪೀಟರ್ಸ್ ಬ್ಯಾಸಿಲಿಕಾದ ಮುಖ್ಯ ಬಾಲ್ಕನಿಯಲ್ಲಿ ನಗರಕ್ಕೆ ಮತ್ತು ಜಗತ್ತಿಗೆ ನೀಡಿದ ಸಂದೇಶದಲ್ಲಿ ‘ನಮ್ಮ ಶತ್ರುಗಳೊಂದಿಗೆ ಕೂಡಾ ವಿಶಾಲವಾದ ಸಮನ್ವಯಕ್ಕೆ’ ಕರೆ ನೀಡಿದರು.

ಇದನ್ನೂ ಓದಿ: ಫ್ಲೋರಿಡಾ ಕ್ರಿಸ್ಮಸ್ ಶೋನಲ್ಲಿ ಜನಸಂದಣಿಗೆ ಡ್ರೋನ್ ಡಿಕ್ಕಿ: ಹಲವರಿಗೆ ಗಾಯ

ಈ ಬಗ್ಗೆ ಮಾತನಾಡಿದ ಪೋಪ್ ಫ್ರಾನ್ಸಿಸ್ ಅವರು, ‘ಭರವಸೆಯ ಯಾತ್ರಿಕರಾಗಲು, ಶಸ್ತ್ರಾಸ್ತ್ರಗಳ ಶಬ್ದವನ್ನು ನಿಶ್ಯಬ್ದಗೊಳಿಸಲು ಮತ್ತು ವಿಭಜನೆಗಳನ್ನು ಜಯಿಸಲು, ಮಧ್ಯಪ್ರಾಚ್ಯದಿಂದ ಉಕ್ರೇನ್ ವರೆಗೆ, ಆಫ್ರಿಕಾದಿಂದ ಏಷ್ಯಾದವರೆಗೆ, ಎಲ್ಲಾ ರಾಷ್ಟ್ರಗಳ ಜನರು ದೃಢ ಸಂಕಲ್ಪ ಮಾಡಬೇಕು’ ಎಂದು ಹೇಳಿದರು.

‘ವಿಶೇಷವಾಗಿ ಮಾನವೀಯ ಪರಿಸ್ಥಿತಿಯು ಅತ್ಯಂತ ಗಂಭೀರವಾಗಿರುವ ಗಾಝಾ, ಲೆಬನಾನ್ ಮತ್ತು ಸಿರಿಯಾದಲ್ಲಿ ಹೊಸ ವರ್ಷದಿಂದ ದ್ವೇಷ ಮತ್ತು ಸೇಡಿನ ಮನೋಭಾವ ಕಡಿಮೆಯಾಗಲಿ’ ಎಂದು ಪೋಪ್ ಫ್ರಾನ್ಸಿಸ್ ಹಾರೈಸಿದರು.

International news

ಆಸೀಸ್ ಭರ್ಜರಿ ಬ್ಯಾಟಿಂಗ್: ಕೊಹ್ಲಿ ಗೆ ಖಡಕ್ ಎಚ್ಚರಿಕೆ ನೀಡಿದ ಐಸಿಸಿ !

Published

on

ಮಂಗಳೂರು/ಮೆಲ್ಬೋರ್ನ್: ಮೆಲ್ಬೋರ್ನ್ ನಲ್ಲಿ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ 4ನೇ ಪಂದ್ಯದ ಮೊದಲ ದಿನದಾಟ ಮುಗಿದಿದೆ. ಟಾಸ್ ಗೆದ್ದುಕೊಂಡ ಆಸೀಸ್ ಭರ್ಜರಿ ಬ್ಯಾಟಿಂಗ್ ಮಾಡಿದೆ.

ಇನ್ನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ತಂಡಕ್ಕೆ ಉಸ್ಮಾನ್ ಖ್ವಾಜಾ ಹಾಗೂ ಸ್ಯಾಮ್ ಕೊನ್ ಸ್ಟಾಸ್ ಉತ್ತಮ ಆರಂಭ ಒದಗಿಸಿದ್ದರು. ಮೊದಲ ವಿಕೆಟ್ ಗೆ 89 ರನ್ ಗಳ ಜೊತೆಯಾಟವಾಡಿದ ಬಳಿಕ ಕೊನ್ ಸ್ಟಾಸ್ ವಿಕೆಟ್ ಒಪ್ಪಿಸಿದರು. ಆದರೆ ಇದಕ್ಕೂ ಮುನ್ನ ಯುವ ದಾಂಡಿಗ ಕೇವಲ 65 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 6 ಫೋರ್ ಗಳೊಂದಿಗೆ 60 ರನ್ ಚಚ್ಚಿದ್ದರು.

ಆದರೆ ಮಾರ್ನಸ್ ಲಾಬುಶೇನ್ (72) ಔಟಾದ ಬಳಿಕ ಆಗಮಿಸಿದ ಟ್ರಾವಿಸ್ ಹೆಡ್ (0) ಬುಮ್ರಾ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು. ನಂತರ ಬಂದ ಮಿಚೆಲ್ ಮಾರ್ಷ್ (4) ಕೂಡ ವಿಕೆಟ್ ಕೀಪರ್ ಗೆ ಕ್ಯಾಚ್ ನೀಡಿ ನಿರ್ಗಮಿಸಿದರು.

ಜವಾಬ್ದಾರಿಯುತ ಬ್ಯಾಟಿಂಗ್ ಮುಂದುವರೆಸಿದ ಸ್ಟೀವ್ ಸ್ಮಿತ್ ಹಾಗೂ ವಿಕೆಟ್ ಕೀಪರ್ ಬ್ಯಾಟರ್ ಅಲೆಕ್ಸ್ ಕ್ಯಾರಿ ಜೊತೆಗೂಡಿ ಇನ್ನಿಂಗ್ಸ್ ಕಟ್ಟಿದರು. 6ನೇ ವಿಕೆಟ್ ಗೆ 53 ರನ್ ಗಳ ಜೊತೆಯಾಟವಾಡಿದರು. ಈ ಹಂತದಲ್ಲಿ ಆಕಾಶ್ ದೀಪ್ ಎಸೆತದಲ್ಲಿ ಅಲೆಕ್ಸ್ ಕ್ಯಾರಿ (31) ಔಟಾದರು.

ಆದರೆ ಮತ್ತೊಂದೆಡೆ ಕ್ರೀಸ್ ಕಚ್ಚಿ ನಿಂತ ಸ್ಟೀವ್ ಸ್ಮಿತ್ (68) ಹಾಗೂ ಪ್ಯಾಟ್ ಕಮ್ಮಿನ್ಸ್ ಅಜೇಯರಾಗಿ ಉಳಿದರು. ಈ ಮೂಲಕ ಮೊದಲ ದಿನದಾಟದಲ್ಲಿ ಆಸ್ಟ್ರೇಲಿಯಾ ತಂಡವು 6 ವಿಕೆಟ್ ಕಳೆದುಕೊಂಡು 311 ರನ್ ಕಲೆಹಾಕಿದೆ.

ಇದನ್ನೂ ಓದಿ: ಆರ್ ಸಿಬಿಗೆ ನಂದಿನಿ ಬಲ; ಫ್ಯಾನ್ಸ್ ಗೆ ಮತ್ತೊಂದು ಖುಷಿಯ ವಿಚಾರ

ಟೀಂ ಇಂಡಿಯಾ ಪರ ಜಸ್ ಪ್ರೀತ್ ಬುಮ್ರಾ 3 ವಿಕೆಟ್ ಪಡೆದರೆ, ಆಕಾಶ್ ದೀಪ್, ರವೀಂದ್ರ ಜಡೇಜಾ ಹಾಗೂ ವಾಷಿಂಗ್ಟನ್ ಸುಂದರ್ ತಲಾ ಒಂದು ವಿಕೆಟ್ ಕಬಳಿಸಿದರು.

ವಿರಾಟ್ ಕೊಹ್ಲಿ ಕಿರಿಕ್
ಮೆಲ್ಬೋರ್ನ್ ನ ಎಂಸಿಜಿ ಮೈದಾನದಲ್ಲಿ ನಡೆಯುತ್ತಿರುವ ಭಾರತ ಮತ್ತು ಆಸ್ಟ್ರೇಲಿಯಾ ವಿರುದ್ದದ 4ನೇ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಹಾಗೂ ಸ್ಯಾಮ್ ಕೊನ್ ಸ್ಟಾಸ್ ನಡುವೆ ಮಾತಿನ ಚಕಮಕಿ ನಡೆದಿತ್ತು. ಈ ಪಂದ್ಯದ 10ನೇ ಓವರ್ ಮುಕ್ತಾಯದ ವೇಳೆ ಭುಜದಿಂದ ಗುದ್ದುವ ಮೂಲಕ ಕೊಹ್ಲಿ ಆಸ್ಟ್ರೇಲಿಯಾ ಬ್ಯಾಟರ್ ನನ್ನು ಕೆಣಕ್ಕಿದ್ದರು.

ಕೊಹ್ಲಿಗೆ ದಂಡ ವಿಧಿಸಿದ ಐಸಿಸಿ
ಮೊದಲ ದಿನದಾಟದಲ್ಲಿ ಆಕ್ರಮಣಕಾರಿ ವರ್ತನೆ ತೋರಿದ್ದಕ್ಕಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ವಿರಾಟ್ ಕೊಹ್ಲಿಗೆ ದಂಡ ವಿಧಿಸಿದೆ. ಈ ದಂಡದೊಂದಿಗೆ ಒಂದು ಡಿಮೆರಿಟ್ ಅಂಕಗಳನ್ನು ನೀಡಲಾಗಿದೆ.

ವಿರಾಟ್ ಕೊಹ್ಲಿಯ ಪಂದ್ಯದ ಶುಲ್ಕದ ಶೇ.20 ರಷ್ಟು ದಂಡ ವಿಧಿಸಲಾಗಿದ್ದು, ಇದರ ಜೊತೆಗೆ ಅನುಚಿತ ವರ್ತನೆಗಾಗಿ ಒಂದು ಡಿಮೆರಿಟ್ ಪಾಯಿಂಟ್ ನೀಡಲಾಗಿದೆ. ಹೀಗಾಗಿ ಮುಂಬರುವ ಇನ್ನಿಂಗ್ಸ್ ವೇಳೆ ವಿರಾಟ್ ಕೊಹ್ಲಿ ಶಿಸ್ತಿನಿಂದ ಆಡಬೇಕಾಗುತ್ತದೆ.

ಏಕೆಂದರೆ ಐಸಿಸಿ ನಿಯಮಗಳ ಪ್ರಕಾರ, 24 ತಿಂಗಳ ಅವಧಿಯಲ್ಲಿ 4 ಡಿಮೆರಿಟ್ ಪಡೆದರೆ, ಆ ಆಟಗಾರನನ್ನು ಒಂದು ಟೆಸ್ಟ್ ಅಥವಾ ಏಕದಿನ ಪಂದ್ಯಗಳಿಂದ ನಿಷೇಧಿಸಲಾಗುತ್ತದೆ. ಹೀಗಾಗಿ ಮತ್ತೆ ಡಿಮೆರಿಟ್ ಪಾಯಿಂಟ್ಸ್ ಗೆ ಒಳಗಾಗದಂತೆ ಕೊಹ್ಲಿ ಎಚ್ಚರಿಕೆ ವಹಿಸಬೇಕಾಗಿರುವುದು ಅನಿವಾರ್ಯ.

ಸ್ಪಷ್ಟನೆ ಕೊಟ್ಟ ಸ್ಯಾಮ್ ಕಾನ್ ಸ್ಟಸ್
ಸ್ಯಾಮ್ ಕಾನ್ ಸ್ಟಸ್ ಬ್ಯಾಟಿಂಗ್ ಮಾಡುವಾಗ ನಡೆದ ಘಟನೆ ಬಗ್ಗೆ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ವಿರಾಟ್ ಕೊಹ್ಲಿ ಹಾಗೂ ನನ್ನ ನಡುವೆ ನಡೆದಿರುವುದು ಭಾವನೆಗಳಷ್ಟೇ. ಕೈಗೆ ಗ್ಲೌಸ್ ಸರಿ ಮಾಡಿಕೊಳ್ಳುವಾಗ ನಡೆದಿದೆ. ಈ ರೀತಿ ಕ್ರಿಕೆಟ್ ನಲ್ಲಿ ನಡೆಯುವುದು ಸರ್ವೇ ಸಾಮಾನ್ಯ.

ಅರ್ಧ ಶತಕ ಸಿಡಿಸಿದ್ದಕ್ಕೆ ನನಗೆ ಸಂತೋಷವಾಗಿದೆ. ಬ್ಯಾಟ್ ಎತ್ತಿ ಸಂಭ್ರಮಿಸುವಾಗ ಅಭಿಮಾನಿಗಳು ಚೀಯರ್ ಮಾಡಿರುವುದು ನನಗೆ ರೋಮಾಂಚನವಾಯಿತು. ಎಲ್ಲರೂ ನನಗೆ ಸಪೋರ್ಟ್ ಮಾಡಿದ್ದಾರೆ. ಇನ್ ಸ್ಟಾದಲ್ಲಿ ಫಾಲೋವರ್ಸ್ ಹೆಚ್ಚಳವಾಗಿರುವುದು ಸಂತಸವಾಗಿದೆ.

 

Continue Reading

International news

ಖಂಡಾಂತರ ಕ್ಷಿಪಣಿಗಳಿಂದ ಉಕ್ರೇನ್ ಮೇಲೆ ದಾಳಿ ನಡೆಸಿದ ರಷ್ಯಾ !

Published

on

ಮಂಗಳೂರು/ಕೀವ್: ಉಕ್ರೇನ್ ಇಂಧನ ಮೂಲಗಳನ್ನು ಗುರಿಯಾಗಿಸಿಕೊಂಡು ರಷ್ಯಾ ಬುಧವಾರ ಕ್ಷಿಪಣಿ ಮತ್ತು ಡ್ರೋನ್ ದಾಳಿ ನಡೆಸಿದೆ.

ತೀವ್ರ ದಾಳಿಯ ಪರಿಣಾಮ ಕ್ರಿಸ್ ಮಸ್ ದಿನವೇ ಉಕ್ರೇನ್ ಜನರು ಮೆಟ್ರೋ ನಿಲ್ದಾಣಗಳಲ್ಲಿ ಆಶ್ರಯ ಪಡೆಯುವಂತಾಗಿದೆ.

‘ಉಷ್ಣ ವಿದ್ಯುತ್ ಸ್ಥಾವರವೊಂದನ್ನು ಹೊಡೆದುರುಳಿಸಲಾಗಿದೆ’ ಎಂದು ಉಕ್ರೇನ್ ನ ಅತಿದೊಡ್ಡ ಖಾಸಗಿ ಇಂಧನ ಕಂಪನಿ ಡಿಟಿಇಕೆ ತಿಳಿಸಿದೆ.

ಇದನ್ನೂ ಓದಿ: ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಿದ ರಾಜ್ಯದ 3 ಯೋಧರ ಪಾರ್ಥಿವ ಶರೀರ

ಈ ಬಗ್ಗೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ ಸ್ಕಿ ಅವರು, ‘ಖಂಡಾಂತರ ಕ್ಷಿಪಣಿ ಸೇರಿದಂತೆ 70 ಕ್ಷಿಪಣಿಗಳಿಂದ ಮತ್ತು 100 ಡ್ರೋನ್ ಗಳಿಂದ ದಾಳಿ ನಡೆಸಲಾಗಿದೆ. ಪುಟಿನ್ ಅವರು ಉದ್ದೇಶಪೂರ್ವಕವಾಗಿಯೇ ಕ್ರಿಸ್ ಮಸ್ ದಿನ ದಾಳಿ ನಡೆಸಿದ್ದಾರೆ. ಇದಕ್ಕಿಂತ ಅಮಾನವೀಯ ಏನಿದೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

‘ಕನಿಷ್ಠ 50 ಕ್ಷಿಪಣಿಗಳು ಮತ್ತು ಹಲವು ಡ್ರೋನ್ ಗಳನ್ನು ಉಕ್ರೇನ್ ಹೊಡೆದುರುಳಿಸಿದೆ. ನಮ್ಮ ಹೋರಾಟ ಮುಂದುವರಿಯಲಿದೆ’ ಎಂದು ಝೆಲೆನ್ ಸ್ಕಿ ಹೇಳಿದ್ದಾರೆ.

Continue Reading

International news

ಕಾಟನ್ ಕ್ಯಾಂಡಿ ಸೇವಿಸಿ ವಿಶ್ವ ದಾಖಲೆ ಬರೆದ ಮಹಿಳೆ !

Published

on

ಮಂಗಳೂರು/ಇಂಗ್ಲೆಂಡ್: ಕೇವಲ ಒಂದು ನಿಮಿಷದಲ್ಲಿ 49 ಗ್ರಾಂ. ಕಾಟನ್ ಕ್ಯಾಂಡಿ ತಿನ್ನುವ ಮೂಲಕ ಇಂಗ್ಲೆಂಡ್ ನ ಯೂಟ್ಯೂಬರ್, ಲೀ ಶಟ್ ಕೀವರ್ ಹೊಸ ಗಿನ್ನೆಸ್ ವಿಶ್ವದಾಖಲೆ ಸ್ಥಾಪಿಸಿದ್ದಾರೆ.

 

ತಿಳಿ ಹಸಿರು ಬಣ್ಣದ ಈ ತಿಂಡಿಯನ್ನು ಲೀ ತಿನ್ನುತ್ತಿರುವ ವೀಡಿಯೋವನ್ನು ಗಿನ್ನೆಸ್ ಸಂಸ್ಥೆಯು ಇನ್ ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದೆ.

ಇದನ್ನೂ ಓದಿ: ಕನ್ನಡಿಗ ಕೆ.ಎಲ್ ರಾಹುಲ್ ಗೆ ಬಿಗ್ ಶಾಕ್ !

ಈ ಮೊದಲು ಕೂಡ ಹಾಟ್ ಡಾಗ್ ಸೇರಿದಂತೆ ವಿವಿಧ ಪದಾರ್ಥಗಳನ್ನು ಅತ್ಯಂತ ಕಡಿಮೆ ಸಮಯದಲ್ಲಿ ಸೇವಿಸುವ ಮೂಲಕ ಅನೇಕ ದಾಖಲೆಗಳನ್ನು ಲೀ ಶಟ್ ಕೀವರ್ ಸ್ಥಾಪಿದ್ದರು.

 

Continue Reading

LATEST NEWS

Trending

Exit mobile version