Home ಕರ್ನಾಟಕ ವಾರ್ತೆ ತುಳುವರಿಗೆ, ತುಳುವಿನಲ್ಲೇ ಹೃದಯಸ್ಪರ್ಶಿ ‘ಸೊಲ್ಮೆಲು’ ಸಲ್ಲಿಸಿ ವಿದಾಯ ಹೇಳಿದ ಕಮಿಷನರ್ ಹರ್ಷ..!!

ತುಳುವರಿಗೆ, ತುಳುವಿನಲ್ಲೇ ಹೃದಯಸ್ಪರ್ಶಿ ‘ಸೊಲ್ಮೆಲು’ ಸಲ್ಲಿಸಿ ವಿದಾಯ ಹೇಳಿದ ಕಮಿಷನರ್ ಹರ್ಷ..!!

ತುಳುವರಿಗೆ, ತುಳುವಿನಲ್ಲೇ ಹೃದಯಸ್ಪರ್ಶಿ ‘ಸೊಲ್ಮೆಲು’ ಸಲ್ಲಿಸಿ ವಿದಾಯ ಹೇಳಿದ ಕಮಿಷನರ್ ಹರ್ಷ..!!

ಮಂಗಳೂರು: ಕಳೆದ ಹನ್ನೊಂದು ತಿಂಗಳಿಂದ ಮಂಗಳೂರು ನಗರ ಪೋಲಿಸ್‌ ಆಯುಕ್ತರಾಗಿ, ಜನರ ಮೆಚ್ಚಿನ ಕಮಿಷನರ್ ಆಗಿ ಕಾರ್ಯ ನಿರ್ವಹಿಸಿದ್ದ ಡಾ.ಪಿ.ಎಸ್‌ ಹರ್ಷ ಸದ್ಯ ವಾರ್ತಾ ಇಲಾಖೆ ಆಯುಕ್ತರಾಗಿ ಬೆಂಗಳೂರಿಗೆ ವರ್ಗಾವಣೆಯಾಗಿದ್ದಾರೆ.

ಈ ಹಿನ್ನೆಲೆ ತುಳುವಿನಲ್ಲಿ ಟ್ವೀಟ್ ಮಾಡುವ ಮೂಲಕ ಮಂಗಳೂರಿನ ಜನತೆಗೆ ಧನ್ಯವಾದ ತಿಳಿಸಿದ್ದಾರೆ. “ಕುಡ್ಲದ ಮಾತ ಮೋಕೆದ ಬಂಧುಲೇ, 11 ತಿಂಗೊಳುರ್ದ್ ಕುಡ್ಲದ ಪೊಲೀಸ್ ಆಯುಕ್ತೆಯಾದ್ ಸೇವೆ ಮಂದಿನ ಎಂಕ್ ಇತ್ತೆ ವರ್ಗಾವಣೆ ಅವೋಂದುಂಡು.

ಇಲಾಖೆದ ಸಂಪೂರ್ಣ ಸಹಕಾರದೊಟ್ಟಿಗೆ ಮಸ್ತ್ ಪ್ರಾಮಾಣಿಕ ಬೊಕ್ಕ ಜನಪರವಾದ್ ಎನ್ನ ಕರ್ತವ್ಯ ಮಲ್ತೊಂದು ಬೈದೆ.

ಎಂಕ್ ಸಹಕಾರ ಬೆಂಬಲ ಕೊರ್ನ ಮಾತೆರೆಗ್ಲಾ ಉಡಲ್ ದಿಂಜಿನ‌ಸೊಲ್ಮೆಲು”, ಅಂತ ತುಳುವಿನಲ್ಲಿ ಟ್ವೀಟ್‌ಮಾಡಿ ಧನ್ಯವಾದ ಅರ್ಪಿಸಿದ್ದಾರೆ.

ಶುಕ್ರವಾರ (ಜೂನ್ 26) ಡಾ. ಪಿ ಎಸ್ ಹರ್ಷ ಐಪಿಎಸ್‌ಸೇರಿದಂತೆ 13 ಮಂದಿ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶಿಸಿತ್ತು.

ಇನ್ನು ಕಾರ್ಕಳ ಎ.ಎನ್.ಎಫ್.ನಲ್ಲಿ ಐಜಿಪಿಯಾಗಿದ್ದ ಬಿಹಾರ ಮೂಲದ ಐ.ಪಿ.ಎಸ್. ಅಧಿಕಾರಿ ವಿಕಾಸ್ ಕುಮಾರ್ ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ನೂತನ ಪೊಲೀಸ್ ಕಮೀಷನರ್ ಆಗಿ ನೇಮಕಗೊಳಿಸಲಾಗಿದೆ.

RECENT NEWS

ನಾಳೆ ಮಂಗಳವಾರ 11:30ಕ್ಕೆ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟ..!

ನಾಳೆ ಮಂಗಳವಾರ 11:30ಕ್ಕೆ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟ..! ಬೆಂಗಳೂರು : ರಾಜ್ಯ ದ್ವಿತೀಯ ಪಿಯುಸಿ ಪರೀಕ್ಷೆಗಳ ಫಲಿತಾಂಶ  ನಾಳೆ ಮಂಗಳವಾರ  ಪ್ರಕಟವಾಗಲಿದೆ. ಈ ಬಗ್ಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್...

ಉಡುಪಿ ಜಿಲ್ಲೆಗೆ ಸದ್ಯಕ್ಕೆ ಲಾಕ್ಡೌನ್ ಅಗತ್ಯವಿಲ್ಲ – ರಘುಪತಿ ಭಟ್

ಉಡುಪಿ : ಉಡುಪಿ ಜಿಲ್ಲೆ ಸದ್ಯಕ್ಕೆ ಲಾಕ್ಡೌನ್ ಅಗತ್ಯವಿಲ್ಲ ಅಂತ ಶಾಸಕ ರಘುಪತಿ ಭಟ್ ಹೇಳಿದ್ದಾರೆ. ಉಡುಪಿಯಲ್ಲಿ ಮಾತನಾಡಿದ ಅವರು ಜನಜೀವನ ಈಗಷ್ಟೇ ಚೇತರಿಸಿಕೊಳ್ಳುತ್ತಿದೆ. ಮತ್ತೆ ಲಾಕ್ಡೌನ್ ಮಾಡಿದರೆ ಆರ್ಥಿಕತೆಯ ಮೇಲೆ ಭಾರಿ ಹೊಡೆತ ಬೀಳಲಿದೆ....

ಗುರುವಾರದಿಂದ ಒಂದು ವಾರ ದಕ್ಷಿಣಕನ್ನಡ ಜಿಲ್ಲೆ ಲಾಕ್ ಡೌನ್

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಉಲ್ಬಣಿಸುತ್ತಿರುವ ಕೊರೊನಾ ಸೋಂಕು ಆತಂಕಕ್ಕೆ ಕಾರಣವಾಗಿರುವ ಹಿನ್ನಲೆಯಲ್ಲಿ ಜುಲೈ 16 ರಿಂದ ಜಿಲ್ಲೆಯಲ್ಲಿ ಒಂದು ವಾರಗಳ ಕಾಲ ಲಾಕ್ ಡೌನ್ ಜಾರಿಗೆ ತರಲಾಗುವುದು...

ಪಾಣೆಮಂಗಳೂರು ಸೇತುವೆಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ ಮಹಿಳೆ ಶವ ಪತ್ತೆ

ಬಂಟ್ವಾಳ: ಪಾಣೆ ಮಂಗಳೂರು ನೂತನ ಸೇತುವೆಯಿಂದ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ ಮಹಿಳೆಯ ಮೃತ ದೇಹ ಇಂದು ಪತ್ತೆಯಾಗಿದೆ. ಮೃತ ಮಹಿಳೆಯನ್ನು ಮೂಡ ಗ್ರಾಮದ ನಿವಾಸಿ ಗೋಪಿ ಪೂಜಾರಿ(49) ಎಂದು ಗುರುತಿಸಲಾಗಿದೆ. ಇವರು...
error: Content is protected !!