DAKSHINA KANNADA
ರಾಜಕೀಯ ಮುಖಂಡ, ಪತ್ರಕರ್ತ ಅಕ್ಬರ್ ಉಳ್ಳಾಲ ನಿ*ಧನ
Published
4 months agoon
By
NEWS DESK4ಉಳ್ಳಾಲ : ಮೇಲಂಗಡಿ ನಿವಾಸಿ ಅಕ್ಬರ್ ಉಳ್ಳಾಲ(65) ಅಲ್ಪಕಾಲದ ಅನಾರೋಗ್ಯ ದಿಂದ ಕಾಸರಗೋಡಿನಲ್ಲಿರುವ ಸ್ವಗೃಹದಲ್ಲಿ ಬುಧವಾರ ನಿ*ಧನರಾದರು.
ಎಚ್ ಎ. ಖಾದರ್(ಬಾರ್ಲಿ ಅಬ್ದುಲ್ಲಾ)ಅವರ ಐವರು ಗಂಡು ಮಕ್ಕಳಲ್ಲಿ ಹಿರಿಯ ಪುತ್ರರಾಗಿ ಮೇಲಂಗಡಿಯಲ್ಲಿ ಜನಿಸಿದ ಅವರು 17 ನೇ ವಯಸ್ಸಿನಲ್ಲಿ ಜನತಾಪಕ್ಷ ಸೇರಿ ರಾಜಕೀಯ ರಂಗದಲ್ಲಿ ತೊಡಗಿಸಿಕೊಂಡಿದ್ದರು. ಕೆಲವು ಸಮಯ ಈ ಪಕ್ಷದಲ್ಲಿ ದುಡಿದು ಉಳ್ಳಾಲದಲ್ಲಿ ಈ ಪಕ್ಷ ಉಳಿಸಲು ಶ್ರಮಿಸಿದ್ದರು.
1982ರಲ್ಲಿ ಮುಸ್ಲಿಂ ಲೀಗ್ ಪಕ್ಷ ಸೇರಿಕೊಂಡಿದ್ದ ಅವರು ಇದರ ಬಳಿಕ ಜನತಾದಳ ಸೇರಿ ಜನತಾದಳ ಸೇವಾದಳದಲ್ಲಿ ಕಾರ್ಯ ನಿರ್ವಹಣೆ ಮಾಡಿದ್ದ ಅವರು ರಾಜಕೀಯ ಮುಖಂಡ ಪಿಜಿಆರ್ ಸಿಂಧ್ಯಾ ಅವರ ಒನನಾಡಿಯಾಗಿದ್ದರು.
20 ವರ್ಷಗಳ ಹಿಂದೆ ಬ್ಯಾರಿ ಎಂಬ ಕನ್ನಡ ಪಾಕ್ಷಿಕ ಪತ್ರಿಕೆ ಆರಂಭಿಸಿ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡ ಅವರು ಬಳಿಕ ಅದನ್ನು ವಾರಪತ್ರಿಕೆ ಯಾಗಿ ಮುನ್ನೆಡೆಸಿದ್ಜರು. ಇದರ ಬಳಿಕ ವಾರ್ತಾ ಮಿತ್ರ ಪತ್ರಿಕೆಯ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದರು.
ಯಂಗ್ ಮೆನ್ಸ್ ಅಸೋಸಿಯೇಷನ್ ಸಂಘದ ಅಧ್ಯಕ್ಷ ರಾಗಿ, ಉಳ್ಳಾಲ ದರ್ಗಾದ ಸದಸ್ಯ ರಾಗಿ, ಮೇಲಂಗಡಿಯ ಹೊಸಪಳ್ಳಿಯ ಕಾರ್ಯದರ್ಶಿ ಯಾಗಿ ಧಾರ್ಮಿಕ ರಂಗದಲ್ಲಿ ಸೇವೆ ಸಲ್ಲಿಸಿದ್ದ ಅವರು, ವಿವಿಧ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದರು. ಹಳೆ ಕೋಟೆ ಯಲ್ಲಿ ವಾಸವಾಗಿದ್ದ ಅವರು ವರ್ಷದ ಹಿಂದೆ ಕಾಸರಗೋಡಿನಲ್ಲಿ ಹೊಸ ಮನೆ ನಿರ್ಮಿಸಿ ಅಲ್ಲೇ ವಾಸವಾಗಿದ್ದರು. ಮೃತರು ಪತ್ನಿ, ಓರ್ವ ಪುತ್ರಿ, ನಾಲ್ವರು ಸಹೋದರರು ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಇದನ್ನೂ ಓದಿ : ಪ್ರೆಗ್ನೆನ್ಸಿ ಫೋಟೋಶೂಟ್‌ನಲ್ಲಿ ಕಂಗೊಳಿಸಿದ ಹರ್ಷಿಕಾ ಪೂಣಚ್ಚ
ಸಂತಾಪ:
ಸಾಮಾಜಿಕ ಮುಖಂಡ ಅಕ್ಬರ್ ಉಳ್ಳಾಲ್ ಅವರ ನಿಧನಕ್ಕೆ ಸಹೋದರ ಫಾರೂಕ್ ಉಳ್ಳಾಲ್, ಡಿಸಿಸಿ ಉಪಾಧ್ಯಕ್ಷ ಟಿಎಸ್ ಅಬ್ದುಲ್ಲಾ, ಅಬೂಬಕ್ಕರ್ ಹಾಜಿ ನಾಟೆಕಲ್, ದರ್ಗಾ ಮಾಜಿ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್, ಯೂತ್ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಸೀರ್ ಅಹ್ಮದ್ ಸಾಮಣಿಗೆ, ಕರ್ನಾಟಕ ಭಾವೈಕ್ಯ ಪರಿಷತ್ ಸ್ಥಾಪಕಾಧ್ಯಕ್ಷ ಕೆ.ಎ.ಅಬ್ದುಲ್ ಅಝೀಝ್ ಪುಣಚ ಸಂತಾಪ ವ್ಯಕ್ತಪಡಿಸಿದ್ದಾರೆ
DAKSHINA KANNADA
ದಿ।ಮನಮೋಹನ್ ಸಿಂಗ್ ಸಹಿ ಇರುವ ರೂ 1ರ ನೋಟು ರೂ.100 ಕ್ಕೆ ಮಾರಾಟ…!
Published
8 hours agoon
27/12/2024By
Adminಮಂಗಳೂರು : ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿಧನದೊಂದಿಗೆ ಅವರೊಂದಿಗೆ ನಂಟು ಬೆಸೆದುಕೊಂಡಿರುವ ಭಾರತೀಯ ನೋಟುಗಳಿಗೆ ಭಾರಿ ಬೇಡಿಕೆ ಬಂದಿದೆ. ಮನಮೋಹನ್ ಸಿಂಗ್ ಅವರ ಸಹಿ ಇರುವ ನೋಟುಗಳನ್ನು ಜನರು ಆನ್‌ಲೈನ್ ಮೂಲಕ ಖರೀದಿ ಮಾಡುತ್ತಿದ್ದಾರೆ.
ದೇಶದಲ್ಲಿ ನೋಟುಗಳ ಮೇಲೆ ಸಹಿ ಮಾಡಿರುವ ಏಕೈಕ ಪ್ರಧಾನಿ ಮನಮೋಹನ್ ಸಿಂಗ್. ಅದರಲ್ಲೂ ಒಂದು ರೂಪಾಯಿಂದ ಹಿಡಿದು ಎಲ್ಲಾ ಮುಖಬೆಲೆಯ ನೋಟುಗಳ ಮೇಲೆ ಸಹಿ ಮಾಡಿದ ಏಕೈಕ ವ್ಯಕ್ತಿ ಕೂಡಾ ಮನಮೋಹನ್ ಸಿಂಗ್. 1976 ರಲ್ಲಿ ದೇಶದ ಹಣಕಾಸು ಕಾರ್ಯದರ್ಶಿಯಾಗಿದ್ದ ಮನಮೋಹನ್ ಸಿಂಗ್ ಅವರು 1982 ರಿಂದ 1985 ರ ತನಕ ಭಾರತೀಯ ರಿಸರ್ವ ಬ್ಯಾಂಕ್ ನ ಗವರ್ನರ್ ಆಗಿ ಸೇವೆ ಸಲ್ಲಿಸಿದ್ದರು.
1976 ರಲ್ಲಿ ಹಣಕಾಸು ಕಾರ್ಯದರ್ಶಿ ಆಗಿದ್ದ ಸಂದರ್ಭದಲ್ಲಿ ಮನಮೋಹನ್ ಸಿಂಗ್ ಅವರು ಒಂದು ರೂಪಾಯಿ ಮುಖಬೆಲೆಯ ನೋಟುಗಳಿಗೆ ಸಹಿ ಮಾಡಿದ್ದರು. ಈ ಒಂದು ರೂಪಾಯಿಗಳ ನೋಟಿನ ಮೇಲೆ ಸಹಿ ಮಾಡುವ ಅಧಿಕಾರ ಕೇವಲ ಹಣಕಾಸು ಕಾರ್ಯದರ್ಶಿಗೆ ಮಾತ್ರ ಇರುತ್ತದೆ. ಇದಾದ ಬಳಿಕ 1982 ರಲ್ಲಿ ರಿಸರ್ವ ಬ್ಯಾಂಕ್ ಆಫ್ ಇಂಡಿಯಾದ ಗವರ್ನರ್ ಆದ ಮನಮೋಹನ್ ಸಿಂಗ್ ಅವರು ಗವರ್ನರ್ ಗೆ ಇರುವ ಅಧಿಕಾರದಂತೆ ಉಳಿದ ಎಲ್ಲಾ ಮುಖಬೆಲೆಯ ಕರೆನ್ಸಿಗೆ ಸಹಿ ಮಾಡಿದ್ದರು.
ಡಿಸೆಂಬರ್ 26 ರಂದು ತಮ್ಮ 92 ನೇ ವಯಸ್ಸಿನಲ್ಲಿ ನಿಧನರಾದ ಮನಮೋಹನ್ ಸಿಂಗ್ ಅವರ ಸಹಿ ಇರುವ ನೋಟಿಗೆ ಈಗ ಬೇಡಿಕೆ ಬಂದಿದೆ. ಆನ್‌ಲೈನ್‌ನಲ್ಲಿ ಪುರಾತನ ನಾಣ್ಯಗಳು ಮತ್ತು ನೋಟುಗಳನ್ನು ಮಾರಾಟ ಮಾಡುವ ವೇದಿಕೆಯಾದ ಬಿಡ್ ಕಯೂರಿಯೋಸ್ ನಲ್ಲಿ ಮನಮೋಹನ್ ಸಿಂಗ್ ಅವರ ಸಹಿ ಇರುವ ನೋಟುಗಳು ಮಾರಾಟ ಮಾಡಲಾಗುತ್ತಿದೆ. ಅದರಲ್ಲೂ ಒಂದು ರೂಪಾಯಿ ಮುಖಬೆಲೆಯ ನೋಟುಗಳು ನೂರು ರೂಪಾಯಿಗಳಿಗೆ ಮಾರಾಟವಾಗುತ್ತಿದೆ.
DAKSHINA KANNADA
‘ಕುಸಲ್ದ ಅರಸೆ’ ನವೀನ್ ಡಿ. ಪಡೀಲ್‌ಗೆ ‘ವಿಶ್ವಪ್ರಭಾ ಪುರಸ್ಕಾರ – 2025’
Published
10 hours agoon
27/12/2024ಉಡುಪಿ: ತುಳು ರಂಗಭೂಮಿ ಮತ್ತು ಚಲನಚಿತ್ರ ನಟ ನವೀನ್ ಡಿ ಪಡೀಲ್ ಅವರು ಸಂಸ್ಕೃತಿ ವಿಶ್ವ ಪ್ರತಿಷ್ಠಾನದಿಂದ ಕೊಡಲಾಗುವ ‘ವಿಶ್ವಪ್ರಭಾ ಪುರಸ್ಕಾರ-2025’ ಕ್ಕೆ ಆಯ್ಕೆಯಾಗಿದ್ದಾರೆ.
11 ನವೆಂಬರ್ 1969 ನವೀನ್ ಡಿ ಪಡೀಲ್ ಒಬ್ಬ ಭಾರತೀಯ ರಂಗಭೂಮಿ ಮತ್ತು ಚಲನಚಿತ್ರ ನಟರಾಗಿ ಗುರುತಿಸಿಕೊಂಡಿದ್ದಾರೆ. ತುಳು ಭಾಷೆಯಲ್ಲಿ ಸಾವಿರಕ್ಕೂ ಹೆಚ್ಚು ನಾಟಕಗಳನ್ನು ಪ್ರದರ್ಶಿಸಿದ್ದಾರೆ . “ಮಾಸ್ಟರ್ ಆಫ್ ಕಾಮಿಡಿ ಅಂಡ್ ಟ್ರಾಜಿಡಿ” ಆಗಿ ನಟನೆಯ ಮೂಲಕ ತುಳು ರಂಗಭೂಮಿಯ ವಲಯಗಳಲ್ಲಿ ವ್ಯಾಪಕವಾಗಿ ಹೆಸರುವಾಸಿಯಾಗಿರುವ ವಿನ್ ಡಿ. ಪಡೀಲ್ ಅನ್ನು “ಕುಸಲ್ದ ಅರಸೆ” ಎಂದು ಕರೆಯಲಾಗುತ್ತದೆ.
ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿ ಇದರ ವತಿಯಿಂದ ಪ್ರಭಾವತಿ ಹಾಗೂ ಉಡುಪಿ ವಿಶ್ವನಾಥ್ ಶೆಣೈ ಪ್ರಾಯೋಜಿತ ವಿಶ್ವಪ್ರಭಾ ಪುರಸ್ಕಾರ-2025 ಅನ್ನು ತುಳು ಹಾಗೂ ಕನ್ನಡ ಚಲನಚಿತ್ರ ಮತ್ತು ರಂಗಭೂಮಿ ಕಲಾವಿದ ನವೀನ್ ಡಿ. ಪಡೀಲ್ ಅವರಿಗೆ ನೀಡಿ ಗೌರವಿಸಲಾಗುವುದು ಎಂದು ವಿಶ್ವಪ್ರಭಾ ಪುರಸ್ಕಾರ ಸಮಿತಿ ಸಂಚಾಲಕ ಮರವಂತೆ ನಾಗರಾಜ ಹೆಬ್ಬಾರ್ ಹಾಗೂ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಸ್ಥಾಪಕ ವಿಶ್ವನಾಥ ಶೆಣೈ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪುರಸ್ಕಾರವು 1ಲಕ್ಷ ರೂ. ನಗದು, ಪ್ರಶಸ್ತಿ ಪತ್ರ ಫಲಕ ಒಳಗೊಂಡಿರುತ್ತದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷೆ ಸಂಧ್ಯಾ ಶೆಣೈ, ವಿಶ್ವೇಶ್ವರ ಅಡಿಗ, ರವಿರಾಜ್ ಎಸ್.ಪಿ ಉಪಸ್ಥಿತರಿದ್ದರು.
DAKSHINA KANNADA
ಶಿರಾಡಿ ಘಾಟ್‌ನಲ್ಲಿ ಸುರಂಗ ಮಾರ್ಗಕ್ಕೆ ಗ್ರೀನ್ ಸಿಗ್ನಲ್; ಡಿಪಿಆರ್ ತಯಾರಿಸಲು ಸೂಚನೆ
Published
12 hours agoon
27/12/2024By
NEWS DESK4ಮಂಗಳೂರು : ಉದ್ಯಮ ನಗರಿ ಮಂಗಳೂರಿನಿಂದ ಉದ್ಯಾನನಗರಿ ಬೆಂಗಳೂರು ನಡುವೆ ಶಿರಾಡಿ ಘಾಟ್‌ನಲ್ಲಿ ಸುರಂಗ ಮಾರ್ಗ ನಿರ್ಮಿಸುವ ಕುರಿತಾಗಿ ಡಿಪಿಆರ್ ತಯಾರಿಸಲು ಕೇಂದ್ರ ನಿರ್ದೇಶನ ನೀಡಿದೆ. ಶಿರಾಡಿ ಘಾಟ್‌ನಲ್ಲಿ ಎಲ್ಲೆಲ್ಲಿ ಸುರಂಗ ಮಾರ್ಗ ಹಾದು ಹೋಗಲಿದೆ? ಎಲ್ಲಿ ಬೃಹತ್ ಸೇತುವೆ ನಿರ್ಮಾಣವಾಗಬೇಕಾಗಿದೆ? ಈ ಕಾಮಗಾರಿ ಮುಗಿಸಲು ಎಷ್ಟು ವರ್ಷಗಳು ಬೇಕಾಗುತ್ತದೆ? ಎಂಬ ಸಂಪೂರ್ಣ ಮಾಹಿತಿಯನ್ನು ನೀಡಲು ಕೇಂದ್ರ ಸೂಚಿಸಿದೆ. ಇದಕ್ಕಾಗಿ ವಿಸ್ತ್ರತ ಯೋಜನಾ ವರದಿ ತಯಾರಿಸಿ ಕೊಡುವಂತೆ ಹೆದ್ದಾರಿ ಇಲಾಖೆಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ.
ಮಳೆಗಾಲದಲ್ಲಿ ಭೂಕುಸಿತದಿಂದಾಗಿ ರಸ್ತೆ ಸಂಚಾರದಲ್ಲಿ ಆಗಾಗ್ಗೆ ವ್ಯತ್ಯಯ ಉಂಟಾಗುತ್ತಿದೆ. ಹೀಗಾಗಿ ಶಿರಾಡಿ ಘಾಟ್‌ನಲ್ಲಿ ಸುರಂಗ ಮಾರ್ಗ ಮಾಡುವ ಬಗ್ಗೆ 2022 ರಲ್ಲೇ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ, ಈ ಯೋಜನೆ ಅಷ್ಟೊಂದು ಸುಲಭ ಅಲ್ಲ ಮತ್ತು ಇದಕ್ಕೆ ತಗಲುವ ಖರ್ಚು ಕೂಡ ಜಾಸ್ತಿ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಅಭಿಪ್ರಾಯ ಪಟ್ಟಿದ್ದರು. ಇದರ ಜೊತೆಗೆ ಸುರಂಗ ಮಾರ್ಗ ನಿರ್ಮಾಣದಿಂದ ಪರಿಸರದ ಮೇಲೆ ಆಗುವ ಸಾಧಕ ಭಾದಕಗಳ ಬಗ್ಗೆಯೂ ಚರ್ಚೆ ನಡೆದಿತ್ತು.
ಇದನ್ನೂ ಓದಿ : ಕಾಲ್ತುಳಿತ ವಿವಾದದ ಬೆನ್ನಲ್ಲೇ ಪುಷ್ಪ 2 ಚಿತ್ರದ ಹಾಡಿಗೆ ಬಿತ್ತು ಕತ್ತರಿ!
ಆದರೆ, ಇದೀಗ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಹೆದ್ದಾರಿ ಇಲಾಖೆಗೆ ಈ ಸುರಂಗ ಮಾರ್ಗದ ಬಗ್ಗೆ ಡಿಪಿಆರ್ ತಯಾರಿಸಲು ನಿರ್ದೇಶನ ನೀಡಿದ್ದಾರೆ. ವಿಸ್ತ್ರತ ಯೋಜನಾ ವರದಿಯ ಅಧ್ಯಯನದ ಬಳಿಕ ಈ ಯೋಜನೆಯನ್ನು ಕೈಗೆತ್ತಿಕೊಳ್ಳುವ ಬಗ್ಗೆ ಚಿಂತಿಸಲಾಗುವುದು ಎಂದು ಹೇಳಲಾಗಿದೆ. ಶಿರಾಡಿ ಘಾಟ್ ರಸ್ತೆಯಲ್ಲಿ ಸುರಂಗ ನಿರ್ಮಾಣದಿಂದ ಬೆಂಗಳೂರು ಪ್ರಯಾಣದ ದೂರ ಕಡಿಮೆ ಆಗಲಿದ್ದು, ಆಗಾಗ್ಗೆ ಸಂಭವಿಸುವ ಟ್ರಾಫಿಕ್ ಜಾಮ್‌ನಿಂದಲೂ ಮುಕ್ತಿ ಸಿಗಲಿದೆ.