ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ದೆಹಲಿಯ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿವಾಸಕ್ಕೆ ತೆರಳಿ ಅಂತಿಮ ನಮನ ಸಲ್ಲಿಸಿದರು. ಕೇಂದ್ರ ಸಚಿವರಾದ ಅಮಿತ್ ಶಾ ಮತ್ತು ಜೆಪಿ ನಡ್ಡಾ ಅವರ ಜೊತೆಗಿದ್ದರು.
2004 ರಿಂದ 2014 ರವರೆಗೆ ಅಧಿಕಾರದಲ್ಲಿದ್ದ ಸಿಂಗ್ ಅವರು ಗುರುವಾರ ತಮ್ಮ 92 ನೇ ವಯಸ್ಸಿನಲ್ಲಿ ನಿಧನರಾದರು. ಅವರು ಪತ್ನಿ ಗುರುಚರಣ್ ಸಿಂಗ್ ಮತ್ತು ಮೂವರು ಪುತ್ರಿಯರನ್ನು ಅಗಲಿದ್ದಾರೆ. ಪಿಎಂ ಮೋದಿ ಅವರು ಗುರುವಾರ ಎಕ್ಸ್‌ಪೋಸ್ಟ್‌ನಲ್ಲಿ ಸಿಂಗ್ ಅವರನ್ನು “ಅತ್ಯಂತ ಪ್ರತಿಷ್ಠಿತ ನಾಯಕರು” ಎಂದು ಕರೆದಿದ್ದಾರೆ.
“ವಿನಮ್ರ ಮೂಲದಿಂದ ಏರಿದ ಅವರು ಗೌರವಾನ್ವಿತ ಅರ್ಥಶಾಸ್ತ್ರಜ್ಞರಾದರು. ಅವರು ಹಣಕಾಸು ಸಚಿವರಾಗಿಯೂ ಸೇರಿದಂತೆ ವಿವಿಧ ಸರ್ಕಾರಿ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದರು, ವರ್ಷಗಳಲ್ಲಿ ನಮ್ಮ ಆರ್ಥಿಕ ನೀತಿಯ ಮೇಲೆ ಬಲವಾದ ಮುದ್ರೆ ಹಾಕಿದರು. ಸಂಸತ್ತಿನಲ್ಲಿ ಅವರ ಮಧ್ಯಸ್ಥಿಕೆಗಳು ಸಹ ಒಳನೋಟವುಳ್ಳದ್ದಾಗಿದೆ. ಮಾಜಿ ಪ್ರಧಾನಿ, ಅವರು ಜನರ ಜೀವನವನ್ನು ಸುಧಾರಿಸಲು ವ್ಯಾಪಕವಾದ ಪ್ರಯತ್ನಗಳನ್ನು ಮಾಡಿದರು, ”ಎಂದು ಪಿಎಂ ಮೋದಿ ಹೇಳಿದರು.
ಮಂಗಳೂರು : ರೈತರಿಗೆ ಆರ್ಥಿಕ ಪ್ರಯೋಜನ ನೀಡಲು ಕೇಂದ್ರ ಸರ್ಕಾರ 2019 ರಲ್ಲಿ ಕಿಸಾನ್ ಸಮ್ಮಾನ್ ನಿಧಿ ಆರಂಭಿಸಿ ರೈತರ ಖಾತೆಗೆ ಹಣ ಜಮೆ ಮಾಡುತ್ತಿದೆ. ವಾರ್ಷಿಕವಾಗಿ 6 ಸಾವಿರ ನೀಡುವ ಈ ಯೋಜನೆಯಲ್ಲಿ ತಲಾ 2 ಸಾವಿರದಂತೆ ಮೂರು ಕಂತುಗಳಲ್ಲಿ ಈ ಹಣ ರೈತರ ಖಾತೆಗೆ ಬೀಳುತ್ತಿದೆ. ಆದ್ರೆ, ಈ ಯೋಜನೆಯ ಫಲಾನುಭವಿಗಳ ಲಿಸ್ಟ್‌ನಲ್ಲಿ ಇರುವ ಕೆಲವರು 19 ಕಂತಿನ ಹಣ ಪಾವತಿಯ ವೇಳೆ ಲಿಸ್ಟ್‌ನಿಂದ ಹೊರಬೀಳಲಿದ್ದಾರೆ. ಇದರಿಂದ ಅನೇಕ ರೈತರು ಕಿಸಾನ್ ಸಮ್ಮಾನ್ ಯೋಜನೆಯ ಪ್ರಯೋಜನದಿಂದ ವಂಚಿತರಾಗಲಿದ್ದಾರೆ.
2019 ರಲ್ಲಿ ಆರಂಭವಾಗಿರುವ ಕಿಸಾನ್ ಸಮ್ಮಾನ್ ಯೋಜನೆ ರೈತರಿಗೆ ಸಣ್ಣ ಪ್ರಮಾಣದ ಆರ್ಥಿಕ ಸಹಕಾರ ನೀಡುತ್ತಿದೆ. ವಾರ್ಷಿಕ 6 ಸಾವಿರ ರೂಪಾಯಿ ರೈತರ ಖಾತೆಗೆ ಜಮೆ ಆಗುತ್ತಿದ್ದು, ಇದರಿಂದ ಬಡ ರೈತರಿಗೆ ಸಾಕಷ್ಟು ಅನುಕೂಲ ಆಗಿದೆ. 2019 ರಿಂದ ಇಲ್ಲಿವರೆಗೆ 18 ಕಂತುಗಳಲ್ಲಿ ರೈತರು ತಮ್ಮ ಪಾಲಿನ ಹಣವನ್ನು ಪಡೆದುಕೊಂಡಿದ್ದಾರೆ. ಆದ್ರೆ 19 ನೇ ಕಂತಿನ ಹಣ ಎಲ್ಲಾ ರೈತರಿಗೆ ಸಿಗುವುದು ಅನುಮಾನವಾಗಿದೆ.
ಯಾಕಂದ್ರೆ ಅನೇಕ ರೈತರು ತಮ್ಮ e-KYC ಪೂರ್ಣಗೊಳಿಸಿಲ್ಲ ಹಾಗೂ ತಮ್ಮ ಜಮೀನು ಪರಿಶೀಲನೆಯ ವರದಿ ಕೂಡ ಸಲ್ಲಿಸಿಲ್ಲ. ಇದರಿಂದಾಗಿ ಫಲಾನುಭವಿಗಳ ಪಟ್ಟಿಯಿಂದ ರೈತರ ಹೆಸರನ್ನು ತೆಗೆದು ಹಾಕಲು ಸರ್ಕಾರ ಮುಂದಾಗಿದೆ. ಇಂತಹ ರೈತರನ್ನು ಅನರ್ಹರು ಎಂದು ಪರಿಗಣಿಸಿ ಅವರಿಗೆ ನೀಡಲಾಗುವ ಕಿಸಾನ್ ಸಮ್ಮಾನ್ ನಿಧಿಯನ್ನು ತಡೆ ಹಿಡಿಯಲಾಗುತ್ತದೆ. ಈ ಪಟ್ಟಿಯಲ್ಲಿ ನೀವು ಇದ್ದೀರಾ ಎಂದು ಪರಿಶೀಲಿಸಿಕೊಂಡು ತಕ್ಷಣ e-KYC ಹಾಗೂ ಜಮೀನು ಪರಿಶೀಲನೆಯ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿ.
ಮಂಗಳೂರು/ಬೆಂಗಳೂರು: ಶಿವರಾಜ್ ಕುಮಾರ್ ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಶಿವಣ್ಣನ ಆರೋಗ್ಯದಲ್ಲಿ ಏರುಪೇರಾಗಿರುವುದು ಗೀತಾ ಶಿವರಾಜ್ ಕುಮಾರ್ ಗೆ ತಡೆಯಲಾಗದ ಸಂಕಟವನ್ನು ತಂದಿಟ್ಟಿತ್ತು. ಇದರ ನಡುವೆ ಗೀತಾ ಶಿವರಾಜ್ ಕುಮಾರ್ ಭಾವನಾತ್ಮಕ ಪತ್ರ ಬರೆದಿದ್ದಾರೆ.
ಶಿವರಾಜ್ ಕುಮಾರ್ ಅವರು ಕ್ಯನ್ಸಾರ್ ಗೆ ಸರ್ಜರಿ ಮಾಡಿಸಿಕೊಂಡಿದ್ದಾರೆ. ಫ್ಲೋರಿಡಾದ ಮಿಯಾಮಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಅವರು ಸರ್ಜರಿಗೆ ಒಳಗಾಗಿದ್ದಾರೆ. ಅವರು ಚೇತರಿಸಿಕೊಳ್ಳುತ್ತಿರುವುದು ಖುಷಿಯ ಸುದ್ದಿ ಆದರೆ, ಮತ್ತೊಂದು ದುಃಖದ ಸುದ್ದಿಯೂ ಸಿಕ್ಕಿದೆ. ಈ ಬಗ್ಗೆ ಗೀತಾ ಅವರು ತಮ್ಮ ದುಃಖದ ವಿಚಾರ ಒಂದನ್ನು ಹಂಚಿಕೊಂಡಿದ್ದಾರೆ. ಅದೇನಂದರೆ ಅವರು ಸಾಕಿದ ಪ್ರೀತಿಯ ಶ್ವಾನ ನಿಧನ ಹೊಂದಿದೆ. ಈ ಬಗ್ಗೆ ಗೀತಾ ಅವರು ಪೋಸ್ಟ್ ಹಾಕಿದ್ದಾರೆ.
ನಮ್ಮ ಮನೆಯಲ್ಲಿ ಐದು ಜನರಿಲ್ಲ, ಆರು ಜನರಿದ್ದೇವೆ. ಪ್ರೀತಿಯ ನೀಮೋವನ್ನು ನಾವು ಮನೆಯ ಸದಸ್ಯನನ್ನಾಗಿ ಪರಿಗಣಿಸಿದ್ದೆವು. ಶಿವಣ್ಣ ಅಮೆರಿಕಾದಲ್ಲಿ ಚಿಕಿತ್ಸೆ ಪಡೆಯುವಾಗ ನೀಮೋ ದೇವರ ಹತ್ತಿರ ಹೋಗಿದ್ದಾನೆ. ಅವನ ನಿಸ್ವಾರ್ಥ ಪ್ರೀತಿಯನ್ನು ಯಾರಿಂದಲೂ ಕೂಡ ತುಂಬಲು ಸಾಧ್ಯವಿಲ್ಲ. ನಾವು ಅಮೆರಿಕಾಗೆ ಬಂದ ಮೇಲೆ ಅವನು ಹೊರಡಬೇಕು ಎಂದು ನಿರ್ಧರಿಸಿದ್ದ ಎನಿಸುತ್ತೆ ಎಂದು ದು:ಖ ವ್ಯಕ್ತಪಡಿಸಿದ್ದಾರೆ.
ಅವನು ಹೋಗಿರುವುದನ್ನು ನಾನು ಕಣ್ಣಿಂದ ನೋಡಲಿಲ್ಲ. ನೋಡಿದ್ದರೂ ಕೂಡ ನಾನು ಒಪ್ಪಿಕೊಳ್ಳುತ್ತಿರಲಿಲ್ಲ. ಪ್ರಾಣಿಗಳು ನಮ್ಮನ್ನು ಬಿಟ್ಟು ಹೋಗುವಾಗ ನಮ್ಮ ನೋವನ್ನು ಕೂಡ ಅವು ಜೊತೆಗೆ ತೆಗೆದುಕೊಂಡು ಹೋಗುತ್ತವೆಯಂತೆ. ನನ್ನ ನೀಮೋ ಶಿವಣ್ಣನಿಗೆ ಇದ್ದ ನೋವನ್ನು ಶಾಶ್ವತವಾಗಿ ತೆಗೆದುಕೊಂಡು ಹೋಗಿದ್ದಾನೆ ಎಂದಿದ್ದಾರೆ ಅವರು. ಈ ಮೂಲಕ ಶಿವರಾಜ್ ಕುಮಾರ್ ಚೇತರಿಕೆ ಕಂಡಿದ್ದಾರೆ ಎಂದಿದ್ದಾರೆ.
ಗೀತಾ ಶಿವರಾಜ್ ಕುಮಾರ್ ಬರೆದಿರುವ ಸುದೀರ್ಘ ಪತ್ರದಲ್ಲಿ ನಿಮೋ ಅವರೊಂದಿಗೆ ಹೇಗಿದ್ದ. ಎಷ್ಟು ಹಚ್ಚಿಕೊಂಡಿದ್ದ ಎಂಬುದರ ನೆನಪುಗಳೊಂದಿಗೆ ಸಂಪೂರ್ಣವಾಗಿ ಅಕ್ಷರರೂಪ ಕೊಟ್ಟಿದ್ದಾರೆ.
ಮಂಗಳೂರು/ ಇಸ್ಲಾಮಾಬಾದ್ : ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರ ಅಂತ್ಯ ಸಂಸ್ಕಾರ ದೆಹಲಿಯಲ್ಲಿ ನಡೆಯುತ್ತಿದ್ದರೆ, ಪಾಕಿಸ್ತಾನದ ಗ್ರಾಮವೊಂದರಲ್ಲಿ ಭಾರತದ ಮಾಜಿ ಪ್ರಧಾನಿಗಾಗಿ ಸಂತಾಪ ಸಭೆ ನಡೆಸಲಾಗಿದೆ. ಆ ಇಡೀ ಗ್ರಾಮದಲ್ಲಿ ಶೋಕಾಚರಣೆ ಮಾಡಲಾಗಿದ್ದು, ಪಾಕಿಸ್ತಾನದ ಆ ಶಾಲೆಯೊಂದಕ್ಕೆ ಭಾರತದ ಮಾಜಿ ಪ್ರಧಾನಿಯ ಹೆಸರು ಇಡುವ ಬಗ್ಗೆ ಗ್ರಾಮದ ಜನ ಚರ್ಚೆಗಳನ್ನು ನಡೆಸಿದ್ದಾರೆ. ಈ ಬಗ್ಗೆ ದಿ ಹಿಂದೂ ಪತ್ರಿಕೆ ವರದಿ ಮಾಡಿದ್ದು, ಅದರ ಡಿಟೇಲ್ಸ್ ಇಲ್ಲಿದೆ.
ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ನಿಂದ ನೈಋತ್ಯಕ್ಕೆ 100 ಕಿಲೋ ಮೀಟರ್ ದೂರದ ಝೀಲಂ ಜಿಲ್ಲೆಯ ಭಾಗವಾಗಿದ್ದ, ಪ್ರಸ್ತುತ ಚಕ್ವಾಲ್ ಜಿಲ್ಲೆಗೆ ಸೇರಿದ ಗಾಹ್ ಗ್ರಾಮದಲ್ಲಿ ಭಾರತದ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರ ಅ*ಗಲಿಕೆಗೆ ಶೋ*ಕಾಚರಣೆ ಮಾಡಲಾಗಿದೆ. ಇದೇ ಗ್ರಾಮದ ಶಾಲೆಯಲ್ಲಿ ಡಾ. ಮನಮೋಹನ್ ಸಿಂಗ್ ಅವರು 4 ನೇ ತರಗತಿ ತನಕ ಶಿಕ್ಷಣ ಪಡೆದಿದ್ದರು. 1937 ರ ಎಪ್ರಿಲ್ 17 ರಂದು ಗಾಹ್ ಶಾಲೆಯಲ್ಲಿ ಪ್ರವೇಶ ಪಡೆದಿದ್ದ ಮನಮೋಹನ್ ಸಿಂಗ್ ಅವರ ಪ್ರವೇಶ ಸಂಖ್ಯೆ 187 ಆಗಿತ್ತು ಅಂತ ಶಾಲೆಯ ಶಿಕ್ಷಕ ಅಲ್ತಾಫ್ ಹುಸೇನ್ ಎಂಬವರು ಮಾಹಿತಿ ನೀಡಿದ್ದಾರೆ.
ದೇಶ ವಿಭಜನೆಯ ಕೆಲ ಸಮಯ ಮೊದಲು ಡಾ.ಮನಮೋಹನ್ ಸಿಂಗ್ ಅವರ ಕುಟುಂಬ ಈ ಗ್ರಾಮ ತೊರೆದು ಅಮೃತ್ ಸರಕ್ಕೆ ಬಂದು ನೆಲೆಸಿದ್ದರು. ಆದ್ರೆ, ಅವರ ಕುಟುಂಬದ ಹಲವರು ಇಂದಿಗೂ ಈ ಗ್ರಾಮದಲ್ಲಿ ವಾಸವಾಗಿದ್ದು, ಅವರು ಕುಟುಂಬದ ಸಂಪರ್ಕದಲ್ಲಿ ಇದ್ದಾರೆ.
2004 ರಲ್ಲಿ ಭಾರತದ ಪ್ರಧಾನಿಯಾಗಿ ಡಾ. ಮನಮೋಹನ್ ಸಿಂಗ್ ಅವರು ಅಧಿಕಾರ ವಹಿಸಿಕೊಂಡಾಗ ಈ ಗ್ರಾಮದ ಜನ ಸಂಭ್ರಮ ಪಟ್ಟಿದ್ದರು. ” ನಮ್ಮ ಗ್ರಾಮದ ಹುಡುಗ ಭಾರತದ ಪ್ರಧಾನಿಯಾದ ಎಂಬುದಕ್ಕೆ ಅಂದು ಸಂಭ್ರಮಿಸಿದ್ದಾಗಿ ಡಾ.ಮನಮೋಹನ್ ಸಿಂಗ್ ಅವರ ಸ್ನೇಹಿತರಲ್ಲಿ ಒಬ್ಬರಾದ ಆಶೀಕ್ ಅಲಿ ಎಂಬವರು ಹೇಳಿದ್ದಾರೆ.
2008 ರಲ್ಲಿ ಇದೇ ಗ್ರಾಮದ ರಾಜಾ ಮಹಮ್ಮದ್ ಅಲಿ ಎಂಬವರು ದೆಹಲಿಯಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಭೇಟಿಯಾಗಿದ್ದರು. ಬಳಿಕ ಒಂದೆರಡು ಗೆಳೆಯರೂ ಕೂಡ ಪ್ರಧಾನಿ ಮನಮೋಹನ್ ಸಿಂಗ್ ಭೇಟಿಗಾಗಿ ದೆಹಲಿಗೆ ಬಂದಿದ್ದರು. ಆದ್ರೆ, ಅವರೆಲ್ಲರೂ 2010 -14 ರ ನಡುವೆ ಇಹಲೋಕದ ಯಾತ್ರೆ ಮುಗಿಸಿದ್ದಾರೆ. ಆದ್ರೆ ಅವರು ಭೇಟಿಯಾಗಿದ್ದ ಸಂದರ್ಭದಲ್ಲಿ ಒಂದು ದಿನ ಗಾಹ್ ಗ್ರಾಮಕ್ಕೆ ಬರುವುದಾಗಿ ಹೇಳಿದ್ದರಾದ್ರೂ ಇದೀಗ ಅವರ ನಿಧನದ ಸುದ್ದಿ ಬಂದಿದೆ. ” ನಮ್ಮ ಗ್ರಾಮದ ಒಬ್ಬ ಆತ್ಮೀಯನನ್ನು ಕಳೆದುಕೊಂಡಷ್ಟು ನಮಗೆ ನೋವು ಉಂಟಾಗಿದೆ” ಎಂದು ಗ್ರಾಮದ ಹಿರಿಯರು ಹೇಳಿದ್ದಾರೆ. ನಾವು ಅವರ ಅಂ*ತಿಮ ದರ್ಶನ ಪಡೆಯಲು ಪ್ರಯತ್ನಿಸಿದೆವಾದ್ರೂ ಅದು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ.
ಡಾ. ಮನಮೋಹನ್ ಸಿಂಗ್ ಅವರು ಕಲಿತ ಗಾಹ್ ಗ್ರಾಮದ ಶಾಲೆಗೆ ಅವರ ಹೆಸರನ್ನು ಇರಿಸುವ ಬಗ್ಗೆ ಚರ್ಚೆಗಳನ್ನು ನಡೆಸಲಾಗಿದೆ. ಗ್ರಾಮದ ಹಿರಿಯರೆಲ್ಲರೂ ಸೇರಿ ಶೋ*ಕಾಚರಣೆ ಮಾಡಿದ್ದು ಈ ವೇಳೆ ಪಂಚಾಯತ್ ಪ್ರಮುಖರಲ್ಲಿ ಈ ಬೇಡಿಕೆಯನ್ನು ಇಟ್ಟಿದ್ದಾರೆ. ಬದುಕಿದ್ದಾಗ ಸಂಪರ್ಕದಲ್ಲಿ ಇದ್ರೂ ಮನಮೋಹನ್ ಸಿಂಗ್ ಅವರು ಈ ಗ್ರಾಮಕ್ಕೆ ಬರಲಾಗಿರಲಿಲ್ಲ. ಆದ್ರೆ ಮುಂದೆ ಅವರ ಕುಟುಂಬಸ್ಥರಾದ್ರೂ ಒಮ್ಮೆ ಭೇಟಿ ನೀಡಲಿ ಅಂತ ಗ್ರಾಮದ ಜನ ಮನವಿ ಮಾಡಿದ್ದಾರೆ.