Home ಉಡುಪಿ ದಯವಿಟ್ಟು ನನನ್ನು ರಾಜಕೀಯಕ್ಕೆ ಬಳಸಬೇಡಿ : ಸಂಘಟಕರಿಗೆ ಮನವಿ ಮಾಡಿದ ಪದ್ಮಶ್ರೀ ಹಾಜಬ್ಬ..!

ದಯವಿಟ್ಟು ನನನ್ನು ರಾಜಕೀಯಕ್ಕೆ ಬಳಸಬೇಡಿ : ಸಂಘಟಕರಿಗೆ ಮನವಿ ಮಾಡಿದ ಪದ್ಮಶ್ರೀ ಹಾಜಬ್ಬ..!

ಉಡುಪಿ : ಉಡುಪಿಯಲ್ಲಿ ಫೆಬ್ರವರಿ 20(ನಾಳೆ) ಅಯೋಜಿಸಲಾಗಿದ್ದ ಪೌರತ್ವ ವಿರೋಧಿ ಸಭೆಕ್ಕೆ ಪದ್ಮಶ್ರೀ ಹರೇಕಳ ಹಾಜಬ್ಬಗೆ ಅಹ್ವಾನ ನೀಡುವ ಮೂಲಕ  ಅಕ್ಷರ ಸಂತ ಹಾಜಬ್ಬರ ಮುಗ್ಧತೆಯನ್ನು ಕಾರ್ಯಕ್ರಮ ಸಂಘಟಕರು ದುರ್ಬಳಕೆ ಮಾಡಿಕೊಂಡ ವಿದ್ಯಮಾನ ಬೆಳಕಿಗೆ ಬಂದಿದೆ.

ಕೇಂದ್ರ ಸರಕಾರದ ಸಿಎಎ ಹಾಗೂ ಎನ್.ಆರ್.ಸಿ ಕಾನೂನು ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಕಾನೂನಿನ ಬಗ್ಗೆ ಅರಿವಿಲ್ಲದವರನ್ನೂ ಸೇರಿಸಿಕೊಳ್ಳಲಾಗುತ್ತಿದೆ ಎನ್ನುವ ಬಿಜೆಪಿ ಪಕ್ಷದ ಆರೋಪಗಳ ನಡುವೆಯೇ ಈ ಪ್ರಕರಣ ಬೆಳಕಿಗೆ ಬಂದಿದೆ.

ಕಿತ್ತಳೆ ಹಣ್ಣನ್ನು ಮಾರಿ ತನ್ನ ಊರಲ್ಲಿ ಶಾಲೆ ಕಟ್ಟಿದ ಅಕ್ಷರ ಸಂತ ಹರೇಕಳ ಹಾಜಬ್ಬ ಅವರ ಸಾಧನೆಯನ್ನು ಗುರುತಿಸಿ ಕೇಂದ್ರ ಸರಕಾರ ಅವರಿಗೆ ಈ ಬಾರಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿರುವುದು ಎಲ್ಲೆಲ್ಲೂ ಜನಜನಿತವಾದ ವಿಷಯ.

ಇದೀಗ ಹಾಜಬ್ಬನವರನ್ನು ಎಲ್ಲಾ ಕಡೆಗಳಲ್ಲೂ ಗೌರವಿಸಿ ಸನ್ಮಾನಿಸುವ ಕಾರ್ಯಕ್ರಮ ಜಾತಿ ಪಕ್ಷ, ಸಂಘಟನೆ, ರಾಜಕೀಯ ರಹಿತವಾಗಿ ನಡೆಯುತ್ತಿದೆ. ಜನರ ಆದರದ ಪ್ರೀತಿಗೆ ಸೋತು ಹಾಜಬ್ಬರು ಎಲ್ಲಿ ಕರೆದರೂ ಇಲ್ಲ ಎನ್ನದೆ ಹೋಗುತ್ತಿರುತ್ತಾರೆ.

ಆದರೆ ಹಾಜಬ್ಬರ ಇದೇ ಮುಗ್ದತೆಯನ್ನು ಬಳಸಿಕೊಂಡು ಕರ್ನಾಟಕ ಮುಸ್ಲಿಂ ಜಮಾತ್ ಉಡುಪಿ ಸಂಘಟನೆಯೊಂದು ಇವರನ್ನು ಸಿಎಎ, ಎನ್.ಆರ್.ಸಿ ವಿರೋಧಿ ಪ್ರತಿಭಟನೆಗೂ ಅವರ ಅರಿವಿಗೆ ತರದೆ ನಾಳೆಯ ಸಭೆ ಅತಿಥಿಯನ್ನಾಗಿ ಮಾಡಿದೆ.

ಇದರ ಏನೂ ಅರಿವಿರದ ಹಾಜಬ್ಬರು ಕಾರ್ಯಕ್ರಮಕ್ಕೆ ಬರಲು ಒಪ್ಪಿದ್ದರು. ಆದರೆ ಮಾದ್ಯಮಗಳ ಮತ್ತು ತಮ್ಮ ಹಿತ ಬಯಸುವ ಜನರಿಂದ ವಾಸ್ತವ ಅಂಶ ಗೊತ್ತಾದ ತಕ್ಷಣ ಹಾಜಬ್ಬನವರು ಕಾರ್ಯಕ್ರಮಕ್ಕೆ ಬರಲಾಗುವುದಿಲ್ಲ ಎಂದು ಸಂಘಟಕರಿಗೆ ತಿಳಿಸಿದ್ದಾರೆ.

ಸಾಮಾನ್ಯ ಜನರಂತಿರುವ ನನ್ನನ್ನು ಇಂಥ ವಿಷಯಗಳಲ್ಲಿ ಸಿಲುಕಿಸುವ ಕೆಲಸ ಯಾರೂ ಮಾಡಬಾರದೆಂದು ಅವರು ಮನವಿ ಮಾಡಿದ್ದಾರೆ. ಆ ಕಾನೂನಿನ ಬಗ್ಗೆ ನನಗೆ ಏನೂ ಗೊತ್ತಿಲ್ಲದಿರುವಾಗ ನನ್ನನ್ನು ಕಾರ್ಯಕ್ರಮ ಉದ್ಘಾಟನೆಗೆ ಕರೆದಿರುವ ಹಿಂದಿನ ಉದ್ಧೇಶ ಏನೆಂದು ನನಗೆ ತಿಳಿದಿಲ್ಲ ಎಂದು ಹಾಜಬ್ಬ ಹೇಳಿಕೆ ನೀಡಿದ್ದಾರೆ.

ತನ್ನದೇ ಸಾಮರ್ಥ್ಯದಲ್ಲಿ ಸಮಾಜದಲ್ಲಿ ಉನ್ನತ ಸ್ಥಾನ ಗಳಿಸಿಕೊಂಡಿರುವ ಸರಳ ಸಾದ ಸೀದ ಹಾಜಬ್ಬನವರಿಗೆ ಶಿಕ್ಷಣದ ವಿಚಾರ ಬಿಟ್ಟರೆ ಬೇರೆ ಯಾವುದೂ ತಿಳಿಯದ ಮುಗ್ದ.

ಇಂಥ ವ್ಯಕ್ತಿಯನ್ನು ವಿವಾದಾತ್ಮಕ ವಿಷಯಗಳಲ್ಲಿ ಸಿಲುಕಿಸುವ ಯತ್ನ ಉಡುಪಿಯ ಸಂಘಟನೆಗಳಿಂದ ನಡೆದಿರುವುದು ಖಂಡನೀಯವಾಗಿದ್ದು ಆನೇಕರು ಸಂಘಟಕರ ಬಗ್ಗೆ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದು, ಹಾಜಬ್ಬರಂತಹವನ್ನು ಇಂತಹ ವಿಷಯಗಳಿಗೆ ಎಳೆದು ತರುವ ಮೂಲಕ ವಿವಾದ ಸೃಷ್ಟಿಸದಿರಿ ಎಂದು ಮನವಿ ಮಾಡಿದ್ದಾರೆ.

ವಿಡಿಯೋಗಾಗಿ..

- Advertisment -

RECENT NEWS

ವಿಟ್ಲ ಪೆರುವಾಯಿಯಲ್ಲಿ ಲಾಕ್‌ ಡೌನ್ ಉಲ್ಲಂಘಿಸಿ ವ್ಯವಹಾರ : ಡಿಢೀರ್‌ ದಾಳಿ ನಡೆಸಿದ ಪಿಡಿಒ

ವಿಟ್ಲ ಪೆರುವಾಯಿಯಲ್ಲಿ ಲಾಕ್‌ ಡೌನ್ ಉಲ್ಲಂಘಿಸಿ ವ್ಯವಹಾರ : ಡಿಢೀರ್‌ ದಾಳಿ ನಡೆಸಿದ ಪಿಡಿಒ ಬಂಟ್ವಾಳ : ಲಾಕ್ ಡೌನ್ ಹೆಸರಿನಲ್ಲಿ ಪೆರುವಾಯಿ ವ್ಯವಸಾಯ ಸಹಕಾರಿ ಸಂಘದ ಕಟ್ಟಡದಲ್ಲಿ ಗ್ರಾಮ ಪಂಚಾಯಿತಿ ಅನುಮತಿ ಪಡೆಯದೇ...

ಕೇರಳ ಗಡಿ ದಾಟಿ ಬಂದ ಮಹಿಳೆಯಲ್ಲಿ ಕೊರೋನಾ ಸೋಂಕು : ಆತಂಂಕದಲ್ಲಿ ಮಂಗಳೂರು ಜನತೆ..!!?

ಕೇರಳ ಗಡಿ ದಾಟಿ ಬಂದ ಮಹಿಳೆಯಲ್ಲಿ ಕೊರೋನಾ ಸೋಂಕು : ಆತಂಂಕದಲ್ಲಿ ಮಂಗಳೂರು ಜನತೆ..!!? ಮಂಗಳೂರು : ಕೇರಳ ಗಡಿ ತೆರವಿನಿಂದ ಮಂಗಳೂರಿಗರಿಗೆ ಮತ್ತೆ ಆತಂಕ ಶುರುವಾಗಿದೆ. ಕಾಸರಗೋಡಿನಿಂದ ಚಿಕಿತ್ಸೆಗಾಗಿ ಬಂದಿದ್ದ ಮಹಿಳೆಯಲ್ಲಿ...

ಖಾಸಾಗಿ ಆಸ್ಪತ್ರೆ- ಲ್ಯಾಬ್‌ಗಳಲ್ಲಿ ಕೊರೊನಾ ವೈರಸ್‌ ಪರೀಕ್ಷೆಗಳಿಗೆ ಹಣ ಪಡೆಯುವಂತಿಲ್ಲ : ಸುಪ್ರೀಂ ಕೋರ್ಟ್

ಖಾಸಾಗಿ ಆಸ್ಪತ್ರೆ- ಲ್ಯಾಬ್‌ಗಳಲ್ಲಿ ಕೊರೊನಾ ವೈರಸ್‌ ಪರೀಕ್ಷೆಗಳಿಗೆ ಹಣ ಪಡೆಯುವಂತಿಲ್ಲ : ಸುಪ್ರೀಂ ಕೋರ್ಟ್ ನವದೆಹಲಿ : ಇನ್ನು ಮುಂದೆ ಕೊರೋನಾ ಸೋಂಕಿಗೆ ಸಂಬಂಧಿಸಿದ ಪರೀಕ್ಷೆಗಳು ಸಂಪೂರ್ಣ ಉಚಿತ. ಹೀಗೆಂತಾ ಸರ್ವೋಚ್ಚಾ ನ್ಯಾಯಾಲಯದ ಮಹತ್ವದ...

ಲಾಕ್ ಡೌನ್ ನಡುವೆ ಬಂಟ್ವಾಳ ಚರ್ಚಿನಲ್ಲಿ ಕಳ್ಳರ ಕೈಚಳಕ : ಮೂರು ಹುಂಡಿಗಳಿಗೆ ಕನ್ನ..!

ಲಾಕ್ ಡೌನ್ ನಡುವೆ ಬಂಟ್ವಾಳ ಚರ್ಚಿನಲ್ಲಿ ಕಳ್ಳರ ಕೈಚಳಕ : ಮೂರು ಹುಂಡಿಗಳಿಗೆ ಕನ್ನ..! ಬಂಟ್ವಾಳ : ಲಾಕ್ ಡೌನ್ ನಡುವೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳ್ಳರ ಕೈಚಳ ಮುಂದುವರೆದಿದೆ.ಬಂಟ್ವಾಳದ ಚರ್ಚ್ ಒಂದಕ್ಕೆ ನುಗ್ಗಿದ...