Connect with us

    LATEST NEWS

    ನರೇಂದ್ರ ಮೋದಿ ಸೇರಿದಂತೆ ರಾಜಕೀಯ ಧುರೀಣರು ಮಹಾಕುಂಭ ಮೇಳದಲ್ಲಿ ಭಾಗಿ

    Published

    on

    ಮಂಗಳೂರು/ಪ್ರಯಾಗ್‌ರಾಜ್ : 144 ವರ್ಷಕೊಮ್ಮೆ ನಡೆಯುವ ಮಹಾಕುಂಭ ಮೇಳ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನ ತ್ರಿವೇಣಿ ಸಂಗಮದಲ್ಲಿ ನಡೆಯುತ್ತಿದೆ. ಇದೊಂದು ಅತಿದೊಡ್ಡ ಧಾರ್ಮಿಕ ಕಾರ್ಯಕ್ರಮವಾಗಿದ್ದು, ದೇಶ, ವಿದೇಶಗಳಿಂದ ಭಕ್ತರು ಆಗಮಿಸುತ್ತಿದ್ದಾರೆ. ಇದೀಗ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ರಾಜಕೀಯ ಧುರೀಣರು ಸಹ ಮಹಾಕುಂಭದ ಪವಿತ್ರ ಸ್ನಾನಕ್ಕೆ ನಿರ್ಧರಿಸಿದ್ದಾರೆ.

    ಪ್ರಧಾನಿ ನಮೋ ಫೆಬ್ರವರಿ 5 ರಂದು ಪ್ರಯಾಗರಾಜ್ ಗೆ ಭೇಟಿ ನೀಡಲಿದ್ದಾರೆ. ಪ್ರಮುಖ ಸರ್ಕಾರಿ ಯೋಜನೆಗಳನ್ನು ಪರಿಶೀಲಿಸುವ ಮತ್ತು ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸಾಧ್ಯತೆಯಿದೆ. ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ ಭದ್ರತೆಗಾಗಿ ವಿಶೇಷ ವ್ಯವಸ್ಥೆ ಮಾಡಲಾಗುತ್ತಿದೆ. ನಿಗದಿತ ಸಮಯದಲ್ಲಿ ಎಲ್ಲ ಸಿದ್ಧತೆಗಳನ್ನು ಪೂರ್ಣಗೊಳಿಸಬೇಕು ಎಂದು ಜಿಲ್ಲಾಡಳಿತ ಸೂಚನೆ ನೀಡಿದೆ.

     

    ಇದನ್ನೂ ಓದಿ : ಏನಿದು ಸಿಂಹಸ್ಥ ಕುಂಭಮೇಳ? ಇದರ ವಿಶೇಷತೆ ಏನು?

     

    ಜನವರಿ 22 ರಂದು ಉತ್ತರ ಪ್ರದೇಶದ ಯೋಗಿ ಸರ್ಕಾರ ಸಂಪುಟ ಸಭೆ ನಡೆಯಲಿದೆ. ಸಭೆಯಲ್ಲಿ ಮಹಾಕುಂಭ ವಿಚಾರ ಚರ್ಚೆಗೆ ಬರಲಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಜನವರಿ 27 ರಂದು ಮಹಾಕುಂಭದಲ್ಲಿ ಭಾಗವಹಿಸಲಿದ್ದಾರೆ. ಫೆಬ್ರವರಿ 1 ರಂದು ಉಪರಾಷ್ಟ್ರಪತಿ ಜಗದೀಪ್ ಧನಕರ್ ತ್ರಿವೇಣಿ ಸಂಗಮಕ್ಕೆ ಬರಲಿದ್ದಾರೆ. ಫೆಬ್ರವರಿ 10 ರಂದು ರಾಷ್ಟ್ರಪತಿಗಳು ಆಗಮಿಸುವ ನಿರೀಕ್ಷೆ ಇದೆ. ವಿಐಪಿಗಳ ಭೇಟಿ ಗಮನದಲ್ಲಿಟ್ಟುಕೊಂಡು ಉತ್ತರ ಪ್ರದೇಶ ಪೊಲೀಸರು ಭದ್ರತೆಯನ್ನು ಬಿಗಿಗೊಳಿಸಿದ್ದಾರೆ. ಪ್ರಮುಖ ಸ್ಥಳಗಳಲ್ಲಿ ಭದ್ರತಾ ಪಡೆಗಳ ನಿಯೋಜನೆಯನ್ನು ಹೆಚ್ಚಿಸಲಾಗಿದೆ. ವಿಶೇಷ ಭದ್ರತಾ ತಂಡಗಳನ್ನು ಸಕ್ರಿಯಗೊಳಿಸಲಾಗಿದೆ. ಡ್ರೋನ್ ಮತ್ತು ಸಿಸಿಟಿವಿ ಕ್ಯಾಮೆರಾಗಳ ಮೂಲಕ ಕಣ್ಗಾವಲು ಇಡಲಾಗಿದೆ.

    FILM

    ಚೂರಿ ಇರಿತ ಪ್ರಕರಣ : ಆಸ್ಪತ್ರೆಯಿಂದ ಸೈಫ್ ಆಲಿ ಖಾನ್ ಬಿಡುಗಡೆ

    Published

    on

    ಮಂಗಳೂರು/ಮುಂಬೈ : ಬಾಲಿವುಡ್ ನಟ ಸೈಫ್ ಆಲಿ ಖಾನ್ ಚೇತರಿಸಿಕೊಂಡಿದ್ದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಚೂರಿ ಇ*ರಿತಕ್ಕೊಳಗಾಗಿ ಗಂ*ಭೀರವಾಗಿ ಗಾ*ಯಗೊಂಡ ಸೈಫ್ ಆಲಿ ಖಾನ್‌ ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸೈಫ್ ಆಲಿ ಖಾನ್‌ಗೆ 2 ಸರ್ಜರಿ ಮಾಡಲಾಗಿದೆ. ಚಿಕಿತ್ಸೆಯಿಂದ ಚೇತರಿಸಿಕೊಂಡಿರುವ ಸೈಫ್ ಆಲಿ ಖಾನ್ ಇದೀಗ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

    ಸೈಫ್ ಪತ್ನಿ ಕರೀನಾ ಕಪೂರ್ ಖಾನ್, ತಾಯಿ ಶರ್ಮಿಳಾ ಠಾಗೂರ್ ಜೊತೆ ಬಾಂದ್ರಾ ಮನೆಗೆ ಮರಳಿದ್ದಾರೆ ಎಂದು ತಿಳಿದುಬಂದಿದೆ. ಸೈಫ್‌ಗೆ ಕೆಲ ತಿಂಗಳುಗಳ ಕಾಲ ವಿಶ್ರಾಂತಿಯ ಅಗತ್ಯವಿದೆ ಎನ್ನಲಾಗಿದೆ.

    ಇದನ್ನೂ ಓದಿ : ಹೊಸ ಲುಕ್‌ನಲ್ಲಿ ಮಹಾಕುಂಭಮೇಳದ ಸುಂದರಿ ‘ಮೊನಾಲಿಸಾ’

    ಗಾ*ಯ ಗುಣವಾಗಲು ಹಾಗೂ ಸೈಫ್ ಸಂಪೂರ್ಣ ಚೇತರಿಸಿಕೊಳ್ಳಲು ಕೆಲವು ಸಮಯ ಹಿಡಿಯಲಿದೆ. ಹೀಗಾಗಿ ವಿಶ್ರಾಂತಿ ಅಗತ್ಯವಿದೆ. ಇನ್ಫೆಕ್ಷನ್ ಆಗದಂತೆ ಎಚ್ಚರ ವಹಿಸಬೇಕು ಎಂದು ವೈದ್ಯರು ತಿಳಿಸಿದ್ದಾರೆ ಎನ್ನಲಾಗಿದೆ. ಸೈಫ್ ಅಲಿ ಖಾನ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ವೇಳೆ ಮುಂಬೈನ ಲೀಲಾವತಿ ಆಸ್ಪತ್ರೆ ಬಳಿ ಭಾರಿ ಪೊಲೀಸ್ ಭದ್ರತೆ ನಿಯೋಜನೆ ಮಾಡಲಾಗಿತ್ತು. ಅಲ್ಲದೇ, ಸೈಫ್ ಆಲಿ ಖಾನ್ ಮನೆ ಬಳಿಯೂ ಪೊಲೀಸರನ್ನು ನಿಯೋಜಿಸಲಾಗಿದೆ.

    Continue Reading

    LATEST NEWS

    ಛತ್ತೀಸ್‌ಗಢದಲ್ಲಿ ಎನ್*ಕೌಂಟರ್; 10ಕ್ಕೂ ಅಧಿಕ ನಕ್ಸಲರ ಹ*ತ್ಯೆ

    Published

    on

    ಮಂಗಳೂರು/ಭುವನೇಶ್ವರ : ಛತ್ತೀಸ್‌ಗಢದ ಗರಿಯಾಬಂದ್ ಜಿಲ್ಲೆಯ ಛತ್ತೀಸಗಢ – ಒಡಿಶಾ ಗಡಿಯಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಹಿರಿಯ ಕೇಡರ್ ಸೇರಿದಂತೆ 10ಕ್ಕೂ ಅಧಿಕ ನಕ್ಸಲರು ಹ*ತರಾಗಿರುವ ಬಗ್ಗೆ ವರದಿಯಾಗಿದೆ.

    ಈ ಬಗ್ಗೆ ಗೃಹ ಸಚಿವ ಅಮಿತ್ ಶಾ ಮಾಹಿತಿ ನೀಡಿದ್ದು, ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್), ಸೋಜಿ ಒಡಿಶಾ ಮತ್ತು ಛತ್ತೀಸ್‌ಗಢ ಪೊಲೀಸರು ಅಂತರಾಜ್ಯ ಗಡಿಯಲ್ಲಿ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಮಾವೋವಾದಿಗಳನ್ನು ಹ*ತ್ಯೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

    ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, ನಕ್ಸಲ್ ಮುಕ್ತ ಭಾರತದ ಸಂಕಲ್ಪ ಮತ್ತು ಭದ್ರತಾ ಪಡೆಗಳ ಜಂಟಿ ಪ್ರಯತ್ನದಿಂದ ನಕ್ಸಲಿಸಂ ಇಂದು ಕೊ*ನೆಯುಸಿರೆಳೆದಿದೆ. ಇದು ನಕ್ಸಲಿಸಂಗೆ ಮತ್ತೊಂದು ಪ್ರಬಲ ಹೊ*ಡೆತ. ನಕ್ಸಲ್ ಮುಕ್ತ ಭಾರತ ನಿರ್ಮಾಣದಲ್ಲಿ ನಮ್ಮ ಭದ್ರತಾ ಪಡೆಗಳು ಪ್ರಮುಖ ಯಶಸ್ಸನ್ನು ಸಾಧಿಸಿವೆ ಎಂದಿದ್ದಾರೆ.

    ಇದನ್ನೂ ಓದಿ : ಹೊಸ ಲುಕ್‌ನಲ್ಲಿ ಮಹಾಕುಂಭಮೇಳದ ಸುಂದರಿ ‘ಮೊನಾಲಿಸಾ’

    ಸಿಆರ್‌ಪಿಎಫ್, ಸೋಜಿ ಒಡಿಶಾ ಮತ್ತು ಛತ್ತೀಸ್‌ಗಢ ಪೊಲೀಸರು ಒಡಿಶಾ-ಛತ್ತೀಸ್‌ಗಢ ಗಡಿಯಲ್ಲಿ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ 14 ನಕ್ಸಲರನ್ನು ಹತ್ಯೆಮಾಡಿದ್ದಾರೆ’ ಎಂದು ಅವರು ಎಕ್ಸ್‌ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

    ಸೋಮವಾರ ಮುಂಜಾನೆ ಜಂಟಿ ಕಾರ್ಯಾಚರಣೆ ವೇಳೆ ನಡೆದ ಎನ್‌ಕೌಂಟರ್‌ನಲ್ಲಿ ಇಬ್ಬರು ಮಹಿಳಾ ನಕ್ಸಲರು ಸಾ*ವಿಗೀಡಾಗಿದ್ದು, ಕೋಬ್ರಾ ಜವಾನನೊಬ್ಬ ಗಾ*ಯಗೊಂಡಿರುವ ಬಗ್ಗೆ ವರದಿಯಾಗಿತ್ತು. ಛತ್ತೀಸ್‌ಗಢ – ಒಡಿಶಾ ಗಡಿಯಲ್ಲಿರುವ ಮೈನ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಅರಣ್ಯದಲ್ಲಿ ಸೋಮವಾರ(ಜ.20) ತಡರಾತ್ರಿ ಮತ್ತು ಮಂಗಳವಾರ(ಜ.21) ಮುಂಜಾನೆ ಗುಂ*ಡಿನ ಚಕಮಕಿ ನಡೆದಿದೆ. ಈ ವೇಳೆ 10ಕ್ಕೂ ಅಧಿಕ ನಕ್ಸಲರನ್ನು ಹೊ*ಡೆದುರುಳಿಸಲಾಗಿದೆ. ಕಾರ್ಯಾಚರಣೆ ಮುಂದುವರಿದಿದ್ದು, ನಕ್ಸಲರ ಸಾ*ವಿನ ಸಂಖ್ಯೆ ಹೆಚ್ಚುವ ಸಾಧ್ಯತೆಯಿದೆ.

    Continue Reading

    LATEST NEWS

    ಹೊಸ ಲುಕ್‌ನಲ್ಲಿ ಮಹಾಕುಂಭಮೇಳದ ಸುಂದರಿ ‘ಮೊನಾಲಿಸಾ’

    Published

    on

    ಮಂಗಳೂರು/ಇಂದೋರ್ : ವಿಶ್ವದ ಅತಿದೊಡ್ಡ ಕಾರ್ಯಕ್ರಮ ಮಹಾಕುಂಭ ಮೇಳ. ಅಲ್ಲಿ ಚಿತ್ರ, ವಿಚಿತ್ರ ವೇಷ, ನಿಲುವುಗಳನ್ನು ಹೊಂದಿರುವ ಸಂತ, ನಾಗಸಾಧುಗಳು ಹೈಲೆಟ್. ಆದರೆ, ಈ ಬಾರಿ ಆ ಹುಡುಗಿ ಗಮನ ಸೆಳೆದಿದ್ದಳು.

    ಮಹಾಕುಂಭಮೇಳದಲ್ಲಿ ಸರ, ಮಣಿ, ರುದ್ರಾಕ್ಷಿ ಮಾರುತ್ತಿದ್ದ ಬಟ್ಟಲು ಕಂಗಳ, ಕಂದು ವರ್ಣದ ಚೆಲುವೆ ಮೊನಾಲಿಸಾ ಎಲ್ಲರ ಚಿತ್ತಾಕರ್ಷಿಸಿದ್ದಳು. ಆಕೆಯ ಫೋಟೋ, ವೀಡಿಯೋಗಳು ವೈರಲ್ ಆಗ ತೊಡಗಿದ್ದವು. ಆಕೆಯನ್ನು ನೋಡಲು ಜನ ಮುಗಿಬಿದ್ದರು. ಆಕೆಯ ಸಂದರ್ಶನ, ಸೆಲ್ಫಿ ಹೆಚ್ಚಾಯಿತು. ಹೀಗಾಗಿ ಮೊನಾಲಿಸಾ ತಂದೆ ಆಕೆಯನ್ನು ವಾಪಾಸು ಮನೆಗೆ ಕಳುಹಿಸಿದ್ದರು. ಇದರಿಂದ ಮಹಾಕುಂಭಮೇಳಕ್ಕೆ ಭೇಟಿ ಕೊಡುವವರಿಗೆ ಈಕೆಯ ನೋಡುವ ಅವಕಾಶ ಇರಲಿಲ್ಲ. ಸೈಲೆಂಟಾಗಿ ಕಣ್ಮರೆಯಾದ ಬೆರಗು ಕಂಗಳ ಕೋಮಲೆ ಎಲ್ಲಿ ಹೋದಳಪ್ಪ ಎನ್ನುತ್ತಿರುವಾಗಲೇ ಮತ್ತೆ ಪ್ರತ್ಯಕ್ಷವಾಗಿದ್ದಾಳೆ. ಅದೂ ಮಹಾಕುಂಭಮೇಳದಲ್ಲಿ ಅಲ್ಲ, ಬದಲಿಗೆ ಸೋಶಿಯಲ್ ಮೀಡಿಯಾದಲ್ಲಿ.

    ಇದನ್ನೂ ಓದಿ : ಪಪ್ಪಾಯ ತಿನ್ನುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಗೊತ್ತಾ ??

    ಮಹಾಕುಂಭಮೇಳದಲ್ಲಿ ಸೋಜಿಗದಂತೆ ಸೆಳೆದ ಮೊನಾಲಿಸಾ ಹೊಸ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾಳೆ. ಆಕೆ ಬ್ಯೂಟಿ ಪಾರ್ಲರ್ ಮೆಟ್ಟಿಲೇರಿದ್ದು, ಬ್ಯೂಟೀಷನ್ ಒಬ್ಬರು ಆಕೆಗೆ ಹೊಸ ಲುಕ್ ಕೊಟ್ಟಿದ್ದಾರೆ.

    ಹೊಸ ಲುಕ್‌ನಲ್ಲಿ ಮೊನಾಲಿಸಾ ಕಂಗೊಳಿಸುತ್ತಿದ್ದಾಳೆ. ಕೂದಲಿನ ವಿನ್ಯಾಸ ಬದಲಾಗಿದೆ. ಈ ವೀಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಮೊನಾಲಿಸಾ ಹೊಸ ಲುಕ್‌ಗೆ ಆಕೆಯ ಅಭಿಮಾನಿಗಳು ಫಿದಾ ಆಗಿದ್ದಾರೆ.

    Continue Reading

    LATEST NEWS

    Trending