DAKSHINA KANNADA
ಮುಸ್ಲಿಂರಿಗೆ ಹಿಂಸಿಸುವುದನ್ನು ನಿಲ್ಲಿಸಿ ಅಥವಾ ಭಾರತವನ್ನು ಹಿಂದುಗಳ ದೇಶ ಎಂದೇ ಡಿಕ್ಲೇರ್ ಮಾಡಿ-ಮೊಹಮ್ಮದ್ ಮಸೂದ್ ಆಕ್ರೋಶ
ಮಂಗಳೂರು: ಹಿಜಾಬ್ ಬಳಿಕ, ದೇವಸ್ಥಾನ ಆಯ್ತು, ಪೂಜೆ ಆಯ್ತು, ಅಂಗಡಿ ವ್ಯಾಪಾರ ಬಂದ್ ಮಾಡಿ ಆಯ್ತು… ಈಗ ಮಸೀದಿಯಲ್ಲಿ ಬಾಂಗ್ ಕೊಡಬಾರದು ಎಂದು ಹಿಂದು ಸಂಘಟನೆಗಳು ಮುಂದಾಗಿವೆ. ಇದು ಎಲ್ಲಿಯವರೆಗೆ ಮುಟ್ಟಲಿದೆ ಸ್ವಾಮಿ…? ಇದು ಹಿಂದುಗಳ ದೇಶ ಎಂದೇ ನೀವು ಡಿಕ್ಲೇರ್ ಮಾಡಿ ಎಂದು ಮುಸ್ಲಿಂ ಸೆಂಟ್ರಲ್ ಕಮಿಟಿ ಅಧ್ಯಕ್ಷ ಕೆ ಎಸ್ ಮೊಹಮ್ಮದ್ ಮಸೂದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂದು ಬೆಳಿಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು ನಮ್ಮದು ಪ್ರಜಾಪ್ರಭುತ್ವ ದೇಶ. ಇಲ್ಲಿ ಮುಸ್ಲಿಮರ ವಿಚಾರ ಏನೂ ಇರಕೂಡದು ಎಂದು ನೀವು ಡಿಕ್ಲೇರ್ ಮಾಡಿಬಿಡಿ. ಲೌಡ್ ಸ್ಪೀಕರ್ ಇಡಿ…ಆದರೆ ಮಾಲಿನ್ಯಗೋಸ್ಕರ ಇದನ್ನು ಇಡಬೇಡಿರಿ ಎಂದು ಸಚಿವ ಈಶ್ವರಪ್ಪ ಹೇಳಿದ್ದಾರೆ. ಅವರ ಹೇಳಿಕೆಗೆ ಅಭಿನಂದಿಸುತ್ತೇನೆ. ಮಾಲಿನ್ಯ ಎಂದರೆ ಏನು..? ನಿಮಗೆ ಧ್ವನಿ ವರ್ಧಕದಿಂದ ಮಾಲಿನ್ಯ ಆಗುತ್ತಿದೆಯೇ ಸ್ವಾಮಿ..? ಪಟಾಕಿ ಹೊಡೆದರೂ ಮಾಲಿನ್ಯ ಅಲ್ಲವೇ..? ದೇವಸ್ಥಾನದ ಗಂಟೆ ಜಾಗಟೆ , ಪಟಾಕಿ ಸಿಡಿಸುವುದು ಕೂಡ ಶಬ್ಧ ಮಾಲಿನ್ಯ ಅಲ್ಲವಾ…?
ಅಲ್ಲಾನಿಗೆ ಪ್ರತಿಯಾಗಿ ನಾವು ರಾಮ ಜಪ ಕೂಗುತ್ತೇವೆ ಎಂದು ಮುತಾಲಿಕ್ ಹೇಳಿದ್ದಾರೆ. ನೀವು ಕೂಗಿ ಸ್ವಾಮಿ ಮಾಡಿ…ನಮ್ಮದೇನೂ ಅಡ್ಡಿ ಇಲ್ಲಾ. ಎಂದು ವಾಗ್ದಾಳಿ ನಡೆಸಿದರು.
ಇನ್ನು ಸಚಿವ ಬಿ ಸಿ ಪಾಟೀಲ್ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದ ಅವರು ಧ್ವನಿ ವರ್ಧಕದ ವಿರುದ್ಧ ಕ್ರಮಕ್ಕೆ ಪೊಲೀಸರಿಗೆ ಸೂಚಿಸಿದ್ದೇನೆ ಎಂದು ಹೇಳಿದ್ದಾರೆ. ನೀವು ದೇವಸ್ಥಾನದಲ್ಲಿ ಗಂಟೆ ಹೊಡೆದರೆ ಕಿರಿಕಿರಿ ಆಗಲ್ವಾ, ಓಟು ಕೇಳಿಕೊಂಡು ಮನೆ ಮನೆಗೆ ಹೋಗಲ್ವಾ ಅದು ಮಾಲಿನ್ಯ ಅಲ್ಲವಾ?
ಮಾಲಿನ್ಯ ಎಂದು ಹೇಳುತ್ತಾರಲ್ವ ಹಾಗಾದ್ರೆ ನೀರುಳ್ಳಿ ಯಾಕೆ ತಿನ್ತೀರಿ. ಅದರ ಫಲವತ್ತತೆಗೆ ಗೊಬ್ಬರಕ್ಕೆ ಮೂತ್ರದಂತಹ ಅನೇಕ ಮಾಲಿನ್ಯಕಾರಿ ಅಂಶ ಎಲ್ಲಾನೂ ಹಾಕ್ತಾರೆ ಅದು ತಿನ್ನಲೇಬಾರದು ಎಂದರು.
ರಮಾನಾಥ ರೈ’ಕೋಮು ಮತ್ತು ದ್ವೇಷ ಆಕಾಶದ ಎತ್ತರಕ್ಕೆ ಹೊಗುವ ಮೊದಲು ಎಚ್ಚೆತ್ತುಕೊಳ್ಳಿ’ ಎಂದು ಹೇಳ್ತಾರೆ. ಹೌದು, ಆಕಾಶದ ಎತ್ತರ ಹೋದರೆ ಅದು ಸಮುದ್ರಕ್ಕೆ ಬೀಳುತ್ತದೆ ನೋಡಿ. ನಾನು ದೇವರ ಹತ್ರ ಒಂದೇ ಕೇಳೋದು ನಮ್ಮ ಸರ್ಕಾರ, ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಳ್ಳಲಿ, ಪೊಲೀಸ್ ಕಮಿಷನರ್ ಎಚ್ಚೆತ್ತುಕೊಳ್ಳಲಿ ಎಂದು.
ಡೀಸೆಲ್ , ಪೆಟ್ರೋಲ್ ಬೆಲೆ ಏರಿಕೆಯ ವಿಚಾರದ ಬಗ್ಗೆ ಮಾತನಾಡಿದ ಅವರು ‘ಈ ಹಣ್ಣಿನ ಗಲಾಟೆ ಬಿಟ್ಟು ಬೆಲೆ ಇಳಿಸುವ ಕೆಲಸ ಮಾಡಲಿ. ಇವತ್ತು ನೋಡಿ ರಮಾನಾಥ ರೈಗೆ ಬಹಳ ಒಳ್ಳೆ ಬುದ್ಧಿ ಬಂದಿದೆ. ಸರಿ ದಾರಿಯಲ್ಲಿ ನಡೆಯುತ್ತಿದ್ದಾರೆ. ಇಂತಹ ವಿಚಾರದಲ್ಲಿ ಯಾವುದೂ ಇಲ್ಲ. ಪಕ್ಷವೂ ಇಲ್ಲ, ಹೆಣವೂ ಇಲ್ಲ. ನೀವು ನಡೆಯುತ್ತಿರುವ ದಾರಿಯಲ್ಲಿ ಮುನ್ನಡೆಯಿರಿ, ನಿಮ್ಮ ಹಿಂದೆ ನಾವಿದ್ದೇವೆ’ ಎಂದು ಹೇಳಿದರು.
ಇನ್ನು ಕಲ್ಲಡ್ಕ ಪ್ರಭಾಕರ್ ಭಟ್ ಬಗ್ಗೆ ಮಾತನಾಡಿದ ಅವರು ‘ ಕಲ್ಲಡ್ಕ ಭಟ್ರು ತುಂಬಾ ಒಳ್ಳೆ ಮನುಷ್ಯ. ಅವ್ರು ಭಟ್ರು ಹಾಗೆಯೇ ಡಾಕ್ಟ್ರು ಅವರು, ಒಳ್ಳೆ ಕೆಲಸ ಮಾಡುತ್ತಿದ್ದಾರೆ. ನಾವು ಯಾರಿಗೂ ಕೇಡು ಬಯಸುವುದಿಲ್ಲ. ಕೆಟ್ಟದನ್ನು ದೇವರು ನೋಡ್ತಾರೆ. ಅವರನ್ನು ಅಲ್ಲಾ ಕಾಪಾಡಲಿ. ದೇವರು ಅವರಿಗೆ ಆಶೀರ್ವಾದ ಮಾಡಲಿ’ ಎಂದು ಹೇಳಿದರು.
ಇದೀಗ ಮಾವಿನ ಹಣ್ಣು ತೆಗೆದುಕೊಳ್ಳಬೇಡಿರಿ ಎಂದು ಹೇಳಿದ್ದಾರೆ. ಇದೇನು ಸ್ವಾಮಿ..? ಇದು ಈ ರೀತಿ ಮುಂದುವರೆದರೆ ಯಾವ ಹಂತಕ್ಕೆ ಹೋಗಬಹುದು. ಅದೇನೇ ಆದರೂ ನಮ್ಮದು ರಂಜಾನ್ ಹಬ್ಬದ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯಬಾರದು. ಪೊಲೀಸರು ಎಲ್ಲಾ ಮಸೀದಿಗಳಿಗೂ ಭದ್ರತೆ ನೀಡಬೇಕು ಎಂದು ಮನವಿ ನೀಡಿದ್ದೇವೆ ಎಂದರು.
bangalore
ದೈವಕೋಲ ವೀಕ್ಷಣೆಗೆ ಟೂರ್ ಪ್ಯಾಕೇಜ್ – ತುಳುವರ ಧಾರ್ಮಿಕ ಭಾವನೆಗೆ ಪೆಟ್ಟು..!
ಬೆಂಗಳೂರು: ತುಳುನಾಡಿನ ದೈವರಾಧನೆಯನ್ನು ಇದೀಗ ಬೆಂಗಳೂರಿನ ಟೂರ್ ಪ್ಯಾಕೇಜ್ ಸಂಸ್ಥೆಯೊಂದು ವ್ಯವಹಾರ ಮಾಡಲು ಹೊರಟಿದೆ. ತುಳುನಡಿನ ಜನರ ನಂಬಿಕೆಯಿಂದ ದೈವರಾಧನೆ, ಭೂತಕೋಲಗಳನ್ನು ಉಳಿಸಿ ಬೆಳೆಸಿಕೊಂಡು ಬಂದರೆ ಇತ್ತ ಇದರ ಬ್ಯುಸಿನೆಸ್ ಶುರುವಾಗಿದೆ. ಇದರ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗತ್ತಿದ್ದು, ತುಳುನಾಡ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭೂತಕೋಲ ಎಂಬ ಪೋಸ್ಟರ್ ರೆಡಿ ಮಾಡಿ ಅದನ್ನು ಫೇಸ್ಬುಕ್, ಇನ್ಸ್ಟಾಗ್ರಾಮ್ ಗಳಲ್ಲಿ ಶೇರ್ ಮಾಡಿದ್ದಾರೆ. ಟ್ರಾವೆಲ್ ಸಂಸ್ಥೆಯೊಂದು 2024ರ ಫೆ. 10 ಹಾಗೂ 11ರಂದು ಎರಡು ದಿನದ ಟೂರ್ ಪ್ಯಾಕೇಜ್ ಅನ್ನು ಹಮ್ಮಿಕೊಂಡಿದೆ. ಅದರಲ್ಲಿ ನದಿ ಬೋಟಿಂಗ್, ಉಪ್ಪಿನಂಗಡಿ ಕಂಬಳ, ಬೊಳ್ಳಾಡಿ ಫಾರ್ಮ್ ಪಾರ್ಟಿ, ಬೊಳ್ಳಾಡಿ ಮನೆಯಲ್ಲಲಿ ಭೂತಕೋಲ, ಬೀರಮಲೆ ಬೆಟ್ಟ ಟ್ರಕ್ಕಿಂಗ್ ಇರಲಿದೆ ಎಂದು ಬರೆದುಕೊಂಡಿದ್ದಾರೆ. ಟೂರ್ ಪ್ಯಾಕೇಜ್ ನ ಮೊತ್ತ ಒಬ್ಬನಿಗೆ 2899 ರೂ. ಆಗಿರುತ್ತದೆ. ಅಲ್ಲದೆ ಆ ಪೋಸ್ಟರ್ ನಲ್ಲಿ ಬುಕ್ ಶೋ ನಲ್ಲಿ ಬುಕ್ ಮಾಡಿ ಎಂದು ಹಾಕಲಾಗಿದೆ. ಈಗಾಗಲೇ ಹಲವರು ಬುಕ್ ಮಾಡಿದರೆನ್ನಲಾಗಿದೆ. ಈ ಪೋಸ್ಟರ್ ನೋಡಿದ ಹಲವು ನೆಟ್ಟಿಗರು ಕಮೆಂಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದು, ನಮ್ಮ ತುಳುನಾಡಿನ ಭೂತರಾಧನೆ ಟೂರ್ ಪ್ಯಾಕೇಜ್ ಆಗಬಾರದು, ದೈವದ ಮೇಲೆ ಇರುವ ನಂಬಿಕೆಗೆ ಬೆಲೆ ಇಲ್ಲದಂತಾಗುತ್ತದೆ ಎಂದು ಕಮೆಂಟ್ ಮಾಡಿದ್ದಾರೆ.
BANTWAL
Bnatwala: ಡಿ.3ರಂದು ಅಕ್ಷಯ ಪಾತ್ರ ಪ್ರತಿಷ್ಠಾನದ ಕೇಂದ್ರೀಕೃತ ಅಡುಗೆ ಮನೆ ಉದ್ಘಾಟನೆ
ಬಂಟ್ವಾಳ: ಅಕ್ಷಯ ಪಾತ್ರ ಫೌಂಡೇಶನ್ ಇದರ ಅಡುಗೆ ಮನೆಯ ಉದ್ಘಾಟನಾ ಸಮಾರಂಭವು ಡಿ. 3 ರಂದು ಬೆಂಜನಪದವು ಕೆನರಾ ಇಂಜಿನಿಯರಿಂಗ್ ಕಾಲೇಜು ಸಮೀಪ ನಡೆಯಲಿದೆ.
ಅಕ್ಷಯ ಫೌಂಡೇಶನ್ ಮಕ್ಕಳ ಹಸಿವನ್ನು ಹೋಗಲಾಡಿಸುವ ತನ್ನ ಅಚಲವಾದ ಕಾರ್ಯಕ್ಕೆ ಹೆಸರುವಾಸಿಯಾಗಿದ್ದು, ಮಂಗಳೂರಿನಲ್ಲಿ ತನ್ನ ಕೇಂದ್ರೀಕೃತ ಅಡುಗೆ ಮನೆಯ ಉದ್ಘಾಟನೆಯೊಂದಿಗೆ ಮಹತ್ವದ ಮೈಲಿಗಲ್ಲು ತಲುಪಿದೆ. ದಾನಿಗಳಾದ ಜಿಟಿ ಫೌಂಡೇಶನ್ ಮತ್ತು ದಿಯಾ ಸಿಸ್ಟಮ್ಸ್ (ಮಂಗಳೂರು) ಪ್ರೈ.ಲಿ. ಲಿಮಿಟೆಡ್‌ನ ವಿಜಯ್ ಮತ್ತು ಶಾಮ ಕೇಡಿಯಾ, ದಿವಂಗತ ಡಾ. ವಿ ರವಿಚಂದ್ರನ್ ಅವರ ನಿರಂತರ ಬೆಂಬಲ ಮತ್ತು ದೂರದೃಷ್ಟಿ ಕೊಡುಗೆಯೇ ಈ ಅಡುಗೆ ಮನೆಯಾಗಿದೆ. ಈ ಸಮಾರಂಭವು ಉಡುಪಿಯ ಪುತ್ತಿಗೆ ಮಠದ ಜಗದ್ಗುರು ಶ್ರೀ ಮಧ್ವಾಚಾರ್ಯ ಮೂಲ ಮಹಾ ಸಂಸ್ಥಾನದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ನಡೆಯಲಿದೆ.
ಈ ಉದ್ಘಾಟನಾ ಸಮಾರಂಭದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ಕರ್ನಾಟಕ ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್, ಬೆಂಗಳೂರಿನ ಸೆಂಚುರಿ ರಿಯಲ್ ಎಸ್ಟೇಟ್ ಗ್ರೂಪ್‌ನ ಅಧ್ಯಕ್ಷ ಡಾ. ಪಿ ದಯಾನಂದ ಪೈ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎಂ.ಪಿ.ಮುಲ್ಲೈ ಮುಹಿಲನ್, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಿಇಒ ಡಾ. ಆನಂದ ಕೆ, ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಅಕ್ಷಯ ಪಾತ್ರ ಪ್ರತಿಷ್ಠಾನದ ಅಧ್ಯಕ್ಷ ಮಧು ಪಂಡಿತ್ ದಾಸ ಮತ್ತು ಅಕ್ಷಯ ಪಾತ್ರ ಫೌಂಡೇಶನ್‌ನ ಉಪಾಧ್ಯಕ್ಷ ಚಂಚಲಪತಿ ದಾಸ ಅವರು ಉಪಸ್ಥಿತರಿರುವರು.
124 ಸರ್ಕಾರಿ ಮತ್ತು 41 ಸರ್ಕಾರಿ ಅನುದಾನಿತ ಸಂಸ್ಥೆಗಳು ಸೇರಿದಂತೆ 165 ಕ್ಕೂ ಹೆಚ್ಚು ಶಾಲೆಗಗಳಿಗೆ ಅಗತ್ಯ ಪೌಷ್ಟಿಕಯುತವಾದ 25,000 ಊಟವನ್ನು ಉತ್ಪಾದಿಸುವ ಸಾಮರ್ಥ್ಯದೊಂದಿಗೆ ಈ ಅಡುಗೆಕೋಣೆ ರೂಪುಗೊಂಡಿದೆ. ಅಡುಗೆಮನೆಯ ವೈವಿಧ್ಯಮಯ ಮೆನುವು ಸಮತೋಲಿತ ಪೋಷಣೆಯನ್ನು ಖಾತ್ರಿಗೊಳಿಸುತ್ತದೆ. ಸೌರಶಕ್ತಿ ಮತ್ತು ಸ್ವಚ್ಛ ಎಲ್ಪಿಜಿ ಯೊಂದಿಗೆ ಪರಿಸರಸ್ನೇಹಿ ಅಡುಗೆಮನೆ ಇದಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
DAKSHINA KANNADA
Sullia: ನದಿಗೆ ಸ್ನಾನಕ್ಕೆ ತೆರಳಿದ ವ್ಯಕ್ತಿ ಶವವಾಗಿ ಪತ್ತೆ..!
ಸುಳ್ಯ: ನದಿಗೆ ಸ್ನಾನಕ್ಕೆಂದು ಹೋದ ವ್ಯಕ್ತಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಸುಳ್ಯದಲ್ಲಿ ನಡೆದಿದೆ.
ಮೃತಪಟ್ಟ ವ್ಯಕ್ತಿ ಎರಡನೇ ಮಣ್ಣಗೇರಿಯ ನಿವಾಸಿ ವೆಂಕಟರಮಣ ಎಂದು ಗುರುತಿಸಲಾಗಿದೆ.
ಸುಳ್ಯದಲ್ಲಿರುವ ಆರಂಬೂರು ಸೇತುವೆ ಬಳಿಯ ಪಯಸ್ವಿನಿ ನದಿಗೆ ಸ್ನಾನಕ್ಕೆಂದು ಹೋದ ವ್ಯಕ್ತಿಯು ಕಾಣೆಯಾಗಿದ್ದಾರೆ. ಬಳಿಕ ಅವರ ಹುಡುಕಾಟ ನಡೆಸಲಾಗಿದೆ. ಆದರೆ ಎಷ್ಟು ಹುಡುಕಾಟ ನಡೆಸಿದರೂ ಸಿಕ್ಕಿರಲಿಲ್ಲ. ಆ ಕಾರಣದಿಂದ ಸುಳ್ಯದ ಪೈಚಾರ್ ನ ಮುಳುಗು ತಜ್ಞರ ತಂಡವು ಸ್ಥಳಕ್ಕೆ ಆಗಮಿಸಿ ಮೃತದೇಹವನ್ನು ಮೇಳಕ್ಕೆತ್ತುವಲ್ಲಿ ಯಶಸ್ವಿಯಾಗಿದೆ. ಸುಳ್ಯ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ