ಮಂಗಳೂರು/ಮುಂಬೈ: ಪರ್ಫ್ಯೂಮ್ ಬಾಟಲಿ ಸ್ಫೋ*ಟಗೊಂಡು ಒಂದೇ ಕುಟುಂಬದ ಇಬ್ಬರು ಮಕ್ಕಳು ಸೇರಿ ನಾಲ್ವರು ಗಂ*ಭೀರವಾಗಿ ಗಾ*ಯಗೊಂಡ ಘಟನೆ ಮುಂಬೈನ ಹೊರವಲಯದ ನಾಲಾಸುಪಾರದಲ್ಲಿ ನಡೆದಿದೆ.
ಪರ್ಫ್ಯೂಮ್ ಬೆಂ*ಕಿ ಹೊ*ತ್ತಿಕೊಳ್ಳುವ ದ್ರವವಾಗಿರುವ ಕಾರಣ ಬಾಟಲಿಯ ಎಕ್ಸ್‌ಪೈರಿ ಡೇಟ್ ಬದಲಿಸುವ ಪ್ರಯತ್ನ ಮಾಡುತ್ತಿದ್ದ ವೇಳೆ ತಕ್ಷಣವೇ ಸ್ಫೋ*ಟಗೊಂಡಿದೆ ಎನ್ನಲಾಗಿದೆ.
ಯಾವುದೇ ಸುಗಂಧ ದ್ರವ್ಯವನ್ನು ಬಳಸುವ ಮುನ್ನ ಅವಧಿ ಮುಗಿದಿದೆಯಾ ? ಎಂಬುವುದನ್ನು ಪರೀಕ್ಷಿಸಿ ಬಳಿಕ ಬಾಟಲಿಯನ್ನು ಸುರಕ್ಷಿತವಾಗಿ ತ್ಯಾಜ್ಯ ನಿರ್ವಹಣೆ ಮಾಡಬೇಕು. ರೋಶಿನಿ ಅಪಾರ್ಟ್‌ಮೆಂಟ್ ಒಂದರ 112ನೇ ಮನೆಯಲ್ಲಿ ಪರ್ಫ್ಯೂಮ್ ಬಾಟಲಿ ಸ್ಫೋ*ಟಗೊಂಡ ದುರ್ಘಟನೆ ಸಂಭವಿಸಿದೆ. ಘಟನೆಯಲ್ಲಿ 41 ವರ್ಷದ ಮಹಾವೀರ್ ವಾದರ್, 38 ವರ್ಷದ ಸುನೀತಾ ವಾದರ್ , ಮಕ್ಕಳಾದ 9 ವರ್ಷದ ಕುಮಾರ್ ಹರ್ಷವರ್ಧನ್ ವಾದರ್ ಹಾಗೂ 14 ವರ್ಷದ ಕುಮಾರಿ ಹರ್ಷದಾ ವಾದರ್ ಗಾ*ಯಗೊಂಡಿದ್ದಾರೆ.
ಅಕ್ಕ ಪಕ್ಕದ ಮನೆಯವರು ಸ್ಫೋ*ಟದ ಸದ್ದು ಕೇಳಿದಾಕ್ಷಣವೇ ಸ್ಥಳಕ್ಕೆ ಧಾವಿಸಿದ್ದಾರೆ. ಬಳಿಕ ಗಾಯಗೊಂಡಿದ್ದವರನ್ನು ಆಸ್ಪತ್ರೆ ದಾಖಲಿಸಿದ್ದರು. ಇಬ್ಬರು ಮಕ್ಕಳ ಪೈಕಿ 9 ವರ್ಷದ ಬಾಲಕನಿಗೆ ಗಾ*ಯದ ಪ್ರಮಾಣ ಹೆಚ್ಚಿದೆ. ಪೊಲೀಸರು ಮನೆ ಶೋಧಿಸಿದ ವೇಳೆ ಪರ್ಫ್ಯೂಮ್ ಬಾಟಲಿ ಸ್ಫೋ*ಟಗೊಂಡಿರುವುದು ಪತ್ತೆಯಾಗಿದೆ. ಬೆಂ*ಕಿ ಬಳಸಿ ಪರ್ಫ್ಯೂಮ್ ಬಾಟಲಿಯ ಎಕ್ಸ್‌ಪೈರಿ ಡೇಟ್ ಬದಲಿಸುವ ಪ್ರಯತ್ನ ಮಾಡಿದ್ದ ವೇಳೆ ದು*ರ್ಘಟನೆ ಸಂಭವಿಸಿದೆ ಅನ್ನೋ ಅನುಮಾನಗಳು ವ್ಯಕ್ತವಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಈ ಘಟನೆಯಿಂದ ಜನರೆಲ್ಲಾ ಆತಂಕಕ್ಕೊಳಗಾಗಿದ್ದಾರೆ. ಪರ್ಫ್ಯೂಮ್ ಬಾಟಲಿ ಎಕ್ಸ್‌ಪೈರಿ ಡೇಟ್ ಮುಗಿದಿದ್ದರೆ ಬಳಸುವುದು ಸೂಕ್ತವಲ್ಲ. ಅಷ್ಟೇ ಅಲ್ಲದೆ, ತೀವ್ರ ಬಿಸಿ, ಬಿಸಿಲು, ಅಥವಾ ಬೆಂ*ಕಿ ಪಕ್ಕದಲ್ಲಿ ಪರ್ಫ್ಯೂಮ್ ಇಡವುದು ಅಪಾಯಕಾರಿಯಾಗಿದೆ. ಪರ್ಫ್ಯೂಮ್ ಮಾತ್ರವಲ್ಲ ಅವಧಿ ಮುಗಿದ ಯಾವುದೇ ವಸ್ತುಗಳು ಬಳಸಲು ಯೋಗ್ಯವಲ್ಲ. ಹೀಗಾಗಿ ಈ ಕುರಿತು ಎಚ್ಚರವಹಿಸುಂತೆ ಮುಂಬೈ ಪೊಲೀಸರು ಮನವಿ ಮಾಡಿದ್ದಾರೆ. ಈ ಪ್ರಕರಣದಲ್ಲಿ ಕಟುಂಬವು ದಿನಾಂಕ ಬದಲಿಸುವ ಪ್ರಯತ್ನ ಯಾಕೆ ಮಾಡಿದ್ದರು? ವ್ಯಾಪಾರಕ್ಕಾಗಿ ಈ ರೀತಿ ಮಾಡಿದ್ದಾರೋ? ಎನ್ನುವುದು ತಿಳಿದುಬರಬೇಕಷ್ಟೇ.