Thursday, December 1, 2022

ಕರಾವಳಿಯಲ್ಲಿ ಶಾಶ್ವತ NIA ಘಟಕ ನಿರ್ಮಾಣಕ್ಕೆ ಶೀಘ್ರದಲ್ಲೇ ಅಸ್ತು-ಸಂಸದ ತೇಜಸ್ವಿ ಸೂರ್ಯ

ಉಡುಪಿ: ಕರಾವಳಿಯಲ್ಲಿ ಗಮನಿಸಿದರೆ ಭಯೋತ್ಪಾದಕ ಕೃತ್ಯಗಳು ಹೆಚ್ಚುತ್ತಿರುವುದರಿಂದ ಶೀಘ್ರವಾಗಿ ಕರಾವಳಿಯಲ್ಲಿ ಎನ್‌ಐಎ ಘಟಕ ಸ್ಥಾಪಿಸುವಂತೆ ನಾನು ಕೂಡಾ ಶ್ರಮಿಸುತ್ತೇನೆ, ಈ ಬಗ್ಗೆ ಸಿಎಂ ಜೊತೆ ಮಾತನಾಡುತ್ತೇನೆ. ಕರ್ನಾಟಕದಲ್ಲಿ ಭಯೋತ್ಪಾದನಾ ಚಟುವಟಿಕೆ ಮಾಡಬೇಕು ಎನ್ನವುದು ಕೆಲವರ ಉದ್ದೇಶವಾಗಿದ್ದು. ಇದೇ ಕಾರಣಕ್ಕಾಗಿ ಆರ್ಥಿಕ ಶಕ್ತಿಕೇಂದ್ರದಲ್ಲಿ ಕೋಮುಗಲಭೆ ಸೃಷ್ಟಿಸುವ ಷಡ್ಯಂತ್ರ ನಡೆದಿದೆ. ಇದಕ್ಕೆ ಪೂರಕವಾಗಿ ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಪೋಟ ನಡೆದಿದೆ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.


ಉಡುಪಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಕರ್ನಾಟಕದಲ್ಲಿ ಹಲವು ಸರಣಿ ಕೊಲೆಗಳು ನಡೆದಿದ್ದವು. ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಕೆಡಿಸುವ ಕೆಲಸ ನಡೆಯುತ್ತಿದೆ. ಪಿಎಫ್ ಐ ಬ್ಯಾನ್ ಮಾಡಿದಂತೆ ಭಯೋತ್ಪಾಧಕರ ಬೇರು ಸಮೇತ ಕಿತ್ತು ಹಾಕುತ್ತೇವೆ. ಅಲ್ಲಿಯ ತನಕ ನಮ್ಮ ಸರಕಾರಗಳು ವಿಶ್ರಮಿಸುದಿಲ್ಲ ಎಂದರು.

ಈವರೆಗೆ ರಾಜ್ಯದಲ್ಲಿ ದೊಡ್ಡಮಟ್ಟದ ಭಯೋತ್ಪಾದನಾ ಚಟುವಟಿಕೆ ನಡೆದಿಲ್ಲ. ಈ ಒಂದು ಘಟನೆ ರಾಜ್ಯವನ್ನು ಎಚ್ಚರಿಸಿದೆ. ಕರಾವಳಿಯಲ್ಲೇ ಒಂದು ಎನ್ ಐ ಎ ಕಚೇರಿ ತೆರೆಯಬೇಕಾಗಿದೆ.

ಕರ್ನಾಟಕ ಕರಾವಳಿ ವಿಚ್ಛಿದ್ರ ಶಕ್ತಿಗಳ ಕೇಂದ್ರವಾಗುತ್ತಿದೆ. ಈ ಹಿಂದೆಯೇ ಗೃಹ ಸಚಿವ ಅಮಿತ್ ಶಾ ಜೊತೆ ಮಾತನಾಡಿದ್ದೇನೆ. ಮತ್ತೆ ಕೇಂದ್ರ ಸರಕಾರ ಜೊತೆ ಮಾತನಾಡುತ್ತೇನೆ ಎಂದರು.

ಪೊಲೀಸ್ ಮತ್ತು ಇಂಟೆಲಿಜನ್ಸ್ ಎನ್ ಐ ಎ ಜೊತೆಯಾಗಿ ಕೆಲಸ ಮಾಡಿದರೆ ಇಂತಹ ಘಟನೆ ತಪ್ಪಿಸಲು ಸಾಧ್ಯವಿದೆ. ಜನರ ಜೀವ ಮತ್ತು ವಸ್ತುಗಳ ಸಂರಕ್ಷಣೆ ನಮ್ಮ ಕರ್ತವ್ಯವಾಗಬೇಕು.

ನಾವು ಓಟ್ ಬ್ಯಾಂಕ್ ಗೆ ಮುಲಾಜು ಬಿದ್ದು ರಾಜಕೀಯ ಮಾಡಲ್ಲ. ರಾಷ್ಟ್ರ, ರಾಜ್ಯದ ಸುರಕ್ಷತೆಗೆ ನಮ್ಮ ಆದ್ಯತೆಯಾಗಿದೆ. ದೇಶದ ಸುರಕ್ಷತೆ ವಿಚಾರದಲ್ಲಿ ಕಾಂಪ್ರಮೈಸ್ ಮಾಡಲ್ಲ . ಬ್ಲ್ಯಾಸ್ಟ್ ಹಿಂದಿರುವವರನ್ನು ಕಾನೂನಾತ್ಮಕವಾಗಿ ಸಂಹಾರ ಮಾಡುತ್ತೇವೆ ಎಂದರು.

LEAVE A REPLY

Please enter your comment!
Please enter your name here

Hot Topics