Connect with us

50,000 ಕೋಟಿ ರೂಪಾಯಿ ವಿಶೇಷ ಉದ್ಯೋಗ ಯೋಜನೆಗೆ ಚಾಲನೆ ನೀಡಿದ ಪ್ರಧಾನಿ ಮೋದಿ…!!

Published

on

ಗರೀಬ್‌ ಕಲ್ಯಾಣ ರೋಜ್ ಗಾರ್ ಯೋಜನೆಗೆ ಚಾಲನೆ ನೀಡಿ ಪ್ರಧಾನಿ ನರೇಂದ್ರ ಮೋದಿ…

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ದೇಶದ ಆರು ರಾಜ್ಯಗಳ ಜನತೆಗಾಗಿಯೇ ರೂಪಿಸಿರುವ ಗರೀಬ್‌ ಕಲ್ಯಾಣ ರೋಜ್ ಗಾರ್ ಯೋಜನೆಗೆ ಚಾಲನೆ ನೀಡಿದ್ದಾರೆ.

ಈ ಸಂಬಂಧ ವಿಡಿಯೋ ಕಾನ್ಫರೆನ್ಸ್‌ ಮೂಲಕ ಬಿಹಾರದ ಕಗಾರಿಯಾ ಜಿಲ್ಲೆಯ ತೆಲಿಹಾರ್‌ನಲ್ಲಿ ಚಾಲನೆ ನೀಡಿದರು.

ಈ ಗರೀಬ್‌ ಕಲ್ಯಾಣ ಯೋಜನೆ ಆರು ರಾಜ್ಯಗಳ 116 ಜಿಲ್ಲೆಯಲ್ಲಿರುವ ವಲಸೆ ಕಾರ್ಮಿಕರಿಗಾಗಿ ರೂಪಿಸಲಾಗಿದೆ.

ಅದ್ರಲ್ಲೂ ವಿಶೇಷವಾಗಿ ದೇಶದ ವಿವಿಧೆಡೆ ಕೆಲಸ ಅರಸಿ ಹೋಗಿ ಕೊರೊನಾ ಸಮಯದಲ್ಲಿ ಹಿಂದಿರುಗಿ ಬಂದ ಕಾರ್ಮಿಕರಿಗಾಗಿ ಈ ಯೋಜನೆ ರೂಪಿಸಲಾಗಿದೆ.

ಅಂತಹವರಲ್ಲಿ ಈ 116 ಜಿಲ್ಲೆಗಳ ಕಾರ್ಮಿಕರೇ ಹೆಚ್ಚಿದ್ದಾರೆ. ಹೀಗಾಗಿ ಈ ಕಾರ್ಮಿಕರಿಗೆ ಅನುಕೂಲವಾಗಲೆಂದು ಈ ಯೋಜನೆ ರೂಪಿಸಲಾಗಿದೆ.

ಕರೊನಾ ಲಾಕ್ ​ಡೌನ್​ನಿಂದ ಲಕ್ಷಾಂತರ ವಲಸೆ ಕಾರ್ಮಿಕರು ಉದ್ಯೋಗ ಕಳೆದುಕೊಂಡಿದ್ದಾರೆ. ಹೊಟ್ಟೆ, ಬಟ್ಟೆಗಿಲ್ಲದೆ ಪರದಾಡುತ್ತಿದ್ದಾರೆ.

ಇದೀಗ ದೇಶ ಅನ್​ಲಾಕ್​ ಮೊದಲನೇ ಹಂತದಲ್ಲಿದ್ದು, ವಲಸೆ ಕಾರ್ಮಿಕರ ಹಿತರಕ್ಷಣೆ, ಉದ್ಯೋಗವನ್ನು ಕೇಂದ್ರ ಸರ್ಕಾರ ಮೊದಲ ಆದ್ಯತೆಯಾಗಿ ಪರಿಗಣಿಸಿದೆ.

ಅದರ ಅಂಗವಾಗಿ ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ‘ಗರೀಬ್​ ಕಲ್ಯಾಣ್​ ರೋಜ್ ​ಗಾರ್​ ಅಭಿಯಾನ್’ ಯೋಜನೆಯನ್ನು ಉದ್ಘಾಟಿಸಿದ್ದಾರೆ.

ಕೆಲಸ ಕಳೆದುಕೊಂಡು ತಮ್ಮ ಊರುಗಳಿಗೆ ವಾಪಸ್ ಆಗಿರುವ ವಲಸೆ ಕಾರ್ಮಿಕರಿಗೆ ಉದ್ಯೋಗ ಸೃಷ್ಟಿಸುವ ಯೋಜನೆ ಇದು.

ಇದಕ್ಕಾಗಿ 50,000 ಕೋಟಿ ರೂಪಾಯಿಯನ್ನು ಕೇಂದ್ರ ಸರ್ಕಾರ ಮೀಸಲಾಗಿಟ್ಟಿದೆ.

ಇಂದು ಯೋಜನೆಯ ಉದ್ಘಾಟನೆ ಮಾಡಿದ ಮೋದಿಯವರು ಮಾತನಾಡಿ, ಒಂದೊಂದು ಪಟ್ಟಣಗಳ ಅಭಿವೃದ್ಧಿಯಲ್ಲೂ ವಲಸೆ ಕಾರ್ಮಿಕರ ಕೊಡುಗೆ ಅಪಾರ.

ಆದರೆ ಲಾಕ್​ಡೌನ್​ ಅವಧಿಯಲ್ಲಿ ಅವರು ತುಂಬ ಕಷ್ಟಪಟ್ಟಿದ್ದಾರೆ. ವಲಸೆ ಹೋಗಿದ್ದ ಊರಿನಲ್ಲಿ ಕೆಲಸವಿಲ್ಲದೆ, ವಾಪಸ್​ ತಮ್ಮ ಊರಿಗೆ ಬಂದಿದ್ದಾರೆ.

ಇದೀಗ ಅವರು ಇರುವಲ್ಲಿಯೇ ಉದ್ಯೋಗ ಸೃಷ್ಟಿಸಲು ಗರೀಬ್​ ಕಲ್ಯಾಣ್​ ರೋಜ್​ಗಾರ್​ ಯೋಜನೆ ಸಹಕಾರಿಯಾಗಲಿದೆ ಎಂದು ತಿಳಿಸಿದರು.

ಬಡಜನರ ಜೀವನ, ಕಲ್ಯಾಣಕ್ಕಾಗಿ ಯೋಜನೆಯೊಂದು ಶುರುವಾದ ಈ ದಿನ ಒಂದು ಐತಿಹಾಸಿಕ ದಿನವಾಗಿದೆ. ನನ್ನ ಕಾರ್ಮಿಕ ಸ್ನೇಹಿತರ ಅಗತ್ಯಗಳನ್ನು, ಭಾವನೆಗಳನ್ನು ನಾವು ಅರ್ಥ ಮಾಡಿಕೊಂಡಿದ್ದೇವೆ ಎಂದು ಹೇಳಿದ್ದಾರೆ.

ಗರೀಬ್​ ಕಲ್ಯಾಣ್​ ರೋಜ್​ಗಾರ್​ ಅಭಿಯಾನವು ಬಿಹಾರದಿಂದ ಪ್ರಾರಂಭವಾಗಲಿದೆ.

ಇಷ್ಟು ದಿನ ಬೇರೆ ರಾಜ್ಯ, ಊರುಗಳಿಗೆ ಹೋಗಿ, ಅಲ್ಲಿನ ಪಟ್ಟಣಗಳ ಅಭಿವೃದ್ಧಿಗೆ ಕಾರಣರಾಗುತ್ತಿದ್ದ ವಲಸಿಗರು, ಇನ್ನು ಮುಂದೆ ಅವರದ್ದೇ ಹಳ್ಳಿ, ನೆರೆಯ ಊರುಗಳ ಕಲ್ಯಾಣಕ್ಕಾಗಿ ಶ್ರಮಿಸಲಿದ್ದಾರೆ ಎಂದಿದ್ದಾರೆ.

Click to comment

Leave a Reply

Your email address will not be published. Required fields are marked *

LATEST NEWS

ಬೆಂಕಿ ಹಚ್ಚಿ ಯುವತಿಯ ಬರ್ಬ*ರ ಹ*ತ್ಯೆ..!! ಕತ್ತು ಕೊಯ್ದು ಸು*ಟ್ಟು ಹಾಕಿರುವ ಶಂಕೆ

Published

on

ಬೆಳಗಾವಿ: 25 ರಿಂದ 30 ವರ್ಷದ ಯುವತಿಯೊಬ್ಬಳನ್ನು ಬರ್ಬರವಾಗಿ ಹ*ತ್ಯೆ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕದಲ್ಲಿ ನಡೆದಿದೆ. ಇಲ್ಲಿನ ಗ್ರಾಮೀಣ ಪೊಲೀಸ್ ಠಾಣ ವ್ಯಾಪ್ತಿಯ ಮಮದಾಪುರ ಗ್ರಾಮದಲ್ಲಿ ಈ ಕೃತ್ಯ ನಡೆದಿದ್ದು ಕೊ*ಲೆ ಮಾಡಿದವರಾರು? ಹ*ತ್ಯೆ ಆದವಳು ಯಾರು? ಎಂಬುದಾಗಲಿ ಗೊತ್ತಾಗಿಲ್ಲ. ನಿನ್ನೆ(ಎ.18) ಮಧ್ಯಾಹ್ನ 2 ಗಂಟೆ ಸುಮಾರಿಗೆ ಕಾಲುವೆ ಪಕ್ಕದಲ್ಲಿ ಹೊಗೆಯಾಡುತ್ತಿರುವುದನ್ನು ಜನರು ಗಮನಿಸಿದ್ದಾರೆ. ಬಿಸಿಲಿನ ತಾಪಕ್ಕೆ ಹುಲ್ಲು ಇರುವ ಜಾಗಕ್ಕೆ ಬೆಂಕಿ ಬಿದ್ದಿರಬಹುದು ಎಂದು ಕೆಲವರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದಾಗ ಯುವತಿಯ ಮೃತದೇಹ ಕಂಡು ಬಂದಿದೆ.

murder

ಯುವತಿಯ ಕತ್ತು ಕೊಯ್ದು ಬಳಿಕ ಆಕೆಯ ಗುರುತು ಪತ್ತೆಯಾಗದಂತೆ ಸುಟ್ಟು ಹಾಕಿರಬೇಕು ಎಂದು ಅಂದಾಜಿಸಲಾಗಿದೆ. ಸ್ಥಳಕ್ಕೆ ವಿಧಿ ವಿಜ್ಞಾನ ತಂಡ ಹಾಗೂ ಪೊಲೀಸರು ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ. ಯುವತಿಯನ್ನು ಬೇರೆಡೆ ಕೊಲೆ ಮಾಡಿ ಇಲ್ಲಿ ತಂದು ಸುಟ್ಟು ಹಾಕುವ ಪ್ರಯತ್ನ ನಡೆದಿರಬಹುದು ಎಂದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಆದರೆ ಈ ಯುವತಿ ಯಾರು ಹಾಗೂ ಯಾರು ಕೊಲೆ ಮಾಡಿದ್ದಾರೆ ಅನ್ನೋದು ತನಿಖೆಯಿಂದ ಗೊತ್ತಾಗಬೇಕಾಗಿದೆ.

Read More..: ಉಡುಪಿಯಲ್ಲಿ ಭೀಕರ ಅಪಘಾ*ತ; ಲಾರಿಯಡಿ ಸಿಲುಕಿ ಬೈಕ್ ಸವಾರ ಸಾ*ವು

Continue Reading

LATEST NEWS

ಉಡುಪಿಯಲ್ಲಿ ಭೀಕರ ಅಪಘಾ*ತ; ಲಾರಿಯಡಿ ಸಿಲುಕಿ ಬೈಕ್ ಸವಾರ ಸಾ*ವು

Published

on

ಉಡುಪಿ : ಲಾರಿಯಡಿ ಸಿಲುಕಿ ಬೈಕ್ ಸವಾರ ಸಾ*ವನ್ನಪ್ಪಿರುವ ಘಟನೆ ಉಡುಪಿಯ ಹೇರೂರಿನ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ. ಕೃಷ್ಣ ಗಾಣಿಗ ಮೃ*ತ ದುರ್ದೈವಿ. ಉಡುಪಿ ನಗರ ಸಭೆಯಲ್ಲಿ ಎಲೆಕ್ಟ್ರಿಷನ್ ಆಗಿ ಕೃಷ್ಣ ಕೆಲಸ ಮಾಡುತ್ತಿದ್ದರು. ಸಂತೆಕಟ್ಟೆ ಮಾರ್ಗವಾಗಿ ಬ್ರಹ್ಮಾವರದ ಕಡೆಗೆ ಸಾಗುತ್ತಿದ್ದಾಗ ಎದುರಿನಿಂದ ಬರುತ್ತಿದ್ದ ಲಾರಿ ಅಡಿಗೆ ಸಿಲುಕಿ ಸ್ಥಳದಲ್ಲೇ ಸಾ*ವನ್ನಪ್ಪಿದ್ದಾರೆ.

ಲಾರಿ ಕೃಷ್ಣ ಅವನ್ನು ಕೆಲ ದೂರ ಎಳೆದೊಯ್ದಿದೆ ಎಂದು ತಿಳಿದು ಬಂದಿದೆ. ಘಟನೆ ಬಳಿಕ ರಸ್ತೆಯಲ್ಲಿ ಕೆಲ ಕಾಲ ಸಂಚಾರ ದಟ್ಟನೆ ಉಂಟಾಗಿತ್ತು.

ಬ್ರಹ್ಮಾವರ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು, ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

Continue Reading

DAKSHINA KANNADA

ಮಂಡ್ಯದಲ್ಲಿ ಅವಳಿ ಮಕ್ಕಳ ಸಾ*ವಿನ ಪ್ರಕರಣಕ್ಕೆ ಟ್ವಿಸ್ಟ್..! ತಾಯಿಯಿಂದ ಕೃತ್ಯ..!

Published

on

ಮಂಗಳೂರು,(ಮಂಡ್ಯ): ಮಂಡ್ಯದಲ್ಲಿ ಐಸ್‌ ಕ್ರೀಮ್‌ ತಿಂದು ಅವಳಿ ಮಕ್ಕಳು ಸಾವನ್ನಪ್ಪಿದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್‌ ಸಿಕ್ಕಿದೆ. ಬುಧವಾರ ಅವಳಿ ಮಕ್ಕಳು ಸಾವನ್ನಪ್ಪಿದ್ದರು. ಐಸ್ ಕ್ರೀಂ ತಿಂದು ಮಕ್ಕಳು ಇಹಲೋಕ ತ್ಯಜಿಸಿವೆ ಎನ್ನಲಾಗಿತ್ತು. ಆದರೆ, ಮರಣೋತ್ತರ ಪರೀಕ್ಷೆ ಬಳಿಕ ಸತ್ಯಾಂಶ ಬಯಲಾಗಿದೆ. ತಾಯಿಯೇ ಮಕ್ಕಳಿಗೆ ವಿಷ ಹಾಕಿ ಸಾಯಿಸಿದ್ದಾಳೆ ಎನ್ನುವುದು ಖಚಿತವಾಗಿದೆ.

ಹೆತ್ತ ಮಕ್ಕಳಿಗೆ ವಿಷವಿಕ್ಕಿದ ತಾಯಿ!

ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಬೆಟ್ಟಹಳ್ಳಿ ಗ್ರಾಮದ ಪೂಜಾ ಹಾಗೂ ಪ್ರಸನ್ನ ದಂಪತಿಗಳ ಒಂದೂವರೆ ವರ್ಷದ ಅವಳಿ ಕಂದಮ್ಮಗಳು ಸಾವನ್ನಪ್ಪಿದ್ದವು.

ಪೊಲೀಸ್‌ ತನಿಖೆಯ ಬಳಿಕ ತಾಯಿ ಪೂಜಾಳೇ ಮೂವರು ಮಕ್ಕಳಿಗೆ ವಿಷ ಹಾಕಿದ್ದಾಳೆಂಬುದು ಗೊತ್ತಾಗಿದೆ.

ತ್ರಿಶುಲ್, ತ್ರಿಶ ಅವಳಿ ಮಕ್ಕಳು ಹಾಗೂ ಮಗಳು ಬೃಂದಾಗೆ ಪೂಜಾ ಹಾಕಿದ್ದಳು. ಬಳಿಕ ಐಸ್ ಕ್ರೀಂ ತಿಂದು ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಬಿಂಬಿಸಲಾಗಿತ್ತು. ಇದೀಗ ಪೊಲೀಸ್ ವಿಚಾರಣೆ ವೇಳೆ ಸತ್ಯಾಂಶ ಬಯಲಾಗಿದೆ.

ಪೂಜಾ ಪತಿ ಪ್ರಸನ್ನ ಪದೇ ಪದೇ ಜಗಳವಾಡುತ್ತಿದ್ದರು. ಈ ಜಗಳದಿಂದ ಬೇಸತ್ತು ಬುಧವಾರ ಮಕ್ಕಳಿಗೆ ತಾಯಿ ವಿಷ ಉಣಿಸಿದ್ದಾಳೆ. ಬಳಿಕ ತಾನೂ ಸೇವಿಸಿದ್ದಳು. ಕೂಡಲೇ ಮಕ್ಕಳು ಹಾಗೂ ಪೂಜಾಳನ್ನು ಮಂಡ್ಯ‌ ಮಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿ, ಆಸ್ಪತ್ರೆಯಲ್ಲಿ ಅವಳಿ ಜವಳಿ ಕಂದಮ್ಮಗಳು ಕೊನೆಯುಸಿರೆಳೆದಿದ್ದವು.

ಸದ್ಯ ತಾಯಿ ಹಾಗೂ ಮೊದಲ ಮಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Continue Reading

LATEST NEWS

Trending