Connect with us

    DAKSHINA KANNADA

    ಹುಲಿ ಉಗುರು ಧರಿಸಿದ ಕರಾವಳಿ ಮುಖಂಡನ ಫೋಟೋ ವೈರಲ್..!

    Published

    on

    ಉಡುಪಿ: ಹುಲಿ ಉಗುರು ಧರಿಸಿದ್ದವರಿಗೆ ಇದೀಗ ಅರಣ್ಯ ಇಲಾಖೆಯ ಶನಿ ಕಾಟ ಶುರುವಾಗಿದೆ. ಈಗಾಗಲೇ ಬಿಸ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಹುಲಿ ಉಗುರು ಧರಿಸಿದ್ದ ಎನ್ನುವ ಕಾರಣಕ್ಕೆ ಸ್ಪರ್ಧೆಯಿಂದ ಹೊರ ಬಿದ್ದ ಬೆನ್ನಲ್ಲೇ ದರ್ಶನ್‌, ಜಗ್ಗೇಶ್‌ ಸಹಿತ ಹಲವು ಸ್ಟಾರ್ ನಟರು ಕೂಡಾ ಹುಲಿ ಉಗುರು ಧರಿಸಿದ ವಿಚಾರ ವಿವಾದಕ್ಕೆ ಕಾರಣವಾಗಿತ್ತು. ಈ ನಡುವೆ ಈ ಹುಲಿ ಉಗುರು ಪ್ರಕರಣ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಆವರಿಸತೊಡಗಿದೆ.

    ಕರಾವಳಿಯ ಹಿಂದೂ ಮುಖಂಡ ಹುಲಿ ಉಗುರು ಪೆಂಡೆಂಟ್ ಧರಿಸಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇವರ ವಿರುದ್ಧವೂ ಪ್ರಕರಣ ದಾಖಲಿಸಬೇಕು ಎನ್ನುವ ಕೂಗು ಸಾಮಾಜಿ ಜಾಲ ತಾಣದಲ್ಲಿ ಕೇಳಿ ಬರುತ್ತಿದೆ. ಕಾಪು ಬಜರಂಗದಳ ಸಂಚಾಲಕ ಸುಧೀರ್ ಸೋನು ಅವರು ತನ್ನ ಕೊರಳಿನಲ್ಲಿ ಭಾರೀ ಚಿನ್ನ ಧರಿಸಿಕೊಂಡು ಜನರ ಗಮನ ಸೆಳೆಯುತ್ತಿದ್ದರು. ಇವರ ಚೈನ್‌ನ ಪೆಂಡೆಂಟ್‌ನಲ್ಲೂ ಹುಲಿ ಉಗುರು ಇರುವುದು ಕಂಡು ಬಂದಿದೆ. ಸುಧೀರ್ ಸೋನು ಹುಲಿ ಉಗುರು ಪೆಂಡೆಂಟ್ ಧರಿಸಿರುವುದು ಬೆಳಕಿಗೆ ಬಂದಿದೆ. ಸುಧೀರ್ ಸೋನು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿ ಭಾಗಿಯಾಗುತ್ತಿದ್ದವರಾದ ಹಿನ್ನೆಲೆಯಲ್ಲಿ ಇವರ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಒಟ್ಟಿನಲ್ಲಿ ಹುಲಿ ಉಗುರು ಪ್ರಕರಣ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಸುತ್ತತೊಡಗಿದೆ.

     

    Click to comment

    Leave a Reply

    Your email address will not be published. Required fields are marked *

    BIG BOSS

    ಮಂಗಳೂರು: ಪತಿಯ ಅ*ನೈತಿಕ ಸಂಬಂಧ; ತ್ರಿವಳಿ ತಲಾಕ್ ಮೂಲಕ ಪತ್ನಿಗೆ ವಿಚ್ಚೇದನ

    Published

    on

    ಮಂಗಳೂರು: ತಂದೆಯನ್ನು ಮನೆಗೆ ಕರೆದು ತಂದೆಯ ಎದುರಿನಲ್ಲಿ ಪತಿ ನನಗೆ ತ್ರಿವಳಿ ತಲಾಕ್ ನೀಡಿದ್ದಾರೆ ಎಂದು ಮಹಿಳೆಯೊಬ್ಬರು ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ದೂರು ನೀಡಿದ್ದಾರೆ.

    ಉಳ್ಳಾಲದ ಸಮ್ಮರ್ ಸ್ಯಾಂಡ್ ಬಳಿಯ ನಿವಾಸಿಯಾಗಿರುವ ಮಹಮ್ಮದ್ ದಿಲ್ಫಾಜ್‌ ಎಂಬವರ ವಿರುದ್ಧ ಈ ದೂರು ದಾಖಲಾಗಿದೆ. 2019 ರಲ್ಲಿ ಪ್ರೀತಿಸಿ ಮದುವೆಯಾಗಿದ್ದು, ಕೆಲ ಕಾಲ ಚೆನ್ನಾಗಿ ಸಂಸಾರ ಕೂಡಾ ನಡೆಸಿ ಬಳಿಕ ಪತಿ ಪರ ಸ್ತ್ರೀಯ ಜೊತೆ ಸಂಬಂಧ ಬೆಳೆಸಿದ್ದಾಗಿ ಆರೋಪಿಸಲಾಗಿದೆ.

    ಈ ವಿಚಾರವನ್ನು ಪ್ರಶ್ನೆ ಮಾಡಿದ ಪತ್ನಿಗೆ ದೈಹಿಕ ಹಿಂ*ಸೆ ನೀಡಲಾಗಿದ್ದು, ನಿರಂತರ ಕಿ*ರುಕುಳ ನೀಡಲಾದ ಬಗ್ಗೆ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಬಗ್ಗೆ ಎರಡೂ ಮನೆಯವರೂ ರಾಜಿ ಪಂಚಾಯತಿ ನಡೆಸಿದ್ದರೂ ಸಂಸಾರ ಸರಿ ಹೋಗಿರಲಿಲ್ಲ. ಇದೀಗ ಹಣಕ್ಕಾಗಿ ಬೇಡಿಕೆ ಇಟ್ಟು ತಂದೆಯನ್ನು ಮನೆಗೆ ಕರೆಸಿ ಅವರ ಸಮ್ಮುಖದಲ್ಲಿ ಮೂರ ಬಾರಿ ತಲಾಕ್ ಹೇಳಿ ತವರು ಮನೆಗೆ ಕಳುಹಿಸಲಾಗಿದೆ ಎಂದು ನೊಂದ ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.

    ಈ ಬಗ್ಗೆ ಎಫ್‌ಐಆರ್ ದಾಖಲಿಸಿಕೊಂಡಿರುವ ಪಾಂಡೇಶ್ವರ ಮಹಿಳಾ ಠಾಣಾ ಪೊಲೀಸರು ತನಿಖೆ ಆರಂಭಿಸಿದ್ದಾರೆ. ತ್ರಿವಳಿ ತಲಾಕ್ ಕಾನೂನನ್ನು ಕೇಂದ್ರ ಸರ್ಕಾರ ರದ್ದು ಮಾಡಿರುವುದರಿಂದ ಈ ದೂರಿಗೆ ಪೊಲೀಸರು ಹೆಚ್ಚಿನ ಮಾನ್ಯತೆ ನೀಡಿ ವಿಚಾರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ.

    Continue Reading

    BIG BOSS

    ಮಂಗಳೂರು: ಕುಖ್ಯಾತ ರೌಡಿಶೀಟರ್ ದಾವೂದ್ ಸಂಚು ರೂಪಿಸುತ್ತಿದ್ದಾಗಲೇ ಅರೆಸ್ಟ್‌

    Published

    on

    ಮಂಗಳೂರು: ಕುಖ್ಯಾತ ರೌಡಿಶೀಟರ್ ದಾವೂದ್ (43) ಎಂಬಾತನನ್ನು ಮಂಗಳೂರು ಸಿಸಿಬಿ ಪೊಲೀಸರ ತಂಡವು ನವೆಂಬರ್ 22ರ ಸಂಜೆ ಬಂಧಿಸಿದೆ.

    ಆರೋಪಿ ದಾವೂದ್ ಉಳ್ಳಾಲದ ಧರ್ಮನಗರ ನಿವಾಸಿ. ಅವನು ಮಂಗಳೂರಿನ ತಲಪಾಡಿ-ದೇವಿಪುರ ರಸ್ತೆ ಬಳಿ ಪ್ರತಿಸ್ಪರ್ಧಿ ಗ್ಯಾಂಗ್ ಸದಸ್ಯರ ವಿರುದ್ಧ ಅಪರಾಧ ಎಸಗಲು ಸಂಚು ರೂಪಿಸುತ್ತಿದ್ದಾಗಲೇ ಬಂಧಿಸಲಾಗಿದೆ. ಖಚಿತ ಮಾಹಿತಿ ಮೇರೆಗೆ ಪಿಎಸ್ ಐ ನರೇಂದ್ರ ನೇತೃತ್ವದ ಸಿಸಿಬಿ ತಂಡ ರೌಡಿಶೀಟರ್‌ನನ್ನು ಬಂಧಿಸಲು ಮುಂದಾಗಿದೆ.

    ಕಾರ್ಯಾಚರಣೆ ವೇಳೆ ದಾವೂದ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಅಧಿಕಾರಿಗಳ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ್ದು, ಪಿಎಸ್ ಐ ನರೇಂದ್ರ ಮತ್ತು ಇತರ ಸಿಬ್ಬಂದಿಗೆ ಗಾಯಗಳಾಗಿವೆ. ದಾಳಿಯ ಹೊರತಾಗಿಯೂ ಪೊಲೀಸ್ ತಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಮುಂದಿನ ಕ್ರಮಕ್ಕಾಗಿ ದಾವುದ್‌ನನ್ನು ಉಳ್ಳಾಲ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.

    ದಾವೂದ್ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಿಎಸ್ ಐ ನರೇಂದ್ರ ಅವರ ದೂರಿನ ಮೇರೆಗೆ ಆರೋಪಿ ದಾವುದ್ ವಿರುದ್ಧ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಲಾಗಿದೆ. ದಾವೂದ್ ಕೊಲೆ ಸೇರಿದಂತೆ ಹಲವು ಅಪರಾಧಗಳಲ್ಲಿ ಭಾಗಿಯಾಗಿರುತ್ತಾನೆ. ಉಳ್ಳಾಲ, ಮಂಗಳೂರು ದಕ್ಷಿಣ ಮತ್ತು ಬಜ್ಪೆ ಸೇರಿದಂತೆ ಇತರ ಸ್ಥಳಗಳಲ್ಲಿ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದಾಗಿ ವರದಿಯಾಗಿದೆ .

    Continue Reading

    BIG BOSS

    ಕೊಣಾಜೆ: 3 ವರ್ಷದ ಬಾಲೆಗೆ ಕಿ*ರುಕುಳ ನೀಡಿದ 70ರ ಅಜ್ಜ ಅರೆಸ್ಟ್

    Published

    on

    ಕೊಣಾಜೆ: ಬಾಲಕಿಗೆ ಕಿ*ರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಪ್ಪತ್ತರ ಹರೆಯದ ವೃದ್ಧನನ್ನು ಪೊಲೀಸರು ಬಂಧಿಸಿ,‌ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

    ಆರೋಪಿಯನ್ನು ಅಬ್ದುಲ್ಲಾ (70) ಎಂದು ಗುರುತಿಸಲಾಗಿದೆ.

    ಉಳ್ಳಾಲ ತಾಲೂಕು ಬಾಳೆಪುಣಿ ಗ್ರಾಮದಲ್ಲಿ ಘಟನೆ ನಡೆದಿದೆ. 3 ವರ್ಷದ ಬಾಲಕಿ ಆಟವಾಡುತ್ತಿದ್ದಾಗ ಆರೋಪಿ ಲೈಂ*ಗಿಕ ಕಿ*ರುಕುಳ ನೀಡಿದ್ದ ಎಂದು ಆರೋಪಿಸಲಾಗಿದೆ. ಬಾಲಕಿಯ ಅಸ್ವಸ್ಥತೆಯನ್ನು ಗಮನಿಸಿದ ತಾಯಿ ವೈದ್ಯಕೀಯ ತಪಾಸಣೆ ನಡೆಸಿದ್ದು ಬಳಿಕ ಕೊಣಾಜೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

    ಈ ಬಗ್ಗೆ ಕೊಣಾಜೆ ಪೊಲೀಸರು ಆರೋಪಿ ವಿರುದ್ಧ ಪೋ*ಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

    Continue Reading

    LATEST NEWS

    Trending