Friday, August 12, 2022

ಸುರತ್ಕಲ್‌ ರೈಲು ನಿಲ್ದಾಣದಲ್ಲಿ ಪ್ಯಾಸೆಂಜರ್ಸ್‌ ರಿಸರ್ವೇಷನ್‌ ಸೆಂಟರ್‌

ಮಂಗಳೂರು: ಸುರತ್ಕಲ್‌ ರೈಲು ನಿಲ್ದಾಣದಲ್ಲಿ ಪ್ಯಾಸೆಂಜರ್ಸ್‌ ರಿಸರ್ವೇಷನ್‌ ಸೆಂಟರ್‌ ಆರಂಭಿಸಲಾಗಿದ್ದು, ಇದರೊಂದಿಗೆ ಸುದೀರ್ಘ ಹತ್ತು ವರ್ಷಗಳ ಬೇಡಿಕೆ ಈಡೇರಿದೆ.


ಈ ಸೌಲಭ್ಯವು ಸುರತ್ಕಲ್‌ನಿಂದ ಮುಂಬಯಿ ಹಾಗೂ ಬೆಂಗಳೂರಿಗೆ ತೆರಳುವ ಪ್ರಯಾಣಿಕರಿಗೆ ಹೆಚ್ಚು ಪ್ರಯೋಜನವಾಗಲಿದೆ.

ಈಗಾಗಲೇ ಎಂಆರ್‌ಪಿಎಲ್‌, ಎನ್‌ಐಟಿಕೆ, ಎಚ್‌ಪಿಸಿಎಲ್‌ ಸೇರಿದಂತೆ ಹಲವಾರು ಕೈಗಾರಿಕೆ ಮತ್ತು ಸಂಸ್ಥೆಗಳ ಸಾವಿರಾರು ಉದ್ಯೋಗಿಗಳಿಗೆ ಇದು ವರದಾನವಾದರೆ, ಮುಂಬಯಿ ಸಂಪರ್ಕವಿರುವ ಇಲ್ಲಿನ ಸುತ್ತಮುತ್ತಲಿನ ಬಹುತೇಕ ಜನರಿಗೆ ರಿಸರ್ವೇಶನ್‌ ಸೌಲಭ್ಯವು ಅತೀ ಹತ್ತಿರದಲ್ಲಿಯೇ ಸಿಕ್ಕಂತಾಗಿದೆ.


ಉಡುಪಿ ಜಿಲ್ಲೆಯ ಪಡುಬಿದ್ರೆಯಿಂದ ಮಂಗಳೂರಿನ ಕೂಳೂರುವರೆಗಿನ ಪ್ರಯಾಣಿಕರಿಗೆ ಇದು ಹೆಚ್ಚು ಪ್ರಯೋಜನಕಾರಿಯಾಗಿದ್ದು, ಹೆಚ್ಚಿನ ಜನಸಂದಣಿ ಇರದೆ ಆರಾಮವಾಗಿ ಮುಂಗಡ ಟಿಕೆಟ್‌ ಕಾಯ್ದಿರಿಸಬಹುದಾಗಿದೆ.

ಈ ಸೌಲಭ್ಯದ ಕುರಿತು ಎಲ್ಲರಿಗೂ ಮಾಹಿತಿ ಸಿಗುವಂತಾಗಲು ಇದೀಗ ವಿವಿಧ ಸಂಘ ಸಂಸ್ಥೆಗಳು ಕೊಂಕಣ ರೈಲ್ವೇಯೊಂದಿಗೆ ಕೈ ಜೋಡಿಸಲು ಮುಂದಾಗಿವೆ.

ಬಹುಭಾಷಿಕರ ಪ್ರದೇಶವಾದ ಇಲ್ಲಿ ಕನ್ನಡ, ಇಂಗ್ಲಿಷ್‌, ಹಿಂದಿ ಮತ್ತಿತರ ಭಾಷೆಗಳಲ್ಲಿ ಕರಪತ್ರ ಹಂಚಿ ಮಾಹಿತಿ ನೀಡಿ ಪಿಆರ್‌ಎಸ್‌ ಸೌಲಭ್ಯ ಎಲ್ಲರೂ ಪಡೆಯಲು ಯೋಜನೆ ರೂಪಿಸುತ್ತಿವೆ.
ಸ್ಥಳೀಯ ನಾಗರಿಕ ಸಲಹಾ ಸಮಿತಿಯಿಂದಲೂ ಇದಕ್ಕೆ ಪ್ರೋತ್ಸಾಹ ಲಭಿಸಿದೆ.

ಇದೇ ವೇಳೆ ಸುರತ್ಕಲ್‌ ರೈಲು ನಿಲ್ದಾಣದಲ್ಲಿ ರೈಲು ಓಡಾಟ ಸುಗಮವಾಗಿಸಲು ಎರಡು ರೈಲು ಫ್ಲ್ಯಾಟ್‌ಫಾರ್ಮ್ ನಿರ್ಮಾಣಕ್ಕೆ ಒತ್ತಡ ತರುವ ಬಗ್ಗೆ ಚಿಂತನೆ ನಡೆದಿದೆ. ಈಗ ಒಂದು ಫ್ಲ್ಯಾಟ್‌ಫಾರ್ಮ್ ಕಾರ್ಯನಿರ್ವಹಿಸುತ್ತಿದೆ.

ಇಷ್ಟೇ ಅಲ್ಲದೆ ಎರ್ನಾಕುಲಂ- ನಿಜಾಮುದ್ದೀನ್‌ ಎಕ್ಸ್‌ಪ್ರೆಸ್‌, ಎರ್ನಾಕುಲಂ- ಅಜ್ಮೀರ್ ಎಕ್ಸ್‌ಪ್ರೆಸ್‌ ರೈಲು ಸಹಿತ ಪ್ರಮುಖ ರೈಲುಗಳ ನಿಲುಗಡೆಗೆ ಬೇಡಿಕೆ ಮಂಡಿಸಲಾಗಿದ್ದು, ಇದಕ್ಕೆ ಕೊಂಕಣ ರೈಲು ನಿಗಮದ ಸಿಎಂಡಿ ಸಂಜಯ್‌ ಗುಪ್ತ ಸ್ಪಂದಿಸಿದ್ದಾರೆ ಎಂದು ನಾಗರಿಕ ಸಲಹಾ ಸಮಿತಿ ಅಧ್ಯಕ್ಷ ರಾಜ್‌ಮೋಹನ್‌ ರಾವ್‌ ತಿಳಿಸಿದ್ದಾರೆ.

 

LEAVE A REPLY

Please enter your comment!
Please enter your name here

Hot Topics

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ಪ್ರಮುಖ ಆರೋಪಿಗಳು 5 ದಿನ ಪೊಲೀಸ್ ಕಸ್ಟಡಿಗೆ

ಸುಳ್ಯ: ಪ್ರವೀಣ್ ನೆಟ್ಟಾರು ಹತ್ಯೆಗೆ ಸಂಬಂಧಿಸಿ ಬಂಧಿತರಾದ ಮೂವರು ಮುಖ್ಯ ಆರೋಪಿಗಳನ್ನು ಸುಳ್ಯ ನ್ಯಾಯಾಲಯ ಆರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.ಬಂಧಿತ ಆರೋಪಿಗಳಾದ ಸುಳ್ಯದ ಶಿಹಾಬುದ್ದೀನ್ (33), ರಿಯಾಝ್ ಅಂಕತ್ತಡ್ಕ (27),...

ಹರ್ ಘರ್ ತಿರಂಗಾ ಅಭಿಯಾನದಲ್ಲಿ ರಾಷ್ಟ್ರಧ್ವಜ ಸಂಹಿತೆ ಪಾಲಿಸಲು ದ.ಕ ಡಿಸಿ ಸೂಚನೆ

ಮಂಗಳೂರು: ಆಗಸ್ಟ್ 13 ರಿಂದ 15ರ ವರೆಗೆ ದೇಶದ ಪ್ರತೀ ಮನೆಯಲ್ಲೂ ರಾಷ್ಟ್ರ ಧ್ವಜವನ್ನು ಹಾರಿಸಿ ದೇಶಭಕ್ತಿ ಬಿಂಬಿಸುವ ಮೂಲಕ ರಾಷ್ಟ್ರ ಪ್ರೇಮವನ್ನು ಅಭಿವ್ಯಕ್ತಗೊಳಿಸುವಂತೆ ಅಭಿಯಾನವನ್ನು ಹಮ್ಮಿಕೊಂಡಿದೆ.ಈ ಅಭಿಯಾನದ ಹಿನ್ನೆಲೆ ಸರ್ಕಾರಿ ಕಟ್ಟಡಗಳ...

ಮಂಗಳೂರು ಪಾಲಿಕೆಯ ಸದಸ್ಯ ಎ.ಸಿ ವಿನಯ್ ರಾಜ್‌ಗೆ ಪುತ್ರ ವಿಯೋಗ

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯ ಹಾಗೂ ವಿಪಕ್ಷ ನಾಯಕ ಎ.ಸಿ ವಿನಯ್ ರಾಜ್ ಅವರ ಪುತ್ರ ರಾಹುಲ್ ವಿನಯರಾಜ್ ಅಲ್ಪಕಾಲದ ಅನಾರೋಗ್ಯದಿಂದ ನಿನ್ನೆ ನಿಧನರಾಗಿದ್ದಾರೆ.ಇಂದು ಸಂಜೆ ಮಂಗಳೂರಿನ ಜೆಪ್ಪುವಿನಲ್ಲಿರುವ ಸಂತ. ಆಂತೋನಿ...