Monday, August 15, 2022

ಇಂದು ಪೆಟ್ರೋಲ್‌ 35 ಪೈಸೆ, ಡೀಸೆಲ್‌ 37 ಪೈಸೆ ಹೆಚ್ಚಳ

ನವದೆಹಲಿ: ನವರಾತ್ರಿ ಹಾಗೂ ದಸರಾ ಹಬ್ಬದ ಸಂದರ್ಭದಲ್ಲಿ ದೇಶದ ಗ್ರಾಹಕರಿಗೆ ಶಾಕ್ ನೀಡಿರುವ ತೈಲ ಕಂಪನಿಗಳು, ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಮಾಡಿವೆ.

ಈಗಾಗಲೇ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಜನರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.


ಇದರಿಂದಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಮೇಲೆ ಜನರು ಹಿಡಿ ಶಾಪ ಹಾಕುತ್ತಿದ್ದಾರೆ.

ದೇಶದ ಸರ್ಕಾರಿ ಸ್ವಾಮ್ಯದ ತೈಲ ಸಂಸ್ಥೆಗಳು ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಮತ್ತೆ ಏರಿಕೆ ಮಾಡಿದ್ದು, ಕಳೆದ ಎರಡು ದಿನಗಳಿಂದ ಇಂಧನ ದರ ಸ್ಥಿರವಾಗಿತ್ತು.

ಆದರೆ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ದಾಟಿ ಇಂಧನ ದರ ಏರಿಕೆಯಾಗಿದ್ದು, ಇಂದು ಕೂಡ ಎಲ್ಲಾ ಮಹಾನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಮತ್ತೆ ಏರಿಕೆಯಾಗಿದೆ.
ಸರ್ಕಾರಿ ತೈಲ ಕಂಪನಿಗಳಿಂದ ಕಳೆದ ಎರಡು ದಿನಗಳ ಬಳಿಕ ಇಂದು ಮತ್ತೆ ತೈಲ ದರ ಏರಿಕೆ ಕಂಡಿದ್ದು,

ಇಂದು ಲೀಟರ್ ಪೆಟ್ರೋಲ್ ದರದಲ್ಲಿ 31ರಿಂದ 35 ಪೈಸೆ ಏರಿಕೆ ಮಾಡಲಾಗಿದೆ. ಇದೇ ವೇಳೆ ಒಂದು ಲೀಟರ್ ಡೀಸೆಲ್ ದರ 34 ರಿಂದ 37 ಪೈಸೆ ಹೆಚ್ಚಳವಾಗಿದೆ.

ಆ ಬಳಿಕ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ದರವೊಂದೇ ಅಲ್ಲದೇ ಲೀಟರ್ ಡೀಸೆಲ್ ದರವೂ ಸಹ 100ರ ಗಡಿ ದಾಟಿ ಮುನ್ನುಗ್ಗಿದೆ.

LEAVE A REPLY

Please enter your comment!
Please enter your name here

Hot Topics

ಮೂಡುಬಿದಿರೆ: ಎಂ.ಜೆ.ಎಂ ಮಸ್ಜಿದ್ ಕುಂಡದ ಬೆಟ್ಟುವಿನಲ್ಲಿ ಫ್ರೀಡಂ ಸಂಗಮ, ಸನ್ಮಾನ

ಮೂಡುಬಿದಿರೆ: ಇಲ್ಲಿನ ವೇಣೂರಿನ ಎಂ.ಜೆ.ಎಂ ಮಸ್ಜಿದ್ ಕುಂಡದ ಬೆಟ್ಟು ಹಾಗೂ ಎಸ್.ಬಿ.ಎಸ್ ದಾರುಸ್ಸಲಾಂ ಮದ್ರಸ ಕುಂಡದಬೆಟ್ಟು ಇದರ ವತಿಯಿಂದ ಫ್ರೀಡಂ ಸಂಗಮ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಕುಂಡದಬೆಟ್ಟುವಿನಲ್ಲಿ ನಡೆಯಿತು.ಎಸ್.ಎನ್.ಎಂ ಪಾಲಿಟೆಕ್ನಿಕ್ ಮೂಡಬಿದಿರೆಯ...

ಕಡಬ: ಧ್ವಜಾರೋಹಣದ ವೇಳೆ ನಿವೃತ್ತ ಸೈನಿಕ ಕುಸಿದು ಬಿದ್ದು ಸಾವು

ಕಡಬ: ತಾಲೂಕಿನ ಕುಟ್ರುಪಾಡಿ ಗ್ರಾ.ಪಂ. ವತಿಯಿಂದ ಹಳೆಸ್ಟೇಷನ್ ಅಮೃತ ಸರೋವರದ ಬಳಿ ನಡೆದ ಧ್ವಜಾರೋಹಣದ ವೇಳೆ ನಿವೃತ್ತ ಸೈನಿಕರೋರ್ವರು ಕುಸಿದು ಬಿದ್ದು ಅಸ್ವಸ್ಥಗೊಂಡು ಬಳಿಕ ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟ ಘಟನೆ ನಡೆದಿದೆ.ಧ್ವಜಾರೋಹಣವನ್ನು...

ಮಂಗಳೂರು: ಸ್ವಾತಂತ್ರ್ಯ ಅಮೃತೋತ್ಸವದಲ್ಲಿ ಮಿಂದೆದ್ದ ಕೆನರಾ ಹೈಸ್ಕೂಲ್

ಮಂಗಳೂರು: ದೇಶದ ಮಹನೀಯರ ತ್ಯಾಗ, ಬಲಿದಾನ, ನಿಸ್ವಾರ್ಥ ಬದುಕಿನ ದ್ಯೋತಕವಾದ ಸ್ವಾತಂತ್ರ್ಯವೆಂಬ ಹಕ್ಕಿ ರೆಕ್ಕೆ ಬಿಚ್ಚಿ ಹಾರಿ 75 ಸಂವತ್ಸರಗಳು ಕಳೆದು ರಾಷ್ಟ್ರ ಹೊಸ ಭರವಸೆಗಳ ಕಡೆ ಮುನ್ನಡೆಯುತ್ತಿದೆ.ದೇಶವಾಸಿಯ ಕಣಕಣದಲ್ಲೂ ರಾಷ್ಟ್ರಪ್ರೇಮದ ಸೌಗಂಧ...