ನವದೆಹಲಿ: ದೇಶದಲ್ಲಿ ಇಂಧನದ ಬೆಲೆ ಏರಿಕೆಯಾಗುತ್ತಲೇ ಇದ್ದು ವಾಹನ ಸವಾರರ ಜೇಬಿಗೆ ಕತ್ತರಿ ಬಿದ್ದಂತಾಗಿದೆ, ಲೀಟರ್ ಪೆಟ್ರೋಲ್ ಹಾಗೂ ಡೀಸೆಲ್ ತಲಾ 35 ಪೈಸೆ ಏರಿಕೆ ಮಾಡಲಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್, ಡೀಸೆಲ್ ತಲಾ ಕ್ರಮವಾಗಿ 106.89 ರೂ. ಹಾಗೂ 95.62 ರೂಪಾಯಿ ಇದೆ.
ಇದೀಗ ಬೆಂಗಳೂರಿನಲ್ಲಿ ಪೆಟ್ರೋಲ್ ದರ 110.61 ರೂಪಾಯಿ ಇದ್ದರೆ, ಡೀಸೆಲ್ 101.49 ರೂಪಾಯಿಗೆ ಮಾರಾಟ ಆಗುತ್ತಿದೆ. ವಾಣಿಜ್ಯ ನಗರಿ ಮುಂಬೈನಲ್ಲಿ ಪೆಟ್ರೋಲ್ 112.44 ರೂ. ಡೀಸೆಲ್ 103.26 ರೂಪಾಯಿ ಇದೆ.
ದೇಶದಲ್ಲಿ ಪೆಟ್ರೋಲ್ ದರಗಳನ್ನು ಪ್ರತಿದಿನ ಬೆಳಗ್ಗೆ 6 ಗಂಟೆಗೆ ಪರಿಷ್ಕರಿಸಲಾಗುತ್ತದೆ. ಜಾಗತಿಕ ತೈಲ ಬೆಲೆಯಲ್ಲಿ ಒಂದು ನಿಮಿಷದ ವ್ಯತ್ಯಾಸವಾದರೂ ಇಂಧನ ಬಳಕೆದಾರರು ಮತ್ತು ವಿತರಕರಿಗೆ ಇದು ಅನ್ವಯಿಸುತ್ತದೆ.
ವಿವಿಧ ಅಂಶಗಳು ಇಂಧನದ ಬೆಲೆಯ ಮೇಲೆ ಪ್ರಭಾವ ಬೀರುತ್ತವೆ. ಇವುಗಳಲ್ಲಿ ಯುಎಸ್ ಡಾಲರ್ ರೂಪಾಯಿ ವಿನಿಮಯ ದರ, ಕಚ್ಚಾ ತೈಲದ ಬೆಲೆ, ಜಾಗತಿಕ ಸೂಚ್ಯಂಕಗಳು, ಇಂಧನದ ಬೇಡಿಕೆ ಇತ್ಯಾದಿಗಳು ಸೇರಿವೆ. ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆಗಳು ಹೆಚ್ಚಾದಾಗ ಭಾರತದಲ್ಲಿ ಬೆಲೆಗಳು ಹೆಚ್ಚಾಗುತ್ತವೆ.
ಡೀಲರ್ ಕಮಿಷನ್ ಮತ್ತುಮೌಲ್ಯವರ್ಧಿತ ತೆರಿಗೆ (ವ್ಯಾಟ್) ಅನ್ನು ಒಳಗೊಂಡಿದೆ. ವ್ಯಾಟ್ ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತದೆ. ಅಬಕಾರಿ ಸುಂಕ, ಡೀಲರ್ ಕಮಿಷನ್ ಮತ್ತು ವ್ಯಾಟ್ ಸೇರಿಸಿದ ನಂತರ, ಪೆಟ್ರೋಲ್‌ನ ಚಿಲ್ಲರೆ ಮಾರಾಟ ಬೆಲೆ ದ್ವಿಗುಣಗೊಳ್ಳುತ್ತದೆ.