ಮಂಗಳೂರು/ಸಿಯೊಲ್: ದಕ್ಷಿಣ ಕೊರಿಯಾದ ಮುಯಾನ್ ಅತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು ಬೆಳ್ಳಂಬೆಳ್ಳಗೆಯೇ ಭಾರಿ ದುರಂತ ಸಂಭವಿಸಿದೆ. ರನ್ ವೇನಿಂದ ಜಾರಿದ ವಿಮಾನವೊಂದು ಗೋಡೆಗೆ ಡಿಕ್ಕಿಯಾದ ಪರಿಣಾಮ ಕನಿಷ್ಠ 62 ಮಂದಿ ಮೃ*ತಪಟ್ಟಿದ್ದಾರೆ.
ಅಪಘಾತಕ್ಕೀಡಾದ ವಿಮಾನ ‘ಜೆಜು ಏರ್’ ವಿಮಾನಯಾನ ಸಂಸ್ಥೆಯದ್ದು. ಅದರಲ್ಲಿ 6 ಸಿಬ್ಬಂದಿ, 175 ಮಂದಿ ಪ್ರಯಾಣಿಕರಿದ್ದರು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಥಾಯ್ಲೆಂಡ್ ರಾಜಧಾನಿ ಬ್ಯಂಕಾಕ್ ನಿಂದ ಬಂದಿದ್ದ ವಿಮಾನವು, ನಿಲ್ದಾಣದಲ್ಲಿ ಇಳಿಯುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿದೆ ಎಂದು ‘ಯೊನ್ಹಾಪ್’ ಸುದ್ದಿಸಂಸ್ಥೆ ವರದಿ ಮಾಡಿದೆ.
ವಿಮಾನವು ಗೋಡೆಗೆ ಡಿಕ್ಕಿಯಾಗುತ್ತಿದ್ದಂತೆ, ಬೆಂಕಿ ಹೊತ್ತಿಕೊಳ್ಳುವ ದೃಶ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಘಟನಾ ಸ್ಥಳದಲ್ಲಿ ದಟ್ಟ ಹೊಗೆ ಆವರಿಸಿದೆ.
ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ. ಬದುಕುಳಿದಿದ್ದ ಇಬ್ಬರನ್ನು ರಕ್ಷಿಸಲಾಗಿದೆ ಎಂದು ಅಗ್ನಿಶಾಮಕ ಸಿಬ್ಬಂದಿ ತಿಳಿಸಿದ್ದಾರೆ. 62 ಮಂದಿ ಮೃ*ತಪಟ್ಟಿರುವ ಬಗ್ಗೆ ಅಧಿಕೃತವಾಗಿಲ್ಲ. ಆದರೆ, ಸಾ*ವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಬಗ್ಗೆ ವರದಿಗಳನ್ನು ಪರಿಶೀಲಿಸುತ್ತಿರುವುದಾಗಿ ‘ಜೆಜು ಏರ್’ ವಕ್ತಾರರು ತಿಳಿಸಿದ್ದಾರೆ.
ಇನ್ನೂ ಘಟನೆ ಕುರಿತು ಪ್ರತಿಕ್ರಿಯಿಸಿರುವ ಹಂಗಾಮಿ ಅಧ್ಯಕ್ಷ ಚೋಯ್ ಸಾಂಗ್-ಮೋಕ್, ಪ್ರಯಾಣಿಕರು ಹಾಗೂ ಸಿಬ್ಬಂದಿಯನ್ನು ಉಳಿಸಲು ಎಲ್ಲಾ ಸಂಬಂಧಿತ ಏಜೆನ್ಸಿಗಳು ಲಭ್ಯವಿರುವ ಎಲ್ಲಾ ಸಂಪನ್ಮೂಲಗಳನ್ನು ಸಜ್ಜು ಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಮಂಗಳೂರು/ಸಿಯೋಲ್: 179 ಮಂದಿಯನ್ನು ಬಲಿ ಪಡೆದ ದಕ್ಷಿಣ ಕೊರಿಯಾ ಡೆಡ್ಲಿ ವಿಮಾನ ಅಪಘಾತದಲ್ಲಿ ಇಬ್ಬರು ಬದುಕುಳಿದಿರುವುದೇ ರೋಚಕ. ಅವರು ಹೇಗೆ ಬದುಕುಳಿದರು ಎಂಬುದಕ್ಕೆ ಕಾರಣ ನೀಡಲಾಗಿದೆ.
ಮುವಾನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾನುವಾರ ಜೆಜು ಏರ್ ವಿಮಾನವು ರನ್ ವೇಯಲ್ಲಿ ಅಪಘಾತಕ್ಕೀಡಾಗಿ ವಿಮಾನದಲ್ಲಿದ್ದ 181 ಜನರ ಪೈಕಿ 179 ಜನರನ್ನು ಕೊಂದ ನಂತರ ಹೃದಯವಿದ್ರಾವಕ ದೃಶ್ಯಗಳು ತೆರೆದುಕೊಂಡವು.
ಈ ದುರಂತದಲ್ಲಿ ಬದುಕಿರುವ ಇಬ್ಬರೂ ವಿಮಾನ ಸಿಬ್ಬಂದಿಗಳು. ಅವರಲ್ಲಿ ಒಬ್ಬರು ಮಹಿಳೆ ಮತ್ತು ಇನ್ನೊಬ್ಬರು ಪುರುಷ. ಇಬ್ಬರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಬ್ಬರೂ ವಿಮಾನದ ಹಿಂಬದಿ ಭಾಗದಲ್ಲಿ ಕುಳಿತು ಸೀಟ್ ಬೆಲ್ಟ್ ಧರಿಸಿ ಅಪಘಾತದಿಂದ ಪಾರಾಗಿದ್ದಾರೆ.
ವಾಣಿಜ್ಯ ವಿಮಾನಗಳಲ್ಲಿ ಮುಂಭಾಗದ ಆಸನಗಳಿಗಿಂತ ಹಿಂಭಾಗದ ಆಸನಗಳ ಭಾಗ ಸುರಕ್ಷಿತ ಸ್ಥಳವೆಂದು ಹೇಳಲಾಗುತ್ತದೆ. ಸಾಮಾನ್ಯವಾಗಿ ವಿಮಾನ ಅಪಘಾತ ಸಂಭವಿಸಿದಾಗ, ವಿಮಾನದ ಮುಂಭಾಗವೇ ಹೆಚ್ಚು ಹಾನಿಗೊಳಗಾಗುತ್ತದೆ. ಈ ಕಾರಣಕ್ಕೆ ಹಿಂಭಾಗದ ಆಸನಗಳ ಭಾಗವು ಹೆಚ್ಚು ಸುರಕ್ಷಿತ ಎಂದು ನಂಬಲಾಗಿದೆ.
ಟೈಮ್ಸ್ ಮ್ಯಾಗಜೀನ್ ನ 2015ರ ಅಧ್ಯಯನದ ಪ್ರಕಾರ, ವಿಮಾನ ಅಪಘಾತಗಳ ಸಂದರ್ಭದಲ್ಲಿ ಹಿಂಭಾಗದ ಆಸನಗಳು ಅತ್ಯಂತ ಸುರಕ್ಷಿತವಾಗಿದೆ ಎಂದು ಕಂಡುಹಿಡಿದಿದೆ. ಅಪಘಾತದ ಸಂದರ್ಭದಲ್ಲಿ ಹಿಂಭಾಗದ ಆಸನದಲ್ಲಿ ಕುಳಿತ ಪ್ರಯಾಣಿಕರ ಪೈಕಿ ಸಾವಿನ ಸಂಖ್ಯೆ ಶೇ. 32ರಷ್ಟಿದ್ದರೆ, ಮಧ್ಯಮ ಭಾಗದ ಸಾವಿನ ಪ್ರಮಾಣ ಶೇ. 39 ಮತ್ತು ಮುಂಭಾಗದಲ್ಲಿ ಸಂಭವಿಸುವ ಸಾವಿನ ಪ್ರಮಾಣ ಶೇ.38ರಷ್ಟಿರುತ್ತದೆ ಎಂಬುದು ಸಂಶೋಧನಾ ಅಧ್ಯಯನದಿಂದ ತಿಳಿದುಬಂದಿದೆ.
ಇಬ್ಬರು ಬದುಕುಳಿದವರನ್ನು ಲೀ (32) ಮತ್ತು ಕ್ವಾನ್ (25) ಎಂದು ಗುರುತಿಸಲಾಗಿದ್ದು, ಲೀ ಅವರ ಎಡ ಭುಜ ಮತ್ತು ತಲೆಗೆ ತೀವ್ರ ಪೆಟ್ಟು ಬಿದ್ದಿದ್ದು, ಅವರನ್ನು ಆಸ್ಪತ್ರೆಗೆ ಕರೆತಂದಾಗ ಪ್ರಜ್ಞೆ ಇತ್ತು ಎಂದು ವೈದ್ಯರು ತಿಳಿಸಿದ್ದಾಗಿ ಕೊರಿಯನ್ ಟೈಮ್ಸ್ ವರದಿ ಮಾಡಿದೆ. ಅದೇ ರೀತಿ ಕ್ವಾನ್ ಕೂಡ ಆಶ್ಚರ್ಯಕರ ರೀತಿಯಲ್ಲಿ ಬದುಕುಳಿದಿದ್ದು, ಇಬ್ಬರಿಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.
ಕಳೆದ ಡಿ.29(ಭಾನುವಾರ)ರಂದು ಬ್ಯಾಂಕಾಕ್ ನಿಂದ ಮುವಾನ್ ಗೆ ಮರಳುತ್ತಿದ್ದ ಜೆಜು ಏರ್ ಲೈನ್ಸ್ ಗೆ ಸೇರಿದ ಬೋಯಿಂಗ್ 737-800 ವಿಮಾನವು ಲ್ಯಾಂಡಿಂಗ್ ಸಮಯದಲ್ಲಿ ದುರ್ಘಟನೆಗೆ ಒಳಗಾಯಿತು. ರನ್ ವೇಯಿಂದ ಸ್ಕಿಡ್ ಆಗಿ ಕಾಂಪೌಂಡ್ ಗೆ ಡಿಕ್ಕಿ ಹೊಡೆದಿತ್ತು. ಈ ಘೋರ ದುರಂತದಲ್ಲಿ ಒಟ್ಟು 179 ಜನ ತಮ್ಮ ಪ್ರಾಣ ಕಳೆದುಕೊಂಡಿದ್ದರು.
ಮಂಗಳೂರು/ಕಾಬೂಲ್: ತಾಲಿಬಾನ್ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡು ಸರ್ಕಾರ ರಚಿಸಿದಾಗಿನಿಂದ ಮಹಿಳೆಯರ ವಿರುದ್ದವಾಗಿ ಸಾಕಷ್ಟು ಕಾನೂನುಗಳನ್ನು ಜಾರಿಗೆ ತಂದಿದೆ.
ತಾಲಿಬಾನ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಷರಿಯಾ ಕಾನೂನಿನಂತೆ ಅಲ್ಲಿನ ಸರ್ಕಾರ ಮಹಿಳೆಯರ ವಿರುದ್ದ ವಿಚಿತ್ರ ಕಾನೂನುಗಳನ್ನು ತರಲಾರಂಭಿಸಿದ್ದಾರೆ. ಮೊದಲು ಮಹಿಳೆಯರು ಬ್ಯೂಟಿ ಪಾರ್ಲರ್ ಗೆ ಹೋಗುವಂತಿಲ್ಲ, ಸಾರ್ವಜನಿಕವಾಗಿ ಹಾಡುವಂತೆಯೂ ಇಲ್ಲ, ಮೇಕಪ್ ಮಾಡಿಕೊಳ್ಳುವಂತಿಲ್ಲ, ಸಾರ್ವಜನಿಕ ಸ್ಥಳಗಳಲ್ಲಿ ಬುರ್ಖಾ ತೆಗೆಯುವಂತಿಲ್ಲ. ಇಷ್ಟು ಸಾಲದಕ್ಕೆ ಹೋಟೆಲ್, ಪಾರ್ಕ್, ಶಾಲೆ-ಕಾಲೇಜುಗಳು ಎಲ್ಲಿಗೂ ಹೋಗುವಂತಿಲ್ಲ.
ಆದರೀಗ ಮತ್ತೊಂದು ಆದೇಶ ಹೊರಡಿಸುವ ಮೂಲಕ ಅಫ್ಘಾನ್ ಮಹಿಳೆಯರಿಗೆ ಶಾಕ್ ನೀಡಿದ್ದಾರೆ.
ಮಹಿಳೆಯರ ವಿರುದ್ದ ತಾಲಿಬಾನ್ ಹೊಸ ಕಾನೂನು
ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಮಹಿಳೆಯರ ವಿರುದ್ದ ಹೊಸ ಆದೇಶವನ್ನು ಹೊರಡಿಸಿದೆ. ತಾಲಿಬಾನ್ ಸರ್ಕಾರದ ಪರಮೋಚ್ಚ ನಾಯಕ ಈ ಕುರಿತು ಆದೇಶ ಹೊರಡಿಸಿದ್ದು, ಹೊಸ ತಾಲಿಬಾನ್ ಕಾನೂನಿನ ಪ್ರಕಾರ, ಅಫ್ಘಾನಿಸ್ತಾನದಲ್ಲಿ ನಿರ್ಮಿಸುತ್ತಿರುವ ಹೊಸ ಮನೆಗಳಿಗೆ ಕಿಟಕಿಗಳು ಇರಬಾರದು. ಮಹಿಳೆಯರು ಮನೆಯಿಂದ ಹೊರಗೆ ಕಾಣದಂತೆ ತಾಲಿಬಾನ್ ಈ ಆದೇಶ ನೀಡಿದೆ. ಮಹಿಳೆಯರನ್ನ ನೋಡುವುದರಿಂದ ಅಶ್ಲೀಲ ಕೃತ್ಯಗಳು ಎಸಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ತಾಲಿಬಾನ್ ಸರ್ಕಾರದ ವಕ್ತಾರ ಜಬಿಹುಲ್ಲಾ ಮುಜಾಹಿದ್ ಅವರು ಎಕ್ಸ್ ನಲ್ಲಿ ಈ ಸಂಬಂಧ ಪೋಸ್ಟ್ ಮಾಡಿದ್ದಾರೆ. ಹೊಸ ಮನೆಗಳಲ್ಲಿ ಅಂಗಳ, ಅಡುಗೆ ಮನೆ, ಅಕ್ಕಪಕ್ಕದವರ ಬಾವಿ ಅಥವಾ ಮಹಿಳೆಯರು ಬಳಸುವ ಯಾವುದೇ ಸ್ಥಳದಲ್ಲಿ ಮಹಿಳೆಯರು ಕಾಣಿಸುವಂಥ ಕಿಟಕಿಗಳನ್ನು ಹೊಂದಿರಬಾರದು. ಅಡುಗೆಮನೆಯಲ್ಲಿ ಕೆಲಸ ಮಾಡುವ ಮಹಿಳೆಯರನ್ನು ನೋಡುವುದು, ವರಾಂಡದಲ್ಲಿ ಬರುವುದು ಮತ್ತು ಹೋಗುವುದು ಅಥವಾ ಬಾವಿಯಿಂದ ನೀರು ಸೇದುವುದು ಅಶ್ಲೀಲ ಕೃತ್ಯಗಳಿಗೆ ಕಾರಣವಾಗಬಹುದು ಎಂದು ಹೇಳಿದ್ದಾರೆ.
ಈ ಕುರಿತು ಪಾಲಿಕೆ ಅಧಿಕಾರಿಗಳು ಹಾಗೂ ಸಂಬಂಧಿಸಿದ ಇಲಾಖೆಗಳು ನಿಗಾ ವಹಿಸಲಿದ್ದಾರೆ. ತಾಲಿಬಾನ್ ಸರ್ಕಾರದ ಪ್ರಕಾರ, ಪುರಸಭೆಯ ಅಧಿಕಾರಿಗಳು ಮತ್ತು ಇತರ ಸಂಬಂಧಿತ ಇಲಾಖೆಗಳು ಹೊಸದಾಗಿ ನಿರ್ಮಿಸುತ್ತಿರುವ ಮನೆಗಳನ್ನು ಸಹ ಮೇಲ್ವಿಚಾರಣೆ ಮಾಡುತ್ತವೆ. ಈ ಮನೆಗಳಲ್ಲಿ ಕಿಟಕಿಗಳು ಅಥವಾ ಬಾಗಿಲುಗಳು ನೆರೆಹೊರೆಯವರ ಮನೆಗಳ ಕಡೆಗೆ ತೆರೆಯುವಂತೆ ಇರಬಾರದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಇರುವ ಕಿಟಕಿಗಳು ಮುಚ್ಚಿ
ಈಗಾಗಲೇ ನಿರ್ಮಿಸಲಾಗಿರುವ ಮನೆ, ಕಟ್ಟಡಗಳಲ್ಲಿ ಕಿಟಕಿಗಳಿದ್ದರೆ ಕೂಡಲೇ ಮುಚ್ಚಬೇಕು ಎಂದು ತಾಲಿಬಾನ್ ಸರ್ಕಾರ ಹೇಳಿದೆ. ಮನೆಯ ಯಜಮಾನನು ತನ್ನ ಮನೆಯ ಕಿಟಕಿ ಇರುವ ಕಡೆಗೆ ಗೋಡೆಯನ್ನು ನಿರ್ಮಿಸಬೇಕು ಅಥವಾ ಯಾವುದೇ ನೆರೆಹೊರೆಯವರು, ಹೊರಗಿನವರು ಆ ಕಿಟಕಿಯ ಮೂಲಕ ಮನೆಯೊಳಗೆ ನೋಡದಂತೆ ಕೆಲವು ವಿಶೇಷ ವ್ಯವಸ್ಥೆಯನ್ನು ಮಾಡುವಂತೆ ಸೂಚಿಸಲಾಗಿದೆ.
ಮಹಿಳೆಯರ ನೇಮಕಕ್ಕೆ ನಿಷೇಧ
ಅಫ್ಘಾನಿಸ್ತಾನದಲ್ಲಿ ಕಾರ್ಯ ನಿರ್ವಹಿಸುವ ಎನ್ ಜಿಒಗಳಲ್ಲಿ ಮಹಿಳೆಯರ ನೇಮಕವನ್ನೂ ನಿಷೇಧಿಸಿ ತಾಲಿಬಾನ್ ಸರಕಾರ ಆದೇಶ ಹೊರಡಿಸಿದೆ. ರಾಷ್ಟ್ರೀಯ ಮತ್ತು ವಿದೇಶಿ ಎನ್ ಜಿಒಗಳಲ್ಲಿ ಕೆಲಸ ಮಾಡುವ ಮಹಿಳೆಯರು ಇಸ್ಲಾಂ ಸಂಪ್ರದಾಯದ ಪ್ರಕಾರ ಸರಿಯಾಗಿ ಹಿಜಾಬ್ ಧರಿಸುತ್ತಿಲ್ಲ.
ಹೀಗಾಗಿ ಮಹಿಳೆಯರನ್ನು ಕೂಡಲೇ ಕೆಲಸದಿಂದ ವಜಾ ಮಾಡಬೇಕು. ಮುಂದೆ ಅವರನ್ನು ನೇಮಿಸಿಕೊಳ್ಳಬಾರದು. ಈ ಆದೇಶ ಪಾಲಿಸುವಲ್ಲಿ ಎನ್ ಜಿಒಗಳು ವಿಫಲವಾದರೆ ಸಂಸ್ಥೆಗಳ ಪರವಾನಿಗೆಯನ್ನೇ ರದ್ದುಪಡಿಸುವುದಾಗಿ ತಾಲಿಬಾನ್ ಆಡಳಿತ ತಾಕೀತು ಮಾಡಿದೆ.
2021ರಲ್ಲಿ ಅಧಿಕಾರಕ್ಕೆ ಮರಳಿದ ನಂತರ, ತಾಲಿಬಾನ್ ಮಹಿಳೆಯರ ಮೇಲೆ ಹಲವಾರು ನಿರ್ಬಂಧಗಳನ್ನು ವಿಧಿಸಿದೆ.
ಸಮಾಜದ ಎಲ್ಲಾ ಎಲ್ಲೆಗಳನ್ನೂ ಮೀರಿ ಯುವಕನೊಬ್ಬ ತನ್ನ ತಾಯಿಗೆ ಮರು ಮದುವೆ ಮಾಡಿಸಿರುವ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ. ಅಬ್ದುಲ್ ಅಹದ್ ಎಂಬಾತ ತನ್ನ ತಾಯಿಗೆ ಎರಡನೇ ಮದುವೆ ಮಾಡಿಸಸುವ ಮೂಲಕ ಭಾರೀ ಸುದ್ಧಿಯಲ್ಲಿದ್ದಾನೆ.
ಮಕ್ಕಳಿರುವ ತಾಯಿಗೆ ಒಂದು ವೇಳೆ ಡಿವೋರ್ಸ್ ಬಳಿಕ ಅಥವಾ ಗಂಡ ತೀರಿ ಹೋದ ಬಳಿಕ ಎರಡನೇ ಮದುವೆಯಾದರೆ ಸಮಾಜ ನೂರೊಂದು ಕೊಂಕು ಮಾತುಗಳನ್ನಾಡುತ್ತದೆ “ಕಳೆದ 18 ವರ್ಷಗಳಿಂದ ನನ್ನ ಯೋಗ್ಯತೆಗೆ ಅನುಗುಣವಾಗಿ ಅಮ್ಮನಿಗೆ ವಿಶೇಷ ಜೀವನವನ್ನು ನೀಡಲು ಪ್ರಯತ್ನಿಸಿದ್ದೇನೆ. ಆಕೆ ನಮಗಾಗಿ ತನ್ನ ಇಡೀ ಜೀವನವನ್ನೇ ತ್ಯಾಗ ಮಾಡಿದ್ದಾಳೆ. ಅವಳು ಕೂಡಾ ಸ್ವಂತ ಶಾಂತಿಯುತ ಜೀವನವನ್ನು ನಡೆಸಲು ಅರ್ಹಳು, ಆಕೆಗೂ ಜೀವನ ಮತ್ತು ಪ್ರೀತಿಯಲ್ಲಿ ಎರಡನೇ ಅವಕಾಶವನ್ನು ಪಡೆಯುವ ಹಕ್ಕಿದೆ” ಎನ್ನುತ್ತಾ ತಾಯಿಯ ಖುಷಿಗಾಗಿ ತಾನೇ ಮುಂದೆ ನಿಂತು ಅಹದ್ ಎರಡನೇ ಮದುವೆ ಮಾಡಿಸಿದ್ದಾನೆ. ಈ ಹೃದಯಸ್ಪರ್ಶಿ ಕಥೆಯನ್ನು ಅಹದ್ (muserft.ahad) ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾನೆ.
ಒಬ್ಬ ಬಳಕೆದಾರರು “ನೀವು ನಿಮ್ಮ ತಾಯಿಯ ಖುಷಿಗಾಗಿ ಬಹಳ ಅದ್ಭುತ ಕೆಲಸವನ್ನು ಮಾಡಿದ್ದೀರಿ” ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು “ನಿಜವಾಗಿಯೂ ಒಂಟಿಯಾಗಿ ಬದುಕುವುದು ತುಂಬಾ ಕಷ್ಟ, ಪ್ರತಿಯೊಬ್ಬರಿಗೂ ಸುಖ ದುಃಖವನ್ನು ಹಂಚಿಕೊಳ್ಳಲು ಸಂಗಾತಿಯ ಅವಶ್ಯಕತೆಯಿದೆ” ಎಂದು ಹೇಳಿದ್ದಾರೆ. ಇನ್ನೂ ಅನೇಕರು ಅಹದ್‌ನ ಈ ನಡೆಗೆ ಭಾರೀ ಮೆಚ್ಚುಗೆ ಸೂಚಿಸಿದ್ದಾರೆ.
Pingback: ದಕ್ಷಿಣ ಕೊರಿಯಾದ ವಿಮಾನ ಪತನಕ್ಕೆ ಕಾರಣ ಬಹಿರಂಗ; ಬದುಕುಳಿದ ಇಬ್ಬರು ಹೇಗಿದ್ದಾರೆ ? - NAMMAKUDLA NEWS - ನಮ್ಮಕುಡ್ಲ ನ್ಯೂಸ್
Pingback: 179 ಮಂದಿ ಬಲಿ ಪಡೆದ ದ.ಕೊರಿಯಾ ವಿಮಾನ ದುರಂತ; ಇಬ್ಬರು ಬದುಕಿ ಉಳಿಯಲು ಆ ನಿಗೂಢ ಕಾರಣ ಏನು ? - NAMMAKUDLA NEWS - ನಮ್ಮಕುಡ್ಲ ನ್ಯೂ