Connect with us

    DAKSHINA KANNADA

    ಅಕ್ರಮ ಮರಳುಗಾರಿಕೆಗೆ ಜನಪ್ರತಿನಿಧಿಗಳೇ ಸಾಥ್‌-BJPಯದ್ದು ನೀಚಮಟ್ಟದ ರಾಜಕೀಯ: ಹರೀಶ್ ಕುಮಾರ್

    Published

    on

    ಮಂಗಳೂರು: ಅಕ್ರಮ ಮರಳುಗಾರಿಕೆ ಜಿಲ್ಲೆಯಲ್ಲಿ ಅವ್ಯಾಹತವಾಗಿ ನಡೆಯುತ್ತಿದೆ. ಆದರೆ ಜಿಲ್ಲೆಯಲ್ಲಿರುವ ಅಧಿಕಾರಿಗಳಾಗಲೀ, ಜನಪ್ರತಿನಿಧಿಯಾಗಲೀ ಯಾರೂ ಕೂಡಾ ಏನೂ ಕ್ರಮ ಕೈಗೊಳ್ಳಲು ಮುಂದಾಗುತ್ತಿಲ್ಲ. ಕೊನೆಗೆ ಲೋಕಾಯುಕ್ತರು ಪ್ರವೇಶ ಮಾಡಿ ಕ್ರಮ ಕೈಗೊಳ್ಳುವ ಹಂತಕ್ಕೆ ಬಂದು ಮುಟ್ಟಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್‌ ಟೀಕಿಸಿದ್ದಾರೆ.


    ಸುದ್ದಿಗಾರರ ಜೊತೆ ಮಾತನಾಡಿದ ಅವರು ಅಕ್ರಮ ಮರಳುಗಾರಿಕೆಯಿಂದಲೇ ಇಲ್ಲಿನ ಜನಪ್ರತಿನಿಧಿಗಳು ಬದುಕುತ್ತಿದ್ದಾರೆ ಎಂದು ವ್ಯಂಗ್ಯ ಮಾಡಿದ ಅವರು ಎನ್‌ಎಂಪಿಎಯಲ್ಲಿ ಮರಳು ತಂದು ಹಾಕಿದ್ದಾರೆ. ಬಹುಶಃ ಅದರಲ್ಲಿ ಶೇಕಡಾ 40 ಪರ್ಸೆಂಟ್ ಕಮಿಷನ್ ಬರುತ್ತಿಲ್ಲವೇನೋ.

    ಕೂಡಲೇ ಅಕ್ರಮ ಮರಳುಗಾರಿಕೆಗೆ ಕಡಿವಾಣ ಹಾಕಬೇಕು ಎಂದರು. ಇನ್ನು ಸಲಾಂ ಆರತಿ ಹೆಸರು ತೆಗೆದಿರುವುದಕ್ಕೆ ಟೀಕಿಸಿದ ಅವರು ಸಲಾಂ ಆರತಿ ಹೋಗಿ ಆರತಿ ನಮಸ್ಕಾರ ಆಗಿದೆಯಂತೆ. ಇದರ ಬಗ್ಗೆ ನಮ್ಮ ತಕರಾರಿಲ್ಲ. ಆದರೆ ಹೆಸರು ಬದಲಾಯಿಸುವುದೇ ಇವರ ಕಾಯಕವಾಗಿದೆ ಎಂದರು.

    ಪ್ರತಿಯೊಂದಕ್ಕೂ ಕೂಡ ಇಸ್ಲಾಂ ಧರ್ಮವನ್ನು ಬೊಟ್ಟು ಮಾಡುವ ವ್ಯವಸ್ಥೆ ಈ ಬಿ.ಜೆ.ಪಿ ಸರಕಾರ ಮೈಗೂಡಿಸಿಕೊಂಡಿದೆ ಎಂದರು. ಮುಸ್ಲಿಂ ರ ಹೆಸರು ದಿವಸಕ್ಕೆ ಒಬ್ಬ ಮಂತ್ರಿ ಹೇಳದೇ ಇದ್ದರೆ ಇವರಿಗೆ ನಿದ್ದೆನೇ ಬರುದಿಲ್ಲ, ಇದರಿಂದಲೇ ಅವರ ಜೀವನ. ಅವರ ರಾಜಕೀಯ. ಇಂತಹ ನೀಚ ಮಟ್ಟದ ರಾಜಕೀಯ ಮಾಡುವುದು ಖಂಡನೀಯ ಎಂದರು.

    ಇನ್ನು ಡಿಸೆಂಬರ್ 17 ರಂದು ಮಾಜಿ ಮುಖ್ಯಮಂತ್ರಿ, ಸಿ.ಎಲ್.ಪಿ. ನಾಯಕ ಸಿದ್ದರಾಮಯ್ಯ ರವರು ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಲಿದ್ದು, ಬೆಳ್ತಂಗಡಿಯ ಎರಡು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.

    DAKSHINA KANNADA

    ನಿವೃತ್ತರಾದ ಪುತ್ತೂರು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಅಡುಗೆ ಸಿಬ್ಬಂದಿಗೆ ಸನ್ಮಾನ

    Published

    on

    ಪುತ್ತೂರು : ಪುತ್ತೂರಿನ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಕಳೆದ 28 ವರ್ಷಗಳಿಂದ ಅಡುಗೆ ಸಹಾಯರಾಗಿ ಕೆಲಸ ನಿರ್ವಹಿಸುತ್ತಿದ್ದ ಹೊನ್ನಪ್ಪ ಸಿ.ಎಚ್. ಅವರು ನ.30ರಂದು ನಿವೃತ್ತರಾದರು.

    ವೈದ್ಯಾಧಿಕಾರಿಗಳು ಮತ್ತು ಎಲ್ಲಾ ಸಿಬ್ಬಂದಿ ವರ್ಗದವರೊಂದಿಗೆ ಉತ್ತಮ ರೀತಿಯಲ್ಲಿ ಒಡನಾಟ ಇಟ್ಟುಕೊಂಡಿದ್ದ ಅವರು, ಸರ್ಕಾರಿ ನೌಕರರಾಗಿ ನಿಷ್ಠೆ, ಜವಾಬ್ದಾರಿಯುತವಾಗಿ ಸೇವೆಯನ್ನು ಸಲ್ಲಿಸುತ್ತಾ ಬಂದಿದ್ದಾರೆ. ಸಾರ್ವಜನಿಕ ಜೀವನದಲ್ಲೂ ಎಲ್ಲರ ಪ್ರೀತಿ ಪಾತ್ರರಾಗಿದ್ದರು. ಹೊನ್ನಪ್ಪ ಸಿ.ಎಚ್  ಚಿಕ್ಕಪುತ್ತೂರಿನ ಸಿ.ಬಾಬು ಹಾಗೂ ಚಿನ್ನು ದಂಪತಿಯ ಮೂರನೇ ಪುತ್ರ.

    ಇದನ್ನೂ ಓದಿ : ದೇಶದ ಅತಿ ಕಿರಿಯ, ಕರ್ನಾಟಕ ಮೂಲದ ಈ ಪೈಲಟ್ ಯಾರು ಗೊತ್ತಾ ??

    ನಿವೃತ್ತರಾದ  ಅವರನ್ನು ಪುತ್ತೂರು ಸರ್ಕಾರಿ ಆಸ್ಪತ್ರೆಯ ಆಡಳಿತ ವರ್ಗ ಪ್ರೀತಿಯಿಂದ ಬೀಳ್ಕೊಟ್ಟಿದ್ದಾರೆ.  ವೇಳೆ ಆಡಳಿತ ವೈದ್ಯಾಧಿಕಾರಿ ಡಾ. ಆಶಾಜ್ಯೋತಿ ಕೆ., ಸಹಾಯಕ ಆಡಳಿತಾಧಿಕಾರಿ ಯೋಗಾನಂದ, ಡಾ. ಪ್ರಶಾಂತ್, ಡಾ.ಜಯ ಕುಮಾರಿ, ಡಾ.ಯದುರಾಜ್, ಡಾ.ಝೈನಾಬ ಮತ್ತಿತರರು ಉಪಸ್ಥಿತರಿದ್ದರು.

    Continue Reading

    DAKSHINA KANNADA

    ಚುನಾವಣಾ ಬಾಂಡ್‌ ಅಕ್ರಮ : ನಿರ್ಮಲಾ ಸೀತಾರಾಮನ್‌, ನಳೀನ್ ಕುಮಾರ್ ಕಟೀಲ್‌ಗೆ ರಿಲೀಫ್

    Published

    on

    ಮಂಗಳೂರು : ಚುನಾವಣಾ ಬಾಂಡ್ ಹೆಸರಲ್ಲಿ ಸುಲಿಗೆ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಮಾಜಿ ಸಂಸದ ನಳೀನ್ ಕುಮಾರ್ ಕಟೀಲ್‌ಗೆ ರಿಲೀಫ್ ಸಿಕ್ಕಿದೆ. ಅವರ ವಿರುದ್ಧ ದಾಖಲಾಗಿದ್ದ ಎಫ್‌ಐಅರ್ ರದ್ದುಗೊಳಿಸಿ ಹೈಕೋರ್ಟ್ ಆದೇಶಿಸಿದೆ.

    ಚುನಾವಣಾ ಬಾಂಡ್ ಅಕ್ರಮಕ್ಕೆ ಸಂಬಂಧಿಸಿದ ದೂರಿನ ನಂತರ ವಿಶೇಷ ನ್ಯಾಯಾಲಯವೊಂದರ ನಿರ್ದೇಶನದಂತೆ ನಿರ್ಮಲಾ ಸೀತಾರಾಮನ್, ನಳೀನ್ ಕುಮಾರ್ ಕಟೀಲ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 384( ಸುಲಿಗೆಗೆ ಶಿಕ್ಷೆ) 120 ಬಿ (ಕ್ರಿಮಿನಲ್ ಪಿತೂರಿ) 34 (ಸಾಮಾನ್ಯ ಉದ್ದೇಶದೊಂದಿಗೆ ಹಲವಾರು ವ್ಯಕ್ತಿಗಳು ಮಾಡಿದ ಕಾರ್ಯಗಳು) ಅಡಿಯಲ್ಲಿ ಸೀತಾರಾಮನ್, ಇಡಿ ಅಧಿಕಾರಿಗಳು ಮತ್ತು ರಾಜ್ಯ ಮತ್ತು ರಾಷ್ಟ್ರ ಮಟ್ಟದ ಬಿಜೆಪಿ ಪದಾಧಿಕಾರಿಗಳ ವಿರುದ್ಧ ಎಫ್ ಐಆರ್ ದಾಖಲಾಗಿತ್ತು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೆಸರೂ ಎಫ್ ಐಆರ್ ನಲ್ಲಿ ಕೇಳಿ ಬಂದಿತ್ತು.

    ಇದನ್ನೂ ಓದಿ : ಮಾಜಿ ಪ್ರಿಯಕರನ ಹ*ತ್ಯೆ ಆರೋಪ; ಬಾಲಿವುಡ್‌ನ ಖ್ಯಾತ ನಟಿಯ ತಂಗಿ ಅರೆಸ್ಟ್

    ಚುನಾವಣಾ ಬಾಂಡ್‌ಗಳ ಸೋಗಿನಲ್ಲಿ ಪ್ರತಿಷ್ಟಿತ ಕಂಪೆನಿಗಳಿಂದ ಸುಮಾರು 8  ಸಾವಿರ ಕೋಟಿ  ರೂ.ಗಳನ್ನು  ಸುಲಿಗೆ ಮಾಡಿದ್ದಾರೆ ಎಂದು ಆರೋಪಿಸಿ ಜನಾಧಿಕಾರ ಸಂಘರ್ಷ ಪರಿಷತ್ ಸಂಸ್ಥಾಪಕ ಆದರ್ಶ್ ಆರ್.ಅಯ್ಯರ್ ಎಂಬವರು ದೂರು ದಾಖಲಿಸಿದ್ದರು.

    Continue Reading

    BELTHANGADY

    ಉಜಿರೆ : ನೇತ್ರಾವತಿ ನದಿಯಲ್ಲಿ ಮು*ಳುಗಿದ್ದ ವ್ಯಕ್ತಿ ಶ*ವವಾಗಿ ಪತ್ತೆ

    Published

    on

    ಉಜಿರೆ: ನೇತ್ರಾವತಿ ನದಿಗೆ ಇಳಿದ ವ್ಯಕ್ತಿ ನೀರಿನಲ್ಲಿ ಮು*ಳುಗಿ ನಾ*ಪತ್ತೆಯಾದ ಘಟನೆ ಬೆಳಾಲು ಗ್ರಾಮದ ಕೂಡಿಗೆ ಎಂಬಲ್ಲಿ ಸೋಮವಾರ (ಡಿ.02) ಸಂಜೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ‌ ರಾತ್ರಿ  ಮೃ*ತದೇಹ ಹೊರತೆಗೆಯಲಾಗಿದೆ.

    ಬೆಳಾಲು ಗ್ರಾಮದ ಸುರುಳಿ ಕುಂಡಡ್ಕ ನಿವಾಸಿ ಪ್ರಸಾದ್ (38) ಎಂಬವರು ಯಾವುದೋ ಕಾರಣಕ್ಕೆ ಸಂಜೆ‌ ಸುಮಾರು 5‌‌ರಿಂದ‌ 6 ಗಂಟೆ ಸುಮಾರಿಗೆ ನದಿಗೆ ಇಳಿದಿದ್ದು ಬಳಿಕ ಮುಳುಗಿ ನಾ*ಪತ್ತೆಯಾಗಿದ್ದರು.

    ಸ್ಥಳಕ್ಕೆ ಅ*ಗ್ನಿಶಾಮಕ ದಳ ಹಾಗೂ ಶೌರ್ಯ ವಿಪತ್ತು ನಿರ್ವಹಣೆ ತಂಡದ ಸದಸ್ಯರು ಭೇಟಿ ನೀಡಿದ್ದು, ಮುಳುಗು ತಜ್ಞ ಈಶ್ವರ್ ಮಲ್ಪೆಗೂ ಮಾಹಿತಿ‌‌‌ ನೀಡಲಾಗಿತ್ತು. ಆದರೆ ಮುಳುಗು ತಜ್ಞ ಬೆಳ್ತಂಗಡಿ‌ಯ‌ ಸಂಜಯ ನಗರದ ಇಸ್ಮಾಯಿಲ್‌ ಹಾಗೂ ಅಗ್ನಿಶಾಮಕದಳದವರು ರಾತ್ರಿ‌11‌ರ‌ ಸುಮಾರಿಗೆ ಮೃ*ತದೇಹ ಮೇಲೆತ್ತಿದ್ದಾರೆ. ಮೃ*ತ ವ್ಯಕ್ತಿ ಸಂಘದ ಪ್ರಚಾರಕರಾಗಿ ಐದು ವರ್ಷ ಕಾರ್ಯ ನಿರ್ವಹಿಸಿ ಪ್ರಸ್ತುತ ಪುತ್ತೂರು ಜಿಲ್ಲಾ ಧರ್ಮಜಾಗರಣ ಸಂಯೋಜಕರಾಗಿದ್ದರು.

    ಅಂ*ತಿಮ ದರ್ಶನಕ್ಕೆ ಸ್ವಗ್ರಾಮ ಬೆಳಾಲ್ ನಲ್ಲಿ ಮಂಗಳವಾರ ಬೆಳಗ್ಗೆ 11 ಗಂಟೆಯಿಂದ 1 ಗಂಟೆ ತನಕ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರಸ್ತುತ ಪಾರ್ಥೀವ ಶರೀರ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ಶ*ವಾಗಾರದಲ್ಲಿ ಇರಿಸಲಾಗಿದೆ.

    Continue Reading

    LATEST NEWS

    Trending