ಮಸಾಜ್ ಕೇಂದ್ರಗಳು ಸಾಮಾಜಿಕ ಮಾಧ್ಯಮದ ನಕಲಿ ಖಾತೆಗಳ ಮೂಲಕ ಗ್ರಾಹಕರನ್ನು ಸೆಳೆಯುತ್ತವೆ.ಬಲಿಪಶುಗಳು ಈ ಕೇಂದ್ರಕ್ಕೆ ಕಾಲಿರಿಸಿದೊಡನೆ ಅವರನ್ನು ಮುತ್ತಿಕೊಳ್ಳುವ ತಂಡವೊಂದು ಅಪಾರ್ಟ್‌ಮೆಂಟ್‌ಗೆ ಎಳೆದೊಯ್ಯುತ್ತದೆ.ಬಳಿಕ ಅವರ ಅಸಭ್ಯ ಫೋಟೋ, ವೀಡಿಯೊ ದಾಖಲಿಸಿಕೊಂಡು ಅವರನ್ನು ಮುಂದಿನ ದಿನಗಳಲ್ಲಿ ಬ್ಲ್ಯಾಕ್‌ಮೇಲ್ ಮಾಡಲಾಗುತ್ತದೆ.
ದುಬೈ : ದುಬೈಯಲ್ಲಿ ಆಳವಾಗಿ ಬೇರೂರುತ್ತಿರುವ ಅಕ್ರಮ ಮಸಾಜ್ ಪಾರ್ಲರ್ ಗಳ ಮೇಲೆ ಸರ್ಕಾರದ ನಿರ್ದೇಶನ ಅನ್ವಯ ಪೊಲೀಸರು ದಾಳಿ ಆರಂಭಿಸಿದ್ದಾರೆ. ಈ ಸಂಬಂಧ 870 ಮಂದಿಯನ್ನು ಬಂಧಿಸಲಾಗಿದೆ.
2021ರ ವರ್ಷ ಮತ್ತು 2022ರ ಆರಂಭದ 3 ತಿಂಗಳಲ್ಲಿ ಒಟ್ಟು 870 ಮಂದಿಯನ್ನು ಬಂಧಿಸಲಾಗಿದ್ದು ಇವರಲ್ಲಿ 588 ಆರೋಪಿಗಳ ವಿರುದ್ಧ ಸಾರ್ವಜನಿಕ ನೈತಿಕತೆಯ ಉಲ್ಲಂಘನೆ ಮತ್ತು 309 ಆರೋಪಿಗಳ ವಿರುದ್ಧ ಕಾರ್ಡ್ ಮುದ್ರಿಸಿ ಹಂಚಿರುವ ಆರೋಪ ದಾಖಲಿಸಲಾಗಿದೆ ಮತ್ತು ಈ ಕಾರ್ಡ್‌ಗಳಲ್ಲಿ ನಮೂದಿಸಿದ್ದ 919 ಫೋನ್ ನಂಬರ್ಗಳ ಸಂಪರ್ಕ ಕಡಿತಗೊಳಿಸಲಾಗಿದೆ.
ಈ ಕೇಂದ್ರಗಳಿಂದ ಸೇವೆ ಬಯಸುವುದರ ವಿರುದ್ಧ ನಿವಾಸಿಗಳಿಗೆ ಎಚ್ಚರಿಕೆ ನೀಡಲಾಗಿದ್ದು, ಈ ಅಕ್ರಮ ಮಸಾಜ್ ಕೇಂದ್ರಗಳಿಗೆ ಭೇಟಿ ನೀಡಿದರೆ ಸುಲಿಗೆ ಕೃತ್ಯದಂತಹ ಗಂಭೀರ ಪರಿಣಾಮಕ್ಕೆ ಒಳಗಾಗುವ ಸಾಧ್ಯತೆಯಿದೆ ಎಂದು ಎಚ್ಚರಿಸಿದ್ದಾರೆ.
5.9 ಮಿಲಿಯನ್ ಬಿಸಿನೆಸ್ ಕಾರ್ಡ್ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಕಾರ್ಡ್‌ಗಳು ಅಕ್ರಮ ವ್ಯವಹಾರಕ್ಕೆ ಉತ್ತೇಜನ ನೀಡುವುದಷ್ಟೇ ಅಲ್ಲ, ಆ ಕಾರ್ಡ್‌ಗಳಲ್ಲಿ ಮುದ್ರಿಸಿರುವ ಚಿತ್ರಗಳು ಸಾರ್ವಜನಿಕ ನೈತಿಕತೆಯನ್ನು ಉಲ್ಲಂಘಿಸಿದೆ
ಕಳೆದ 3 ವರ್ಷದಲ್ಲಿ ಇಂತಹ ಕೃತ್ಯಗಳಿಗೆ ಬಳಕೆಯಾಗುತ್ತಿದ್ದ 218 ಫ್ಲ್ಯಾಟ್‌ಗಳ ಮೇಲೆ ದಾಳಿ ನಡೆಸಿದ್ದು 2,025 ಆರೋಪಿಗಳನ್ನು ಬಂಧಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.
ಈ ಅಕ್ರಮ ದಂಧೆಯ ವಿರುದ್ಧ ಜಾಗೃತಿ ಮೂಡಿಸುವ ಅಭಿಯಾನ ಆರಂಭಿಸಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
ಇಂತಹ ಅಕ್ರಮ, ಲೈಸೆನ್ಸ್ ಪಡೆಯದ ಮಸಾಜ್ ಕೇಂದ್ರಗಳು ಸಾಮಾಜಿಕ ಮಾಧ್ಯಮದ ನಕಲಿ ಖಾತೆಗಳ ಮೂಲಕ ಗ್ರಾಹಕರನ್ನು ಸೆಳೆಯುತ್ತವೆ.
ಬಲಿಪಶುಗಳು ಈ ಕೇಂದ್ರಕ್ಕೆ ಕಾಲಿರಿಸಿದೊಡನೆ ಅವರನ್ನು ಮುತ್ತಿಕೊಳ್ಳುವ ತಂಡವೊಂದು ಅಪಾರ್ಟ್‌ಮೆಂಟ್‌ಗೆ ಎಳೆದೊಯ್ಯುತ್ತದೆ.
ಬಳಿಕ ಅವರ ಅಸಭ್ಯ ಫೋಟೋ, ವೀಡಿಯೊ ದಾಖಲಿಸಿಕೊಂಡು ಅವರನ್ನು ಮುಂದಿನ ದಿನಗಳಲ್ಲಿ ಬ್ಲ್ಯಾಕ್‌ಮೇಲ್ ಮಾಡಲಾಗುತ್ತದೆ ಎಂದು ಪೊಲೀಸರು ಎಚ್ಚರಿಸಿದ್ದಾರೆ.
ಈ ವರ್ಷದ ಆರಂಭದಿಂದ ಅಕ್ರಮ ಮಸಾಜ್ ಕೇಂದ್ರಗಳ ಜಾಹೀರಾತು ಕಾರ್ಡ್‌ಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಕಾರ್ಯಾಚರಣೆಯನ್ನು ಪೊಲೀಸರು ತೀವ್ರಗೊಳಿಸಿದ್ದಾರೆ
ನಿಂಬೆಯ ಪರಿಮಳ ಸಾಮಾನ್ಯವಾಗಿ ಎಲ್ಲರಿಗೂ ಇಷ್ಟವಾಗುತ್ತದೆ. ಸೌಂದರ್ಯದಿಂದ ಹಿಡಿದು ಆರೋಗ್ಯದವರೆಗೆ ನಿಂಬೆ ಎಲ್ಲಾ ಕ್ಷೇತ್ರಗಳಲ್ಲಿಯೂ ಬಹಳ ಉಪಯುಕ್ತ ಎಂದು ತಜ್ಞರು ಹೇಳುತ್ತಾರೆ. ಇದರಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳಿವೆ. ನಿಂಬೆಹಣ್ಣನ್ನು ಕತ್ತರಿಸಿ ಫ್ರಿಡ್ಜ್ ನಲ್ಲಿಟ್ಟರೆ ಇದರಿಂದ ಯಾವ ರೀತಿಯ ಪ್ರಯೋಜನಗಳಿವೆ? ಇದರಿಂದ ಆರೋಗ್ಯಕ್ಕೆ ಯಾವ ರೀತಿಯ ಲಾಭಗಳಿವೆ? ಇಲ್ಲಿದೆ ಮಾಹಿತಿ.
ಫ್ರಿಡ್ಜ್ ನಲ್ಲಿ ಯಾವುದೇ ರೀತಿಯ ದುರ್ವಾಸನೆ ಇರುವುದಿಲ್ಲ:
ಸಾಮಾನ್ಯವಾಗಿ ಫ್ರಿಡ್ಜ್ ಶುಚಿತ್ವದ ವಿಷಯದಲ್ಲಿ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡರೂ, ಕೆಲವೊಮ್ಮೆ ದುರ್ವಾಸನೆಯ ಸಮಸ್ಯೆ ಕಾಡುತ್ತದೆ. ಹೆಚ್ಚಿನ ಸಮಯದಲ್ಲಿ ಈ ವಾಸನೆ ರೆಫ್ರಿಜರೇಟರ್ ನಲ್ಲಿ ಇರಿಸಲಾದ ಆಹಾರ ಪದಾರ್ಥಗಳಲ್ಲಿಯೂ ಕಂಡುಬರುತ್ತದೆ. ಇಂತಹ ಸಂದರ್ಭಗಳಲ್ಲಿ ಈ ವಾಸನೆಯ ಸಮಸ್ಯೆಯನ್ನು ನಿವಾರಿಸಲು ಸುಲಭವಾದ ಮಾರ್ಗವೆಂದರೆ ನಿಂಬೆಯನ್ನು ಎರಡು ತುಂಡುಗಳಾಗಿ ಕತ್ತರಿಸಿ ರೆಫ್ರಿಜರೇಟರ್ ನಲ್ಲಿ ಇಡುವುದು. ಈ ರೀತಿ ಮಾಡುವುದರಿಂದ ನಿಂಬೆಯಲ್ಲಿರುವ ಸಿಟ್ರಿಕ್ ಆಮ್ಲವು ಫ್ರಿಡ್ಜ್ ನಲ್ಲಿರುವ ಕೆಟ್ಟ ವಾಸನೆಯನ್ನು ತೆಗೆದುಹಾಕುತ್ತದೆ. ಇದು ಗಾಳಿಯನ್ನು ನೈಸರ್ಗಿಕವಾಗಿ ತಾಜಾ ಮತ್ತು ಪರಿಮಳಯುಕ್ತವಾಗಿರಿಸುತ್ತದೆ.
ಆಹಾರವನ್ನು ದೀರ್ಘಕಾಲದ ವರೆಗೆ ತಾಜಾವಾಗಿರಿಸುತ್ತದೆ:
ಹೆಚ್ಚಿನ ಆಹಾರ ಪದಾರ್ಥಗಳನ್ನು ಫ್ರಿಡ್ಜ್ ನಲ್ಲಿ ಇಡಲಾಗುತ್ತದೆ. ಆದರೆ ರೆಫ್ರಿಜರೇಟರ್ ನಲ್ಲಿ ಇರಿಸಿದ ನಂತರವೂ ಕೆಲವು ಪದಾರ್ಥಗಳು ಬೇಗನೆ ಹಾಳಾಗುತ್ತವೆ. ಅಂತಹ ಸಮಯದಲ್ಲಿ ನಿಂಬೆಯನ್ನು ದೀರ್ಘಕಾಲದ ವರೆಗೆ ತಾಜಾವಾಗಿಡಲು ಬಳಸಬಹುದು. ನಿಂಬೆಯಲ್ಲಿ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ. ಅವು ಆಹಾರ ಪದಾರ್ಥಗಳನ್ನು ದೀರ್ಘಕಾಲದ ವರೆಗೆ ಕೊಳೆಯದಂತೆ ರಕ್ಷಿಸುತ್ತವೆ ಮತ್ತು ಅವುಗಳನ್ನು ತಾಜಾವಾಗಿರಿಸುತ್ತವೆ. ಆದರೆ ರೆಫ್ರಿಜರೇಟರ್ ನಲ್ಲಿ ಇಡಲು ಯಾವಾಗಲೂ ತಾಜಾ, ಸ್ವಚ್ಛವಾದ ನಿಂಬೆಯನ್ನು ಮಾತ್ರ ಬಳಸಿ.
ಫ್ರಿಡ್ಜ್ ಗಾಳಿಯನ್ನು ನೈಸರ್ಗಿಕವಾಗಿ ಸ್ವಚ್ಛಮಾಡುತ್ತದೆ:
ನಿಂಬೆ ತುಂಡುಗಳನ್ನು ಫ್ರಿಡ್ಜ್ ನಲ್ಲಿ ಇಡುವ ಒಂದು ಪ್ರಯೋಜನವೆಂದರೆ ಅದು ನೈಸರ್ಗಿಕವಾಗಿ ಫ್ರಿಡ್ಜ್ ನಲ್ಲಿರುವ ಗಾಳಿಯನ್ನು ಶುದ್ಧೀಕರಿಸುತ್ತದೆ. ಏಕೆಂದರೆ ಇದು ಆಂಟಿ- ಆಕ್ಸಿಡೆಂಟ್ಗಳು ಮತ್ತು ಸಿಟ್ರಿಕ್ ಆಮ್ಲವನ್ನು ಹೊಂದಿರುತ್ತದೆ. ಈ ಅಂಶಗಳು ಫ್ರಿಡ್ಜ್ ನಲ್ಲಿರುವ ಗಾಳಿಯನ್ನು ತಾಜಾವಾಗಿರಿಸುತ್ತದೆ. ಇದಲ್ಲದೆ, ಇದು ಆಹಾರವನ್ನು ಸೋಂಕಿನಿಂದ ರಕ್ಷಿಸುತ್ತದೆ. ಇದಲ್ಲದೆ, ನಿಂಬೆಯ ತುಂಡನ್ನು ಇಡುವುದು ಸೋಂಕು ಹರಡುವ ಅಪಾಯವನ್ನು ಕೂಡ ಕಡಿಮೆ ಮಾಡುತ್ತದೆ.
ಮಂಗಳೂರು/ಮುಂಬೈ : ಟೀಮ್ ಇಂಡಿಯಾ ಸ್ಪೀನ್ನರ್ ಯಜುವೇಂದ್ರ ಚಾಹಲ್ ಮತ್ತು ಅವರ ಪತ್ನಿ ಧನಶ್ರೀ ವರ್ಮಾ ಕಳೆದ ಕೆಲವು ದಿನಗಳಿಂದ ಭಾರಿ ಸುದ್ದಿಯಲ್ಲಿದ್ದಾರೆ. ಸೆಲೆಬ್ರಿಟಿ ದಂಪತಿಗಳು ಬೇರೆಯಾಗುತ್ತಿದ್ದಾರೆ ಎಂಬ ಸುದ್ದಿ ಹುಟ್ಟಿಕೊಂಡಿದೆ.
ಚಾಹಲ್ ಮತ್ತು ಧನಶ್ರೀ ಇನ್ ಸ್ಟಾ ಗ್ರಾಮ್ ನಲ್ಲಿ ಒಬ್ಬರನ್ನೊಬ್ಬರು ಅನ್ ಫಾಲೋ ಮಾಡಿದ್ದರು. ಚಾಹಲ್ ಅವರು ತಮ್ಮ ಪತ್ನಿಯೊಂದಿಗಿನ ಎಲ್ಲ ಫೋಟೋಗಳನ್ನು ಡಿಲೀಟ್ ಮಾಡಿದ್ದರು. ಅಲ್ಲದೇ, ಚಹಾಲ್ ಅವರು ಇನ್ ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದ ಮಾರ್ಮಿಕ ಪೋಸ್ಟ್ ಕೂಡ ವಿಚ್ಛೇದನದ ಸುದ್ದಿಗೆ ಇನ್ನಷ್ಟು ಪುಷ್ಠಿ ನೀಡಿದೆ.
ಕಠಿಣ ಪರಿಶ್ರಮವು ವ್ಯಕ್ತಿಯ ವ್ಯಕ್ತಿತ್ವವನ್ನು ಬಹಿರಂಗಪಡಿಸುತ್ತದೆ. ನಿಮ್ಮ ಜೀವನದ ಪ್ರಯಾಣ ನಿಮಗೆ ಮಾತ್ರ ಗೊತ್ತಿರುತ್ತದೆ. ನೀವೀಗ ಎತ್ತರದಲ್ಲಿದ್ದೀರಿ. ನಿಮ್ಮ ತಂದೆ-ತಾಯಿ ಹೆಮ್ಮೆ ಪಡುವಂತೆ ಶ್ರಮಿಸಿದ್ದೀರಿ. ಹೆಮ್ಮೆಯ ಮಗನಂತೆ ಯಾವಾಗಲೂ ಉಳಿಯಿರಿ ಎಂದು ಯಜುವೇಂದ್ರ ಚಾಹಲ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಇದನ್ನು ನೋಡಿದರೆ, ವೈವಾಹಿಕ ಜೀವನದಲ್ಲಿ ಬಿರುಕು ಮೂಡಿರುವುದು ಸ್ಪಷ್ಟವಾಗುತ್ತದೆ.
ಇದುವರೆಗೂ ಧನಶ್ರೀ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಇದೀಗ ಕೊನೆಗೂ ಮೌನ ಮುರಿದಿರುವ ಧನಶ್ರೀ, ಇನ್ ಸ್ಟಾಗ್ರಾಂ ಸ್ಟೋರಿ ಶೇರ್ ಮಾಡಿಕೊಂಡಿದ್ದಾರೆ. ಕಳೆದ ಕೆಲವು ದಿನಗಳಿಂದ ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿಗಳಿಂದ ತಾವು ಮಾನಸಿಕ ಯಾತನೆಯನ್ನು ಅನುಭವಿಸುತ್ತಿರುವುದಾಗಿ ಹೇಳಿದ್ದಾರೆ.
ನನಗೆ ಮತ್ತು ನನ್ನ ಕುಟುಂಬಕ್ಕೆ ಕಳೆದ ಕೆಲ ದಿನಗಳು ತುಂಬಾ ಕಠಿಣ ದಿನಗಳಾಗಿವೆ. ಆಧಾರರಹಿತ ಬರವಣಿಗೆ, ಸತ್ಯ-ಪರಿಶೋಧವಿಲ್ಲದ ಬರಹಗಳು ಮತ್ತು ದ್ವೇಷವನ್ನು ಹರಡುವ ಟ್ರೋಲ್ ಗಳಿಂದ ನನ್ನ ಗೌರವವನ್ನು ಕೊಲ್ಲುವ ಪ್ರಯತ್ನ ಮಾಡುತ್ತಿದ್ದಾರೆ.
ಈ ಹೆಸರುಗಳಿಸಲು ಮತ್ತು ಖ್ಯಾತಿಯನ್ನು ಪಡೆಯಲು ನಾನು ಹಲವು ವರ್ಷಗಳಿಂದ ಶ್ರಮಿಸಿದ್ದೇನೆ. ನನ್ನ ಮೌನ ನನ್ನ ದೌರ್ಬಲ್ಯವಲ್ಲ. ಅದು ನನ್ನ ಶಕ್ತಿ. ನಕಾರಾತ್ಮಕತೆಯು ಆನ್ ಲೈನ್ ನಲ್ಲಿ ಸುಲಭವಾಗಿ ಹರಡುತ್ತದೆ. ಇದು ಇತರರನ್ನು ಮೇಲಕ್ಕೆತ್ತಲು ಧೈರ್ಯ ನೀಡುತ್ತದೆ.
ನಾನು ನನ್ನ ಸತ್ಯದ ಮೇಲೆ ಕೇಂದ್ರೀಕರಿಸಲು ಮತ್ತು ನನ್ನ ಮೌಲ್ಯಗಳನ್ನು ಹಿಡಿದಿಟ್ಟುಕೊಂಡು ಮುಂದುವರಿಯುವುದನ್ನು ಆಯ್ಕೆ ಮಾಡುತ್ತೇನೆ. ಯಾವುದೇ ಪುರಾವೆಗಳಿಲ್ಲದಿದ್ದರೂ ಸತ್ಯವು ಅದರ ಸ್ಥಾನದಲ್ಲಿ ದೃಢವಾಗಿ ನಿಂತಿದೆ. ಓಂ ನಮಃ ಶಿವಾಯ… ಎಂದು ಧನಶ್ರೀ ವರ್ಮಾ ಬರೆದುಕೊಂಡಿದ್ದಾರೆ.
ಈ ಪೋಸ್ಟ್ ವೈರಲ್ ಬೆನ್ನಲ್ಲೇ ಮತ್ತೆ ಧನಶ್ರೀ ವರ್ಮಾ ಹಾಗೂ ಯುಜ್ವೇಂದ್ರ ಚಹಲ್ ನಡುವಣ ಸಂಬಂಧದ ಬಗ್ಗೆ ಮತ್ತೆ ಪ್ರಶ್ನೆಗಳು ಎದ್ದಿವೆ.
ಅಂದಹಾಗೆ ಯುಜ್ವೇಂದ್ರ ಚಹಲ್ ಹಾಗೂ ಧನಶ್ರೀ ವರ್ಮಾ 2020ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ನಾಲ್ಕು ವರ್ಷಗಳ ವೈಯಕ್ತಿಕ ಜೀವನದ ಬಳಿಕ ಇಬ್ಬರು ಬೇರ್ಪಡುತ್ತಿದ್ದಾರೆ ಎಂಬ ಊಹಾಪೋಹಗಳು ಕೂಡ ಹರಡಿವೆ.
ಮಂಗಳೂರು/ ನವದೆಹಲಿ : ಮಹಾರಾಷ್ಟ್ರದ ನಾಗ್ಪುರ ಜಿಲ್ಲೆಯ ರಕ್ಷಣಾ ಕೇಂದ್ರದಲ್ಲಿ ಸಾ*ವನ್ನಪ್ಪಿದ ಮೂರು ಹುಲಿಗಳು ಮತ್ತು ಚಿರತೆ ಹಕ್ಕಿ ಜ್ವರದ ಸೋಂಕಿಗೊಳಗಾಗಿದ್ದ ಕೋಳಿ ತಿಂದ ಬಳಿಕ ಸಾ*ವನ್ನಪ್ಪಿರಬಹುದು ಎಂದು ರಾಜ್ಯ ಅರಣ್ಯ ಸಚಿವ ಗಣೇಶ್ ನಾಯಕ್ ಗುರುವಾರ (ಜನವರಿ 9) ತಿಳಿಸಿದ್ದಾರೆ.
ಚಂದ್ರಾಪುರಕ್ಕೆ ಭೇಟಿ ನೀಡುವ ಮೊದಲು ನಾಗ್ಪುರದಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಿದ ಸಚಿವರು, ಲ್ಯಾಬ್ ಪರೀಕ್ಷಾ ವರದಿ ಇನ್ನೂ ಕೈಸೇರದ ಕಾರಣ ಇದನ್ನು ಇನ್ನೂ ದೃಢಪಡಿಸಲಾಗಿಲ್ಲ ಎಂದರು.
ಪ್ರಾಣಿಗಳಿಗೆ ಆಹಾರ ನೀಡುವ ಮೊದಲು ಆಹಾರವನ್ನು ಪರಿಶೀಲಿಸಲು ಸಂಬಂಧಪಟ್ಟ ಮೃಗಾಲಯಗಳ ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ. ಪ್ರಯೋಗಾಲಯದ ವರದಿ ಬಂದ ಬಳಿಕ ಸಾ*ವಿಗೆ ಸ್ಪಷ್ಟ ಕಾರಣ ತಿಳಿದು ಬರಲಿದೆ. ಘಟನೆ ಬಗ್ಗೆ ತನಿಖೆಗೆ ಆದೇಶಿಸಿದ್ದು, ಬಳಿಕ ಮಾಹಿತಿ ಲಭ್ಯವಾಗಲಿದೆ ಎಂದು ಹೇಳಿದ್ದಾರೆ. ಸಾ*ವನ್ನಪ್ಪಿದ್ದ ಹುಲಿಗಳು ಮತ್ತು ಚಿರತೆಯನ್ನು ಪ್ರಾಣಿ – ಮಾನವ ಸಂಘ*ರ್ಷದಿಂದ ರಕ್ಷಿಸಿ ಇಲ್ಲಿನ ಗೊರೆವಡಾ ರಕ್ಷಣಾ ಕೇಂದ್ರಕ್ಕೆ ತಂದು ಬಿಡಲಾಗಿತ್ತು ಎಂದು ಮಾಹಿತಿ ನೀಡಿದ್ದಾರೆ.