Connect with us

LATEST NEWS

ಮಂಗಳೂರಿನಲ್ಲಿರುವ ರಸ್ತೆ ಹೊಂಡ ಗುಂಡಿಗಳ ವಿರುದ್ಧ patholeseazaadi ಅಭಿಯಾನ

Published

on

ಮಂಗಳೂರು: ನಗರದ ಬಿಕರ್ನಕಟ್ಟೆ ಕಂಡೆಟ್ಟು ಕ್ರಾಸ್ ಬಳಿ ಕಳೆದ ಆ.5 ರಂದು ರಸ್ತೆ ಗುಂಡಿ ತಪ್ಪಿಸಲು ಹೋಗಿ ಎಂಜಿನಿಯರಿಂಗ್‌ ವಿದ್ಯಾರ್ಥಿ ಆತಿಶ್ (20) ಮೃತಪಟ್ಟ ನಂತರ ರಾಷ್ಟ್ರೀಯ ಹೆದ್ದಾರಿ ಸಹಿತ ಮಂಗಳೂರು ನಗರದಲ್ಲಿರುವ ಹೊಂಡ ಗುಂಡಿಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶ ಉಂಟಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿರುವ ರಸ್ತೆಗುಂಡಿಗಳ ವಿರುದ್ದ ಇದೀಗ patholeseazaadi ಅಭಿಯಾನ ಆರಂಭವಾಗಿದೆ.
ನಿನ್ನೆ ಲತೀಶ್ ಸ್ನೇಹಿತ ಲಖಿತ್ ರೈ ಮಂಗಳೂರು ಮಹಾನಗರ ಪಾಲಿಕೆ ಎದುರು ಆಶಿತ್‌ಗೆ ಸಾವಿಗೆ ನ್ಯಾಯ ಕೊಡಿ. ‘ಮಂಗಳೂರು ರೋಡ್ ನೀಡ್ಸ್ ಸುರಕ್ಷಾ ಬಂಧನ್’ (ಮಂಗಳೂರು ರಸ್ತೆಗೆ ಬೇಕಾಗಿದೆ ಸುರಕ್ಷಾ ಬಂಧನ ) ಎಂದು ಬರೆದ ಭಿತ್ತಿಪತ್ರ ಹಿಡಿದು ಏಕಾಂಗಿಯಾಗಿ ಮೌನ ಪ್ರತಿಭಟನೆ ನಡೆಸಿ ಗಮನ ಸೆಳೆದಿದ್ದನು.

ಘಟನೆ ವಿವರ
ನಂತೂರು ಜಂಕ್ಷನ್ ಕಡೆಯಿಂದ ಬಿಕರ್ನಕಟ್ಟೆ ಕೈಕಂಬ ಕಡೆಗೆ ಹಾದು ಹೋಗಿರುವ ಹೆದ್ದಾರಿಯಲ್ಲಿ ಸ್ಕೂಟರ್‌ನಲ್ಲಿ ಆತಿಶ್ ಶುಕ್ರವಾರ ಸಂಜೆ ಸಾಗುತ್ತಿದ್ದರು. ಆ ವೇಳೆ ರಸ್ತೆಯಲ್ಲಿದ್ದ ಹೊಂಡವನ್ನು ತಪ್ಪಿಸುವ ಭರದಲ್ಲಿ ಸ್ಕೂಟರ್‌ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿತ್ತು.

ಮಳೆ ಬರುತ್ತಿದ್ದುದರಿಂದ ಹೆದ್ದಾರಿಯಲ್ಲಿ ಹೊಂಡ ಇದ್ದುದು ಸವಾರನ ಗಮನಕ್ಕೆ ಬಂದಿರಲಿಲ್ಲ. ರಸ್ತೆ ವಿಭಜಕದಲ್ಲಿ ಅಳವಡಿಸಲಾಗಿದ್ದ ರಿಫ್ಲೆಕ್ಟರ್ ರೇಲಿಂಗ್‌ಗೆ ಅವರ ತಲೆ ಬಡಿದಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ದಾರಿ ಮಧ್ಯೆ ಮೃತಪಟ್ಟಿದ್ದರು.

ಘಟನೆ ಬಳಿಕ ರಸ್ತೆ ಗುಂಡಿಗಳನ್ನು ಮುಚ್ಚದ ಹೆದ್ದಾರಿ ಇಲಾಖೆ, ಮಹಾನಗರ ಪಾಲಿಕೆ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

ಹಲವರು ರಸ್ತೆ ಗುಂಡಿ ಮುಚ್ಚುವಂತೆ ಆಗ್ರಹಿಸಿ ರಾಷ್ಟ್ರೀಯ ಹೆದ್ದಾರಿ ಸಹಿತ ಮಂಗಳೂರು ನಗರದಾದ್ಯಂತ ಇರುವ ಹೊಂಡಗುಂಡಿಗಳ ಫೋಟೋಗಳನ್ನು ಸಾಮಾಜಿಕ ಜಾಲತಾಣದಾದ್ಯಂತ ಪೋಸ್ಟ್‌ ಮಾಡುತ್ತಿದ್ದಾರೆ.

ಸ್ನೇಹಿತನನ್ನು ಕಳೆದುಕೊಂಡ ನೋವನ್ನು ಲಿಖಿತ್‌ ರೈ ಮೌನ ಪ್ರತಿಭಟನೆಯ ಮೂಲಕ ವ್ಯಕ್ತಪಡಿಸಿದ್ದಾರೆ.

LATEST NEWS

ಇದು ಭಾರತದಲ್ಲಿರುವ ದೇವಸ್ಥಾನ… ಆದ್ರೆ ಭಾರತ ಸರ್ಕಾರಕ್ಕಿಲ್ಲ ಇದರ ಮೇಲೆ ಹಕ್ಕು…!

Published

on

 

ಕಾಶಿ ವಿಶ್ವನಾಥನ ಸನ್ನಿಧಿಗೆ ಹೋಗುವ ಭಕ್ತರು ಅಲ್ಲೇ ಪಕ್ಕದಲ್ಲಿ ಗಂಗಾ ನದಿಯ ದಡದಲ್ಲಿರುವ ಪಶುಪತಿನಾಥ ದೇವಸ್ಥಾನಕ್ಕೂ ಭೇಟಿ ನೀಡ್ತಾರೆ. ಲಲಿತ್ ಘಾಟ್‌ನಲ್ಲಿರುವ ಈ ದೇವಸ್ಥಾನ ಭಾರತದಲ್ಲೇ ಇದ್ರೂ ಇದರ ಮೇಲೆ ದೇಶದ ಯಾವ ಕಾನೂನು ಅನ್ವಯ ಆಗೋದಿಲ್ಲ. ಈ ದೇವಸ್ಥಾನದ ವಿಚಾರದಲ್ಲಿ ಭಾರತ ದೇಶದ ಯಾವುದೇ ಪ್ರಾಧಿಕಾರವಾಗಲಿ ಅಧಿಕಾರ ಚಲಾಯಿಸುವಂತೆಯೂ ಇಲ್ಲ. ಈ ದೇವಸ್ಥಾನ ಕಾಶಿಯಿಂದ ಸುಮಾರು 400 ಕಿಲೋ ಮೀಟರ್ ದೂರದ ನೇಪಾಳ ಸರ್ಕಾರದ ಹಿಡಿತದಲ್ಲಿದೆ. ಹೀಗಾಗಿ ಭಾರತ ದೇಶದಲ್ಲೇ ಈ ದೇವಸ್ಥಾನ ಇದ್ರೂ ದೇವಸ್ಥಾನದ ಒಂದು ಹುಲ್ಲು ಕಡ್ಡಿ ಅಲುಗಾಡಿಸಬೇಕಾದ್ರೂ ನೇಪಾಳದ ಒಪ್ಪಿಗೆ ಪಡೆಯಬೇಕು.

ದೇವಸ್ಥಾನದ ಸಂಪೂರ್ಣ ಅಧಿಕಾರ ನೇಪಾಳದ್ದು

 


ದೇವಸ್ಥಾನದ ನಿರ್ವಹಣೆಯಿಂದ ಹಿಡಿದು, ಪೂಜೆ ಪುನಸ್ಕಾರ, ಅರ್ಚಕರಿಗೆ ನೀಡುವ ಸೌಲಭ್ಯ ಎಲ್ಲವೂ ನೇಪಾಳ ಸರ್ಕಾರವೇ ಭರಿಸುತ್ತದೆ. ಈ ದೇವಸ್ಥಾನವನ್ನು ನೇಪಾಳದ ರಾಜ ರಾಣಾ ಬಹದ್ದೂರ್ ನಿರ್ಮಿಸಿರೋದೇ ಇದಕ್ಕೆ ಕಾರಣ. 1800 -1804 ರ ನಡುವೆ ಕಾಶಿಯಲ್ಲಿ ತಂಗಿದ್ದ ರಾಣಾ ಬಹದ್ದೂರು ಈ ದೇವಾಲಯವನ್ನು ನಿರ್ಮಾಣ ಮಾಡಿದ ಅನ್ನೋ ಐತಿಹಾಸಿಕ ದಾಖಲೆಗಳು ಇದೆ.

1843 ರಲ್ಲಿ ಪೂರ್ಣಗೊಂಡ ನಿರ್ಮಾಣ ಕಾರ್ಯ

ರಾಣಾ ಬಹದ್ದೂರ್ ಸಹಾ ನಾಲ್ಕು ವರ್ಷ ಕಾಶಿಯಲ್ಲಿ ಇದ್ದಾಗ ದೇವಸ್ಥಾನ ನಿರ್ಮಾಣ ಆರಂಭಿಸಿದ್ದರೂ, 1843 ರಲ್ಲಿ ಈ ದೇವಸ್ಥಾನ ಪೂರ್ಣಗೊಂಡಿತ್ತು. ರಾಣಾ ಬಹದ್ದೂರು ಸಹಾ ಅವರ ಮಗ ರಾಜ ರಾಜೇಂದ್ರ ವೀರ್ ಈ ದೇವಾಲಯದ ಕಾರ್ಯವನ್ನು ಪೂರ್ಣಗೊಳಿಸಿದ್ದರು. ಕಠ್ಮಂಡುವಿನ ಪಶುಪತಿನಾತ ದೇವಾಲಯದಂತೆಯೇ ಈ ದೇವಸ್ಥಾನವನ್ನು ನಿರ್ಮಾಣಮಾಡಲಾಗಿದೆ. ಈ ದೇವಸ್ಥಾನದ ಸಂಪೂರ್ಣ ನಿರ್ಮಾಣ ಕಾರ್ಯವನ್ನೂ ನೇಪಾಳಿ ಕುಶಲಕರ್ಮಿಗಳೇ ಮಾಡಿದ್ದಾರೆ.

ಇದನ್ನೂ ಓದಿ…ಈ ದೇವಸ್ಥಾನದಲ್ಲಿ ಒಂದು ಲಿಂಬೆಹಣ್ಣಿಗೆ ಲಕ್ಷಾಂತರ ರೂ. ಬೇಡಿಕೆ..! ಅಂತದ್ದೇನಿದೆ ಈ ಲಿಂಬೆ ಹಣ್ಣಲ್ಲಿ?

ಮರದಿಂದ ಮಾಡಿದ ವಿಶೇಷ ದೇವಾಲಯ

ಈ ದೇವಾಲಯದ ವಿಶೇಷವೆಂದರೆ ಈ ದೇವಾಲಯವು ಕಲ್ಲಿನಿಂದ ಮಾಡಲಾಗಿಲ್ಲ, ಆದರೆ ಮರದಿಂದ ಮಾಡಲ್ಪಟ್ಟಿದೆ ಮತ್ತು ಸುಂದರವಾದ ಕೆತ್ತನೆಗಳನ್ನು ಸಹ ಕೆತ್ತಲಾಗಿದೆ. ಜನರು ಈ ದೇವಾಲಯವನ್ನು ಮಿನಿ ಖಜುರಾಹೋ ಎಂದೂ ಕರೆಯುತ್ತಾರೆ. ಕಾಶಿಯಲ್ಲಿ ನಿರ್ಮಿಸಲಾದ ಈ ದೇವಾಲಯವು ಭಾರತ ಮತ್ತು ನೇಪಾಳ ನಡುವಿನ ಸ್ನೇಹಕ್ಕೆ ಒಂದು ವಿಶಿಷ್ಟ ಉದಾಹರಣೆಯಾಗಿದೆ. ಈ ದೇವಾಲಯದಲ್ಲಿ, ಪೂಜೆ ಸೇರಿದಂತೆ ಎಲ್ಲಾ ಆಚರಣೆಗಳನ್ನು ನೇಪಾಳದ ಜನರು ಮಾತ್ರ ಮಾಡುತ್ತಾರೆ.

Continue Reading

FILM

ಕಿರುತೆರೆಯಿಂದ ಹಿರಿತೆರೆಗೆ ಲಗ್ಗೆ ಇಟ್ಟ ‘ಪಾರು’ ಧಾರಾವಾಹಿ ನಟ ‘ಆದಿ’!

Published

on

ಕನ್ನಡ ಕಿರುತೆರೆಯಲ್ಲಿ ಸದ್ದು ಮಾಡಿದ್ದ ಧಾರಾವಾಹಿಗಳಲ್ಲಿ ‘ಪಾರು’ ಕೂಡಾ ಒಂದು. ಆದಿ – ಪಾರು ಪ್ರೇಮಕಥೆ, ಅಖಿಲಾಂಡೇಶ್ವರಿ ಎಂಬ ಹಿರಿಮೆ ಎಲ್ಲವೂ ಧಾರಾವಾಹಿಯ ಜೀವಾಳವಾಗಿತ್ತು. ಈ ಧಾರಾವಾಹಿಗೆ ಸಿಕ್ಕಾಪಟ್ಟೆ ಅಭಿಮಾನಿಗಳು ಇದ್ದಾರೆ.

ಕಿರುತೆರೆಯಲ್ಲಿ ಸುಮಾರು ಆರು ವರ್ಷಗಳ ಈ ಧಾರಾವಾಹಿ ಪ್ರಸಾರವಾಗಿದೆ. ಈ ಧಾರಾವಾಹಿಯಲ್ಲಿ ಪಾರು ಪಾತ್ರದಿಂದ ಮೋಕ್ಷಿತಾ ಪೈ ತಮ್ಮ ಸಹಜ ಅಭಿನಯದಿಂದ ಗಮನ ಸೆಳೆದಿದ್ದರು. ಹಾಗೆಯೇ ಆದಿ ಪಾತ್ರದಿಂದ ನಟ ಶರತ್ ಪದ್ಮನಾಭ್ ಕೂಡ ಅಭಿಮಾನಿಗಳನ್ನು ಗಳಿಸಿದ್ದಾರೆ.

ಜೀ ಕನ್ನಡದಲ್ಲಿ ಬರುತ್ತಿದ್ದ ಪಾರು ಸೀರಿಯಲ್ ಈಗ ಅಂತ್ಯ ಕಂಡಿದೆ. ಈ ಧಾರಾವಾಹಿ ಮೂಲಕ ಕಿರುತೆರೆ ಪ್ರೇಕ್ಷಕರ ಮನೆ ಮನ ಗೆದ್ದಿರುವ ಆದಿ ಅಂದರೆ ಶರತ್ ಪದ್ಮನಾಭ್ ಹಿರಿತೆರೆ ಅಂಗಳದಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.

ಬೆಳ್ಳಿಪರದೆ ಮೇಲೆ ‘ಆದಿ’

ಹೌದು, ನಟ ಶರತ್ ಪದ್ಮನಾಭ್ ನಾಯಕನಾಗಿ ಬೆಳ್ಳಿ ಪರದೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಹೆಸರು ‘ಅನಿಮಾ’. ಈ ಹಿಂದೆ ರೈತರ ಕುರಿತ ಹೊನ್ನು ಬಿತ್ಯಾರು ಎಂಬ ಕಿರುಚಿತ್ರ ಮಾಡಿದ್ದ ನಿರ್ದೇಶಕ ವರ್ಧನ್ ಎಂ ಎಚ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ‘ಅನಿಮಾ’ ಎಂದರೆ ಪ್ರತಿಬಿಂಬ ಕಾಣದ ಕನ್ನಡಿ ಎಂದರ್ಥ.

ಎ ಡ್ರೀಮರ್ಸ್ ಸ್ಟುಡಿಯೋ ಬ್ಯಾನರ್ ನಡಿ ಚಿತ್ರ ನಿರ್ಮಾಣವಾಗುತ್ತಿದ್ದು, ಅನಿಮಾ ಸಿನಿಮಾದ ಚಿತ್ರೀಕರಣ ಕೊನೆ ಹಂತದಲ್ಲಿದೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರ ಎನ್ನಲಾಗಿದೆ. ಬೆಂಗಳೂರು, ಸಕಲೇಶಪುರ, ಮಡಿಕೇರಿ, ಹುಲಿಯೂರು ದುರ್ಗ ಸುತ್ತಮುತ್ತ ಈಗಾಗಲೇ ಶೂಟಿಂಗ್ ನಡೆಸಲಾಗುತ್ತಿದೆ.

ಈಗಾಗಲೇ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಪೋಸ್ಟರ್ ವಿಭಿನ್ನವಾಗಿದ್ದು, ದಟ್ಟ ಕಾಡಿನ ಮಧ್ಯೆ ಸಾಗುತ್ತಿರುವ ಕಾರು ನಾನಾ ಕಥೆಯನ್ನು ಬಿಚ್ಚಿಡುತ್ತಿದೆ. ಸಿನಿಮಾ ಪೋಸ್ಟರ್ ಅನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ನಟ ಶರತ್ ಪದ್ಮನಾಭ್ ಹಂಚಿಕೊಂಡಿದ್ದಾರೆ.


” ಅನಿಮಾ, ನಮ್ಮ ಸಿನಿಮಾ, ನಿಮ್ಮ ಸಿನಿಮಾ ಆಗುವ ಮೊದಲ ಹೆಜ್ಜೆ!! Presenting you the title poster of our movie !! ಒಂದು ರೋಚಕವಾದ ಕಥೆಯನ್ನು ಹೇಳಲು ಆದಷ್ಟು ಬೇಗ ಬರ್ತಾ ಇದೀವಿ !! ನಮ್ಮ ತಂಡಕ್ಕೆ ನಿಮ್ಮ ಬೆಂಬಲವಿರಲಿ” ಎಂದು ಮನವಿ ಮಾಡಿಕೊಂಡಿದ್ದಾರೆ.

ಅನುಷಾ ಕೃಷ್ಣ ನಾಯಕಿ

ಅನಿಮಾ ಚಿತ್ರದಲ್ಲಿ ಶರತ್ ಪದ್ಮನಾಭ್ ಗೆ ನಾಯಕಿಯಾಗಿ ಅನುಷಾ ಕೃಷ್ಣ ಜೊತೆಯಾಗಿದ್ದಾರೆ. ಪಂಕಜ್ ಎಸ್ ನಾರಾಯಣ್, ಯುವ ಶೆಟ್ಟಿ, ವಾಣಿ, ಸೂರಿ, ಸುಷ್ಮಿತಾ ಸೇರಿದಂತೆ ದೊಡ್ಡ ತಾರಾಬಳಗವೇ ಚಿತ್ರದಲ್ಲಿದೆ. ಎನ್ ಕೆ ರಾಜ್ ಛಾಯಾಗ್ರಹಣ, ವಿರಾಜ್ ವಿಶ್ವ ಸಂಭಾಷಣೆ, ರೋನಾದ ಬಕ್ಕೇಶ್ ಸಂಗೀತ ಚಿತ್ರಕ್ಕಿದೆ.

Continue Reading

LATEST NEWS

ಆಭರಣ ಪ್ರಿಯರಿಗೆ ನಿರಾಸೆ….ಇಂದು ಮತ್ತೆ ಏರಿಕೆ ಕಂಡ ಚಿನ್ನದ ಬೆಲೆ…!

Published

on

ಬೆಂಗಳೂರು : ಚಿನ್ನದ ಬೆಲೆ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದೆ. ನಿನ್ನೆಗಿಂತ ಇಂದು(ಮಾ.29)  ಚಿನ್ನದ ದರ ಮತ್ತಷ್ಟು ಹೆಚ್ಚಾಗಿದೆ. ಬೆಳ್ಳಿ ಬೆಲೆಯೂ ಕೂಡ ಹೆಚ್ಚಾಗಿದ್ದು, ಶುಭಕಾರ್ಯಗಳಿಗೆ ಚಿನ್ನ ಖರೀದಿಸಬೇಕು ಎಂದುಕೊಂಡವರು ಯೋಚಿಸುವಂತಾಗಿದೆ.

ಮದುವೆ ಸಮಾರಂಭಗಳ ಸೀಸನ್ ಇದು. ಶುಭ ಸಮಾರಂಭಗಳಿಗೆ ಚಿನ್ನಾಭರಣವೂ ಅತೀ ಮುಖ್ಯ. ಹಾಗಾಗಿ ಚಿನ್ನ ಕೊಳ್ಳುವವರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಈ ಸಮಯದಲ್ಲಿ ಚಿನ್ನ ಹಾಗೂ ಬೆಳ್ಳಿಯ ಬೆಲೆ ಹಿಂದಿಗಿಂತ ದುಬಾರಿಯೇ ಇದೆ.

ಎಷ್ಟಿದೆ ಬೆಲೆ ?
ಸದ್ಯ ಭಾರತದಲ್ಲಿ 22 ಕ್ಯಾರೆಟ್ ಚಿನ್ನದ 10 ಗ್ರಾಂ ಬೆಲೆ 61,700 ರೂಪಾಯಿ ಇದ್ದು, 24 ಕ್ಯಾರೆಟ್​ನ ಅಪರಂಜಿ ಚಿನ್ನದ ಬೆಲೆ 10 ಗ್ರಾಂ ಬೆಲೆ 67,310 ರೂಪಾಯಿ ಇದೆ. ಇನ್ನು 100 ಗ್ರಾಂ ಬೆಳ್ಳಿಯ ಬೆಲೆ 7,750 ರೂಪಾಯಿ ಇದೆ.

ಒಂದು ಗ್ರಾಂ ಚಿನ್ನದ ದರ
22 ಕ್ಯಾರೆಟ್ ಚಿನ್ನದ ದರ – 6,170 ರೂಪಾಯಿ
24 ಕ್ಯಾರೆಟ್ ಚಿನ್ನದ ದರ – 6,731 ರೂಪಾಯಿ

10 ಗ್ರಾಂ ಚಿನ್ನದ ದರ

22 ಕ್ಯಾರೆಟ್ ಆಭರಣ ಚಿನ್ನದ ದರ – 61,700 ರೂಪಾಯಿ
24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) – 67,310 ರೂಪಾಯಿ

8 ಗ್ರಾಂ ಚಿನ್ನದ ದರ
22 ಕ್ಯಾರೆಟ್ ಆಭರಣ ಚಿನ್ನದ ದರ – 49,360 ರೂಪಾಯಿ

ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನದ (10 ಗ್ರಾಂ)ನ ಬೆಲೆ
ಬೆಂಗಳೂರು- 61,700 ರೂಪಾಯಿ
ಚೆನ್ನೈ – 62,500 ರೂಪಾಯಿ
ಮುಂಬೈ – 61,700 ರೂಪಾಯಿ
ಕೇರಳ -61,700 ರೂಪಾಯಿ
ಕೋಲ್ಕತ್ತಾ – 61,700 ರೂಪಾಯಿ
ಜೈಪುರ್ -61,850 ರೂಪಾಯಿ
ಭುವನೇಶ್ವರ್- 61,700 ರೂಪಾಯಿ
ಅಹ್ಮದಾಬಾದ್- 61,750 ರೂಪಾಯಿ
ಲಕ್ನೋ – 61,850 ರೂಪಾಯಿ
ನವದೆಹಲಿ – 61,850 ರೂಪಾಯಿ

ವಿವಿಧ ನಗರಗಳಲ್ಲಿ ಬೆಳ್ಳಿ ದರ (100 ಗ್ರಾಂ)
ಬೆಂಗಳೂರು-7,750 ರೂಪಾಯಿ
ಚೆನ್ನೈ- 8,050 ರೂಪಾಯಿ
ಮುಂಬೈ-7,750 ರೂಪಾಯಿ
ಕೋಲ್ಕತ್ತಾ-7,750 ರೂಪಾಯಿ
ನವದೆಹಲಿ-7,750 ರೂಪಾಯಿ

Continue Reading

LATEST NEWS

Trending