ಮಂಗಳೂರು: ಸಿನಿಮೀಯಾ ಶೈಲಿಯಲ್ಲಿ ಚೇಸ್ ಮಾಡಿ ಕಳ್ಳನನ್ನು ಹಿಡಿದ ಪೊಲೀಸ್ ಅಧಿಕಾರಿ ವರುಣ್ ವೀಡಿಯೋ ವೈರಲ್ ಆಗುತ್ತಿದ್ದು, ಈ ಚೇಸ್ ಯಾಕಾಯ್ತು ಹೇಗಾಯ್ತು ಎಂಬ ವಿವರ ಇಲ್ಲಿದೆ.
ನಿನ್ನೆ ಮಧ್ಯಾಹ್ನ ಮಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯ ಮುಂಭಾಗದ ನೆಹರು ಮೈದಾನದಲ್ಲಿ ಉತ್ತರಪ್ರದೇಶ ಮೂಲದ ಗ್ರಾನೈಟ್ ಕೆಲಸ ಮಾಡುವ ಪ್ರೇಮ್ ನಾರಾಯಣ್ ಯೋಗಿ ಎಂಬಾತ ಮಲಗಿದ್ದ,
ಈ ವೇಳೆ ಆತನ ಮೊಬೈಲ್ ಕದ್ದು ಗುಂಪೊಂದು ಪರಾರಿಯಾಗಲು ಯತ್ನಿಸಿತ್ತು. ಈ ವೇಳೆ ಅವರನ್ನು ಹಿಂಬಾಲಿಸಿ ಬೊಬ್ಬೆ ಹಾಕುತ್ತಾ ಪ್ರೇಮ್ ನಾರಾಯಣ್ ಯೋಗಿ ಓಡಿಸಿಕೊಂಡು ಹೋಗಿದ್ದಾನೆ.
ತಕ್ಷಣವೇ ಹತ್ತಿರದಲ್ಲೇ ಇದ್ದ ಕಮೀಷನರ್ ಆಫೀಸ್‌ನ ಹೊರಗಿದ್ದ ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಘಟನೆಯನ್ನು ಗಮನಿಸುವಂತೆ ಸೂಚನೆ ನೀಡುತ್ತಾರೆ.
ಈ ವೇಲೆ ಅಲ್ಲೇ ಕರ್ತವ್ಯ ನಿರ್ವಹಿಸುತ್ತಿದ್ದ ಎಎಸ್‌ಐ ವರುಣ್ ಆಳ್ವ ಅವರನ್ನು ಹಿಂಬಾಲಿಸುತ್ತಾರೆ. ಸ್ಟೇಟ್‌ಬ್ಯಾಂಕ್‌ನ ಹ್ಯಾಮಿಲ್ಟನ್ ಸರ್ಕಲ್ ತಲುಪುತ್ತಿದ್ದಂತೆ ಸಿನಿಮೀಯ ರೀತಿಯಲ್ಲಿ ವರುಣ್ ಆಳ್ವ ಓರ್ವನನ್ನು ನೆಲಕ್ಕೆ ಕೆಡವಿ ಹಾಕುತ್ತಾರೆ.
ಆದರೆ ಆತನ ಬಳಿ ಕದ್ದ ಮೊಬೈಲ್ ಇರುವುದಿಲ್ಲ. ಆರೋಪಿಯನ್ನು ಕಮೀಷನರ್ ಆಫೀಸ್‌ಗೆ ಕರೆತಂದ ವೇಳೆ ಆತನ ಸಂಗಡಿಗರ ಕಾಲ್ ಬರುತ್ತದೆ. ಇದರನ್ವಯ ಆರೋಪಿಯನ್ನು ಮಂಗಳೂರು ರೈಲ್ವೇ ನಿಲ್ದಾಣದಲ್ಲಿ ಬಿಡುತ್ತಾರೆ.
ಆ ವೇಳೆಗಾಗಲೇ ಪೊಲೀಸರು ಫಾಲೋ ಮಾಡುತ್ತಿದ್ದ ಬಗ್ಗೆ ಅರಿವಿಲ್ಲದ ಉಳಿದ ಆರೋಪಿಗಳು ರಿಕ್ಷಾದಲ್ಲಿ ರೈಲ್ವೇ ನಿಲ್ದಾಣಕ್ಕೆ ಬಂದಿರುತ್ತಾರೆ. ಮೊದಲ ಆರೋಪಿಯು ಉಳಿದ ಆರೋಪಿಗಳು ಇದ್ದ ರಿಕ್ಷಾವನ್ನು ಹತ್ತಿ ಪೊಲೀಸರು ಹಿಂಬಾಲಿಸುವ ಬಗ್ಗೆ ಮಾಹಿತಿ ನೀಡುತ್ತಾನೆ.
ರಿಕ್ಷಾ ವೆನ್‌ಲಾಕ್ ಆಸ್ಪತ್ರೆಯ ಶವಗಾರ ತಲುಪುತ್ತಿದ್ದಂತೆ ಮೂವರೂ ಚಲಿಸುತ್ತಿದ್ದ ರಿಕ್ಷಾದಿಂದ ಹಾರಿ ಓಡಿಹೋಗುತ್ತಾರೆ. ಇದನ್ನು ಹಿಂಬಾಲಿಸುತ್ತಿದ್ದ ಪೊಲೀಸರು ಅಲರ್ಟ್ ಆಗಿ ಓಡಿ ಹೋಗಿ ಮೊದಲ ಕಳ್ಳನ ಜೊತೆ ಮತ್ತೋರ್ವನನ್ನು ಹಿಡಿಯುತ್ತಾರೆ.
ಮೂರನೇ ಆರೋಪಿ ಅಲ್ಲಿಂದ ತಪ್ಪಿಸಿ ಉಳ್ಳಾಲ ಕಡೆ ಹೋಗಿದ್ದಾನೆಂಬ ಖಚಿತ ಮಾಹಿತಿ ಪೊಲೀಸರಿಗೆ ದೊರಕಿದೆ. ಆತನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಈ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹರೀಶ್ ಪೂಜಾರಿ(32) ಹಾಗೂ ಶಮಂತ್(20) ಬಂಧಿತರು ಮತ್ತೋರ್ವನಿಗಾಗಿ ಶೋಧ ನಡೆದಿದೆ.
ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪೊಲೀಸ್ ಅಧಿಕಾರಿ ವರುಣ್ ಕಾರ್ಯಕ್ಕೆ ನೆಟ್ಟಿಗರು ಹರ್ಷ ವ್ಯಕ್ತಪಡಿಸಿದ್ದಾರೆ.
ಸನ್ಮಾನ ಮಾಡಿ ಗೌರವಿಸುತ್ತೇವೆಂದ ನಗರ ಪೊಲೀಸ್ ಆಯುಕ್ತ
ಈ ಬಗ್ಗೆ ಪ್ರತಿಕ್ರಿಯಿಸಿದ ಮಂಗಳೂರು ನಗರ ಪೊಲೀಸ್ ಆಯುಕ್ತ ಪೊಲೀಸ್ ಅಧಿಕಾರಿಯ ಕರ್ತವ್ಯ ಮತ್ತು ಸಮಯಪ್ರಜ್ಞೆಗೆ ಅಭಿನಂದಿಸಿದ್ದಾರೆ.
ಜೊತೆಗೆ ಕಳ್ಳರನ್ನು ಹಿಡಿದ ಪೊಲೀಸರಿಗೆ ಆಯುಕ್ತರ ಕಚೇರಿಯಲ್ಲಿ ಸನ್ಮಾನ ಮಾಡಿ ಗೌರವಿಸುತ್ತೇವೆ ಎಂದಿದ್ದಾರೆ. ಜೊತೆಗೆ ಈ ಬಗ್ಗೆ ಸಾರ್ವಜನಿಕರು ಎಚ್ಚೆತ್ತುಕೊಳ್ಳಬೇಕು.
ಪೊಲೀಸರಿಗೆ ಇಂತಹ ವಂಚನೆ, ಕಳ್ಳತನ ಬಗ್ಗೆ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ ಸಹಕರಿಸುವಂತೆ ಹೇಳಿದರು.
ಮಂಗಳೂರು : ಬೆಂಗಳೂರಿನ ಚಾಮರಾಜನಗರದಲ್ಲಿ ಹಿಂದುಗಳು ಆರಾಧಿಸುವ ಗೋಮಾತೆಯ ಕೆಚ್ಚಲನ್ನು ಕತ್ತರಿಸಿ ವಿ*ಕೃತಿ ಮೆರೆದಿರುವುದು ಹಾಗೂ ನಂಜನಗೂಡಿನಲ್ಲಿ ಭಕ್ತಾದಿಗಳು ದೇವಸ್ಥಾನಕ್ಕೆ ದಾನವಾಗಿ ನೀಡಿದ್ದ ಹಸುವಿನ ಮೇಲೆ ದುಷ್ಟರು ಮಾ*ರಕಾಸ್ತ್ರದಿಂದ ದಾ*ಳಿ ಮಾಡಿ ಹಸುವಿನ ಬಾಲವನ್ನು ಕತ್ತರಿಸಿ ಪೈಶಾಚಿಕ ಕೃ*ತ್ಯ ನಡೆಸಿರುವುದನ್ನು ಖಂಡಿಸಿ ಮಂಗಳೂರಿನಲ್ಲಿ ಗೋ ಸಂರಕ್ಷಣಾ ಸಂವರ್ಧನಾ ಸಮಿತಿಯಿಂದ ತಾಲೂಕು ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಯಿತು.
ಪ್ರತಿಭಟನೆಗೆ ವಿಶ್ವ ಹಿಂದು ಪರಿಷತ್ ಸೇರಿದಂತೆ ಹಲವು ಹಿಂದು ಪರ ಸಂಘಟನೆಗಳು ಸಾಥ್ ನೀಡಿದ್ದವು. ಮೊದಲಿಗೆ ಗೋವಿಗೆ ವಿಶೇಷ ಪೂಜೆ ಮಾಡುವ ಮೂಲಕ ಗೋವನ್ನು ಪೂಜಿಸಲಾಯಿತು.
ಬಳಿಕ ನಡೆದ ಸಭೆಯಲ್ಲಿ ಸಂಸದ ಬ್ರಿಜೇಶ್ ಚೌಟ ಮಾತನಾಡಿ, ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಹಿಂದುಗಳು ಪವಿತ್ರ ಎಂದು ಪೂಜಿಸುವ ಗೋವಿನ ಮೇಲೆ ನಿರಂತರವಾಗಿ ದೌರ್ಜ*ನ್ಯ ದಬ್ಬಾಳಿಕೆ ನಡೆಯುತ್ತಿದೆ. ಯಾವುದೇ ಜನಪ್ರತಿನಿಧಿಗಳು ಕೂಡ ಈ ಬಗ್ಗೆ ಚಕಾರ ಎತ್ತುತ್ತಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್ ನಾಯಕರು ಇಲ್ಲಿ ದೇವಸ್ಥಾನಕ್ಕೆ ಹೋಗಿ ಗಂಧಪ್ರಸಾದ ಸ್ವೀಕರಿಸುತ್ತಾರೆ. ಆದರೆ ಗೋವಿನ ಮೇಲೆ ದೌರ್ಜ*ನ್ಯ ನಡೆದಾಗ ತಮ್ಮ ಬಾಯಿ ಬಿಚ್ಚುತ್ತಿಲ್ಲ ಎಂದು ಟೀಕಿಸಿದರು.
ಪ್ರತಿಭಟನೆಯಲ್ಲಿ ವಿಶ್ವ ಹಿಂದು ಪರಿಷತ್ ಮುಖಂಡರಾದ ಎಂ.ಬಿ.ಪುರಾಣಿಕ್, ಶರಣ್ ಪಂಪ್‌ವೆಲ್, ಶಿವಾನಂದ ಮೆಂಡನ್, ಗೋಪಾಲ್ ಕುತ್ತಾರ್ ಮೊದಲಾದವರು ಭಾಗಿಯಾಗಿದ್ದರು.
ಮಂಗಳೂರು/ಬೆಂಗಳೂರು : ಎರಡನೇ ಮಗುವಿನ ಬಾಣಂತನಕ್ಕೆ ಎಂದು ತವರುಮನೆಗೆ ಹೋಗಿದ್ದ ಮಹಿಳೆಯೊಬ್ಬಳು ಬಾಯ್‌ಫ್ರೆಮಡ್ ಜೊತೆ ಪರಾರಿಯಾಗಿರುವ ಘಟನೆ ರಾಜ್ಯ ರಾಜಧಾನಿಯಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.
ಬಡ ಕುಟುಂಬ ಮೂಲದ ಮಹಿಳೆಯೊಬ್ಬಳಿಗೆ ತಾಯಿ ಶ್ರೀಮಂತ ಹುಡುಗನ ಜೊತೆಗೆ ಮದುವೆ ಮಾಡಿಸಿದ್ದರು. ಕೇವಲ ಮೂರು ವರ್ಷ ಗಂಟನ ಜೊತೆ ಸಂಸಾರ ನಡೆಸಿದ್ದಾಳೆ. ಎರಡನೇ ಮಗುವಿನ ಬಾಣಂತನಕ್ಕೆಂದು ತವರುಮನೆಗೆ ಹೋಗಿದ್ದ ಮಹಿಳೆ ಮತ್ತೆ ವಾಪಸ್ಸಾಗಲೇ ಇಲ್ಲ. ಗಂಡ ಎಷ್ಡೇ ಒತ್ತಾಯಿಸಿದರೂ ಕೇಳಲಿಲ್ಲ. ಪತಿ ವಿರುದ್ಧವೇ ಇಲ್ಲ ಸಲ್ಲದ ಕೇಸ್‌ಗಳನ್ನು ಹಾಕಿದ್ದಾಳೆ.
ಅತ್ತ ಗಂಡ ಕೋರ್ಟು, ಕೇಸು ಎಂದು ಅಲೆಯುತ್ತಾ ಇದ್ರೆ, ಇತ್ತ ಈಕೆ ಸಿಕ್ಕ ಸಿಕ್ಕವರಿಗೆಲ್ಲಾ ಪ್ರೀತಿ ಪಾಠ ಮಾಡುತ್ತಿದ್ದಾಳೆ. ಗಂಡನನ್ನು ತೊರೆದು ಬಾಯ್‌ಫ್ರೆಂಡ್ಸ್ ಜೊತೆ ಲೈಫ್ ಎಂಜಾಯ್ ಮಾಡ್ತಾ ಇದ್ದಾಳೆ. ಅಷ್ಟೇ ಅಲ್ಲದೇ ಇತ್ತೀಚಿಗೆ ಬಾಯ್‌ಫ್ರೆಂಡ್‌ನಿಂದ ಮೂರನೇ ಮಗುವನ್ನೂ ಪಡೆದಿದ್ದಾಳೆ. ಗಂಡ ಈ ಕುರಿತು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ತನಿಖೆ ಖತರ್‌ನಾಕ್ ಲೇಡಿ ವಿರುದ್ಧ ತನಿಖೆ ನಡೆಸುತ್ತಿದ್ದಾರೆ.
ಮಂಗಳೂರು/ಮುಂಬೈ : ಬಿಗ್ ಬಿ ಅಮಿತಾಬ್ ಬಚ್ಚನ್ ಮುಂಬೈನ ಓಶಿವಾರಾದಲ್ಲಿರುವ ತಮ್ಮ ಡುಪ್ಲೆಕ್ಸ್ ಅಪಾರ್ಟ್ಮೆಂಟ್ ಅನ್ನು ಮಾರಾಟ ಮಾಡಿದ್ದಾರೆ. ಭಾರೀ ಮೊತ್ತಕ್ಕೆ ಅಪಾರ್ಟ್ಮೆಂಟ್ ಮಾರಾಟವಾಗಿದೆ. ಹೌದು, 31 ಕೋಟಿ ಕೊಟ್ಟು ಅಪಾರ್ಟ್ಮೆಂಟ್ ಖರೀದಿಸಿದ್ದ ಬಿಗ್ ಬಿ ಈಗ ಲಾಭ ಪಡೆದಿದ್ದಾರೆ.
ಓಶಿವಾರಾದಲ್ಲಿ ಕ್ರಿಸ್ಟಲ್ ಗ್ರೂಪ್‌ನ ವಸತಿ ಸಮುಚ್ಚಯವಾದ ‘ದಿ ಅಟ್ಲಾಂಟಿಸ್’ನಲ್ಲಿ ಅಮಿತಾಬ್ ಅಪಾರ್ಟ್ಮೆಂಟ್ ಇದೆ. 2021ರ ಎಪ್ರಿಲ್‌ನಲ್ಲಿ ಈ ಅಪಾರ್ಟ್ಮೆಂಟ್ ಅನ್ನು ಅಮಿತಾಬ್ ಖರೀದಿಸಿದ್ದರು. ಅವರು 31 ಕೋಟಿ ಕೊಟ್ಟಿದ್ದರು. ಅದೇ ವರ್ಷ ನವೆಂಬರ್‌ನಲ್ಲಿ ನಟಿ ಕೃತಿ ಸನೋನ್‌ಗೆ ಭದ್ರತಾ ಠೇವಣಿ 60 ಲಕ್ಷ ಮತ್ತು ಮಾಸಿಕ 10 ಲಕ್ಷ ರೂ. ಬಾಡಿಗೆಗೆ ನೀಡಿದ್ದರು ಎನ್ನಲಾಗಿದೆ.
ಈಗ ಈ ಅಪಾರ್ಟ್ಮೆಂಟ್‌ನ್ನು ಅಮಿತಾಬ್ ಬಚ್ಚನ್ 83 ಕೋಟಿಗೆ ಮಾರಾಟ ಮಾಡಿದ್ದಾರೆ ಎಂದು ವರದಿಗಳು ಹೇಳಿವೆ. ನೋಂದಣಿ ಮಹಾಪರಿವೀಕ್ಷಕ ಹಾಗೂ ಮುದ್ರಾಂಕ ಆಯುಕ್ತರ(ಐಜಿಆರ್) ಪ್ರಕಾರ, ಈ ಅಪಾರ್ಟ್ಮೆಂಟ್ ಅನ್ನು 83 ಕೋಟಿ ರೂ. ಗೆ ಮಾರಾಟ ಮಾಡಲಾಗಿದೆ. ಈ ಮೂಲಕ ಅವರು ಶೇ.168ರಷ್ಟು ಲಾಭ ಪಡೆದಿದ್ದಾರೆ ಎಂದು ಹೇಳಲಾಗಿದೆ.
ಅಂದ್ಹಾಗೆ ಮುಂಬೈನ ಓಶಿವಾರಾವು ಉತ್ತಮ ಮೂಲಭೂತ ಸೌಕರ್ಯ ಹೊಂದಿರುವ ಪ್ರದೇಶ. ಆಧುನಿಕ ಜೀವನಶೈಲಿಗೆ ತಕ್ಕ ಜಾಗ. ಉತ್ತಮ ರಸ್ತೆಗಳು, ಮೆಟ್ರೋ ಸಂಪರ್ಕಗಳನ್ನು ಹೊಂದಿದೆ.