Connect with us

LATEST NEWS

ಧರ್ಮ ಜಾಗೃತಿಗಾಗಿ  ಪಾದಯಾತ್ರೆ : ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ..

Published

on

ಧರ್ಮ ಜಾಗೃತಿಗಾಗಿ  ಪಾದಯಾತ್ರೆ  ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ

ಉಡುಪಿ: ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥರು ಕಿರು ಪಾದಯಾತ್ರೆ ನಡೆಸಿದರು. ತನ್ನ ಪಾದಯಾತ್ರೆಗಳ ಮೂಲಕವೇ ಗುರುತಿಸಿಕೊಂಡಿರುವ ಶ್ರೀಗಳು ಕಳೆದ ಐದು ವರ್ಷಗಳಿಂದ ನೀಲಾವರ ಗೋಶಾಲೆಗೆ ನಡೆಸುವ ಸಂಪ್ರದಾಯ ಇರಿಸಿಕೊಂಡಿದ್ದಾರೆ.ಅದಕ್ಕೂ ಮುನ್ನ ಇಪ್ಪತ್ತೇಳು ವರ್ಷಗಳ ಕಾಲ ಉತ್ತರಭಾರತದ ವಿವಿಧ ಧಾರ್ಮಿಕ ಕೇಂದ್ರಗಳಿಗೆ ಪಾದಯಾತ್ರೆ ಕೈಗೊಂಡು ಗಮನಸೆಳೆದಿದ್ದರು.

ಆಚಾರ್ಯ ಮಧ್ವರ ಶಿಷ್ಯ ಪರಂಪರೆಯಲ್ಲಿ ಬರುವ ಪೇಜಾವರ ಮಠಾಧೀಶರು ಮಧ್ವಾಚಾರ್ಯರಂತೆಯೇ ಧರ್ಮ ಜಾಗೃತಿಗಾಗಿ ಪಾದಯಾತ್ರೆ ನಡೆಸುತ್ತಾ ಬಂದಿದ್ದಾರೆಉಡುಪಿಯ ಕೃಷ್ಣ ಮಠದ ಆವರಣದಲ್ಲಿರುವ ಪೇಜಾವರ ಮಠದಿಂದ ಭಕ್ತರ ಜೊತೆ ನೀಲಾವರ ಗೋಶಾಲೆಯ ವರೆಗೂ ನಡೆದು ಸಾಗಿದ್ದಾರೆ. ಬಳಿಕ ಕಾಳಿಂಗಮರ್ಧನ ಕೃಷ್ಣನಿಗೆ ಪೂಜೆ ಸಲ್ಲಿಸಿದ್ದಾರೆ.

FILM

ಬದುಕಿನ ಕೊನೆಯವರೆಗೂ ನೋವು, ತಾತ್ಸಾರ, ಅಪವಾದಗಳೇ ಹೆಚ್ಚು-ಸ್ವರ್ಗದಲ್ಲಾದರೂ ನೆಮ್ಮದಿ ಸಿಗಲಿ ಅಮ್ಮಾ…

Published

on

ಬೆಂಗಳೂರು : ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ವಯೋಸಹಜ ಕಾಯಿಲೆಯಿಂದ ನಿನ್ನೆ ನಿಧನರಾಗಿದ್ದಾರೆ. ಇಂದು ನೆಲಮಂಗಲದ ಸೋಲದೇವನಹಳ್ಳಿ ತೋಟದ ಮನೆಯಲ್ಲಿ ಹಿಂದೂ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಯಿತು. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಜನಿಸಿದ ಲೀಲಾವತಿ ಕಲಿತದ್ದು ಕೇವಲ ಎರಡನೇ ತರಗತಿವರೆಗು ಮಾತ್ರ. 9ನೇ ವಯಸ್ಸಿಗೆ ತಂದೆ ಹಾಗೂ ತಾಯಿಯನ್ನು ಕಳೆದುಕೊಳ್ಳುತ್ತಾರೆ..

ಅವರನ್ನು ಕ್ರೈಸ್ತ ಕುಟುಂಬವೊಂದು ಆರೈಕೆ ಮಾಡಿದ್ದರು.
ತುತ್ತು ಅನ್ನಕ್ಕಾಗಿ ಬೇರೆಯವರ ಮನೆಯಲ್ಲಿ ಮುಸುರೆ ತಿಕ್ಕಿ, ಚಾಕರಿ ಮಾಡಿ ಆಕೆ ತನ್ನ ಬಾಲ್ಯವನ್ನು ಕಳೆದರು.
ತುಳು ಚಿತ್ರರಂಗದಲ್ಲಿ ಅಂದಿಗೆ ತುಳು ಸಿನಿಮಾಗಳು ಆರಂಭ ಆದವು. ಹೊಟ್ಟೆ ಹಸಿವನ್ನು ನೀಗಿಸಲು ಚಂದದ ಹೆಣ್ಣು ಮಗಳೋರ್ವಳು ಸಿನಿಮಾದಲ್ಲಿ ಅವಕಾಶ ಕೊಡುವಂತೆ ಅಂಗಲಾಚುತ್ತಾಳೆ. ಅವಳೇ ಮುದ್ದು ಮುದ್ದು ಲೀಲಾ ಕಿರಣ್ ಅಲಿಯಾಸ್ ಇಂದಿನ ಲೆಜೆಂಡೆರಿ ಆಕ್ಟ್ರೆಸ್ ಲೀಲಾವತಿ ಅಮ್ಮ. ಇದರ ಪರಿಣಾಮವಾಗಿ ‘ಸಾವಿರೊಡೊರ್ತಿ ಸಾವಿತ್ರಿ, ದಾರೆದ ಬುಡೆದಿ, ಬಿಸತ್ತಿ ಬಾಬು ಮೊದಲಾದ ತುಳು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.
ಬಣ್ಣದ ಬದುಕಿ ಕಟ್ಟಿಕೊಂಡು ಅವಕಾಶ ಪಡೆದು ಜೀವನ ಸಾಗಿಸಬಹುದು ಎಂಬ ಕನಸಿನೊಂದಿಗೆ ಬೆಂಗಳೂರಿಗೆ  ಹೋದ ಲೀಲಮ್ಮ ಅಲ್ಲಿ ಬರಬಾರದ ಕಷ್ಟಗಳನ್ನು ಅನುಭವಿಸಿದ್ರು.

ಆಗ ಆಸರೆಯಾಗಿದ್ದೇ ಮಹಾನ್ ಕಲಾವಿದ ಆಗಿದ್ದ ಮಹಾಲಿಂಗ ಭಾಗವತರ್ ಅವರ ಪ್ರಸಿದ್ಧ ‘ಶ್ರೀ ಸಾಹಿತ್ಯ ಸಾಮ್ರಾಜ್ಯ ಡ್ರಾಮ ಕಂಪೆನಿ. ಯಾವ ಪಾತ್ರ ಕೊಟ್ಟರೂ ಲೀಲಾಜಾಲವಾಗಿ ಅವರು ಅಭಿನಯ ಮಾಡುತ್ತಿದ್ದರು ಲೀಲಾವತಿ ಅಮ್ಮ. ಸುಬ್ಬಯ್ಯ ನಾಯ್ಡು ಅವರ ಪರಿಚಯ ಆಗಿ ‘ಭಕ್ತ ಪ್ರಹ್ಲಾದ’ ಸಿನಿಮಾದಲ್ಲಿ ಒಂದು ಪಾತ್ರವನ್ನು ಗಿಟ್ಟಿಸಿಕೊಂಡರು.

ಅದೇ ಸಂದರ್ಭದಲ್ಲಿ ಮಹಾಲಿಂಗ ಭಾಗವತರ್ ಅವರನ್ನು ಮದುವೆ ಆದ ಲೀಲಾವತಿ ಆ ಮದುವೆಯನ್ನು ರಹಸ್ಯವಾಗಿ ಇಟ್ಟರು. ಆಗ ಹೆಚ್ಚಿನ ನಟಿಯರು ತಮ್ಮ ಬೇಡಿಕೆ ಉಳಿಸಿಕೊಳ್ಳಲು ಮದುವೆಯನ್ನು ಬಹಿರಂಗ ಮಾಡುತ್ತಿರಲಿಲ್ಲ. ಮುಂದೆ ಲೀಲಾವತಿ ಜೀವನದಲ್ಲಿ ಮಹಾಲಿಂಗ ಭಾಗವತರ್ ಅವರು ಬಹಳ ಮುಖ್ಯವಾದ ಪಾತ್ರವನ್ನು ವಹಿಸಿದರು.

ಡಾ. ರಾಜ್ ಕುಮಾರ್ ಹಾಗೂ ಲೀಲಾವತಿ ಅವರದ್ದು ಸೂಪರ್ ಡೂಪರ್ ಕಾಂಬಿನೇಷನ್. ಇವರಿಬ್ಬರ ಅದ್ಭುತ ಅಭಿನಯವನ್ನು ಕಂಡು ರಾಜ್ – ಲೀಲಾವತಿ ಅವರನ್ನು ಗಂಡ ಹೆಂಡತಿ ಎಂದೇ ಕರೆಯಲು ಆರಂಭಿಸಿದರು.

ಆದ್ರೆ ಲೀಲಾವತಿ ಅಮ್ಮ ರಾಜ್ ಅವರನ್ನು ಭಕ್ತಿಯಿಂದ ‘ದೊಡ್ಡೋರು’ ಎಂದೇ ಭಕ್ತಿಯಿಂದ ಕರೆಯುತ್ತಿದ್ದರು. ಡಾ. ರಾಜ್ ಅವರಿಗೆ ಮಾತ್ರ ಲೀಲಾವತಿ ಅಂದರೆ ಬಹಳ ಪ್ರೀತಿ..ಅವರೇ ಲೀಲಾವತಿಯವರಿಗರ  ಬರೆದ ಪತ್ರಗಳು ವೈರಲ್ ಆಗಿದ್ದವು.ಇದೀಗ ಲೀಲಾವತಿ ಅಮ್ಮ ನಮ್ಮನೆಲ್ಲಾ ಬಿಟ್ಟು ಬಾರದ ಊರಿಗೆ ತೆರಳಿದ್ದಾರೆ. ಇಂದು ಹಿಂದೂ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆದಿದೆ. ಬದುಕಿದ್ದಾಗ ಅಷ್ಟೇನೂ ಸುಖ  ಕಾಣದ ಲೀಲಾವತಿ ಅಮ್ಮನವರಿಗೆ ಸ್ವರ್ಗದಲ್ಲಾದರೂ ಸುಖ ನೆಮ್ಮದಿ ಸಿಗಲಿ.

Continue Reading

DAKSHINA KANNADA

ಡಿ. 14ರಿಂದ 17 ರವರೆಗೆ “ಆಳ್ವಾಸ್ ವಿರಾಸತ್”

Published

on

ಮೂಡಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ನಡೆಸುವ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ, 29ನೇ ವರ್ಷದ ‘ಆಳ್ವಾಸ್ ವಿರಾಸತ್ 2023’ ಡಿ.14ರಿಂದ 17ರವರೆಗೆ ಮೂಡಬಿದಿರೆಯ ಪುತ್ತಿಗೆ ಗ್ರಾಮದ ವಿವೇಕಾನಂದ ನಗರದ  ವನಜಾಕ್ಷಿ ಕೆ. ಶ್ರೀಪತಿ ಭಟ್ ಬಯಲು ರಂಗಮಂದಿರದಲ್ಲಿ ನಡೆಯಲಿದೆ.

ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಶುಭಾಶೀರ್ವಾದೊಂದಿಗೆ ನಡೆಯುವ ವಿರಾಸತ್ ಅನ್ನು ದೇಶಕ್ಕಾಗಿ ದೇಹತ್ಯಾಗ ಮಾಡಿದ ವೀರಯೋಧ ಕ್ಯಾಪ್ಟನ್ ಎಂ.ವಿ. ಪ್ರಾಂಜಲ್ ಅವರಿಗೆ ಅರ್ಪಣೆ ಮಾಡಲಾಗಿದೆ ಎಂದು ಆಳ್ವಾಸ್ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ್ ಆಳ್ವ ಅವರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಡಿ.14ರಂದು ರಾಜ್ಯಪಾಲರಾದ ಥಾವರ್‌ ಚಂದ್ ಗೆಹ್ಲೋಟ್ ವಿರಾಸತ್ ಉದ್ಘಾಟಿಸಲಿದ್ದು,ಈ ಬಾರಿಯ ವಿರಾಸತ್ ನಲ್ಲಿ ಬೆನ್ನಿದಯಾಲ್, ವಿಜಯಪ್ರಕಾಶ್, ಶ್ರೇಯಾ ಘೋಷಾಲ್ ಸ್ವರ ಮಾಧುರ್ಯ, ಪ್ರತಿನಿತ್ಯ 13 ಗಂಟೆಗಳ ಕಾಲ 750 ಮಳಿಗೆಗಳಲ್ಲಿ ಪ್ರದರ್ಶನ ಹಾಗೂ ಮಾರಾಟಗಳು ನಡೆಯಲಿವೆ. ಭವ್ಯ ಸಾಂಸ್ಕೃತಿಕ ಮೆರವಣಿಗೆ ಬಳಿಕ ಸಾಂಸ್ಕೃತಿಕ ರಥ ಸಂಚಲನ ಮತ್ತು ರಥಾರತಿ, ಕೃಷಿ ಮೇಳ, ಆಹಾರ ಮೇಳ, ಫಲಪುಷ್ಪ ಮೇಳ, ಕರಕುಶಲ ಮತ್ತು ಪ್ರಾಚ್ಯವಸ್ತು ಪದರ್ಶನ ಮೇಳ, ಚಿತ್ರಕಲಾ ಮೇಳಗಳು ಕಲಾಕೃತಿಗಳ ಪ್ರದರ್ಶನ ನಡೆಯಲಿದೆ. ಸ್ಕೌಟ್ಸ್ ಗೈಡ್ಸ್ ಸಾಹಸಮಯ ಚಟುವಟಿಕೆ ಕೇಂದ್ರವನ್ನು ಸ್ಥಾಪಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು. ಪತ್ರಿಕಾ ಗೋಷ್ಠಿಯಲ್ಲಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.

Continue Reading

BELTHANGADY

ಬೆಳ್ತಂಗಡಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಪದಾಧಿಕಾರಿಗಳ ಆಯ್ಕೆ

Published

on

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಯುವ ವೇದಿಕೆ ಬೆಳ್ತಂಗಡಿ ಇದರ 2023-25ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆಯು ವಾಣಿ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.


ಅಧ್ಯಕ್ಷರಾಗಿ ಚಂದ್ರಕಾಂತ್ ನಿಡ್ಡಾಜೆ, ಕಾರ್ಯದರ್ಶಿಯಾಗಿ ಸುರೇಶ್ ಕೌಡಂಗೆ, ಕೋಶಾಧಿಕಾರಿಯಾಗಿ ರಂಜಿತ್ ಕಳೆಂಜ, ಜೊತೆ ಕಾರ್ಯದರ್ಶಿಯಾಗಿ ತೀಕ್ಷಿತ್ ಕೆ.ಕಲ್ಬೆಟ್ಟು ದಿಡುಪೆ, ಉಪಾಧ್ಯಕ್ಷರುಗಳಾಗಿ ನಿತಿನ್ ಕಲ್ಮಂಜ ಮತ್ತು ಪ್ರಶಾಂತ್ ಅಂತರ ಕಡಿರುದ್ಯಾವರ, ಸಂಘಟನಾ ಕಾರ್ಯದರ್ಶಿಯಾಗಿ ಪ್ರಮೋದ್ ದಿಡುಪೆ, ಕಾನೂನು ಸಲಹೆಗಾರರಾಗಿ ನವೀನ್ ಬಿ.ಕೆ.ಕಲ್ಮಂಜ, ಯಶವಂತ್ ಬನಂದೂರು ಮತ್ತು ಜಯಾನಂದ ಗೌಡ ಬೆಳ್ತಂಗಡಿ ಆಯ್ಕೆಯಾದರು.

ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಯಶವಂತ ಗೌಡ ಪುದುವೆಟ್ಟು, ಮಂಜುನಾಥ ಗೌಡ ಚಾರ್ಮಾಡಿ, ವಿಕ್ರಮ್ ಧರ್ಮಸ್ಥಳ, ಸತೀಶ್ ಬೆಳಾಲು, ಪ್ರಸಾದ್ ಅಡಿಮಾರ್ ಚಾರ್ಮಾಡಿ, ಹೇಮಂತ್ ಕಳಿಯ, ದಿನೇಶ್ ದೇಂತ್ಯಾರು ಕೊಯ್ಯೂರು, ಪ್ರದೀಪ್ ನಾಗಾಜೆ ನಾವೂರು, ಭರತ್ ಗೌಡ ಪುದುವೆಟ್ಟು, ನಿತೇಶ್ ಬೆಳ್ತಂಗಡಿ, ಅಕ್ಷಯ್ ಕುಮಾರ್ ಮಾಚಾರ್, ಕರುಣಾಕರ ಗೌಡ ಉಜಿರೆ, ಗಿರೀಶ್ ನಿಡ್ಲೆ ಮತ್ತು ಕಿಶಾನ್ ಗೌಡ ಸವಣಾಲು ಇವರನ್ನು ಆಯ್ಕೆ ಮಾಡಲಾಯಿತು. ಈ ಸಂಧರ್ಭದಲ್ಲಿ ತಾಲೂಕು ಸಂಘದ ನಿಕಟ ಪೂರ್ವ ಕಾರ್ಯದರ್ಶಿ ಮೋಹನ್ ಗೌಡ ಕೊಯ್ಯೂರು ಉಪಸ್ಥಿತರಿದ್ದರು. ಯಶವಂತ್ ಬನಂದೂರು ಸ್ವಾಗತಿಸಿದರು.ಕಾರ್ಯದರ್ಶಿ ಸುರೇಶ್ ಕೌಡಂಗೆ ವಂದಿಸಿದರು.

Continue Reading

LATEST NEWS

Trending