Saturday, August 20, 2022

ನಾಳೆಯಿಂದ ಪ್ರಧಾನಿ ಮೋದಿ ಜರ್ಮನಿ-ಯುಎಇ ಪ್ರವಾಸ

ನವದೆಹಲಿ: ನಾಳೆಯಿಂದ ಪ್ರಧಾನಿ ಮೋದಿ ಜರ್ಮನಿ ಮತ್ತು ಅರಬ್ ಸಂಯುಕ್ತ ಸಂಸ್ಥಾನ (ಯುಎಇ) ಪ್ರವಾಸ ಕೈಗೊಳ್ಳಲಿದ್ದಾರೆ. ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು 12ಕ್ಕೂ ಹೆಚ್ಚು ವಿಶ್ವ ನಾಯಕರ ಜೊತೆ ಸಭೆ ನಡೆಸಲಿದ್ದಾರೆ.


ಮೋದಿ ಅವರು ಜೂನ್ 26 ಮತ್ತು 27ರಂದು ಜಿ–7 ರಾಷ್ಟ್ರಗಳ ಶೃಂಗದಲ್ಲಿ ಭಾಗವಹಿಸಲು ಜರ್ಮನಿ ಪ್ರವಾಸ ಕೈಗೊಂಡಿದ್ದಾರೆ. ಜೂನ್ 28ರಂದು ಯುಎಇಗೆ ಪ್ರಯಾಣಿಸಲಿದ್ದು, ಗಲ್ಫ್ ದೇಶದ ಮಾಜಿ ಅಧ್ಯಕ್ಷ ಶೇಖ್ ಖಲೀಫಾ ಬಿನ್ ಝಯಾದ್ ಅಲ್ ನಹ್ಯಾನ್ ಅವರ ಸಾವಿಗೆ ಸಂತಾಪ ಸೂಚಿಸಲಿದ್ದಾರೆ.
ಈ ಎರಡೂ ದೇಶಗಳ 60 ಗಂಟೆಗಳ ಈ ಪ್ರವಾಸದ ವೇಳೆ ಮೋದಿ ಅವರು ಜಿ-7 ಸದಸ್ಯ ರಾಷ್ಟ್ರಗಳ ಜೊತೆಗಷ್ಟೇ ಅಲ್ಲದೆ, 15ಕ್ಕೂ ಹೆಚ್ಚು ಬಿಡುವಿಲ್ಲದ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.

LEAVE A REPLY

Please enter your comment!
Please enter your name here

Hot Topics