ಹಾಸನ: ಕಾಂಗ್ರೆಸ್‌ನಿಂದ ರಾಜ್ಯದಲ್ಲಿ ಪೇ ಸಿಎಂ ಅಭಿಯಾನ ಆರಂಭವಾಗಿದ್ದು ಇದೀಗ ರಾಜ್ಯವ್ಯಾಪಿಯಾಗಿ ವಿಸ್ತಾರಗೊಳ್ಳುತ್ತಿದ್ದು ಹಾಸನಕ್ಕೂ ಕಾಲಿಟ್ಟಿದೆ.
ಹಾಸನದಲ್ಲಿ ಬಿಜೆಪಿ ಶಾಸಕ ಪ್ರೀತಂ ಗೌಡರ ವಿರುದ್ಧವೇ ಪೇ ಎಂಎಲ್‌ಎ (Pay MLA) ಅಭಿಯಾನ ಶುರುವಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಪೇ ಎಂಎಲ್‌ಎ ಎಂಬ ಪೋಸ್ಟ್‌ಗಳನ್ನು ಅಪ್‌ಲೋಡ್ ಮಾಡಲಾಗಿದೆ.
ಶಾಸಕ ಪ್ರೀತಂಗೌಡ (Preetam Gowda) ವಿರುದ್ಧ 50% ಕಮೀಷನ್ ಪೇ ಎಂಎಲ್‌ಎ ಎಂಬ ಪೋಸ್ಟ್‌ನ್ನು ಡಾ. ಸೂರಜ್ ರೇವಣ್ಣ ದೊಡ್ಮನೆ ಹುಡುಗ ಎಂಬ ಫೇಸ್‌ಬುಕ್ ಪೇಜ್‌ನಿಂದ ಅಪ್‌ಲೋಡ್ ಮಾಡಲಾಗಿ್ದು ಬಿಜೆಪಿ ಕಾರ್ಯಕರ್ತರು ಪೋಸ್ಟ್ ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಬಿಜೆಪಿ ಕಾರ್ಯಕರ್ತರು ಡಿವೈಎಸ್‌ಪಿ ಉದಯ್ ಭಾಸ್ಕರ್ ಗೆ ಮನವಿ ಸಲ್ಲಿಸಿದ್ದು ಶಾಸಕರ ವಿರುದ್ಧ ಪೇ ಎಂಎಲ್‌ಎ ಪೋಸ್ಟ್ ಹಾಕಿದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.