International news
ಪೆಟ್ರೋಲ್ ಟ್ಯಾಂಕರ್ ಸ್ಪೋ*ಟ: 70 ಮಂದಿ ಸಾ*ವು
Published
4 hours agoon
By
NEWS DESK3ಮಂಗಳೂರು/ಮೈದುಗುರಿ (ನೈಜೀರಿಯಾ) : ಉತ್ತರ ನೈಜೀರಿಯಾದಲ್ಲಿ ಶನಿವಾರ ಪೆಟ್ರೋಲ್ ಟ್ಯಾಂಕರ್ ಸ್ಪೋ*ಟಗೊಂಡ ಪರಿಣಾಮ ಕನಿಷ್ಠ 70 ಜನ ಮೃ*ತಪಟ್ಟು, ಹಲವರು ಗಾಯಗೊಂಡಿದ್ದಾರೆ ಎಂದು ದೇಶದ ರಾಷ್ಟ್ರೀಯ ತುರ್ತು ಏಜೆನ್ಸಿ ತಿಳಿಸಿದೆ.
ವರದಿಗಳ ಪ್ರಕಾರ, ಘಟನೆಯಲ್ಲಿ 70ಕ್ಕೂ ಹೆಚ್ಚು ಮಂದಿ ಸಾ*ವಿಗೀಡಾಗಿದ್ದು, 56 ಜನ ಗಾಯಗೊಂಡಿದ್ದಾರೆ. 15ಕ್ಕೂ ಹೆಚ್ಚು ಅಂಗಡಿಗಳು ನಾಶವಾಗಿವೆ. ಸದ್ಯ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ರಾಷ್ಟ್ರೀಯ ತುರ್ತು ನಿರ್ವಹಣಾ ಪ್ರಾಧಿಕಾರ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: ರಾಯಚೂರು ಡಿಸಿ ಆಗಿದ್ದವರು…ಸನ್ಯಾಸಿ ಆಗಿದ್ದು ಹೇಗೆ ?
ಕಳೆದ ಅಕ್ಟೋಬರ್‌ನಲ್ಲಿ ಜಿಗಾವಾ ರಾಜ್ಯದಲ್ಲಿ ಇದೇ ರೀತಿಯ ಸ್ಪೋ*ಟ ಸಂಭವಿಸಿದ್ದು, 147 ಮಂದಿ ಸಾ*ವಿಗೀಡಾಗಿದ್ದರು.
International news
ಸುಪ್ರೀಂ ಕೋರ್ಟ್‌ನ ಇಬ್ಬರು ನ್ಯಾಯಮೂರ್ತಿಗಳ ಗುಂಡಿಕ್ಕಿ ಹ*ತ್ಯೆ
Published
24 hours agoon
18/01/2025By
NEWS DESK3ಮಂಗಳೂರು/ಟೆಹ್ರಾನ್ : ಸುಪ್ರೀಂ ಕೋರ್ಟ್‌ನ ಇಬ್ಬರು ನ್ಯಾಯಮೂರ್ತಿಗಳನ್ನು ಗುಂಡಿಕ್ಕಿ ಹ*ತ್ಯೆ ಮಾಡಿರುವ ಘಟನೆ ಟೆಹ್ರಾನ್‌ನಲ್ಲಿ ಇಂದು (ಶನಿವಾರ) ನಡೆದಿದೆ.
ಈ ಘಟನೆಯಲ್ಲಿ ಮತ್ತೋರ್ವ ನ್ಯಾಯಮೂರ್ತಿ ಗಾಯಗೊಂಡಿದ್ದಾರೆ ಎಂದು ನ್ಯಾಯಾಂಗದ ‘ಮಿಜಾನ್’ ಸುದ್ದಿ ವೆಬ್‌ಸೈಟ್ ವರದಿ ಮಾಡಿದೆ. ಆಯತುಲ್ಲಾ ಮೊಹಮ್ಮದ್ ಮೊಘಿಶೆ ಹಾಗೂ ಅಲಿ ರಝನಿ ಹ*ತ್ಯೆಗೀಡಾದ ನ್ಯಾಯಮೂರ್ತಿಗಳು.
ಸುಪ್ರೀಂ ಕೋರ್ಟ್‌ನ ಹೊರಗೆ ನ್ಯಾಯಮೂರ್ತಿಗಳ ಮೇಲೆ ಗುಂಡಿನ ದಾಳಿ ನಡೆಸಿದ ದಾಳಿಕೋರ ಬಳಿಕ ಆತ್ಮ*ಹತ್ಯೆ ಮಾಡಿಕೊಂಡಿದ್ದಾನೆ ಎಂದು ವರದಿಯಾಗಿದೆ. ಘಟನೆಯಲ್ಲಿ ನ್ಯಾಯಮೂರ್ತಿಯೊಬ್ಬರ ಅಂಗರಕ್ಷಕ ಕೂಡ ಗಾಯಗೊಂಡಿದ್ದಾರೆ ಎಂದು ಇರಾನ್ ಮಾಧ್ಯಮಗಳು ವರದಿ ಮಾಡಿವೆ. ಹ*ತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.
ಇದನ್ನೂ ಓದಿ: ಅಮೆರಿಕ ಗಡಗಡ… ಒಳಾಂಗಣದಲ್ಲಿ ಟ್ರಂಪ್ ಪ್ರಮಾಣವಚನ
ನ್ಯಾಯಾಧೀಶರನ್ನು ಗುರಿಯಾಗಿಸಿಕೊಂಡು ದಾಳಿಗಳು ಅಪರೂಪವಾಗಿದ್ದರೂ, ಕಳೆದ ವರ್ಷ ಇರಾನ್‌ನ ಶ್ರೀಮಂತ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು ಹಲವಾರು ಗುಂಡಿನ ದಾಳಿಗಳು ನಡೆದಿವೆ.
ಏಪ್ರೀಲ್ 2023ರಲ್ಲಿ, ಅಬ್ಬಾಸ್‌ಅಲಿ ಸೊಲೈಮನಿ ಎಂದು ಗುರುತಿಸಲಾದ ಪ್ರಬಲ ಧರ್ಮಗುರುವನ್ನು ಕೂಡ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.
ಕಳೆದ ಅಕ್ಟೋಬರ್‌ನಲ್ಲಿ, ಕಜೆರೌನ್‌ನಲ್ಲಿ ಶುಕ್ರವಾರದ ಪ್ರಾರ್ಥನೆಯ ನೇತೃತ್ವ ವಹಿಸಿದ ಶಿಯಾ ಮುಸ್ಲಿಂ ಬೋಧಕನನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದರು.
International news
ಶ್ರೀಮಂತನನ್ನು ಬಿಕಾರಿಯನ್ನಾಗಿಸಿತು ಕ್ಯಾಲಿಫೋರ್ನಿಯಾದ ಕಾಡ್ಗಿಚ್ಚು !
Published
1 week agoon
11/01/2025By
NEWS DESK3ಮಂಗಳೂರು/ಕ್ಯಾಲಿಫೋರ್ನಿಯಾ : ಲಾಸ್ ಎಂಜಲೀಸ್ ನ ವಿನಾಶಕಾರಿ ಕಾಡ್ಗಿಚ್ಚಿಗೆ ಕನಿಷ್ಠ ಐದು ಮಂದಿಯನ್ನು ಬಲಿಪಡೆದಿದೆ. ಸುಂದರ ನಗರಿಯಾದ ಕ್ಯಾಲಿಫೋರ್ನಿಯಾ ನಗರದ ಸುಮಾರು ನಾಲ್ಕು ಸಾವಿರ ಕಟ್ಟಡಗಳನ್ನು ಭಸ್ಮಗೊಳಿಸಿದೆ. ಕೋಟ್ಯಾಧಿಪತಿಗಳಾಗಿದ್ದವರೆಲ್ಲಾ, ಬೀದಿಪಾಲಾಗಿದ್ದಾರೆ.
ಹೀಗೆ ಬೀದಿಪಾಲಾದವರಲ್ಲಿ ಕೋಟ್ಯಾಧಿಪತಿ ಎಡ್ವಿನ್ ಕ್ಯಾಸ್ಟ್ರೋ ಕೂಡ ಒಬ್ಬರು. ಇವರು ಕಳೆದ ವರ್ಷ ಫೆಬ್ರವರಿಯಲ್ಲಿ ವಿಶ್ವದ ಅತಿದೊಡ್ಡ ಲಾಟರಿಯಲ್ಲಿ ಬರೊಬ್ಬರಿ 2.04 ಬಿಲಿಯನ್ (16,590 ಕೋಟಿ) ಗೆದ್ದಿದ್ದರು. ಈ ಲಾಟರಿ ಹಣದಿಂದ ಎಡ್ವಿನ್ ಅವರು ಕ್ಯಾಲಿಫೋರ್ನಿಯಾದ ಹಾಲಿವುಡ್ ಹಿಲ್ಸ್ ನಲ್ಲಿ ಬರೊಬ್ಬರಿ 3.8 ಮಿಲಿಯನ್ ಗೆ ಐಷಾರಾಮಿ ಮನೆ ತೆಗೆದುಕೊಂಡಿದ್ದರು.
ಆದರೆ ದುರಾದೃಷ್ಟವಶಾತ್ ಎಡ್ವಿನ್ ಕ್ಯಾಸ್ಟ್ರೋ ಅವರ ಐಷಾರಾಮಿ ಮನೆ ಬೆಂಕಿಯ ಜ್ವಾಲೆಗೆ ಸುಟ್ಟು ಕರಕಲಾಗಿದೆ. ಮಾರಣಾಂತಿಕ ಬೆಂಕಿಯು ಕ್ಯಾಸ್ಟ್ರೋ ಅವರ 3.8 ಮಿಲಿಯನ್ ನ ಮನೆಯಲ್ಲಿ ಉಳಿದಿರುವುದು ಕಾಂಕ್ರೀಟ್ ಕಂಬಗಳು ಮತ್ತು ಹೊಗೆಯಾಡುತ್ತಿರುವ ಮರಗಳು ಮಾತ್ರ.
ಇದನ್ನೂ ಓದಿ: ‘ಹಮಾರಿ ಅಧೂರಿ ಕಹಾನಿ’ ಫೇಸ್ ಬುಕ್ ಪೋಸ್ಟ್ ಹಾಕಿ ವ್ಯಕ್ತಿ ಆ*ತ್ಮಹತ್ಯೆ;ಡೆತ್ ನೋಟ್ ನಲ್ಲಿತ್ತು ನೋವಿನ ಕಥೆ !
ಎಡ್ವಿನ್ ಅವರ ಭವ್ಯ ಬಂಗಲೆಯಲ್ಲಿ ಐದು ಬೆಡ್ ರೂಮ್ ಮತ್ತು ಆರು ಸ್ನಾನಗೃಹಗಳನ್ನು ಒಳಗೊಂಡಿತ್ತು. ವರದಿಗಳ ಪ್ರಕಾರ ಈ ಐಷಾರಾಮಿ ಮನೆ ಐಕಾನಿಕ್ ಮಾರ್ಮೊಂಟ್ ಹೋಟೆಲ್ ನ ಮೇಲೆ ಇದೆ ಮತ್ತು ಖ್ಯಾತ ಗಾಯಕಿ ಅರಿಯಾನಾ ಗ್ರಾಂಡೆ, ನಟಿ ಡಕೋಟಾ ಜಾನ್ಸನ್ ಮತ್ತು ಹಾಸ್ಯನಟ ಜಿಮ್ಮಿ ಕಿಮ್ಮೆಲ್ ಸೇರಿದಂತೆ ಪ್ರಸಿದ್ದ ಹಾಲಿವುಡ್ ತಾರೆಯರ ನೆರೆಹೊರೆಯಲ್ಲಿ ಎಡ್ವಿನ್ ಅವರ ಮನೆ ಇತ್ತು.
ಆದರೆ ಇಂದು ಭವ್ಯ ಅರಮನೆಯ ಭವ್ಯ ನೆನಪು ಮಾತ್ರ ಉಳಿದಿದೆ. ಶ್ರೀಮಂತಿಕೆಯ ಉತ್ತಂಗುದಲ್ಲಿದ್ದ ಎಡ್ವಿನ್ ಈಗ ಬೀದಿಪಾಲಾಗಿದ್ದಾನೆ.
International news
ಮತ್ತೆ ವಿವಾದ ಸೃಷ್ಟಿಸಿದ ಡೊನಾಲ್ಡ್ ಟ್ರಂಪ್ !
Published
1 week agoon
10/01/2025By
NEWS DESK3ಮಂಗಳೂರು/ವಾಷಿಂಗ್ಟನ್ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಡುತ್ತಿರುವ ಕಿರಿಕ್ ಈಗ ಜಾಗತಿಕವಾಗಿ ಸಂಚಲನ ಸೃಷ್ಟಿ ಮಾಡುತ್ತಿದೆ.
ಕೆನಡಾವನ್ನು ಅಮೆರಿಕದ ಭಾಗವಾಗಿಸುವ ಬಗ್ಗೆ ಹೇಳಿಕೆ ನೀಡುತ್ತಿದ್ದ ನಿಯೋಜಿತ ಅಧ್ಯಕ್ಷ ಟ್ರಂಪ್, ಇದೀಗ ತಮ್ಮ ದೇಶದ ಭೂಪಟದಲ್ಲಿ ಕೆನಡಾದ ಭಾಗವನ್ನೂ ಸೇರಿಸಿರುವ ಚಿತ್ರವನ್ನೇ ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡಿದ್ದಾರೆ. ಅವರ ಕ್ರಮಕ್ಕೆ ಕೆನಡಾ ಪ್ರಧಾನಿ ಜಸ್ಟೀನ್ ಟ್ರುಡೋ ಪಕ್ಷ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಮೆರಿಕದ 51 ರಾಜ್ಯಗಳ ಭೂಪಟದೊಂದಿಗೆ ಕೆನಡಾದ ಕೆಲವು ಭಾಗವನ್ನೂ ಅಮೆರಿಕ ಎಂದೇ ಗುರುತಿಸಿರುವ ಚಿತ್ರವೊಂದನ್ನು ಟ್ರಂಪ್ ಜಾಲತಾಣದಲ್ಲಿ ಹಂಚಿಕೊಂಡಿದ್ದು, “ಓಹ್ ಕೆನಡಾ” ಎಂದು ಶೀರ್ಷಿಕೆ ನೀಡಿದ್ದಾರೆ.
ಇದನ್ನೂ ಓದಿ: ಶೇರು ಮಾರ್ಕೆಟ್ ನಲ್ಲಿ ಹಣ ತೊಡಗಿಸಿದರೆ ಅಧಿಕ ಲಾಭಾಂಶ ಆಮಿಷ
ತಕ್ಷಣವೇ ಕೆನಡಾ ಪ್ರಧಾನಿ ಜಸ್ಟೀನ್ ಟ್ರುಡೋ ಅವರ ಲಿಬರಲ್ ಪಕ್ಷವು ಇದಕ್ಕೆ ತಿರುಗೇಟು ನೀಡಿದ್ದು, ಕೆನಡಾ ಹಾಗೂ ಅಮೆರಿಕದ ಭೂಪಟವನ್ನು ಪ್ರತ್ಯೇಕಿಸಿರುವ ಚಿತ್ರ ಹಂಚಿಕೊಂಡಿದೆ.
ಅಮೆರಿಕ ಜೊತೆ ಕೆನಡಾ ವಿಲೀನ?
ಕೆನಡಾ ಮತ್ತು ಅಮೆರಿಕ ನಡುವೆ ಮೊದಲಿನಿಂದ ಕೂಡ ಉತ್ತಮ ಸಂಬಂಧ ಇದೆ. ಆದರೆ ಇದೇ ಡೊನಾಲ್ಡ್ ಟ್ರಂಪ್ ಅವರು ಅಧಿಕಾರಕ್ಕೆ ಬಂದ ಪ್ರತಿಬಾರಿ ಕೂಡ ಏನಾದರೂ ಒಂದು ಕಿರಿಕ್ ಆಗುತ್ತಲೇ ಇದೆ. 2016 ರಲ್ಲಿ ಡೊನಾಲ್ಡ್ ಟ್ರಂಪ್ ಮೊದಲ ಬಾರಿ ಅಧ್ಯಕ್ಷರಾಗಿದ್ದ ವೇಳೆ ಇದೇ ರೀತಿ ಕೆನಡಾ ಜೊತೆ ಭರ್ಜರಿ ಕಿರಿಕ್ ಮಾಡಿದ್ದರು.
ಇದೀಗ ಕೆನಡಾ ದೇಶವನ್ನೇ ತಮ್ಮ ತೆಕ್ಕೆಗೆ ತೆಗೆದುಕೊಂಡು ಅಮೆರಿಕ ಜೊತೆ ವಿಲೀನ ಮಾಡಿಕೊಳ್ಳುವ ರೀತಿ ಮ್ಯಾಪ್ ಹಾಕಿದ್ದಾರೆ. ಟ್ರಂಪ್ ಶೇರ್ ಮಾಡಿರುವ ಕೆನಡಾ ಮತ್ತು ಅಮೆರಿಕ ಮ್ಯಾಪ್ ಈಗ ಸಂಚಲನ ಸೃಷ್ಟಿ ಮಾಡಿದೆ.
LATEST NEWS
ಟಿಕ್ ಟಾಕ್ಗೆ ಶಾಕ್ ನೀಡಿದ ಅಮೆರಿಕ !
ಕಾರಿಗೆ ದಿಢೀರ್ ಬೆಂ*ಕಿ; ಹಸೆಮಣೆ ಏರಬೇಕಿದ್ದ ವರ ಸು*ಟ್ಟು ಬೂ*ದಿ
ಭೀಕರ ರಸ್ತೆ ಅ*ಪಘಾತ; ಒಲಿಂಪಿಕ್ ಪದಕ ವಿಜೇತೆ ಮನು ಭಾಕರ್ ಕುಟುಂಬಕ್ಕೆ ಆ*ಘಾತ
ಮದುವೆಯಾಗುವ ಹೊಸ್ತಿಲಲ್ಲಿ ಇರುವ ಯುವ ಸಮೂಹಕ್ಕೆ ಕಿವಿಮಾತು..
ಪೆಟ್ರೋಲ್ ಟ್ಯಾಂಕರ್ ಸ್ಪೋ*ಟ: 70 ಮಂದಿ ಸಾ*ವು
ಸೈಫ್ ಮೇಲೆ ಹ*ಲ್ಲೆ ಪ್ರಕರಣ; ಪ್ರಮುಖ ಆರೋಪಿ ಬಾಂಗ್ಲಾ ಪ್ರಜೆ ಅರೆಸ್ಟ್
Trending
- BIG BOSS6 days ago
ಕಣ್ಣೀರು ಒರೆಸಿದ ಸುದೀಪ್.. ಕಿಚ್ಚನ ಈ ದೊಡ್ಡ ಗುಣಕ್ಕೆ ಸೆಲ್ಯೂಟ್ ಹೊಡೆದ ಫ್ಯಾನ್ಸ್..!
- BIG BOSS5 days ago
ಮಿಡ್ ವೀಕ್ ಎಲಿಮಿನೇಷನ್ ನಿಂದ ಬಚಾವ್ ಆಗುವವರು ಯಾರು ?
- BIG BOSS5 days ago
ಚೈತ್ರಾ ಕುಂದಾಪುರ ಪ್ರಕಾರ ಈ ಸಲ ಬಿಗ್ ಬಾಸ್ ವಿನ್ನರ್ ಇವರೇ ?
- BIG BOSS6 days ago
ಬಿಗ್ ಬಾಸ್ ನಿಂದ ಹೊರ ಬಂದ ಚೈತ್ರಾ ಕುಂದಾಪುರ ಪಡೆದ ಸಂಭಾವನೆ ಎಷ್ಟು ಗೊತ್ತೇ?