Connect with us

LATEST NEWS

ಪಡುಬಿದ್ರೆಯಲ್ಲಿ ಪೂಲ ವಿಠಲ ಶೆಟ್ಟಿ ಪ್ರಶಸ್ತಿ ಪ್ರದಾನ-ಆರು ಮೇಳಗಳ ಸಂಚಾಲಕರಿಗೆ ರಜತ ಸಂಭ್ರಮ ಗೌರವ ಪ್ರಶಸ್ತಿ..

Published

on

ಪಡುಬಿದ್ರೆ :ಕಂಬಳ ಕ್ಷೇತ್ರದಲ್ಲಿ ಓಟದ ಕೋಣಗಳ ಯಜಮಾನನಾಗಿ ಎಂಭತ್ತರ ದಶಕದಲ್ಲಿ ಖ್ಯಾತಿ ಪಡೆದಿದ್ದ ಮುಂಬೈ ಯ ಉದ್ಯಮಿ ಕೀರ್ತಿಶೇಷ ಪೂಲ ವಿಠಲ ಶೆಟ್ಟಿ ಸ್ಮರಣಾರ್ಥ ಕಟೀಲು ಮೇಳದ ಹನ್ನೊಂದು ಕಲಾಸಾಧಕರಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಜನವರಿ 15 ಶನಿವಾರ ಪಡುಬಿದ್ರೆ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಜರಗಿತು.

ಘಾಟ್ ಕೋಪರ್ ನ ಭಾರತ್ ಕೆಫೆಯ ಸಂಸ್ಥಾಪಕ ಪೂಲ ವಿಠಲ ಶೆಟ್ಟಿ ಯವರು ಕಟೀಲು ದೇವಿಯ ಭಕ್ತರಾಗಿದ್ದು ಮುಂಬೈ, ಎರ್ಮಾಳು,ಪಡುಬಿದ್ರೆ ಪರಿಸರದಲ್ಲಿ ಹಲವಾರು ಧಾರ್ಮಿಕ ,ಸಂಸ್ಕೃತಿಕ ,ಸೇವಾ ಕಾರ್ಯಕ್ರಮಗಳನ್ನು ಕಟೀಲು ಗೋಪಾಲಕೃಷ್ಣ ಆಸ್ರಣ್ಣರ ಮಾರ್ಗದರ್ಶನದಲ್ಲಿ ನಡೆಸಿದ್ದರು. ಅವರ ಪತ್ನಿ ರಾಧಾ ವಿಠಲ ಶೆಟ್ಟಿ ಹಾಗೂ ಮಕ್ಕಳು ಕಳೆದ 24 ವರ್ಷಗಳಿಂದ ಕಟೀಲು ಮೇಳದ ಯಕ್ಷಗಾನ ಸೇವೆಯನ್ನು ಪಡುಬಿದ್ರೆಯಲ್ಲಿ ನಡೆಸಿಕೊಂಡು ಬಂದಿದ್ದು ಹಲವು ವರುಷಗಳಿಂದ ಪೂಲ ವಿಠಲ ಶೆಟ್ಟಿ ಪ್ರಶಸ್ತಿ ನೀಡುತ್ತಿದ್ದಾರೆ.

ಈ ವರ್ಷ ಯಕ್ಷಗಾನ ಸೇವೆಯ ರಜತ ವರ್ಷ ಸಂಭ್ರಮಾಚರಣೆ “- ಬೊಳ್ಳಿ ಪರ್ಬ ” ದ ಸಂದರ್ಭದಲ್ಲಿ ಕಟೀಲು ಆರು ಮೇಳಗಳ ಸಂಚಾಲಕ ಶ್ರೀ ದೇವಿ ಪ್ರಸಾದ ವಿಠಲ ಶೆಟ್ಟಿ ಯವರಿಗೆ ರಜತ ಸಂಭ್ರಮ ಗೌರವ ಪ್ರಶಸ್ತಿ ಯನ್ನೂ ನೀಡಲಾಯಿತು.

 

ಹಿರಿಯ ಶ್ರೀ ದೇವಿ ಪಾತ್ರಧಾರಿಗಳಿಗೆ ಪ್ರಶಸ್ತಿ
ಕಟೀಲು ಮೇಳದಲ್ಲಿ ದೀರ್ಘಕಾಲ ಕಲಾ ಸೇವೆಗೈದು ನಿವೃತ್ತ ರಾಗಿರುವ, ಶ್ರೀ ದೇವೀ ಮಹಾತ್ಮೆ ಪ್ರಸಂಗದ ಶ್ರೀ ದೇವಿ ಪಾತ್ರ ನಿರ್ವಹಣೆಯಲ್ಲಿ ಕೀರ್ತಿ ಶಿಖರವೇರಿ ಮೆರೆದಿದ್ದ 90 ರ ವಯೋವೃದ್ದ ಮುಳಿಯಾಲ ಭೀಮ ಭಟ್ಟ ಅವರಿಗೆ ವೀಲ್ ಚೇರ್ ಕೊಡುಗೆ ನೀಡಿ ಪ್ರಶಸ್ತಿ,ಗೌರವಧನ ನೀಡಲಾಯಿತು.

ಶ್ರೀದೇವಿ ಪಾತ್ರ ನಿರ್ವಹಣೆಯಲ್ಲಿ ಸಿದ್ದಿ ಪ್ರಸಿದ್ದಿಪಡೆದು ಮೇಳದಿಂದ ನಿವೃತ್ತರಾಗಿರುವ ಕೋಡಿ ಕೃಷ್ಣ ಗಾಣಿಗ( ಕುಂದಾಪುರ ಕುಷ್ಟ) , ಪುಂಡರೀಕಾಕ್ಷ ಉಪಾಧ್ಯಾಯ ,ತೋಡಿಕ್ಕಾನ ವಿಶ್ವನಾಥ ಗೌಡ , ಉಮೇಶ ಹೆಬ್ಬಾರ್ ಹಾಗೂ ಕಟೀಲು ಮೇಳ(2 ನೇ ಮೇಳ) ದ ಹಿರಿಯ ಕಲಾವಿದರಾದ ಬಲಿಪ ಪ್ರಸಾದ ಭಾಗವತ ,ಶ್ರೀಧರ ಪೂಜಾರಿ ಪಂಜಾಜೆ ,ರಮೇಶ ಭಟ್ ಬಾಯಾರು , ಗುರುವಪ್ಪ ಬಾಯಾರು ,ಶಶಿಧರ ಶೆಟ್ಟಿ ಪಂಜ ,ಅಮ್ಮುಂಜೆ ಮೋಹನ
ಅವರಿಗೆ ರಜತ ಪದಕ ,ರೂ.ಹತ್ತು ಸಾವಿರ ಗೌರವ ಧನ ದೊಂದಿಗೆ ಪೂಲ ವಿಠಲ ಶೆಟ್ಟಿ ಪ್ರಶಸ್ತಿ ಪ್ರದಾನಿಸಲಾಯಿತು.

ಕಟೀಲು ಕ್ಷೇತ್ರದ ಅನುವಂಶಿಕ ಮೊಕ್ತೇಸರರಾದ ವಾಸುದೇವ ಆಸ್ರಣ್ಣ, ಲಕ್ಷ್ಮೀ ನಾರಾಯಣ ಆಸ್ರಣ್ಣ , ವೆಂಕಟರಮಣ ಆಸ್ರಣ್ಣ , ಅನಂತಪದ್ಮನಾಭ ಆಸ್ರಣ್ಣ ,ಪಡುಬಿದ್ರೆಯ ಬಲ್ಲಾಳ ಅರಸರು ,ಎರ್ಮಾಳು ಹೊಸಮನೆ ಉದಯ ಶೆಟ್ಟಿ , ಐಕಳ ವಿಶ್ವನಾಥ ಶೆಟ್ಟಿ , ವಿಶುಕುಮಾರ್ ಉಚ್ಚಿಲ್ ಉಪಸ್ಥಿತರಿದ್ದರು.

ಸೇವಾಕರ್ತ ಸತೀಶ್ ವಿ‌ ಶೆಟ್ಟಿ ಸ್ವಾಗತಿಸಿದರು. ಯಕ್ಷಗಾನ ಅಕಾಡಮಿ ಸದಸ್ಯ ಕದ್ರಿ ನವನೀತ ಶೆಟ್ಟಿ ಅವರು ಅಭಿನಂದಿಸಿದರು. ಕಳೆದ ಇಪ್ಪತ್ತೈದು ವರ್ಷಗಳಿಂದ ಯಕ್ಷಗಾನ ಸೇವೆಗೆ ಸಹಕಾರ ನೀಡಿದ 17 ಮಂದಿಗೆ ಭ್ರಮರಾಂಬಿಕೆಯ ಚಿತ್ರ ಇರುವ ಬೆಳ್ಳಿಯ ಪದಕ ದೊಂದಿಗೆ ಗೌರವ ಧನ ನೀಡಲಾಯಿತು. ಬಲಿಪ ಪ್ರಸಾದ ಭಾಗವತರ ಔಷಧೋಪಚಾರಕ್ಕೂ ರೂ.ಹದಿನೈದು ಸಾವಿರ ಆರೋಗ್ಯ ನಿಧಿ ನೀಡಲಾಯಿತು.

ನಂತರ “ಶ್ರೀ ದೇವೀ ಮಹಾತ್ಮೆ” ಯಕ್ಷಗಾನ ಬಯಲಾಟ ಜರಗಿತು.

DAKSHINA KANNADA

‘ಕೇಸರಿಕರಣ’ವಾದ ಡಿಡಿ ನ್ಯೂಸ್..! ಚರ್ಚೆಗೆ ಕಾರಣವಾದ ಹೊಸ ಲೋಗೋ..!

Published

on

ಮಂಗಳೂರು : ಚುನಾವಣಾ ಸಮಯದಲ್ಲೇ ದೇಶದ ಸರ್ಕಾರಿ ಚಾನೆಲ್ ದೂರದರ್ಶನ ತನ್ನ ಲೋಗೋದ ಬಣ್ಣವನ್ನು ಬದಲಾಯಿಸಿದೆ. ಡಿಡಿ ನ್ಯೂಸ್‌ ತನ್ನ ಲೋಗೋ ಬಣ್ಣವನ್ನು ಕೇಸರಿ ಬಣ್ಣಕ್ಕೆ ಬದಲಾಯಿಸಿರುವುದು ಈಗ ಚರ್ಚೆಗೆ ಕಾರಣವಾಗಿದೆ. 1959 ರಲ್ಲಿ ಆರಂಭವಾಗಿದ್ದ ದೂರದರ್ಶನದ ಲೋಗೋ ನೀಲಿ ಬಣ್ಣದಾಗಿದ್ದು, ಇದೀಗ ಚುನಾವಣೆಯ ಹೊಸ್ತಿಲಲ್ಲಿ ಕೇಸರಿ ಬಣ್ಣಕ್ಕೆ ಬದಲಾಯಿಸಿದ ಬಗ್ಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿದೆ. ದೇಶದಲ್ಲಿ ಎಲ್ಲವನ್ನೂ ಕೇಸರಿಕರಣ ಮಾಡುವ ಭಾಗವಾಗಿ ಈ ಬದಲಾವಣೆ ಮಾಡಲಾಗಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿದೆ.

ಕೇಂದ್ರ ಸರ್ಕಾರದ ಪ್ರಸಾರಭಾರತಿ ಅಡಿಯಲ್ಲಿ ಬರುವ ದೂರದರ್ಶನ ಏಕಾಏಕಿ ತನ್ನ ಲೋಗೋವನ್ನು ಕೇಸರಿ ಬಣ್ಣಕ್ಕೆ ಬದಲಾಯಿಸಿದೆ. ಇದನ್ನು ದೂರದರ್ಶನ ತನ್ನ ಅಧಿಕೃತ ‘X’ ಖಾತೆಯಲ್ಲಿ ಹಂಚಿಕೊಂಡಿದ್ದು, ಲೋಗೋ ಕೇವಲ ದೃಶ್ಯ ಸೌಂದರ್ಯದ ಬದಲಾವಣೆಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದ್ದಾರೆ.

“ನಮ್ಮ ಮೌಲ್ಯಗಳು ಒಂದೇ ಆಗಿರುವಾಗ, ನಾವು ಈಗ ಹೊಸ ಅವತಾರದಲ್ಲಿ ಸಿಗಲಿದ್ದೇವೆ. ಹಿಂದೆಂದಿಗಿಂತಲೂ ಉತ್ತಮ ಸುದ್ದಿ ಪ್ರಯಾಣಕ್ಕೆ ಸಿದ್ಧರಾಗಿ. ಎಲ್ಲಾ ಹೊಸ ಡಿಡಿ ನ್ಯೂಸ್ ಅನ್ನು ಅನುಭವಿಸಿ! ” ಎಂದು DD News ತನ್ನ ಅಧಿಕೃತ ‘X’ ಹ್ಯಾಂಡಲ್‌ನಲ್ಲಿ ಅದರ ಹೊಸ ಲೋಗೋದ ವೀಡಿಯೊದೊಂದಿಗೆ ಪೋಸ್ಟ್ ಮಾಡಿದೆ. ಜೊತೆಗೆ “ಕೇವಲ ಧೈರ್ಯದ ಬರವಸೆಯಲ್ಲ..ವೇಗದ ಮತ್ತು ನಿಖರತೆಯ ಬರವಸೆ ; ಹಕ್ಕುಗಳ ಮತ್ತು ಸತ್ಯದ ಬರವಸೆ ; ಸಂವೇದನೆಯ ಹಾಗೂ ಸತ್ಯದ ಬರವಸೆ ;  ಯಾಕೆಂದರೆ ಡಿಡಿ ನ್ಯೂಸ್ ನಲ್ಲಿ ಬಂದರೆ ಅದು ಸತ್ಯ! ಡಿಡಿ ನ್ಯೂಸ್ – ಭರೋಸಾ ಸಚ್ ಕಾ..” ಎಂದು ಹೇಳಿಕೊಂಡಿದ್ದಾರೆ.

2012 ಮತ್ತು 2014 ರ ನಡುವೆ ಪ್ರಸಾರ ಭಾರತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ (CEO) ಸೇವೆ ಸಲ್ಲಿಸಿದ ಅಖಿಲ ಭಾರತ ತೃಣಮೂಲ ಕಾಂಗ್ರೆಸ್ (AITC) ರಾಜ್ಯಸಭಾ ಸಂಸದ ಜವಾಹರ್ ಸಿರ್ಕಾರ್ ಈ ಬೆಳವಣಿಗೆಯನ್ನು ಟೀಕಿಸಿದ್ದಾರೆ. ಪ್ರಸಾರ ಭಾರತಿ ದೂರದರ್ಶನ ಮತ್ತು ಆಲ್ ಇಂಡಿಯಾ ರೇಡಿಯೊ (AIR) ಮೇಲ್ವಿಚಾರಣೆ ಮಾಡುವ ಶಾಸನಬದ್ಧ ಸಂಸ್ಥೆಯಾಗಿದೆ.”ರಾಷ್ಟ್ರೀಯ ಬ್ರಾಡ್‌ಕಾಸ್ಟರ್ ತನ್ನ ಬ್ರ್ಯಾಂಡಿಂಗ್‌ಗಾಗಿ ಕೇಸರಿ ಬಣ್ಣವನ್ನು ಆಯ್ಕೆ ಮಾಡಿರುವುದು ಸರಿಯಲ್ಲ” ಎಂದು ಸಿರ್ಕಾರ್ ಸಾಮಾಜಿಕ ಮಾಧ್ಯಮ ಸೈಟ್ ‘X’ ನಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ ಹೇಳಿದ್ದಾರೆ “ಇದು ಮಾದರಿ ನೀತಿ ಸಂಹಿತೆಯ ಉಲ್ಲಂಘನೆ ಎಂದು ನಾನು ಪರಿಗಣಿಸುತ್ತೇನೆ” ಎಂದು ಸಿರ್ಕಾರ್ ಹೇಳಿದ್ದಾರೆ, ಲೋಗೋ ಬದಲಾವಣೆ ಮಾಡಿರುವ ಸಮಯವನ್ನು ಪ್ರಶ್ನಿಸಿದ ಅವರು. “ಇದು ರಾಜ್ಯಗಳಲ್ಲಿ ಪ್ರಭಾವ ಬೀರುತ್ತದೆ ಎಂದು ಹೇಳಿದ್ದಾರೆ. ಕೇಸರಿ ಒಂದು ನಿರ್ಧಿಷ್ಟ ಧರ್ಮವನ್ನು ಸೂಚಿಸುವ ಬಣ್ಣವಾಗಿದ್ದು ಅದನ್ನು ದೂರದರ್ಶನ ಬಳಸಿಕೊಂಡಿದ್ದು ತಪ್ಪು” ಎಂದಿದ್ದಾರೆ.

ದೂರದರ್ಶನದ ಈ ಬೆಳವಣಿಗೆಯ ಬಗ್ಗೆ ವಿರೋಧ ಪಕ್ಷಗಳು ಸಾಕಷ್ಟು ಟೀಕೆ ವ್ಯಕ್ತಪಡಿಸಿದ್ದು, ಹೊಸ ಸಂಸತ್‌ನಲ್ಲಿ ಒಳಗೆ ಎಲ್ಲಾ ಕಡೆ ಕೇಸರಿಕರಣ ಮಾಡಲಾಗಿದೆ. ಇದೀಗ ದೇಶದ ಜನರನ್ನು ದೂರದರ್ಶನದ ಮೂಲಕ ಕೇಸರಿಕರಣ ಮಾಡಲು ಸರ್ಕಾರ ಮುಂದಾಗಿದೆ ಎಂದು ಆರೋಪಿಸಿದ್ದಾರೆ.

Continue Reading

LATEST NEWS

ಉಡುಪಿ : ದೇಶದಲ್ಲಿ ಕೇಸರಿ ಆಡಳಿತವೇ ನಮ್ಮ ಉದ್ದೇಶ : ಸುನಿಲ್ ಕುಮಾರ್

Published

on

ಉಡುಪಿ : ದೇಶದಲ್ಲಿ ಕೇಸರಿ ಆಡಳಿತವನ್ನು ಮಾಡಲೆಂದೇ ಬಿಜೆಪಿ ಚುನಾವಣೆಗೆ ಹೋಗುತ್ತಿದೆ. ಇದನ್ನು ಹೇಳಿಕೊಳ್ಳಲು ನಮಗೆ ಯಾವುದೇ ಸಂಕೋಚ ಇಲ್ಲ. ನಾವು ಕೇಸರಿ ಆಡಳಿತವನ್ನ ತರಲು ಹೊರಟಿದ್ದೇವೆ ಎಂದು ಕಾರ್ಕಳ ಶಾಸಕ ಸುನಿಲ್ ಕುಮಾರ್ ಹೇಳಿಕೆ ನೀಡಿದ್ದಾರೆ.


ಉಡುಪಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸುನಿಲ್ ಕುಮಾರ್, ಕಾಂಗ್ರೆಸ್ ಒಂದು ಕೋಮಿನವರಿಗೆ ಬೆಂಬಲ ನೀಡುತ್ತಿದೆ. ಆ ಮೂಲಕ ಇನ್ನೊಂದು ಕೋಮಿನವರು ನೆಮ್ಮದಿಯಾಗಿ ಬದುಕಬಾರದು ಅನ್ನೋದು ಅವರ ಸಿದ್ಧಾಂತ. ಇದಕ್ಕೆ ನಮ್ಮ ವಿರೋಧವಿದ್ದು, ನಾವು ರಾಷ್ಟ್ರೀಯತೆಯ ಸಂಕೇತವಾದ ಕೇಸರಿಯನ್ನೇ ಮುಂದಿಟ್ಟು ಆಡಳಿತ ಮಾಡುತ್ತೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : ಉಡುಪಿ: ಅನ್ಯಕೋಮಿನವರ ಕೊಬ್ಬಿಗೆ ಸಿದ್ದರಾಮಯ್ಯ ಆಡಳಿತವೇ ಮುಖ್ಯ ಕಾರಣ : ಸುನಿಲ್ ಕುಮಾರ್
ಚೊಂಬು ಕೊಟ್ಟಿದ್ದು ಕಾಂಗ್ರೆಸ್ :

ಕಾಂಗ್ರೆಸ್ ನೀಡಿದ ಚೊಂಬಿನ ಜಾಹಿರಾತು ವಿಚಾರವಾಗಿ ಮಾತನಾಡಿದ ಸುನಿಲ್ ಕುಮಾರ್, ಶೌಚಾಲಯ ನಿರ್ಮಾಣ ಮಾಡದೆ ಹಳ್ಳಿಯ ಮಹಿಳೆಯರಿಗೆ ಚೊಂಬು ಕೊಟ್ಟಿದ್ದು ಕಾಂಗ್ರೆಸ್‌ ಸರ್ಕಾರ. ಆದ್ರೆ ಶೌಚಾಲಯ ನಿರ್ಮಾಣ ಮಾಡಿಕೊಟ್ಟಿದ್ದು ಬಿಜೆಪಿ ಸರ್ಕಾರ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ನಾವು ಕೇಸರಿ ಹಾಕಿಕೊಂಡು ದ್ವೇಷ ಮಾಡಲು ಹೊರಟಿಲ್ಲ. ನಾವು ರಾಷ್ಟ್ರದಲ್ಲಿ ಕೇಸರಿ ಆಡಳಿತ ತರಲು ಹೊರಟಿದ್ದೇವೆ ಎಂದು ಹೇಳಿಕೆ ನೀಡಿದ್ದಾರೆ.

Continue Reading

DAKSHINA KANNADA

ಪದ್ಮರಾಜ್ ಪೂಜಾರಿ ಪ್ರಚಾರ ಶೈಲಿ..! ಜನಾರ್ದನ ಪೂಜಾರಿಯನ್ನ ನೆನೆದ ಜನ…!

Published

on

ಮಂಗಳೂರು : ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಕೈ ಅಭ್ಯರ್ಥಿ ಪದ್ಮರಾಜ್ ಪೂಜಾರಿ ಅವರ ಪ್ರಚಾರ ಶೈಲಿಗೆ ಜನ ಜನಾರ್ದನ ಪೂಜಾರಿಯವರನ್ನು ನೆನಪಿಸಿಕೊಳ್ತಾ ಇದ್ದಾರೆ. ಗುರುವಿನಂತೆ ಶಿಷ್ಯ ಕೂಡಾ ಪ್ರಚಾರ ಮಾಡ್ತಾ ಇರೋದು ನೋಡಿದ ಜನ ಇವರು ನಿಜವಾಗಿಯೂ ಜನಾರ್ದನ ಪೂಜಾರಿ ಅವರಂತೆ ಜನನಾಯಕ ಅಂತಿದ್ದಾರೆ.

ಜನಾರ್ದನ ಪೂಜಾರಿ ಅವರು 2014 ರ ಲೋಕಸಭಾ ಚುನಾವಣೆಯಲ್ಲಿ ತಮ್ಮ ಕೊನೆಯ ಸ್ಪರ್ಧೆಯನ್ನ ನೀಡಿದ್ದರು. ಹತ್ತು ವರ್ಷದ ಬಳಿಕ ಅವರ ಶಿಷ್ಯ ಪದ್ಮರಾಜ್ ಪೂಜಾರಿ ಈಗ ಲೋಕಸಭಾ ಚುನಾವಣಾ ಅಖಾಡಕ್ಕೆ ಇಳಿದಿದ್ದಾರೆ. ಪದ್ಮರಾಜ್ ಪೂಜಾರಿ ಅವರು ಜನರೊಂದಿಗೆ ಬೆರೆಯುವ ರೀತಿ, ಜನರಿಗೆ ತೋರಿಸುವ ಪ್ರೀತಿ, ಹಾಗೂ ಪ್ರಚಾರದ ವೇಳೆ ಅವರು ವರ್ತಿಸೋ ರೀತಿ ನೋಡಿದ ಸಾಕಷ್ಟು ಜನ ಜನಾರ್ಧನ ಪೂಜಾರಿ ಅವರ ಚುನಾವಣ ಪ್ರಚಾರದ ವೈಖರಿಯನ್ನು ನೆನಪಿಸಕೊಳ್ಳುವಂತೆ ಮಾಡಿದೆ.

ಸಂಸದರಾಗಿ , ಕೇಂದ್ರ ಸಚಿವರಾಗಿ, ಬಡವರ ಬಂಧು ಅಂತ ಕರೆಸಿಕೊಂಡಿದ್ದ ಜನಾರ್ದನ ಪೂಜಾರಿ ಅವರಿಗೆ ಚುನಾವಣೆಯಲ್ಲಿ ಸೋಲಾಗಿದ್ರೂ, ಜನರು ಮಾತ್ರ ಅವರನ್ನು ಮರೆತಿಲ್ಲ. ಜನಾರ್ದನ ಪೂಜಾರಿಯವರು ರಾಜಕೀಯದಿಂದ ದೂರ ಉಳಿದು ವರ್ಷಗಳೇ ಕಳೆದ್ರು ಜನರಿಗೆ ಅವರ ಮೇಲಿರೋ ಪ್ರೀತಿ ಅಭಿಮಾನ ಕಡಿಮೆ ಆಗಿಲ್ಲ. ಚುನಾವಣಾ ಸಮುಯದಲ್ಲಿ ಪ್ರಚಾರಕ್ಕೆ ಇಳಿಯುತ್ತಿದ್ದ ಜನಾರ್ದನ ಪೂಜಾರಿ ಅವರ ಪ್ರಚಾರ ವೈಖರಿಯನ್ನಂತು ಜನ ಮರೆಯೋದೆ ಕಷ್ಟ. ಮುಂಜಾನೆಯಿಂದ ರಾತ್ರಿ ವರೆಗೂ ಅವರು ಮತಯಾಚನೆ ಮಾಡುತ್ತಿದ್ದ ರೀತಿಗೆ ಜನರೇ ದಂಗಾಗಿ ಹೋಗ್ತಾ ಇದ್ರು. ಇನ್ನು ನಡೆದುಕೊಂಡು ಮತಯಾಚಿಸೋ ಜನಾರ್ದನ ಪೂಜಾರಿ ಅವರ ಜೊತೆ ಕಾರ್ಯಕರ್ತರು ಓಡಿಕೊಂಡು ಹೋಗಬೇಕು ಅನ್ನುವಷ್ಟು ವೇಗವಾಗಿ ಸಾಗ್ತಾ ಇದ್ರು. ಅದೇ ಸೇಮ್ ಟು ಸೇಮ್ ಅನ್ನುವಂತೆ ಪದ್ಮರಾಜ್ ಪೂಜಾರಿ ಕೂಡಾ ಪ್ರಚಾರ ಮಾಡ್ತಾ ಇದ್ದಾರೆ.

ಪದ್ಮರಾಜ್ ಪೂಜಾರಿಯವರು ಒಮ್ಮೆ ಬೈಕ್‌ನಲ್ಲಿ ಮತಯಾಚನೆಗೆ ತೆರಳಿದ್ರೆ, ಮತ್ತೊಮ್ಮೆ ಜೀಪ್ ಏರಿ ರೋಡ್ ಶೋ ನಡೆಸ್ತಾರೆ. ಇನ್ನು ಗ್ರಾಮೀಣ ಪ್ರದೇಶದಲ್ಲಿ ಪಾದಯಾತ್ರೆ ಮಾಡಿದ್ರೆ ಅವರ ವೇಗದ ನಡಿಗೆ ಮತ್ತು ಓಡಿಕೊಂಡು ಹೋಗುವ ಅವರ ಶೈಲಿ ಜನಾರ್ದನ ಪೂಜಾರಿ ಅವರನ್ನು ನೆನಪಿಸುತ್ತದೆ. ಎಲ್ಲೇ ಹೋದ್ರು ಜನ ಪದ್ಮರಾಜ್ ಅವರನ್ನು ಮುತ್ತಿಕೊಂಡು ಪ್ರೀತಿಯಿಂದ ಮಾತಾಡಿಸ್ತಾ ಇದ್ದಾರೆ. ಅದೇ ರೀತಿ ಪದ್ಮಾರಾಜ್ ಕೂಡಾ ಜನರಿಗೆ ಬಹಳಷ್ಟು ಹತ್ತಿರವಾಗಿ ಅಭಿಮಾನ ಪ್ರೀತಿಯನ್ನ ಗಳಿಸಿಕೊಂಡಿದ್ದಾರೆ. ಸದ್ಯಕ್ಕಂತು ಜನ ಜನಾರ್ದನ ಪೂಜಾರಿ ಅವರ ಸ್ಥಾನ ತುಂಬಲು ಪದ್ಮರಾಜ್ ಅವರೇ ಸರಿಯಾದ ಅಭ್ಯರ್ಥಿ ಅಂತ ಮಾತನಾಡುತ್ತಿದ್ದು, ಅವರ ಗೆಲುವಿಗೆ ಹಾರೈಸುತ್ತಿದ್ದಾರೆ.

ಇದನ್ನೂ ಓದಿ : ಉಡುಪಿ: ಅನ್ಯಕೋಮಿನವರ ಕೊಬ್ಬಿಗೆ ಸಿದ್ದರಾಮಯ್ಯ ಆಡಳಿತವೇ ಮುಖ್ಯ ಕಾರಣ : ಸುನಿಲ್ ಕುಮಾರ್

Continue Reading

LATEST NEWS

Trending