ಭಾರತದ ಕೆಲ ಪ್ರದೇಶಗಳನ್ನು ಸೇರಿಸಿ ನಕ್ಷೆ ಬಿಡುಗೆ ಮಾಡಿದ ಪಾಕಿಸ್ತಾನಕ್ಕೆ ಭಾರತ ತೀಕ್ಷ ಪ್ರತಿಕ್ರೀಯೆ..!
ನವದೆಹಲಿ: ಜಮ್ಮು ಮತ್ತು ಕಾಶ್ಮೀರ ಮತ್ತು ಗುಜರಾತ್‌ನ ಕೆಲವು ಭಾಗಗಳು ತನ್ನ ಪ್ರದೇಶದ ಭಾಗವೆಂದು ಹೇಳಿಕೊಂಡು ಪಾಕಿಸ್ಥಾನ “ಹೊಸ ರಾಜಕೀಯ ನಕ್ಷೆ” ಬಿಡುಗಡೆ ಮಾಡುವುದಕ್ಕೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಇದನ್ನು ‘ರಾಜಕೀಯ ಮೂರ್ಖತನ’ ಎಂದು ಕರೆದ ಭಾರತ ಈ ಹಾಸ್ಯಾಸ್ಪದ ಹಕ್ಕುಗಳಿಗೆ ಕಾನೂನು ಮಾನ್ಯತೆ ಅಥವಾ ಅಂತರರಾಷ್ಟ್ರೀಯ ವಿಶ್ವಾಸಾರ್ಹತೆ ಇಲ್ಲ ಎಂದು ಖಡಕ್ ಸಂದೇಶ ರವಾನಿಸಿದೆ. ಪಾಕಿಸ್ತಾನದ ಫೆಡರಲ್ ಕ್ಯಾಬಿನೆಟ್ ಮಂಗಳವಾರ ನಕ್ಷೆಯನ್ನು ಅನುಮೋದಿಸಿದೆ ಎಂದು ಹೇಳಲಾಗಿದೆ. ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ತಮ್ಮ ದೇಶದ ಹೊಸ ರಾಜಕೀಯ ನಕ್ಷೆಯನ್ನು ಇಸ್ಲಾಮಾಬಾದ್‌ನಲ್ಲಿ ಬಿಡುಗಡೆ ಮಾಡಿದ ಕೆಲವೇ ಗಂಟೆಗಳ ನಂತರ ನವದೆಹಲಿಯಿಂದ ಈ ಕಠಿಣ ಪ್ರತಿಕ್ರಿಯೆ ನೀಡಲಾಗಿದೆ.
ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸುವ ಭಾರತ ಸರ್ಕಾರದ ಐತಿಹಾಸಿಕ ನಿರ್ಧಾರ ಒಂದು ವರ್ಷ ಪೂರ್ಣಗೊಳ್ಳುವ ಒಂದು ದಿನದ ಮೊದಲು ಪಾಕಿಸ್ತಾನ ನಕ್ಷೆಯಲ್ಲಿ ಈ ವಿವಾದಾತ್ಮಕ ಬದಲಾವಣೆಗಳನ್ನು ಮಾಡಲಾಗಿದೆ.
ನವದೆಹಲಿಯ ಸಂಕ್ಷಿಪ್ತ ಹೇಳಿಕೆಯಲ್ಲಿ ವಿದೇಶಾಂಗ ಸಚಿವಾಲಯವು “ಪಾಕಿಸ್ತಾನದ ರಾಜಕೀಯ ನಕ್ಷೆ” ಎಂದು ಕರೆಯಲ್ಪಡುವದನ್ನು ನಾವು ನೋಡಿದ್ದೇವೆ, ಅದನ್ನು ಪ್ರಧಾನಿ ಇಮ್ರಾನ್ ಖಾನ್ ಬಿಡುಗಡೆ ಮಾಡಿದ್ದಾರೆ.
ಇದು ರಾಜಕೀಯ ಮೂರ್ಖತನದ ಕೃತ್ಯವಾಗಿದ್ದು, ಇದರಲ್ಲಿ ಭಾರತದ ಗುಜರಾತ್ ರಾಜ್ಯಗಳು ಮತ್ತು ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್‌ನ ಕೇಂದ್ರಾಡಳಿತ ಪ್ರದೇಶಗಳ ಕೆಲ ಪ್ರದೇಶಗಳನ್ನು ಅಸಂಬದ್ಧವಾಗಿ ತನ್ನದೆಂದು ಹೇಳಿಕೊಳ್ಳುತ್ತಿದೆ.
ಇಂತಹ ಹಾಸ್ಯಾಸ್ಪದ ವಿಷಯಗಳಿಗೆ ಕಾನೂನು ಮಾನ್ಯತೆ ಅಥವಾ ಅಂತರರಾಷ್ಟ್ರೀಯ ವಿಶ್ವಾಸಾರ್ಹತೆ ಇಲ್ಲ.
ವಾಸ್ತವವಾಗಿ ಈ ಹೊಸ ಪ್ರಯತ್ನವು ಗಡಿಯಾಚೆಗಿನ ಭಯೋತ್ಪಾದನೆಯ ಮೂಲಕ ಈ ಪ್ರದೇಶವನ್ನು ವಶಪಡಿಸಿಕೊಳ್ಳಲು ಪಾಕಿಸ್ತಾನವು ಆಸಕ್ತಿ ಹೊಂದಿದೆ ಎಂಬುದನ್ನು ಖಚಿತಪಡಿಸುತ್ತದೆ ಎಂದಿದ್ದಾರೆ.
ಮಂಗಳೂರು/ತಿರುವನಂತಪುರ : ಗೋಪಾನ್‌ಸ್ವಾಮಿಯದು ಸಹಜ ಸಾವು ಎಂದು ಪ್ರಾಥಮಿಕ ವರದಿಯಲ್ಲಿ ಕಂಡುಬಂದಿದೆ.
ಸ್ವಯಂ ಘೋಷಿತ ಗುರು ಗೋಪನ್ ಸ್ವಾಮಿಯ “ಸಮಾಧಿ” ವಿಚಾರವಾಗಿ ಕೇರಳ ಹೈಕೋರ್ಟ್ ಬುಧವಾರ ಕಾಂಕ್ರಿಟ್ ಚೇಂಬರ್ ಅನ್ನು ತೆರೆಯಲು ಅನುಮತಿ ನೀಡಿತ್ತು. ಇಂದು ಬೆಳಗ್ಗೆ ವಿವಾದಕ್ಕಿಡಾಗಿದ್ದ ಗೋಪಾನ್‌ಸ್ವಾಮಿಯವರ ಗೋರಿಯನ್ನು ಕೆಡವಿ ಪಾರ್ಥಿವ ಶರೀರವನ್ನು ಹೊರ ತೆಗೆಯಲಾಯಿತು.
ಕುಳಿತ ಸ್ಥಿತಿಯಲ್ಲಿ ಪತ್ತೆಯಾದ ಮೃತದೇಹವನ್ನು ಕುತ್ತಿಗೆಯವರೆಗೂ ಪೂಜಾ ಸಾಮಾಗ್ರಿಗಳಿಂದ ಮುಚ್ಚಲಾಗಿತ್ತು. ಬೆಳಗ್ಗೆ 7 ಗಂಟೆಗೆ ಪೊಲೀಸ್ ಬಂದೋಬಸ್ತ್‌ನಲ್ಲಿ ಸಮಾಧಿ ಕೆಡವಲು ಆರಂಭವಾಯಿತು. ಒಂದೂವರೆ ಗಂಟೆಯಲ್ಲಿ ವಿಚಾರಣೆ ಮುಗಿಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಯಿತು.
ಮೃತದೇಹದ ಪ್ರಾಥಮಿಕ ಪರೀಕ್ಷೆಯಲ್ಲಿ ಗೋಪಾನ್ ಸ್ವಾಮಿಯದು ಸಹಜ ಸಾವು ಎಂದು ವೈದ್ಯರು ಧೃಡಪಡಿಸಿದ್ದಾರೆ. ದೇಹದ ಮೇಲೆ ಯಾವುದೇ ಮಾರಣಾಂತಿಕ ಗಾಯಗಳಿಲ್ಲ ಎಂದು ತಿಳಿಸಿದ್ದಾರೆ.
ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ಸಾವಿನ ನಿಖರ ಕಾರಣ ಗೊತ್ತಾಗಲಿದೆ. ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರ ಮಾಡಲಾಗುತ್ತಿದ್ದು, ವಿಧಿ ವಿಧಾನಗಳ ಪ್ರಕಾರ ಕುಟುಂಬಸ್ಥರು ಅಂತ್ಯ ಸಂಸ್ಕಾರ ನಡೆಸಲಿದ್ದಾರೆ.
ಏನಿದು ಪ್ರಕರಣ ?
ತಿರುವನಂತಪುರ ಜಿಲ್ಲೆಯ ನೆಯ್ಯತ್ತಿಂಕರದಲ್ಲಿನ ಗೋಪನ್ ಕಳೆದ ಶುಕ್ರವಾರ ಕಾಣೆಯಾಗಿದ್ದಾರೆ ಎನ್ನಲಾಗಿತ್ತು. ಗೋಪನ್ ಸ್ವಾಮಿಗಳ ಮಕ್ಕಳಾದ ಸನಂದನ್ ಮತ್ತು ರಾಜಸೇನನ್ ಅವರು ಸ್ಥಳೀಯ ಸಮುದಾಯ ಅಥವಾ ಸಂಬಂಧಿಕರಿಗೆ ತಿಳಿಸದೆ ತಮ್ಮ ತಂದೆಯನ್ನು ನೆಯ್ಯಟಿಂಕರಾದ ದೇವಸ್ಥಾನದ ಬಳಿ ಸಮಾಧಿ ಮಾಡಿದ ನಂತರ ಈ ವಿವಾದ ಭುಗಿಲೆದ್ದಿತ್ತು.
ಈ ಬಗ್ಗೆ ಗೋಪನ್ ಅವರ ಮಕ್ಕಳು, ‘ತಮ್ಮ ತಂದೆ ಕುಳಿತ ಭಂಗಿಯಲ್ಲಿ ಧ್ಯಾನ ಮಾಡುತ್ತಿದ್ದಾಗ ನಿಧನರಾದರು ಮತ್ತು ಅವರ ಸಾವಿಗೆ ಯಾರಿಗೂ ಅವಕಾಶ ನೀಡದಂತೆ ಸೂಚನೆ ನೀಡಿದ್ದರು’ ಎಂದು ಹೇಳಿದ್ದಾರೆ. ನಂತರ ಅವರು ತಮ್ಮ ತಂದೆಯ ಸಮಾಧಿಯ ಕುರಿತ ಪೋಸ್ಟರ್ ಗಳನ್ನು ಕುಟುಂಬದವರು ಹಾಕಿದ್ದರು. ಈ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ನೆರೆಹೊರೆಯವರು ಪೊಲೀಸರಿಗೆ ದೂರು ನೀಡಿದ್ದರಿಂದ ಪೊಲೀಸರು ತನಿಖೆ ಆರಂಭಿಸಿದ್ದರು.
ಹಾಗಾಗಿ ಕಂದಾಯ ಅಧಿಕಾರಿಯ ಆದೇಶ ಪತ್ರದೊಂದಿಗೆ ಪೊಲೀಸರು ತಪಾಸಣೆಗೆ ಮುಂದದಾಗ ಕುಟುಂಬವು ಆಕ್ಷೇಪ ವ್ಯಕ್ತಪಡಿಸಿತ್ತು. ಜತೆಗೆ ಕೆಲವು ಹಿಂದೂ ಸಂಘಟನೆಗೆಳೂ ಕುಟುಂಬದ ಪರ ನಿಂತಿದ್ದವು.
ಜತೆಗೆ ಪೊಲೀಸರು ತಪಾಸಣೆಗೆ ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ ಸಮಾಧಿ ತೆರೆಯಲು ಪೊಲೀಸರಿಗೆ ಅನುಮತಿ ನೀಡಿತ್ತು.
ಮಂಗಳೂರು/ಪ್ರಯಾಗ್‌ರಾಜ್ : ಮಕರ ಸಂಕ್ರಾಂತಿ ಹಬ್ಬದ ದಿನದಂದು ಮಹಾಕುಂಭ ಮೇಳದಲ್ಲಿ ಕೋಟಿಗಟ್ಟಲೆ ಭಾರತೀಯರು ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಸಂಸ್ಕಾರದಲ್ಲಿ ಭಾಗಿಯಾಗಿದ್ದಾರೆ.
ಈಗಗಾಲೇ ಆರಂಭವಾಗಿರುವ ಮಹಾ ಕುಂಭಮೇಳದಲ್ಲಿ 40 ಕೋಟಿ ಜನರು ಭಾಗವಹಿಸಿದರೂ ಪ್ರಮುಖ ಆಕರ್ಷಣೆ ಮಾತ್ರ ನಾಗಸಾಧುಗಳು. ಆಧ್ಯತ್ಮಿಕತೆಯ ಒಲವನ್ನು ಹೊಂದಿರುವ ಹಲವಾರು ನಾಗಸಾಧುಗಳು ಈ ಕುಂಭಮೇಳದಲ್ಲಿ ಪಾಲ್ಗೊಂಡಿದ್ದಾರೆ. ಇವರಲ್ಲಿ ಇಂಜಿನಿಯರ್ ಕೆಲಸಕ್ಕೆ ಗುಡ್‌ಬೈ ಹೇಳಿದ ಬಾಬಾ ಕೂಡ ಒಬ್ಬರಾಗಿದ್ದಾರೆ.
ಐಐಟಿ ಬಾಂಬೆಯಲ್ಲಿ ಕಲಿತ ಬಾಬಾ ಅಭಯ್ ಸಿಂಗ್ ಅವರು ಮೂಲತ: ಹರಿಯಾಣದವರು. ವೈಜ್ಞಾನಿಕ ಅನ್ವೇಷಣೆಗಳನ್ನು ತೊರೆದು ಆಧ್ಯಾತ್ಮಿಕದತ್ತ ವಾಲಿದ್ದಾರೆ. ಅಂದರೆ ವಿಜ್ಞಾನದಿಂದ ಆಧ್ಯಾತ್ಮಿಕತೆಗೆ ವಾಲಿದ್ದಾರೆ. ಇವರು ಏರೋಸ್ಪೇಸ್ ಇಂಜಿನಿಯರ್ ಮುಖ್ಯಸ್ಥರಾಗಿದ್ದರು. ಇವರನ್ನು ಇಂಜಿನಿಯರ್ ಬಾಬಾ ಎಂತಲೂ ಕರೆಯುತ್ತಾರೆ. ಪ್ರತಿಷ್ಠಿತ ಕಂಪನಿಯ ಉದ್ಯೋಗವನ್ನು ತೊರೆದು ಆಧ್ಯಾತ್ಮಿಕತೆ ಕಡೆಗೆ ಒಲವು ಹರಿಸಿ ಈಗ ಬಾಬಾ ಆಗಿದ್ದಾರೆ.
ಅಭಯ್ ಸಿಂಗ್ ಅವರು, ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಬಾಂಬೆ (ಐಐಟಿ ಬಾಂಬೆ) ಯಲ್ಲಿ ಏರೋಸ್ಪೇಸ್ ಇಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿದ್ದಾರೆ. ಅಲ್ಲದೆ ಕಾಲೇಜಿನಲ್ಲಿ ಇರುವಾಗಲೇ ಕ್ಯಾಂಪಸ್‌ನಲ್ಲಿ ಆಯ್ಕೆ ಆಗಿ ಪ್ರತಿಷ್ಠಿತ ಕಂಪನಿಯಲ್ಲಿ ಉದ್ಯೋಗ ಪಡೆದುಕೊಂಡಿದ್ದರು. ಕಾರ್ಪೊರೇಟ್ ಜಗತ್ತಿನಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ್ದರು.
ಮಾಸ್ಟರ್ ಇನ್ ಡಿಸೈನ್ (MDes) ಅಧ್ಯಯನ ಮಾಡಿದರು ಮತ್ತು ಛಾಯಾಗ್ರಾಹಕರಾಗಿ ಕೆಲಸ ಮಾಡಲು ಪ್ರಾರಂಭಿಸಿದರು. ನಂತರ ಅದರಲ್ಲೂ ಯಶಸ್ಸು ಕಾಣದೇ ಕೋಚಿಂಗ್ ಸೆಂಟರ್ ಓಪನ್ ಮಾಡಿ ಭೌತಶಾಸ್ತ್ರದ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದರು. ಕೊನೆಗೆ ಇಂಜಿನಿಯರಿಂಗ್, ಫೋಟೋಗ್ರಾಫಿ, ಕೋಚಿಂಗ್ ಎಲ್ಲವನ್ನು ತ್ಯಜಿಸಿ ಆಧ್ಯಾತ್ಮಿಕತೆಯನ್ನು ಆಯ್ಕೆ ಮಾಡಿಕೊಂಡರು. ಆಧ್ಯಾತ್ಮಿಕತೆ ಸ್ವೀಕರಿಸಿದ ಬಳಿಕ ಅಭಯ್ ಅವರು ಶಿವನ ಪರಮ ಭಕ್ತರಾಗಿದ್ದಾರೆ.
ಅಭಯ್ ಸಿಂಗ್ ಬಾಬಾ ಆಗಿದ್ದು ಹೇಗೆ?
ಜೀವನದ ನಿಜವಾದ ಅರ್ಥವನ್ನು ಕಂಡುಹಿಡಿಯಲು ಅವರು ಸಾಕ್ರೆಟೀಸ್, ಪ್ಲೇಟೋ ಮತ್ತು ಆಧುನಿಕ ಪರಿಕಲ್ಪನೆಗಳ ಪುಸ್ತಕಗಳನ್ನು ಓದಲು ಶುರು ಮಾಡಿದರು. ಈ ಬಗ್ಗೆ ಅಭಯ್ ಸಿಂಗ್, ‘ಇದು ನಿಜವಾದ ಜ್ಙಾನ ಎಂದು ನಾನು ಈಗ ಅರ್ಥಮಾಡಿಕೊಂಡಿದ್ದೇನೆ. ನೀವು ಮನಸ್ಸು ಅಥವಾ ಮಾನಸಿಕ ಆರೋಗ್ಯವನ್ನು ಅರ್ಥಮಾಡಿಕೊಳ್ಳಬೇಕಾದರೆ, ನೀವು ಆಧ್ಯಾತ್ಮಿಕತೆಯ ಮೂಲಕ ಮಾಡಬಹುದು. ಯಾಕೆಂದರೆ ಈ ಹಂತವು ಅತ್ಯುತ್ತಮ ಹಂತವಾಗಿದೆ’ ಎಂದು ಹೇಳಿದ್ದಾರೆ.
ಮಂಗಳೂರು/ಪ್ರಯಾಗ್‌ರಾಜ್ : ಈಗಾಗಲೇ ಮಹಾ ಕುಂಭಮೇಳ 2025 ಪ್ರಾರಂಭವಾಗಿದೆ. ಮಹಾ ಕುಂಭಮೇಳದ ಮೊದಲ ದಿನ, ಪುಷ್ಯ ಪೂರ್ಣಿಮೆಯಂದು ಸಾಧ್ವಿಯೊಬ್ಬರ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ಸಂಚಲನ ಸೃಷ್ಟಿಸಿವೆ. ವೈರಲ್ ಆಗಿರುವ ಈ ಫೋಟೋಗಳನ್ನು ಮಹಾ ಕುಂಭಮೇಳದ ‘ಅತ್ಯಂತ ಸುಂದರ ಸಾಧ್ವಿ’ ಎಂಬುವುದಾಗಿ ವರ್ಣಿಸಲಾಗುತ್ತಿದೆ. ಹಾಗಾದರೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ಸುಂದರಿ ‘ಸಾಧ್ವಿ’ ಯಾರು ? ಅವಳ ಹಿನ್ನಲೆ ಏನು ? ಎಂದು ತಿಳಿಯೋಣ.
ಹರ್ಷ ರಿಚಾರಿಯಾ ಎಂಬ ಅತ್ಯಂತ ಸುಂದರ ಸಾಧ್ವಿಯಾಗಿ 2025 ರ ಮಹಾ ಕುಂಭಮೇಳದ ಸಂದರ್ಭ ಪ್ರಯಾಗರಾಜ್ ತಲುಪಿದ್ದಾರೆ. ಇವರು ಮೂಲತಃ ಭೋಪಾಲ್ ನಿವಾಸಿಯಾಗಿದ್ದು, ಪ್ರಸ್ತುತ ಉತ್ತರಾಖಂಡದಲ್ಲಿ ವಾಸಿಸುತ್ತಿದ್ದಾರೆ. ಹರ್ಷ ರಿಚಾರಿಯಾ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಲಕ್ಷಾಂತರ ಫಾಲೋವರ್ಸ್ ಹೊಂದಿದ್ದಾರೆ. ಇವರು 21 ಜನವರಿ 2019 ರಂದು ಟ್ರಾವೆಲರ್ ಹರ್ಷ ಎಂಬ ಹೆಸರಿನಲ್ಲಿ ಯೂಟ್ಯೂಬ್ ಚಾನೆಲ್ ಆರಂಭಿಸಿದ್ದರು.
ಆಚಾರ್ಯ ಮಹಾಮಂಡಲೇಶ್ವರ ಸ್ವಾಮಿ ಕೈಲಾಶಾನಂದಗಿರಿ ಜಿ ಮಹಾರಾಜ್ ಅವರ ಶಿಷ್ಯೆ ಹರ್ಷ ರಿಚಾರಿಯಾ ಎಂದು ಹೇಳಲಾಗುತ್ತಿದೆ. ಹರ್ಷ ಕೇವಲ 2 ವರ್ಷಗಳ ಹಿಂದೆ ಸಾಧ್ವಿಯಾಗಿದ್ದಾರೆ. ಹರ್ಷ ರಿಚಾರಿಯಾ ಕೂಡ ಸಾಮಾಜಿಕ ಮಾಧ್ಯಮ ಪ್ರಭಾವಿಯಾಗಿದ್ದಾರೆ. ಇನ್‌ಸ್ಟಾಗ್ರಾಮ್ ಖಾತೆ ಆಂಕರ್ ಹರ್ಷ ರಿಚಾರಿಯಾ ಎಂಬ ಹೆಸರಿನಲ್ಲಿದೆ. ಸಾಧ್ವಿ ಆಗುವ ಮೊದಲು, ಹರ್ಷ ಮಾಡೆಲ್ ಮತ್ತು ಸೆಲೆಬ್ರಿಟಿ ಆಂಕರ್ ಆಗಿದ್ದರು. ಹರ್ಷ ಆಂಕರ್-ಮಾಡೆಲ್ ಆಗಿರುವುದರ ಜೊತೆಗೆ, ಮೇಕಪ್ ಕಲಾವಿದೆ ಮತ್ತು ಯೋಗ ಬೋಧಕಿಯೂ ಆಗಿದ್ದರು. ಹರ್ಷ ರಿಚಾರಿಯಾ ಸಾಧ್ವಿಯಾಗಲು ಕಾರಣವೇನು ಎಂದು ಕೇಳಿದಾಗ ” ಮನಸ್ಸಿಗೆ ಶಾಂತಿ ಬೇಕು ಹಾಗಾಗಿ ಈ ನಿರ್ಧಾರ ಕೈಗೊಂಡಿರುವೆ” ಎಂದು ಹೇಳಿದ್ದಾರೆ. ಸನ್ಯಾಸತ್ವ ಸ್ವೀಕರಿಸುವ ವೇಳೆ ಅವರಿಗೆ 30 ವರ್ಷ ವಯಸ್ಸು. “ತಾನು ಉತ್ತರಾಖಂಡದಿಂದ ಬಂದಿದ್ದೇನೆ. ಆಚಾರ್ಯ ಮಹಾಮಂಡಲೇಶ್ವರ ಜಿ ಅವರ ಶಿಷ್ಯೆ” ಎಂದು ಮಹಾಕುಂಭ ಮೇಳದಲ್ಲಿ ಹೇಳಿಕೊಂಡಿದ್ದಾರೆ.