Connect with us

ಕಾರುಗಳಿಗೂ ಪೊಲೀಸ್ ಎಸ್ಕಾರ್ಟ್…!? 

Published

on

ಕಾರುಗಳಿಗೂ ಪೊಲೀಸ್ ಎಸ್ಕಾರ್ಟ್…!? 

ಚಿಕ್ಕಮಗಳೂರು: ವಿಐಪಿ, ವಿವಿಐಪಿ, ರಾಜಕಾರಣಿಗಳಿಗೆ ಪೊಲೀಸ್ ಎಸ್ಕಾರ್ಟ್ ಕೊಡುವುದನ್ನು ನೋಡಿದ್ದೇವೆ. ಆದರೆ ಕಾರುಗಳಿಗೆ ಪೊಲೀಸರು ಭದ್ರತೆ ಕೊಡುವುದನ್ನು ಎಂದಾದರೂ ಕೇಳಿದ್ದೀರಾ?? ಆಶ್ಚರ್ಯವಾದರೂ ಇದು ನಿಜವಾದ ಘಟನೆ.

ಚಿಕ್ಕಮಗಳೂರಿನಲ್ಲಿ ಐಷಾರಾಮಿ ಕಾರುಗಳಿಗೆ ಪೊಲೀಸರು ಎಸ್ಕಾರ್ಟ್ ನೀಡಿದ್ದಾರೆ. ಪ್ರವಾಸಿ ತಾಣವಾಗಿರೋ ಚಿಕ್ಕಮಗಳೂರಿನ ಮುಳ್ಳಯ್ಯನಗಿರಿ, ದತ್ತಪೀಠ ನೋಡಲು ಸುಮಾರು 20 ಕ್ಕೂ ಹೆಚ್ಚು ಕಾರುಗಳಲ್ಲಿ ಶ್ರೀಮಂತ ಪ್ರವಾಸಿಗರು ಬಂದಿದ್ದರು. ಕೋಟಿ-ಕೋಟಿ ಬೆಲೆಯ ಯುವಕರ ಐಷಾರಾಮಿ ಕಾರುಗಳಿಗೆ ರಸ್ತೆಯುದ್ದಕ್ಕೂ ಚಿಕ್ಕಮಗಳೂರು ಪೊಲೀಸರು ರಕ್ಷಣೆ ನೀಡಿದ್ದಾರೆ. ಇನ್ನು ಚಿಕ್ಕಮಗಳೂರಿನ ರೋಡಿಗಿಳಿದ ಕಲರ್ ಕಲರ್ ದುಬಾರಿ ಕಾರುಗಳನ್ನು ಕಂಡು ಸ್ಥಳೀಯರು ಆಶ್ಚರ್ಯಪಟ್ಟಿದ್ದಾರೆ.

ವಿಡಿಯೊಗಾಗಿ

Click to comment

Leave a Reply

Your email address will not be published. Required fields are marked *

LATEST NEWS

ನ್ಯೂಡಲ್ಸ್ ಪ್ಯಾಕೇಟ್ ನಲ್ಲಿ ಸಿಕ್ಕಿತು 6 ಕೋಟಿ ರೂ. ಮೌಲ್ಯದ ಡೈಮಂಡ್!

Published

on

ಮುಂಬೈ : ಹಣ, ಚಿನ್ನವನ್ನು ಖದೀಮರು ಎಲ್ಲೆಲ್ಲೋ ಅಡಗಿಸಿಟ್ಟುಕೊಂಡು ಸಾಗಿಸುವ ಸುದ್ದಿಗಳನ್ನು ಕೇಳುತ್ತಿರುತ್ತೇವೆ. ಆದರೆ, ಇಲ್ಲೊಬ್ಬ ನೂಡಲ್ಸ್ ಪ್ಯಾಕೇಟ್ ನಲ್ಲಿ ಡೈಮಂಡ್ಸ್ ಸಾಗಿಸಲು ಯತ್ನಿಸಿ ಸಿಕ್ಕಿ ಹಾಕಿಕೊಂಡಿದ್ದಾನೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಇಲಾಖೆ ಅಧಿಕಾರಿಗಳು ತಪಾಸಣೆ ನಡೆಸುವ ವೇಳೆ ನೂಡಲ್ಸ್ ಪ್ಯಾಕೆಟ್​ಗಳಲ್ಲಿ ಹುದುಗಿಸಿಟ್ಟಿದ್ದ ವಜ್ರಗಳ ಹರಳುಗಳು ಪತ್ತೆಯಾಗಿವೆ. 6.48 ಕೋಟಿ ರೂಪಾಯಿ ಎಂದು ಮೌಲ್ಯದ ಹರಳನ್ನು ವಶಕ್ಕೆ ಪಡೆಯಲಾಗಿದೆ.


ಮುಂಬೈನಿಂದ ಬ್ಯಾಂಕಾಕ್​​ ಪ್ರಯಾಣಿಸುತ್ತಿದ್ದ ಭಾರತೀಯ ಪ್ರಜೆಯನ್ನು ವಶಕ್ಕೆ ಪಡೆಯಲಾಯಿತು. ಈ ವೇಳೆ ಆತನ ಟ್ರಾಲಿ ಬ್ಯಾಗ್​ನಲ್ಲಿ ನೂಡಲ್ಸ್ ಪ್ಯಾಕೆಟ್​ಗಳಿದ್ದವು. ಅದರಲ್ಲಿ ಅಡಗಿಸಿಟ್ಟಿದ್ದ ವಜ್ರಗಳಿದ್ದು ಅವುಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ ಎಂದು ತಿಳಿದುಬಂದಿದೆ.

ಹಲವರು ವಶಕ್ಕೆ

ಕೊಲಂಬೋದಿಂದ ಮುಂಬೈಗೆ ಪ್ರಯಾಣಿಸುತ್ತಿದ್ದ ವಿದೇಶಿ ಪ್ರಜೆಯೊಬ್ಬರು ಚಿನ್ನದ ಗಟ್ಟಿಗಳು ಮತ್ತು ಕತ್ತರಿಸಿದ ತುಂಡನ್ನು ಸಾಗಿಸುತ್ತಿರುವುದು ಕಂಡುಬಂದಿದೆ. 321 ಗ್ರಾಂ ತೂಕದ ಚಿನ್ನವನ್ನು ತನ್ನ ಒಳ ಉಡುಪುಗಳಲ್ಲಿ ಅಡಗಿಸಿಟ್ಟಿದ್ದ ಆತನನ್ನು ವಶಕ್ಕೆ ಪಡೆಯಲಾಗಿದೆ.

ದುಬೈ ಮತ್ತು ಅಬುಧಾಬಿಯಿಂದ ತಲಾ ಇಬ್ಬರು, ಬಹ್ರೇನ್, ದೋಹಾ, ರಿಯಾದ್, ಮಸ್ಕತ್, ಬ್ಯಾಂಕಾಕ್ ಮತ್ತು ಸಿಂಗಾಪುರದಿಂದ ತಲಾ ಒಬ್ಬರು ಸೇರಿದಂತೆ ಕನಿಷ್ಠ 10 ಭಾರತೀಯ ಪ್ರಜೆಗಳನ್ನು ತಡೆಹಿಡಿಯಲಾಯಿತು. ಈ ವೇಳೆ 4.04 ಕೋಟಿ ಮೌಲ್ಯದ 6.199 ಕೆ.ಜಿ ಚಿನ್ನ ಸಾಗಿಸುತ್ತಿರುವುದು ಕಂಡುಬಂದಿದೆ. ಅವರಲ್ಲಿ ಮೂವರನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ : ರಜೆಯಿದೆ ಎಂದು ಪ್ರವಾಸಕ್ಕೆ ಹೊರಟಿದ್ದೀರಾ? ಗಮನಿಸಿ, ಈ ಪ್ರವಾಸಿ ತಾಣಗಳಿಗಿದೆ ನಿರ್ಬಂಧ
ಮುಂಬೈ ವಿಮಾನ ನಿಲ್ದಾಣದಿಂದ ಕಳ್ಳಸಾಗಣೆ ಮಾಡಿದ ಚಿನ್ನವನ್ನು ಹೊರತರಲು ಸಹಾಯ ಮಾಡಿದ್ದ ಆರೋಪದ ಮೇಲೆ ಅಲ್ಲಿನ ಫಾಸ್ಟ್ ಫುಡ್ ರೆಸ್ಟೋರೆಂಟ್ 38 ವರ್ಷದ ಉದ್ಯೋಗಿಯನ್ನು ಮುಂಬೈ ಕಸ್ಟಮ್ಸ್​ನ ಏರ್ ಇಂಟೆಲಿಜೆನ್ಸ್ ಯುನಿಟ್ ಬಂಧಿಸಿದೆ. ಸುಮಾರು 1.86 ಕೋಟಿ ಮೌಲ್ಯದ 6 ಅಂಡಾಕಾರದ ಚಿನ್ನದ ಕ್ಯಾಪ್ಸೂಲ್ಸ್​ನಲ್ಲಿ ತನ್ನ ಬೆಲ್ಟ್​​ನಲ್ಲಿ ಅಡಗಿಸಿಟ್ಟಿದ್ದ ಬಗ್ಗೆ ವರದಿಯಾಗಿದೆ.

Continue Reading

BANTWAL

ಬಂಟ್ವಾಳ : ಬಾವಿಯೊಳಗೆ ರಿಂಗ್ ಅಳವಡಿಸಲು ಇಳಿದ ಇಬ್ಬರು ಸಾ*ವು

Published

on

ಬಂಟ್ವಾಳ : 30 ಅಡಿ ಇರುವ ಆಳದ ಬಾವಿಗೆ ರಿಂಗ್‌ ಅಳವಡಿಸಲು ಇಳಿದ ಇಬ್ಬರು ಕೂಲಿ ಕಾರ್ಮಿಕರು ಬಾವಿಯೊಳಗೆ ಆಕ್ಸಿಜನ್ ಸಿಗದೇ ಸಾ*ವನ್ನಪ್ಪಿದ ಘಟನೆ ಬಂಟ್ವಾಳ ತಾಲೂಕಿನ ಕೇಪು ಗ್ರಾಮದ ಪಡಿಬಾಗಿಲಿನಲ್ಲಿ ನಡೆದಿದೆ.


ಮೃ*ತರನ್ನು ಪರ್ತಿಪ್ಪಾಡಿ ನಿವಾಸಿ ಇಬ್ರಾಹಿಂ(40) ಹಾಗೂ ಮಲಾರ್ ನಿವಾಸಿ ಆಲಿ (24) ಎಂದು ಗುರುತಿಸಲಾಗಿದೆ.

ಇದನ್ನೂ ಓದಿ : ಡಿವೈಡರ್ ಗೆ ಡಿ*ಕ್ಕಿ ಹೊಡೆದ ಬೈಕ್; ಸವಾರ ಸ್ಥಳದಲ್ಲೇ ಸಾ*ವು

ಮೃ*ತ ಇಬ್ರಾಹಿಂ ಎಂಬವರು ಸುಮಾರು 20 ವರ್ಷಗಳಿಂದ ಬಾವಿಗೆ ರಿಂಗ್ ಹಾಕುವಲ್ಲಿ ಪರಿಣಿತರಾಗಿದ್ದರು. ಮೃ*ತ ದೇಹವನ್ನು ಬಾವಿಯಿಂದ ಮೇಲಕ್ಕೆತ್ತಲಾಗಿದೆ.

Continue Reading

LATEST NEWS

ಡಿವೈಡರ್ ಗೆ ಡಿ*ಕ್ಕಿ ಹೊಡೆದ ಬೈಕ್; ಸವಾರ ಸ್ಥಳದಲ್ಲೇ ಸಾ*ವು

Published

on

ಕುಂದಾಪುರ : ಬೈಕ್ ಸ್ಕಿಡ್ ಆಗಿ ಡಿವೈಡರ್ ಗೆ ಡಿ*ಕ್ಕಿ ಹೊಡೆದು ಸವಾರ ಸ್ಥಳದಲ್ಲೇ ಸಾ*ವನ್ನಪ್ಪಿದ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಕೋಟ ಮಸೀದಿ ಬಳಿ ನಡೆದಿದೆ. ಕೋಟ ಮಣೂರು ನಿವಾಸಿ ವಿಕಾಸ್ ಆಚಾರ್ಯ(22) ಮೃ*ತಪಟ್ಟ ಯುವಕ.

ಸೋಮವಾರ ರಾತ್ರಿ 1.30ರ ಸುಮಾರಿಗೆ ವಿಕಾಸ್ ಸಾಸ್ತಾನದಿಂದ ಕೋಟ ಮಣೂರು ಕಡೆ ಬರುತ್ತಿದ್ದ

ವೇಳೆ ಈ ದುರಂ*ತ ಸಂಭವಿಸಿದೆ. ಕೋಟ ಗುಜಿರಿ ಅಂಗಡಿ ಸಮೀಪ ಬೈಕ್ ನಿಯಂತ್ರಣ ತಪ್ಪಿದೆ. ಪರಿಣಾಮ ಹೆದ್ದಾರಿಯ ಡಿವೈಡರ್ ಗೆ ಡಿ*ಕ್ಕಿ ಹೊಡೆದು ಪಲ್ಟಿಯಾಗಿದೆ ಎನ್ನಲಾಗಿದೆ. ಗಂಭೀ*ರವಾಗಿ ಗಾಯಗೊಂಡ ವಿಕಾಸ್ ಸ್ಥಳದಲ್ಲೇ ಮೃ*ತಪಟ್ಟಿದ್ದಾರೆ.

ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ULLALA : ಮಲಗಿದ್ದಲ್ಲೇ ಹೃದಯಾಘಾ*ತಕ್ಕೆ ಬ*ಲಿಯಾದ ಯುವಕ

Continue Reading

LATEST NEWS

Trending