Saturday, July 2, 2022

ಬೆಲೆಯಲ್ಲಿ ಸಾರ್ವತ್ರಿಕ ದಾಖಲೆ ಬರೆದ ಪೆಟ್ರೋಲ್‌-ಡಿಸೇಲ್‌..! ಆತಂಕದಲ್ಲಿ ಜನತೆ…

ಬೆಲೆಯಲ್ಲಿ ಸಾರ್ವತ್ರಿಕ ದಾಖಲೆ ಬರೆದ ಪೆಟ್ರೋಲ್‌-ಡಿಸೇಲ್‌..! ಆತಂಕದಲ್ಲಿ ಜನತೆ…

ನವದೆಹಲಿ: ಪ್ರತಿದಿನ ಪೆಟ್ರೋಲ್, ಡೀಸೆಲ್ ಬೆಲೆ ಬದಲಾಗುತ್ತಿರುತ್ತದೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ದೆಹಲಿಯಲ್ಲಿ ಪೆಟ್ರೋಲ್ 86 ರೂ., ಮುಂಬೈನಲ್ಲಿ ಪೆಟ್ರೋಲ್ ಬೆಲೆ 93 ರೂ. ಕೋಲ್ಕತ್ತಾದಲ್ಲಿ ಡೀಸೆಲ್ 80 ರೂ.ದಾಟಿದೆ.

ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಸಾರ್ವಕಾಲಿಕ ಗರಿಷ್ಠ ದಾಖಲೆಯನ್ನೇ ಬರೆಯುತ್ತಿದೆ. ಮುಂದಿನ ಒಂದೆರಡು ದಿನಗಳಲ್ಲಿ ದೆಹಲಿಯಲ್ಲಿ ಡೀಸೆಲ್ 77 ರೂ. ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.

ದೆಹಲಿ ಹೊರತುಪಡಿಸಿ ಇತರ ಮೆಟ್ರೋ ನಗರಗಳಲ್ಲಿ ಪೆಟ್ರೋಲ್ ಬೆಲೆ ಏರಿಕೆಯಾಗಿದೆ.

ಮುಂಬೈನಲ್ಲಿ ಇಂದಿನ ಪೆಟ್ರೋಲ್ ದರ ಪ್ರತಿ ಲೀಟರ್ ಗೆ 92.86 ರೂ., ಕೋಲ್ಕತ್ತಾ 87.69 ರೂ., ಚೆನ್ನೈನಲ್ಲಿ 88.82 ರೂ. ಆಗಿದೆ ದೆಹಲಿ 86.05 ಇದ್ದದ್ದು ಇಂದು 86.30 ರೂ ಆಗಿದೆ. , ಮುಂಬೈ 92.62 ಇದ್ದ ಪೆಟ್ರೋಲ್ ದರ ಇಂದು 92.86 ರೂ. ಆಗಿದೆ. ,

ಕೋಲ್ಕೊತಾ 87.45 ಇದ್ದ ದರ ಇಂದು 87.69 . ರೂ. ಮತ್ತು ಚೆನ್ನೈ ನಲ್ಲಿ ರೂ. 88.60 ಇದ್ದ ಪೆಟ್ರೋಲ್ ದರ ಇಂದು 88.82 ರೂ. ದಾಖಲಾಗಿದೆ.

ಅದೇ ರೀತಿ ಡೀಸೆಲ್ ದರ ದೆಹಲಿಯಲ್ಲಿ 76.48 ರೂ., ಮುಂಬೈನಲ್ಲಿ 83.30 ರೂ., ಕೋಲ್ಕತ್ತಾದಲ್ಲಿ 80.03 ರೂ., ಚೆನ್ನೈನಲ್ಲಿ 81.71 ರೂ.ಗೆ ಏರಿಕೆಯಾಗಿದೆ.

LEAVE A REPLY

Please enter your comment!
Please enter your name here

Hot Topics

ಯುಗಾದಿ ಹಬ್ಬದ ಪ್ರಯುಕ್ತ ‘ದುಬೈ ಹೆಮ್ಮೆಯ ಯುಎಇ ಕನ್ನಡಿಗ’ರಿಂದ ಪ್ರತಿಭಾ ಸ್ಪರ್ಧೆ& ಪುರಸ್ಕಾರ

ದುಬೈ: ಯುಗಾದಿ ಹಬ್ಬದ ಪ್ರಯುಕ್ತ ದುಬೈ ಹೆಮ್ಮೆಯ ಯುಎಇ ಕನ್ನಡಿಗರು ತಂಡವು ಸಂಯುಕ್ತ ಅರಬ್ ಸಂಸ್ಥಾನದ ಕನ್ನಡ ಮಕ್ಕಳಿಗಾಗಿ ವಿವಿಧ ರೀತಿಯ ಕಲಾ ಪ್ರತಿಭಾ ಸ್ಪರ್ಧೆಯ ಗ್ರಾಂಡ್ ಫೈನಲ್ ಕಾರ್ಯಕ್ರಮ ಜೊತೆಗೆ ಹೆಚ್ಚು...

ದ್ವೇಷದ ಹೇಳಿಕೆ ನೀಡುವ ಮುನ್ನ ಎಚ್ಚರಿಕೆ ಅಗತ್ಯ-ಶಾಸಕ ಖಾದರ್

ಮಂಗಳೂರು: ಪ್ರವಾದಿ ಕುರಿತಂತೆ ನೂಪುರ್ ಶರ್ಮಾ ನೀಡಿದ್ದ ಹೇಳಿಕೆಗೆ ಇದೀಗ ಸುಪ್ರೀಂ ಕೋರ್ಟ್‌ ಛೀಮಾರಿ ಹಾಕಿದೆ. ಈ ಹಿಂದೆಯೇ ಕಾಂಗ್ರೆಸ್‌ ಅವರ ಹೇಳಿಕೆ ಖಂಡಿಸಿದೆ. ಕೇವಲ ಕಾಂಗ್ರೆಸ್ ಮಾತ್ರವಲ್ಲ ಇಂತಹ ಹೇಳಿಕೆಯನ್ನು ಪ್ರತಿಯೊಬ್ಬರೂ...

ಇಲಾಖೆಯಿಂದ ನಿವೃತ್ತರಾದವರಿಗೆ ದ.ಕ ಎಸ್‌ಪಿಯಿಂದ ಬೀಳ್ಕೊಡುಗೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಘಟಕದಿಂದ ನಿವೃತ್ತಿ ಹೊಂದಿದ ಇಬ್ಬರಿಗೆ ಮಂಗಳೂರಿನ ತನ್ನ ಕಚೇರಿಯಲ್ಲಿ ಜಿಲ್ಲಾ ಪೊಲೀಸ್‌ ಅಧೀಕ್ಷಕ ಸೋನವಣೆ ಋಷಿಕೇಶ್ ಭಗವಾನ್ ಶುಭಕೋರಿದರು.ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ಎಎಸ್‌ಐ ಸಿ....