ಕಾಸರಗೋಡು: ಉಪ್ಪಳದ ಶಾಲೆಯೊಂದರ ಕಲೋತ್ಸವ ಕಾರ್ಯಕ್ರಮದಲ್ಲಿ ಪೆಂಡಾಲ್ ಕುಸಿದು 59 ಮಂದಿ ಗಾಯಗೊಂಡ ಘಟನೆಗೆ ಸಂಬಂಧಪಟ್ಟಂತೆ ಆರು ಮಂದಿಯನ್ನು ಮಂಜೇಶ್ವರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಚಪ್ಪರದ ಗುತ್ತಿಗೆದಾರ ಗೋಕುಲ್ ದಾಸ್, ಅಹಮ್ಮದಾಲಿ ಎ. ಪಿ , ಅಬ್ದುಲ್ ಬಶೀರ್, ಅಬ್ದುಲ್ ಶಾಮಿಲ್, ಇಲ್ಯಾಸ್ ಮುಹಮ್ಮದ್ ಮತ್ತು ಅಶ್ರಫ್ ಬಂಧಿತರು.
ನಿನ್ನೆ ಮಧ್ಯಾಹ್ನ ಬೇಕೂರು ಸರಕಾರಿ ಹಯರ್ ಸೆಕೆಂಡರಿ ಶಾಲೆಯಲ್ಲಿ ಕಾರ್ಯಕ್ರಮ ನಡೆಯುತ್ತಿದ್ದಾಗಲೇ ಪೆಂಡಾಲ್ ಕುಸಿದು ಬಿದ್ದಿತ್ತು. ಅನೇಕ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ತೀರ್ಪುಗಾರರು ಸೇರಿದಂತೆ ಗಾಯಗೊಂಡಿದ್ದರು.
ಘಟನೆ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಕೇರಳ ಶಿಕ್ಷಣ ಸಚಿವ ಶಿವನ್ ಕುಟ್ಟಿ ಆದೇಶ ನೀಡಿದ್ದಾರೆ.
ಇವರ ವಿರುದ್ಧ ಜುವೈನಲ್ ಕಾಯ್ದೆ ಸೇರಿದಂತೆ ಹಲವು ಮೊಕದ್ದಮೆ ದಾಖಲಿಸಲಾಗಿದೆ.
ಗಾಯಗೊಂಡು ಮಂಗಳೂರು ಹಾಗೂ ಕಾಸರಗೋಡು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ 15 ಮಂದಿ ಚೇತರಿಸಿಕೊಳ್ಳುತ್ತಿದ್ದಾರೆ ಎನ್ನು ಮಾಹಿತಿ ಲಭ್ಯವಾಗಿದೆ.
ಉಳಿದವರು ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.