Connect with us

KADABA

” ಪ್ಲೀಸ್ ಹೆಲ್ಪ್ ಮಿ ” ಉಕ್ರೇನ್ ನಲ್ಲಿ ಸಿಲುಕಿರುವ ಸುಳ್ಯದ ಎಂಬಿಬಿಎಸ್ ವಿದ್ಯಾರ್ಥಿನಿ ವೀಡಿಯೊ ಮೂಲಕ ಮನವಿ

Published

on

ಸುಳ್ಯ / ಉಕ್ರೇನ್ : ಯುದ್ಧಪೀಡಿತ ಉಕ್ರೇನ್ ನಲ್ಲಿ ಎಂ.ಬಿ.ಬಿ.ಎಸ್ . ವಿದ್ಯಾರ್ಥಿನಿಯಾಗಿರುವ ಸುಳ್ಯದ ಐವರ್ನಾಡಿನ ಸಾಕ್ಷಿ ಸುಧಾಕರ್ ಸುರಕ್ಷಿತವಾಗಿದ್ದು ಸ್ವದೇಶಕ್ಕೆ ಮರಳುವ ನಿರೀಕ್ಷೆಯಲ್ಲಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಐವರ್ನಾಡಿನ ಸುಧಾಕರ ಅವರ ಪುತ್ರಿಯಾಗಿರುವ ಸಾಕ್ಷಿಯವರು ಉಕ್ರೇನ್ ನ ಯುನಿವರ್ಸಿಟಿಯಲ್ಲಿ ನಾಲ್ಕನೇ ವರ್ಷದ ವೈದ್ಯಕೀಯ ವಿದ್ಯಾರ್ಥಿನಿಯಾಗಿದ್ದು ಯುದ್ಧದ ಹಿನ್ನೆಲೆಯಲ್ಲಿ ಸ್ವದೇಶಕ್ಕೆ ಮರಳಲು ಸಿದ್ದರಾಗಿದ್ದಾರೆ.

ಸಾಕ್ಷಿ ಸಹಿತ ಸುಮಾರು 300 ವಿದ್ಯಾರ್ಥಿಗಳು ಬಸ್ ನಲ್ಲಿ ಮಿಕೈರಾವ್ ತಲುಪಿದ್ದು ಅಲ್ಲಿಂದ ವಿಮಾನದ ಮೂಲಕ ಭಾರತ ತಲುಪಲಿದ್ದಾರೆ ಎಂದು ತಿಳಿದುಬಂದಿದೆ.

ಸಾಕ್ಷಿಯವರು ಉಕ್ರೇನ್ ನಲ್ಲಿ ತಾನು ತಂಗಿರುವ ಬಂಕರ್ ಇರುವ ಪ್ರದೇಶದ ಸಮಸ್ಯೆಗಳು,ಸ್ಥಿತಿಗತಿಗಳ ಮತ್ತು ಕಷ್ಟಗಳ ಕುರಿತು ವಿವರಿಸುವ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ತಮಗೆ ನೆರವು ನೀಡುವಂತೆ ವೀಡಿಯೊದಲ್ಲಿ ವಿವರಿಸಿದ್ದಾರೆ.

DAKSHINA KANNADA

ತಿರುವು ಪಡೆದ ನಾ*ಪತ್ತೆ ಪ್ರಕರಣ..! ಕೊ*ಲೆಯಾದ ಸ್ಥಿತಿಯಲ್ಲಿ ಮೃ*ತ*ದೇಹ ಪತ್ತೆ..!

Published

on

ಮಂಗಳೂರು : ನವೆಂಬರ್ 27 ರಂದು ನಾಪತ್ತೆಯಾಗಿದ್ದ ಬಿಳಿನೆಲೆಯ ಸಂದೀಪ್ ಎಂಬ ಯುವಕನ ಮೃ*ತ ದೇಹ ಪತ್ತೆಯಾಗಿದೆ. ನಾಪತ್ತೆಯಾಗಿ ವಾರಗಳ ಬಳಿಕ ಗ್ರಾಮಸ್ಥರ ಒತ್ತಡಕ್ಕೆ ಮಣಿದ ಪೊಲೀಸರು ತನಿಖೆ ಆರಂಭಿಸಿ ಪ್ರಕರಣವನ್ನು ಬೇಧಿಸಿದ್ದಾರೆ. ಕಡಬ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಈ ಪ್ರಕರಣದ ದೂರು ಸ್ವೀಕರಿಸಲು ಪೊಲೀಸರು ಮುಂದಾಗಿರಲಿಲ್ಲ. ಬಳಿಕ ರಾತೋರಾತ್ರಿ ಗ್ರಾಮಸ್ಥರು ಠಾಣೆಯ ಮುಂದೆ ಪ್ರತಿಭಟನೆ ನಡೆಸಿದ ಬಳಿಕ ಶಂಕಿತ ಆ*ರೋಪಿಯನ್ನು ವಶಕ್ಕೆ ಪಡೆಯಲಾಗಿತ್ತು.

                        ಆ*ರೋಪಿ ಪ್ರತೀಕ್‌

ಡಿಸೆಂಬರ್ 2 ರಂದು ಗ್ರಾಮಸ್ಥರ ಜೊತೆ ಠಾಣೆಗೆ ಆಗಮಿಸಿದ ಬಿಜೆಪಿ ನಾಯಕರು ತನಿಕೆಗೆ ಪೊಲೀಸರನ್ನು ಒತ್ತಾಯಿಸಿದ್ದರು. ಶಂಕಿತ ಆ*ರೋಪಿಯಾಗಿದ್ದ ಪ್ರತೀಕ್ ಎಂಬಾತನ್ನು ಪೊಲೀಸರು ತೀವ್ರ ವಿಚಾರಣೆ ನಡೆಸಿದಾಗ ಕೊ*ಲೆ ರಹಸ್ಯ ಬಯಲಾಗಿದೆ. ಬಳಿಕ ಆ*ರೋಪಿಯನ್ನು ಘಟನಾ ಸ್ಥಳಕ್ಕೆ ಕರೆದೊಯ್ದ ಪೊಲೀಸರು ಸಂದೀಪ್ ಮೃ*ತದೇಹ ಪತ್ತೆ ಹಚ್ಚಿದ್ದಾರೆ. ಕಡಬ ಸುಬ್ರಹ್ಮಣ್ಯ ರಸ್ತೆಯ ನಾರಡ್ಕ ಎಂಬ ಪ್ರದೇಶದಲ್ಲಿ ಸಂದೀಪ್‌ ಮೃ*ತದೇಹ ಪತ್ತೆಯಾಗಿದೆ. ಸಂದೀಪ್‌ನನ್ನು ಹ*ತ್ಯೆ ಮಾಡಿದ್ದ ಪ್ರತೀಕ್ ಪೆಟ್ರೋಲ್ ಸುರಿದು ಮೃ*ತದೇಹಕ್ಕೆ ಬೆಂಕಿ ಹಚ್ಚಿದ್ದ ಎಂಬುದು ಗೊತ್ತಾಗಿದೆ.

                         ಮೃ*ತ ಸಂದೀಪ್

 

ಮಳೆಯ ನಡುವೆಯೂ ಹ*ತ್ಯೆ ನಡೆದ ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ಜಮಾಯಿಸಿದ್ದು, ಇದರಲ್ಲಿ ಇನ್ನೂ ಅನೇಕ ಆ*ರೋಪಿಗಳು ಇರುವ ಶಂಕೆ ವ್ಯಕ್ತಪಡಿಸಿದ್ದಾರೆ. ಇದೊಂದು ಗಾಂ*ಜಾ ಅಮಲಿನಲ್ಲಿ ಅಥವಾ ಗಾಂ*ಜಾ ವ್ಯವಹಾರದಲ್ಲಿ ನಡೆದ ಕೊ*ಲೆಯಾಗಿರಬಹದು ಎಂದು ಆರೋಪ ಕೇಳಿ ಬಂದಿದೆ.

Continue Reading

KADABA

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕಾಡಾನೆ ಪ್ರತ್ಯಕ್ಷ !

Published

on

ಮಂಗಳೂರು: ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಷಷ್ಠಿ ಉತ್ಸವದ ಸಂಭ್ರಮ ಮನೆ ಮಾಡಿದ್ದು, ಸಾವಿರಾರು ಜನ ಕ್ಷೇತ್ರಕ್ಕೆ ಆಗಮಿಸುತ್ತಿದ್ದಾರೆ.

ಇದೇ ವೇಳೆ ಕ್ಷೇತ್ರದ ಸಾಕನೆ ಜೊತೆ ಭಕ್ತರು ಸೆಲ್ಪಿ ತೆಗೆದುಕೊಳ್ಳುತ್ತಿದ್ದಾರೆ. ಆದ್ರೆ ಹಾಗೇ ಆನೆ ಕಂಡ ತಕ್ಷಣ ಅದು ಕ್ಷೇತ್ರದ ಆನೆ ಹೌದೋ ಅಲ್ಲವೋ ಒಂದು ಸಾರಿ ನೋಡಬೇಕಾದ ಪರಿಸ್ಥಿತಿ ಈ ಷಷ್ಠಿ ಸಂಧರ್ಭದಲ್ಲಿ ಬಂದಿದೆ. ಕಾಡಾನೆಯೊಂದು ಕುಕ್ಕೆ ಕ್ಷೇತ್ರದಲ್ಲಿ ಅಡ್ಡಾಡುತ್ತಿರುವುದು ಇದಕ್ಕೆ ಕಾರಣವಾಗಿದೆ.

ಇದನ್ನೂ ಓದಿ :ಭೀಕರ ಕಾರು ಅ*ಪಘಾತ ; ಯುವ ಐಪಿಎಸ್ ಅಧಿಕಾರಿ ಮೃ*ತ್ಯು

ಜಾತ್ರಾ ಸಮಯದಲ್ಲೇ ಕುಕ್ಕೆಗೆ ಎಂಟ್ರಿ ಕೊಟ್ಟಿರುವ ಕಾರಣದಿಂದ ಆತಂಕ ಸೃಷ್ಟಿ ಆಗಿದೆ. ದೇವಸ್ತಾನದ ಪಕ್ಕದಲ್ಲೇ ಇರುವ ಮಠದ ಪರಿಸರದಲ್ಲಿ ಆನೆಯ ಓಡಾಟ ಜನ ಗಮನಿಸಿದ್ದಾರೆ. ಆದರೆ ಆನೆ ಜನರನ್ನು ಹಾಗೂ ದೇಗುಲದ ಜಾತ್ರೆಯ ಗದ್ದಲದಿಂದ ಗೊಂದಲಕ್ಕೆ ಸಿಲುಕಿ ಎಲ್ಲೆಂದರಲ್ಲಿ ಸುತ್ತಾಡುತ್ತಿದೆ. ಕ್ಷೇತ್ರದಲ್ಲಿ ಆನೆ ಕಾಣಿಸಿಕೊಂಡ ಕಾರಣ ಪುತ್ತೂರು ಸಹಾಯಕ ಆಯುಕ್ತರು ಭಕ್ತರಿಗೆ ಎಚ್ಚರಿಕೆ ವಹಿಸಲು ಸೂಚನೆ ನೀಡಿದ್ದಾರೆ‌.

ಅನಿರೀಕ್ಷಿತವಾಗಿ ಆಗಮಿಸಿದ ಈ ಅತಿಥಿಯನ್ನು ಕಾಡಿಗೆ ಅಟ್ಟಲು ಅರಣ್ಯ ಅಧಿಕಾರಿಗಳ ಸಹಿತ ಸ್ಥಳೀಯ ಜನರು ಕೈ ಜೋಡಿಸಿದ್ದಾರೆ.

Continue Reading

DAKSHINA KANNADA

ಸುಬ್ರಹ್ಮಣ್ಯ: ಅನ್ಯಕೋಮಿನ ಯುವಕನಿಂದ ಮೆಸೇಜ್; ಯುವಕರಿಂದ ಹಲ್ಲೆ

Published

on

ಸುಬ್ರಹ್ಮಣ್ಯ: ಅನ್ಯಕೋಮಿನ ಯುವಕನೋರ್ವ ವಿದ್ಯಾರ್ಥಿನಿಗೆ ಮೆಸೇಜ್ ಮಾಡಿದ್ದಾನೆ ಎಂದು ಆರೋಪಿಸಿ ತಂಡವೊಂದು ಹಲ್ಲೆ ಮಾಡಿದ ಘಟನೆ ಸುಬ್ರಹ್ಮಣ್ಯದ ಗುತ್ತಿಗರುವಿನಲ್ಲಿ ನಡೆದಿದೆ.

ಥಳಿತಕ್ಕೊಳಗಾದ ಯುವಕ ಆಸ್ಪತ್ರೆಗೆ ದಾಖಲಾಗಿ‌ ಚಿಕಿತ್ಸೆ ಪಡೆಯುತ್ತಿದ್ದಾನೆ.

ನಿಯಾಝ್ ಎಂಬಾತ ಹಲ್ಲೆಗೊಳಗಾದ ಯುವಕ.

ಸ್ಥಳೀಯ ಯುವತಿಯೋರ್ವಳಿಗೆ ನಿಯಾಝ್ ಮೆಸೇಜ್ ಮಾಡುತ್ತಿರುವುದಾಗಿ ತಿಳಿದು ಬಂದ ಬಳಿಕ, ಅವನನ್ನು ಕರೆಸಿಕೊಂಡ ಯುವಕರ ತಂಡವೊಂದು ಹಲ್ಲೆ ನಡೆಸಿದ್ದಾರೆ.

ಈ ಪ್ರಕರಣದ ಕುರಿತು, ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

LATEST NEWS

Trending

Exit mobile version