Wednesday, February 8, 2023

ಉಡುಪಿ ಜಿಲ್ಲಾ ಕಾಂಗ್ರೆಸ್ ನ ಒಳಜಗಳ – ವೈರಲ್ ಆಗಿದೆ ಮಾಜಿ ಶಾಸಕರೊಬ್ಬರ ಆಡಿಯೋ

ಉಡುಪಿ : ಉಡುಪಿ ಜಿಲ್ಲಾ ಕಾಂಗ್ರೇಸ್ ನ ಒಳಜಗಳ ಜಗಜ್ಜಾಹಿರಾಗಿದೆ.. ಇದಕ್ಕೆ ಸಾಕ್ಷಿ ಎನ್ನುವಂತೆ ಒಂದು ಆಡಿಯೋ ಈಗ ಕರಾವಳಿಯಲ್ಲಿ ಸಖತ್ ವೈರಲ್ ಆಗಿದೆ.


ಸಿದ್ದರಾಮಯ್ಯ ಸರ್ಕಾರದಲ್ಲಿ ಕ್ರೀಡಾ ಸಚಿವರಾಗಿದ್ದ ಮೊಗವೀರ ನಾಯಕ ಪ್ರಮೋದ್ ಮಧ್ವರಾಜ್ ವಿರುದ್ದ ಅವರದೇ ಸಮುದಾಯದ ಅವರದೇ ಪಕ್ಷದ ಮಾಜಿ ಶಾಸಕ ಯು.ಅರ್.ಸಭಾಪತಿ ಅವಾಚ್ಯ ರೀತಿಯಲ್ಲಿ ಮಾತನಾಡಿರುವ ಆಡಿಯೋ ಕರಾವಳಿಯಾದ್ಯಂತ ವೈರಲ್ ಆಗುತ್ತಿದೆ.


ಈ ಆಡಿಯೋ ತುಳು ಭಾಷೆಯಲ್ಲಿದೆ. ಪ್ರಸಾರಕ್ಕೆ ಯೋಗ್ಯವಲ್ಲದ ರೀತಿಯಲ್ಲಿ ಸಭಾಪತಿಯವರು ಪ್ರಮೋದ್ ಮಧ್ವರಾಜ್ ಅವರನ್ನು ನಿಂಧಿಸಿ, ಬೈಗುಳಗಳ ಸುರಿಮಳೆಗೈದಿದ್ದಾರೆ. ವೈರಲ್ ಆಗಿರುವ ಆಡಿಯೋದಲ್ಲಿರುವ ಸಂಭಾಷಣೆಯಲ್ಲಿ ಪ್ರಮೋದ್ ತಾಯಿ ಮಾಜಿ ಸಂಸದೆ, ಸಚಿವೆ ಮನೋರಮಾ ಅವರನ್ನೂ ತರಾಟೆಗೆ ತೆಗೆದುಕೊಂಡಿದ್ದಾರೆ.

ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಕಟ್ಟಿಬೆಳೆಸಿದವನು ನಾನು. ಅಂದು ನಾನು ಚುನಾವಣೆಗೆ ನಿಂತಾಗ ಇದೇ ಪ್ರಮೋದ್ ಮತ್ತು ಅವರ ತಾಯಿ‌ ನನ್ನನ್ನು ಸೋಲಿಸಿದರು. ನಾನು ಕೇವಲ ,1200 ವೋಟ್ ನಲ್ಲಿ ಸೋಲಬೇಕಾಯ್ತು. ಮೂರು ವರ್ಷ ಸಚಿವನಾಗಿದ್ದ ಪ್ರಮೋದ್ 12 ಸಾವಿರ ವೋಟ್ ನಲ್ಲಿ ಸೋತಿದ್ದಾರೆ. ನಾಚಿಕೆ ಆಗಲ್ವಾ, ನನ್ನ ಕಾಲದಲ್ಲಿ ತಾಲೂಕು ಪಂಚಾಯತ್, ನಗರಸಭೆ ಎಲ್ಕಾ ಕಡೆ ಕಾಂಗ್ರೆಸ್ ಆಡಳಿತವಿತ್ತು, ಪ್ರಮೋದ್ ಕಾಲದಲ್ಲಿ ಏನಾಯ್ತು? ನಗರಸಭೆಯ 36 ರಲ್ಲಿ 32 ಸೀಟ್ ಬಿಜೆಪಿಗೆ ಹೋಯ್ತು…ನಗರಸಭೆ, ಜಿಲ್ಲಾಪಂಚಾಯತ್ ಅಧಿಕಾರ ಹೋಯ್ತು..ಕಾಂಗ್ರೆಸ್ ಪಕ್ಷ ಸರ್ವನಾಶ ಮಾಡಿದ್ದೇ ಪ್ರಮೋದ್. ನಾವು ಹೋರಾಟ ಮಾಡಿ ಆಸ್ಕರ್ ಫರ್ನಾಂಡೀಸ್ ರನ್ನು ಗೆಲ್ಲಿಸಿದ ಜನ, ಅದಕ್ಕಾಗಿ‌ ಇಂದಿರಾಗಾಂಧಿವರೆಗೂ ಹೊಗಿದ್ದೆವು…ಅವಾಗೆಲ್ಲಾ ಈ ಪ್ರಮೋದ್,ಮನೋರಮಾ ಎಲ್ಲಿದ್ರು ಎಂದು ಹಳೇ ಫೈಲುಗಳನ್ನು ಓಪನ್ ಮಾಡಿ‌ ಜಾಡಿಸಿದ್ದಾರೆ.

ಸದ್ಯ ಈ ಆಡಿಯೋ ಸಖತ್ ವೈರಲ್ ಆಗಿದ್ದು, ಉಡುಪಿ ಜಿಲ್ಲಾ ಕಾಂಗ್ರೇಸ್ ನಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವುದು ಈಗ ಜಗಜ್ಜಾಹಿರವಾಗಿದೆ. ಸದ್ಯ ಕೆಪಿಸಿಸಿಗೆ ನೂತನ ಅಧ್ಯಕ್ಷರಾಗಿ ಡಿ.ಕೆ ಶಿವಕುಮಾರ್ ನೇಮಕವಾಗಿದ್ದು, ಉಡುಪಿ ಕಾಂಗ್ರೇಸ್ ನ ಒಳಜಗಳಕ್ಕೆ ಯಾವ ರೀತಿ ಕ್ರಮಕೈಗೊಳ್ಳುತ್ತಾರೆ ಕಾದು ನೋಡಬೇಕಿದೆ.

LEAVE A REPLY

Please enter your comment!
Please enter your name here

Hot Topics