Saturday, June 3, 2023

ಕುಕ್ಕರ್ ಸ್ಪೋಟಕ್ಕೂ ಮುನ್ನ ಫೋಟೋ ತೆಗೆಸಿದ್ದ ಶಾರೀಕ್‌-ಐಸಿಸ್‌ ದಿರಿಸು ಧರಿಸಿ, ಕುಕ್ಕರ್ ಕೈಯಲ್ಲಿಟ್ಟು ತೆಗೆದ ಭಾವಚಿತ್ರ ಪತ್ತೆ

ಮಂಗಳೂರು: ಮಂಗಳೂರಿನ ಆಟೋ ರಿಕ್ಷಾ ಸ್ಫೋಟ ಪ್ರಕರಣ ಸಂಬಂಧ ಶಂಕಿತ ಉಗ್ರ ಶಾರಿಕ್ ಹೊಸ ಮುಖವಾಡ ಬಯಲಾಗಿದೆ.

ದೊಡ್ಡ ಮಟ್ಟದಲ್ಲಿ ಸ್ಪೋಟವನ್ನು ನಡೆಸಲು ಶಾರೀಕ್‌ ಮಂಗಳೂರಿನಲ್ಲಿ ಸಂಚುರೂಪಿಸಿದ್ದ ಎನ್ನುವುದು ಈತನ ಕೃತ್ಯದಿಂದಲೇ ದೃಢವಾಗಿದೆ.

ಮೈಸೂರಿನಿಂದ ಮಂಗಳೂರಿಗೆ ಕುಕ್ಕರ್ ಬಾಂಬ್‌ ತರುವುದಕ್ಕೂ ಮುನ್ನ ಶಾರೀಕ್‌ ವಿಚಿತ್ರ ವೇಷಭೂಷಣದೊಂದಿಗೆ, ಕುಕ್ಕರ್ ಕೈಯಲ್ಲಿ ಹಿಡಿದು ತೆಗೆದಿರುವ ಭಾವಚಿತ್ರ ಇದೀಗ ಲಭ್ಯವಾಗಿದೆ.
ಐಸಿಸ್ ಉಗ್ರರನ್ನೇ ಅನುಸರಿಸುತ್ತಿದ್ದ ಶಾರಿಖ್ ಅವರನ್ನೇ ಹೋಲುವ ಧಿರಿಸಿ ಧರಿಸಿ ಕುಕ್ಕರ್ ಬಾಂಬ್ ಜೊತೆಗೆ ಕಾಣಿಸಿಕೊಂಡಿರುವ ಫೋಟೋ ಲಭ್ಯವಾಗಿದೆ.

ಆರೋಪಿಯ ಮೈಸೂರಿನ ಮನೆಯಲ್ಲಿ ಲಭ್ಯವಾಗಿದೆ ಎನ್ನಲಾದ ಆತನ ಫೋಟೋಗಳು ನಿಜಕ್ಕೂ ಭಯಾನಕವಾಗಿದೆ. ಕುಕ್ಕರ್ ಬಾಂಬ್ ತಯಾರಿಸಿದ ಬಳಿಕ ಆತ ಕುಕ್ಕರ್ ಬಾಂಬ್ ಜೊತೆಗೆ ಫೋಟೋಗೆ ಫೋಸು ನೀಡಿದ್ದ.

ಬಲಗೈಯ ತೋರು ಬೆರಳು ಎತ್ತಿ ತೋರಿಸುತ್ತಾ ಐಸಿಸ್ ಮಾದರಿ ಅನುಸರಿಸಿದ್ದಾನೆ. ಕಪ್ಪು ಬಣ್ಣದ ಟೀ ಶರ್ಟ್ ಹಾಗೂ ಅರೇಬಿಕ್ ದೇಶಗಳಲ್ಲಿ ಧರಿಸುವ ರುಮಾಲು ಧರಿಸಿ ಫೋಟೋದಲ್ಲಿ ಕಾಣಿಸಿಕೊಂಡಿದ್ದಾನೆ.

ಹೀಗಾಗಿ ಶಾರಿಕ್ ಬಹುದೊಡ್ಡ ಭಯೋತ್ಪಾದನಾ ಕೃತ್ಯಕ್ಕೆ ಸಂಚು ಹೂಡಿದ್ದ ಅನ್ನೋದು ಬಯಲಾಗಿದೆ. ತಾನೇ ಗೆದ್ದೆ ಎನ್ನುವ ಸಂಕೇತವಾಗಿ ಒಂದು ಬೆರಳನ್ನು ಎತ್ತಿ ತೋರಿಸುವ ಮೂಲಕ ಈತ ತನ್ನ ಕೃತ್ಯಕ್ಕೆ ಮತಾಂಧತೆ ಬಳಸಿಕೊಂಡಿದ್ದಾನೆ.

ಮೈಸೂರಿನಲ್ಲಿ ಈತ ಇದುವರೆಗೂ ಅವಿತುಕೊಂಡಿದ್ದು ಪೊಲೀಸರಿಗೆ ಕೈಗೆ ಸಿಗದೇ ಇರುವುದು ಸಾರ್ವಜನಿಕರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.

 

LEAVE A REPLY

Please enter your comment!
Please enter your name here

Hot Topics