Thursday, June 30, 2022

ಉಪ್ಪಿನಂಗಡಿ: ನೀರೆಂದು ಪೆಟ್ರೋಲ್‌ ಕುಡಿದ ಅಜ್ಜಿ ಸಾವು

ಉಪ್ಪಿನಂಗಡಿ: ಬಾಟಲಿಯಲ್ಲಿದ್ದ ಪೆಟ್ರೋಲ್​ ಅನ್ನು ನೀರೆಂದು ಕುಡಿದ ಅಜ್ಜಿ ಮೃತಪಟ್ಟ ಘಟನೆ ಪೆರ್ನೆ ಸಂಪದಕೋಡಿಯಲ್ಲಿ ನಿನ್ನೆ ಸಂಭವಿಸಿದೆ.


ಬಂಟ್ವಾಳದ ಪದ್ಮಾವತಿ (79) ಮೃತರು. ಸೆ.26ರಂದು ಪೆರ್ನೆಯ ಮಗಳ ಮನೆಗೆ ಪದ್ಮಾವತಿ ಬಂದಿದ್ದರು. ಹುಲ್ಲು ಕತ್ತರಿಸುವ ಯಂತ್ರಕ್ಕೆಂದು ಮನೆಯವರು ಬಾಟಲಿಯಲ್ಲಿ ಪೆಟ್ರೋಲ್​ ತಂದಿಟ್ಟಿದ್ದರು.
ದೃಷ್ಟಿದೋಷದಿಂದ ಬಳಲುತ್ತಿದ್ದ ಅಜ್ಜಿ, ಪೆಟ್ರೋಲ್​ ಇದ್ದ ಬಾಟಲಿಯನ್ನ ನೀರೆಂದು ಭಾವಿಸಿ ಕುಡಿದಿದ್ದರು.

ಅಸ್ವಸ್ಥರಾಗಿದ್ದ ಅವರನ್ನು ಮಂಗಳೂರಿನ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ನಿನ್ನೆ ಕೊನೆಯುಸಿರೆಳೆದರು. ಉಪ್ಪಿನಂಗಡಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here

Hot Topics

ಬೆಳ್ತಂಗಡಿಯಲ್ಲಿ ನಾರಾಯಣ ಗುರು ಪಠ್ಯ ಸೇರ್ಪಡೆಗಾಗಿ ಜು.4 ರಂದು ಪ್ರತಿಭಟನೆ

ಬೆಳ್ತಂಗಡಿ: 10 ನೇ ತರಗತಿ ಸಮಾಜ ವಿಜ್ಞಾನ ಪಠ್ಯ ಪುಸ್ತಕದಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ ಪಠ್ಯ ಸೇರ್ಪಡೆ ಮಾಡದಿರುವುದರ ವಿರುದ್ಧ ಪ್ರತಿಭಟನೆ ನಡೆಸುವ ಹಿನ್ನೆಲೆ ಇಂದು ಬೆಳ್ತಂಗಡಿಯ ಗುರು ನಾರಾಯಣ ಸಭಾ ಭವನದಲ್ಲಿ...

ಕುಂದಾಪುರ: ಗದ್ದೆಯಲ್ಲಿ ಕೆಲಸ ಮಾಡುತ್ತಿರುವಾಗಲೇ ಕುಸಿದು ಕೃಷಿಕ ಜೀವಾಂತ್ಯ…

ಕುಂದಾಪುರ: ಭತ್ತದ ಗದ್ದೆಯಲ್ಲಿ ಕೃಷಿ ಕೆಲಸ ಮಾಡುತ್ತಿರುವಾಗಲೇ ಕೃಷಿಕರೋರ್ವರು ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಕುಂದಾಪುರದ ಕೆರಾಡಿ ಗ್ರಾಮದ ದೀಟಿ ಎಂಬಲ್ಲಿ ನಿನ್ನೆ ನಡೆದಿದೆ.ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ನಿವಾಸಿ ಪ್ರಸ್ತುತ ಕುಂದಾಪುರ...

ಕುಕ್ಕೆ ಸುಬ್ರಹ್ಮಣ್ಯ ದೇಗುಲದಲ್ಲಿ ಸರ್ಪಸಂಸ್ಕಾರ ಸೇವೆಗೆ ರಾಜ್ಯಪಾಲರಿಂದ ಸಂಕಲ್ಪ..!

ಕಡಬ : ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಇಂದು ದ.ಕ ಜಿಲ್ಲೆಯ ಕಡಬ ತಾಲೂಕಿನ ಇತಿಹಾಸ ಪ್ರಸಿದ್ಧ ದೇವಾಲಯ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದ್ಧಾರೆ.ಕ್ಷೇತ್ರದಲ್ಲಿ ಶ್ರೀ ದೇವರ ದರುಶನ ಪಡೆದು ದೇವಸ್ಥಾನದಲ್ಲಿ...