Connect with us

    BELTHANGADY

    ಅತ್ಯುತ್ತಮ ಕಂದಾಯ ಪ್ರಶಸ್ತಿಯನ್ನು ಹಿಂತಿರುಗಿಸಿದ ಪಿಡಿಒ

    Published

    on

    ಬೆಳ್ತಂಗಡಿ: ಕರ್ನಾಟಕ ಸರ್ಕಾರದ ಕಂದಾಯ ಇಲಾಖೆ ಗುರುತಿಸಿ ನೀಡಿರುವ ವರ್ಷದ ಅತ್ಯುತ್ತಮ ಕಂದಾಯ ಪ್ರಶಸ್ತಿಯನ್ನು ಪಿಡಿಒ ಒಬ್ಬರು ಹಿಂತಿರುಗಿಸಿದ್ದಾರೆ.

    ಬೆಳ್ತಂಗಡಿ ತಾಲೂಕಿನ ನಿಡ್ಲೆ ಮತ್ತು ಕಳಿಯ ಗ್ರಾಮದ ಪಿಡಿಒ ಪ್ರಥ್ವಿರಾಜ್ ಪಿ.ಶೆಟ್ಟಿ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು. ಸೆಪ್ಟಂಬರ್ 27 ರಂದು ಬೆಂಗಳೂರಿನಲ್ಲಿ ಕಂದಾಯ ಸಚಿವರು ಆಯೋಜಿಸಿರುವ ಅಭಿನಂದನಾ ಸಮಾರಂದಲ್ಲಿ ಈ ಪ್ರಶಸ್ತಿಯನ್ನು ಪ್ರಥ್ವಿರಾಜ್ ಅವರು ಪಡೆಯಬೇಕಾಗಿತ್ತು.

     

     

     

    ಆದ್ರೆ ನಿಡ್ಲೆ ಹಾಗೂ ಕಳಿಯ ಗ್ರಾಮದ ಪಿಡಿಒ ಪ್ರಥ್ವಿರಾಜ್ ಪಿ.ಶೆಟ್ಟಿ ಅವರು ಕಾರಣ ನೀಡಿ ಈ ಪ್ರಶಸ್ತಿಯನ್ನು ತಿರಸ್ಕರಿಸುತ್ತಿರುವುದಾಗಿ ಕಂದಾಯ ಇಲಾಕೆಯ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ಈ ಪ್ರಶಸ್ತಿಯಲ್ಲಿ ಸಾರ್ವಜನಿಕರ ಬೈಗುಳವಿದೆ ನನ್ನ ವೇತನದ ಖರ್ಚಿನ ಹೊರೆ ಇದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಈ ಕಾರಣದಿಂದ ವರ್ಷದ ಅತ್ಯುತ್ತಮ ಕಂದಾಯ ಅಧಿಕಾರಿ 2024 ರ ಪ್ರಶಸ್ತಿಯನ್ನು ಹಿಂತಿರುಗಿಸುತ್ತಿದ್ದೇನೆ ಎಂದು ಬರೆದಿದ್ದಾರೆ.  ರಾಜ್ಯದ ಒಟ್ಟು 36 ಪಿಡಿಒಗಳಿಗೆ ಈ ಪ್ರಶಸ್ತಿ ನೀಡಲಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯಿಂದ ಪ್ರಶಸ್ತಿ ಪಡೆದಿರುವ ಏಕೈಕ ಪಿಡಿಒ ಆಗಿದ್ದಾರೆ.

    BELTHANGADY

    ಬೆಳ್ತಂಗಡಿ: 5 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ರೂ. 5 ಲಕ್ಷ ನಗದು ಕಳವು

    Published

    on

    ಬೆಳ್ತಂಗಡಿ: ಬೆಳ್ತಂಗಡಿ ಕಸಬಾ ಗ್ರಾಮದ ಹಳೆಕೋಟೆ ಎಂಬಲ್ಲಿ ಮನೆಯೊಂದರಿಂದ ರೂ. 5 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ರೂ. 5 ಲಕ್ಷ ನಗದು ಕಳವು ಗೈದ ಘಟನೆ ಸೆ.24ರಂದು ವರದಿಯಾಗಿದೆ.

    ಬೆಳ್ತಂಗಡಿ ಹಳೇಕೋಟೆ ನಿವಾಸಿ ಪ್ರಸನ್ನ ಕುಮಾರ್ ಎಂಬವರ ಮನೆಯಿಂದ ಈ ಕಳ್ಳತನ ನಡೆಸಲಾಗಿದೆ. ಸೆ. 13ರಿಂದ ಸೆ.24 ರ, ಬೆಳಿಗ್ಗಿನ ಜಾವದ ಅವಧಿಯಲ್ಲಿ ಕಳ್ಳರು ಈ ಕೃತ್ಯ ನಡೆಸಲಾಗಿದೆ.

    ಮನೆಯೊಳಗೆ ಪ್ರವೇಶಿಸಿದ ಕಳ್ಳರು ಮನೆಯ ಹಾಲ್ ನ ಟಿ.ವಿ ಸ್ಟಾಂಡ್ ನಲ್ಲಿಟ್ಟಿದ್ದ ರೂಪಾಯಿ 5,05,000 ಮೌಲ್ಯದ ಚಿನ್ನಾಭರಣಗಳು ಹಾಗೂ ರೂ. 500000/- ನಗದು ಹಣವನ್ನು ಯಾರೋ ಕಳ್ಳರು ಕಳವು ಮಾಡಿಕೊಂಡಿದ್ದಾರೆ.

    ಈ ಬಗ್ಗೆ ಪ್ರಸನ್ನ ಕುಮಾರ್ ನೀಡಿದ ದೂರಿನಂತೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅಪರಾದ ಕ್ರಮಾಂಕ: 82/2024 ಕಲಂ: 305 BNS ರಂತೆ ಪ್ರಕರಣ ದಾಖಲಾಗಿರುತ್ತದೆ.

    Continue Reading

    BELTHANGADY

    ಬೆಳ್ತಂಗಡಿ : ನೇಣು ಬಿಗಿದು ದಂಪತಿ ಆತ್ಮ*ಹತ್ಯೆ

    Published

    on

    ಬೆಳ್ತಂಗಡಿ : ದಂಪತಿ ನೇ*ಣು ಬಿಗಿದು ಆತ್ಮ*ಹತ್ಯೆ ಮಾಡಿಕೊಂಡಿರುವ ಘಟನೆ ಕಾಶಿಪಟ್ನ ಗ್ರಾಮದ ಉರ್ದು ಗುಡ್ಡೆಯಲ್ಲಿ ನಡೆದಿದೆ. ಉರ್ದುಗುಡ್ಡೆ ನಿವಾಸಿಗಳಾದ ನೋಣಯ್ಯ ಪೂಜಾರಿ (63) ಹಾಗೂ ಬೇಬಿ (46) ಆತ್ಮ*ಹತ್ಯೆ ಮಾಡಿಕೊಂಡವರು.


    ಮನೆ ಸಮೀಪ ಇರುವ ಕಾಡಿನಲ್ಲಿ ದಂಪತಿ ನೇ*ಣಿಗೆ ಶರಣಾಗಿದ್ದಾರೆ. ಕಳೆದ 5 ವರ್ಷಗಳಿಂದ ನೋಣಯ್ಯ ಪೂಜಾರಿ ತಲೆ ನೋವಿನಿಂದ ಬಳಲುತ್ತಿದ್ದು, ಬೇಬಿ ಅವರಿಗೆ ಮಕ್ಕಳಿಲ್ಲದ ಕೊರಗು ಇತ್ತು ಎಂದು ತಿಳಿದು ಬಂದಿದೆ.
    ನೋಣಯ್ಯ ಪೂಜಾರಿಯವರಿಗೆ ಇದು ಎರಡನೇ ವಿವಾಹವಾಗಿದ್ದು , ಮೊದಲ ಪತ್ನಿ 10 ವರ್ಷದ ಹಿಂದೆಯೇ ಸಾವನ್ನಪ್ಪಿದ್ದು, ಮೊದಲ ಪತ್ನಿಗೆ 5 ಜನ ಗಂಡು ಮಕ್ಕಳು ಇದ್ದರು ಎಂದು ತಿಳಿದುಬಂದಿದೆ. ಆತ್ಮ*ಹತ್ಯೆ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Continue Reading

    BANTWAL

    ಪೊಲೀಸರ ರ್ಯಾಪಿಡ್ ಆಕ್ಷನ್ ಫೋರ್ಸ್ ಲಾರಿ ಪಲ್ಟಿ ; ಇಬ್ಬರಿಗೆ ಗಾಯ

    Published

    on

    ಪುಂಜಾಲಕಟ್ಟೆ; ಬಂಟ್ವಾಳ ಬೆಳ್ತಂಗಡಿ ರಾಷ್ಟ್ರೀಯ ಹೆದ್ದಾರಿ ಮೂರ್ಜೆ ಸಮೀಪದ ಕುದ್ರೋಟಿಕಟ್ಟೆಯಲ್ಲಿ ಪೊಲೀಸರ ರ್ಯಾಪಿಡ್ ಆಕ್ಷನ್ ಫೋರ್ಸ್ ಲಾರಿ ಮುಗುಚಿ ಕೆಳಗೆ ಬಿದ್ದಿದೆ.


    ಚಾಲಕನ ನಿಯಂತ್ರಣ ತಪ್ಪಿದ ಕಾರಣದಿಂದಾಗಿ ಆರ್‌ಎಎಫ್ ನ ಲಗೇಜು ತುಂಬಿದ ಲಾರಿ ಭದ್ರಾವತಿಯಿಂದ ಬಿ.ಸಿ.ರೋಡ್‌ ಗೆ ಬರುತ್ತಿರುವಾಗ ಪಲ್ಟಿಯಾಗಿದೆ. ಚಾಲಕನಿಗೆ ಸಣ್ಣ ಪುಟ್ಟ ಗಾಯಗಳಾಗಿವೆ ಹಾಗೂ ಮತ್ತೋರ್ವ ಸಿಬ್ಬಂದಿ ಸಾಂತಪ್ಪ ನಾಯಕ್‌ರನ್ನು ಮಂಗಳೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
    ಈ ಬಗ್ಗೆ ಪ್ರಕರಣ ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

    Continue Reading

    LATEST NEWS

    Trending