DAKSHINA KANNADA
ಕಡಬ: ಪ್ಯಾಚ್ ವರ್ಕ್ ಮಾಡಿ ಜನತೆ ಕಣ್ಣಿಗೆ ಮಣ್ಣೆರೆಚುವ ತಂತ್ರ
Published
14 hours agoon
ಕಡಬ: ಬರೇ ಪ್ಯಾಚ್ ವರ್ಕ್ ಮಾಡಿ ಜನರ ಕಣ್ಣೀಗೆ ಮಣ್ಣೇರೆಚುತ್ತಿರುವ, ಹಲವಾರು ವರ್ಷಗಳಿಂದ ಕುಂಟು ನೆಪ ಹೇಳಿ ರಸ್ತೆ ದುರಸ್ತಿ ಮಾಡದಿರುವ ಲೋಕೋಪಯೋಗಿ ಇಲಾಖೆ ವಿರುದ್ಧ ಸಾರ್ವಜನಿಕರು ತಮ್ಮ ಆಕ್ರೋಶವನ್ನು ಬಹಿರಂಗವಾಗಿ ಹೊರಹಾಕಿದ್ದಾರೆ.
ಕಡಬ – ಕೋಡಿಂಬಾಳ ರಾಜ್ಯ ಹೆದ್ದಾರಿಗೆ ರಸ್ತೆ ತೇಪೆ ಹಚ್ಚುವ ಕಾಮಗಾರಿಯನ್ನು ಗ್ರಾಮಸ್ಥರು ತಡೆದಿದ್ದಾರೆ. ಕಳೆದ ವರ್ಷವೂ ಬರೇ ಪ್ಯಾಚ್‌ವರ್ಕ್ ಕಾಮಗಾರಿಯನ್ನು ನಡೆಸಲಾಗಿತ್ತು. ಆದರೆ ಆ ಕಾಮಗಾರಿ ಅದೇ ವರ್ಷ ಕಿತ್ತು ಹೋಗಿದೆ. ಈ ವರ್ಷವೂ ಮತ್ತೆ ಕಳಪೆ ಕಾಮಗಾರಿ ನಡೆಸಲಾಗುತ್ತಿದೆ. ದಿನಂಪ್ರತಿ ಸುಳ್ಯ ಎಂಎಲ್‌ಎ ಸಂಚರಿಸುವ ಪ್ರಮುಖ ರಸ್ತೆ ಇದಾಗಿದ್ದು, ಕಡಬ ತಾಲೂಕಿನ ಕೋಡಿಂಬಾಳ ಕಲ್ಲಂತಡ್ಕ ಎಂಬಲ್ಲಿ ರಸ್ತೆಯನ್ನು ದುರಸ್ತಿ ಪಡಿಸಲಾಗಿದೆ.
ಸ್ಥಳಕ್ಕೆ ಲೋಕೋಪಯೋಗಿ ಇಂಜಿನಿಯರ್, ಗುತ್ತಿಗೆದಾರರು ಬರಬೇಕೆಂದು ಗ್ರಾಮಸ್ಥರು ಪಟ್ಟು ಹಿಡಿದರು.
DAKSHINA KANNADA
ತುಳುವರ ಬದುಕು, ಸಂಸ್ಕೃತಿ, ಸಂಘರ್ಷದ ಕಥಾನಕದ ದಸ್ಕತ್ ಚಲನಚಿತ್ರ ತೆರೆಗೆ !!
Published
11 hours agoon
11/12/2024ಉಡುಪಿ: ಮಾಜಿ ಸಚಿವ ಕೃಷ್ಣ ಜೆ ಪಾಲೇಮಾರ್ ಅರ್ಪಿಸುವ ತುಳು ಚಲನಚಿತ್ರ ‘ದಸ್ಕತ್’ ಡಿಸೆಂಬರ್ 13ರಂದು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳ್ಳಲಿದೆ ಎಂದು ಚಿತ್ರದ ನಿರ್ದೇಶಕ ಕಾಮಿಡಿ ಕಿಲಾಡಿಗಳು ಖ್ಯಾತಿಯ ಅನೀಶ್ ಪೂಜಾರಿ ವೇಣೂರು ತಿಳಿಸಿದ್ದಾರೆ.
ಉಡುಪಿ ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ತುಳುವರ ಬದುಕು, ಸಂಸ್ಕೃತಿ, ಸಂಘರ್ಷದ ಕಥಾನಕವನ್ನು ಚಿತ್ರಿಸುವ ‘ದಸ್ಕತ್’ ನೈಜ ಘಟನೆಯನ್ನಾಧರಿಸಿದ ಚಿತ್ರವಾಗಿದ್ದು, ಬೆಳ್ತಂಗಡಿ ತಾಲೂಕಿನ ವೇಣೂರು, ನಾರಾವಿ, ಅಂಡಿಂಜೆ, ಕೊಕ್ರಾಡಿ ಮುಂತಾದ ಪ್ರದೇಶಗಳಲ್ಲಿ ಚಿತ್ರಿತವಾಗಿದೆ ಎಂದು ಚಿತ್ರಕಥೆಯನ್ನು ಬರೆದಿರುವ ಅನೀಶ್ ಪೂಜಾರಿ ತಿಳಿಸಿದರು. ರಾಘವೇಂದ್ರ ಕುಡ್ವ ಚಿತ್ರದ ನಿರ್ಮಾಪಕರಾಗಿದ್ದು, ಸಂತೋಷ್ ಆಚಾರ್ಯ ಗುಂಪಲಾಜಿ ಅವರ ಛಾಯಾಗ್ರಹಣವಿದೆ. ಸಮರ್ಥನ ಎಸ್.ರಾವ್ ಚಿತ್ರದ ಸಂಗೀತ ನಿರ್ದೇಶಕರಾಗಿದ್ದಾರೆ.
ಚಿತ್ರದ ತಾರಾಗಣದಲ್ಲಿ ದೀಕ್ಷಿತ್ ಕೆ.ಅಂಡಿಂಜೆ, ನೀರಜ್ ಕುಂಜರ್ಪ, ಮೋಹನ್ ಶೇಣಿ, ಮಿಥುನ್ ರಾಜ್, ಭವ್ಯ ಪೂಜಾರಿ, ಚಂದ್ರಹಾಸ ಉಲ್ಲಾಳ್, ನವೀನ್ ಬೋಂದೇಲ್, ಯೋಗೀಶ್ ಶೆಟ್ಟಿ ಚೇತನ್ ಪೀಲಾರ್, ತಿಮ್ಮಪ್ಪ ಕುಲಾಲ್ ಮುಂತಾದವರು ನಟಿಸಿದ್ದಾರೆ ಎಂದರು. ಡಿ.13ರಂದು ಉಡುಪಿ, ಮಂಗಳೂರು, ಪುತ್ತೂರು, ಕಾರ್ಕಳ, ಬೆಳ್ತಂಗಡಿಗಳ ಸುಮಾರು 15 ಸಿಂಗಲ್ ಥಿಯೇಟರ್ ಹಾಗೂ ಮಲ್ಟಿಫ್ಲೆಕ್ಸ್ ಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ನಟ ಅರ್ಜುನ್ ಕಾಪಿಕಾಡ್, ಚಿತ್ರ ವಿತರಕ ಸಚಿನ್ ಉಪ್ಪಿನಂಗಡಿ, ನಿರ್ಮಾಫಕ ರಾಘವೇಂದ್ರ ಪುತ್ರ ರಾಹುಲ್ ಕುಡ್ವ, ನಟ ದೀಕ್ಷಿತ್ , ನಟಿ ಭವ್ಯಾ ಪೂಜಾರಿ, ಕಾರ್ಯಕಾರಿ ನಿರ್ಮಾಪಕ ಪ್ರಜ್ಞೇಶ್ ಶೆಟ್ಟಿ ಮೊದಲಾದವರಿದ್ದರು.
DAKSHINA KANNADA
ಅನುಪಮ್ ಅಗರ್ವಾಲ್ ವರ್ಗಾವಣೆಗೆ ಒತ್ತಾಯಿಸಿ ಕಾವೂರಿನಲ್ಲಿ ಪ್ರತಿಭಟನೆ !!
Published
14 hours agoon
11/12/2024ಕಾವೂರು: ಜನಪರ ಹೋರಾಟಗಳಿಗೆ ಅವಕಾಶ ನಿರಾಕರಣೆ, ಪ್ರತಿಭಟನಕಾರರ ಮೇಲೆ ಕೇಸು ದಾಖಲಿಸುವ ಸರ್ವಾಧಿಕಾರಿ ಪ್ರವೃತ್ತಿಯ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ರನ್ನು ವರ್ಗಾಯಿಸಬೇಕೆಂದು ಒತ್ತಾಯಿಸಿ ಕಾವೂರು ಜಂಕ್ಷಣ್‌ನಲ್ಲಿ ಸಮಾನ ಮನಸ್ಕ ಸಂಘಟನೆಗಳ ವೇದಿಕೆಯಿಂದ ಪ್ರತಿಭಟನಾ ಪ್ರದರ್ಶನ ನಡೆಯಿತು.
ಸಭೆಯನ್ನು ಉದ್ದೇಶಿಸಿ ಸುರತ್ಕಲ್ ಟೋಲ್‌ಗೇಟ್ ವಿರೋಧಿ ಹೋರಾಟ ಸಮಿತಿ ಸಂಚಾಲಕರಾದ ಮಾಜಿ ಉಪಮೇಯರ್ ಕೆ. ಮಹಮ್ಮದ್ ಮಾತನಾಡಿ ಪೋಲಿಸ್ ಆಯುಕ್ತ ಅನುಪಮ್ ಅಗರ್ವಾಲ್‌ಗೆ ಜನಸಾಮಾನ್ಯರ ಸಮಸ್ಯೆಗಳ ಬಗ್ಗೆ ಹೋರಾಡುವವರ ಬಗ್ಗೆ ಅಲರ್ಜಿ ಇದೆ. ಒಬ್ಬ ಉನ್ನತ ಮಟ್ಟದ ಪೋಲೀಸ್ ಅಧಿಕಾರಿಗೆ ಇಂತಹ ಮನಸ್ಥಿತಿ ಸರಿಯಲ್ಲ, ಜನಪರ ಹೋರಾಟಗಳಿಗೆ ಕಡಿವಾಣ ಹಾಕುವ ಹೊಸ ಸಂಪ್ರದಾಯ ಪೋಲೀಸ್ ಇಲಾಖೆ ಸೃಷ್ಟಿಸುತ್ತಿರುವುದು ಖಂಡನೀಯ ಕಮಿಷನರ್ ವರ್ಗಾವಣೆ ಆಗುವವರೆಗೆ ಸಮಾನ ಮನಸ್ಕ ಹೋರಾಟಗಾರರು ನಿರಂತರ ಪ್ರತಿಭಟನೆ ಮುಂದುವರಿಸುವುದಾಗಿ ಎಚ್ಚರಿಸಿದರು.
ಮಾಜಿ ಕಾರ್ಪೊರೇಟರ್ ದಯಾನಂದ ಶೆಟ್ಟಿ ಮಾತನಾಡಿ ಬಂಡವಾಳಶಾಹಿ ಆಡಳಿತ ವ್ಯವಸ್ಥೆಯಲ್ಲಿ ಜನಸಾಮಾನ್ಯರ ಸಮಸ್ಯೆಗಳು ಹೆಚ್ಚಳವಾಗುತ್ತಿವೆ. ಇವುಗಳ ಪರಿಹಾರಕ್ಕೆ ಹೋರಾಟವಲ್ಲದೆ ಬೇರೆ ದಾರಿಯಿಲ್ಲ. ಪೋಲೀಸ್ ಆಯುಕ್ತರು ಇಂತಹ ಅನಿವಾರ್ಯ ಹೋರಾಟಗಳಿಗೆ ಕಡಿವಾಣ ಹಾಕಲು ಹೊರಟಿರಿವುದು ಸಂವಿಧಾನ ಬದ್ದ ಹಕ್ಕನ್ನು ಕಿತ್ತುಕೊಂಡಂತೆ.ಆಯುಕ್ತರ ಗೊಡ್ಡು ಬೆದರಿಕೆಗಳಿಗೆ ನಾವು ಹಿಂಜರಿಯುವುದಿಲ್ಲ. ಜೈಲಿಗೆ ಹೋದರೂ ಸರಿ ಹೋರಾಟ ನಿಲ್ಲುವುದಿಲ್ಲ ಎಂದು ಹೇಳಿದರು.
ಸಿಪಿಐಎಂ ಜಿಲ್ಲಾ ಮುಖಂಡ ಸುನೀಲ್ ಕುಮಾರ್ ಬಜಾಲ್, ಡಿವೈಎಫ್‌ಐ ಮುಖಂಡರಾದ ನವೀನ್ ಕೊಂಚಾಡಿ, ಸಾಮಾಜಿಕ ಮುಂದಾಳು ರಿಯಾಝ್ ಹುಸೈನ್ ಮಾತನಾಡಿದರು. ಅನಿಲ್ ಡಿಸೋಜ, ನೌಶಾದ್, ರೆಹೆಮಾನ್ ಕುಂಜತ್ತಬೈಲ್, ಮುಸ್ತಾಫ, ಪ್ರಮೀಳಾ, ಆಶಾ ಗಣೇಶ್, ಚರಣ್ ಶೆಟ್ಟಿ, ಸೌಮ್ಯ ಮುಂತಾದವರು ಹೋರಾಟದ ಸಮಯ ಉಪಸ್ಥಿತರಿದ್ದರು.
DAKSHINA KANNADA
ಪಾರ್ಕ್ ಮಾಡಿದ್ದ ಕಾರಿನಿಂದ ಚಿನ್ನಾಭರಣ ಲೂಟಿ ಮಾಡಿದ್ದ ಕಳ್ಳ ಅರೆಸ್ಟ್ !!
Published
17 hours agoon
11/12/2024ಮಂಗಳೂರು: ಪಾರ್ಕ್ ಮಾಡಿದ್ದ ಕಾರೊಂದರಿಂದ ಬೆಲೆಬಾಳುವ ವಸ್ತುಗಳನ್ನು ಕದ್ದು ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆ ನಡೆದ 24 ಗಂಟೆಯ ಒಳಗಾಗಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದು ಆರೋಪಿಯನ್ನು ಕದ್ದ ಮಾಲುಗಳ ಸಹಿತ ಲಾಕ್ ಮಾಡಿದ್ದಾರೆ.
ಮಂಗಳೂರು ನಗರದ ಕಂಕನಾಡಿ ಮಾರ್ಕೆಟ್ ಬಳಿ ಈ ಕಳ್ಳತನ ನಡೆದಿದ್ದು ಆರೋಪಿ ಆರು ಲಕ್ಷದ ಎಂಬತ್ತು ಸಾವಿರದ ಚಿನ್ನಾಭರಣ ಲೂಟಿ ಮಾಡಿದ್ದಾನೆ. ಕ್ರೇಟಾ ಕಾರನ್ನು ಪಾರ್ಕ್ ಮಾಡಿ ಹೋಗಿದ್ದ ಕುಟುಂಬ ವಾಪಾಸು ಬಂದು ನೋಡಿದಾಗ ಕಳ್ಳತನದ ವಿಚಾರ ಬೆಳಕಿಗೆ ಬಂದಿತ್ತು. ತಕ್ಷಣ ಈ ಪೊಲೀಸರಿಗೆ ಮಾಹಿತಿ ನೀಡಿ ಬಳಿಕ ಕದ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು.
ಇದನ್ನೂ ಓದಿ : 24 ಗಂಟೆ ಒಳಗಡೆ ಕುಖ್ಯಾತ ಸರಕಳ್ಳರಿಬ್ಬರ ಸೆರೆಹಿಡಿದ ಸಿಸಿಬಿ ಪೊಲೀಸರು !!
ಘಟನಾ ಸ್ಥಳದಲ್ಲಿ ಸಿಕ್ಕ ಮಾಹಿತಿಗಳ ಆದಾರದಲ್ಲಿ ತನಿಕೆ ನಡೆಸಿದ ಪೊಲೀಸರು ಆರೋಪಿ ಅಬ್ದುಲ್ ಅಕ್ರಮ್ ಎಂಬಾತನನ್ನು ಮಾಲು ಸಮೇತ ಬಂದಿಸಿದ್ದಾರೆ. ಆರೋಪಿಯ ಅಡ್ಯಾರು ಪದವು ನಿವಾಸಿಯಾಗಿದ್ದು, ಆರೋಪಿಯಿಂದ ಸುಮಾರು ಏಳು ಲಕ್ಷದ ಮುವತ್ತು ಸಾವಿರ ಮೌಲ್ಯದ ಸ್ವತ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ
LATEST NEWS
ಆರ್ಬಿಐ ಹೊಸ ಗವರ್ನರ್ ಆಗಿ ಸಂಜಯ್ ಮಲ್ಹೋತ್ರಾ ನೇಮಕ !!
ದಂಡ ತಪ್ಪಿಸಿಕೊಳ್ಳಲು ವಾಹನ ಸವಾರರ ಹೊಸ ಪ್ಲಾನ್: ಸ್ಪೂನ್ ಅಸ್ತ್ರ !
ವಿಚ್ಛೇದನ ನೀಡದೆ ಎರಡನೇ ಮದುವೆ; ಮಂಟಪದಲ್ಲೇ ಮೊದಲ ಪತ್ನಿ ಕೈಗೆ ಸಿಕ್ಕಿಬಿದ್ದ ಪತಿ
ಅನುಪಮ್ ಅಗರ್ವಾಲ್ ವರ್ಗಾವಣೆಗೆ ಒತ್ತಾಯಿಸಿ ಕಾವೂರಿನಲ್ಲಿ ಪ್ರತಿಭಟನೆ !!
ಕಡಬ: ಪ್ಯಾಚ್ ವರ್ಕ್ ಮಾಡಿ ಜನತೆ ಕಣ್ಣಿಗೆ ಮಣ್ಣೆರೆಚುವ ತಂತ್ರ
ಭಾರತದಲ್ಲಿ ಮನರಂಜನೆ ಮತ್ತು ಮಾಧ್ಯಮ ಉದ್ಯಮ ಭಾರೀ ಬೆಳವಣಿಗೆ !!
Trending
- BIG BOSS3 days ago
ಚೈತ್ರಾ ಕಣ್ಣೀರು, ಐಶ್ವರ್ಯ ಆಕ್ಟಿವಿಟಿ ರೂಮ್….ಎಲಿಮಿನೆಟ್ ಆಗಿದ್ದು ?
- BIG BOSS5 days ago
BBK11: ಈ ವಾರ ಬಿಗ್ಬಾಸ್ ಮನೆಯಲ್ಲಿ ಕಾದಿದ್ಯಾ ಬಿಗ್ ಟ್ವಿಸ್ಟ್; ಎಲಿಮಿನೇಷನ್ ಇರೋದು ಡೌಟ್
- BIG BOSS5 days ago
ಬಿಗ್ಬಾಸ್ ನಿರ್ಧಾರಗಳಿಗೆ ರೆಸ್ಪೆಕ್ಟೇ ಇಲ್ಲ -ಇಬ್ಬರು ಸ್ಪರ್ಧಿಗಳಿಗೆ ಕಿಚ್ಚ ಖಡಕ್ ಕ್ಲಾಸ್
- BANTWAL6 days ago
ಬಂಟ್ವಾಳ: ಕೆ.ಎಸ್. ಆರ್.ಟಿ.ಬಸ್ ನಿರ್ವಾಹಕನ ಮೇಲೆ ಪ್ರಯಾಣಿಕನಿಂದ ಹಲ್ಲೆ