ಮಂಗಳೂರು: ಎಸ್. ಎಲ್ ಭೈರಪ್ಪನವರ ಬರೋಬ್ಬರಿ 700 ರಷ್ಟು ಪುಟಗಳ ಬೃಹತ್ ಕಾದಂಬರಿ ‘ಪರ್ವ’ ಮಹಾಭಾರತ ಕಥಾಧಾರಿತ ನಾಟಕವು ಇಂದು ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಪ್ರದರ್ಶನಗೊಳ್ಳುತ್ತಿದೆ.
ನಟ ಹಾಗೂ ನಿರ್ದೇಶಕ ಪ್ರಕಾಶ್ ಬೆಳವಾಡಿಯವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ನಾಟಕ ಬರೋಬ್ಬರಿ 7 ಗಂಟೆಯ ಅವಧಿ ಪ್ರದರ್ಶನಗೊಳ್ಳುತ್ತಿದೆ.
ಬೆಳಿಗ್ಗೆ 10.30 ರಿಂದ ಸಂಜೆ 7 ರವರೆಗೆ ಸುದೀರ್ಘ ಅವಧಿಯ ಈ ರಂಗರೂಪಕದಲ್ಲಿ ನಾಲ್ಕು ಬಾರಿ ವಿರಾಮವಿದ್ದು ಉತ್ತಮವಾಗಿ ಪ್ರದರ್ಶನಗೊಳ್ಳುತ್ತಿದೆ.
ರಂಗಾಯಣದ ಹಿರಿಯ 15 ಕಲಾವಿದರು ಸೇರಿ ಸುಮಾರು 40 ಮಂದಿ ಈ ತಂಡದಲ್ಲಿದ್ದು ಈ ಪರ್ವ ನಾಟಕ ಪ್ರೇಕ್ಷಕರನ್ನು ರಂಜಿಸುತ್ತಿದೆ.
ಮಂಗಳೂರು : ಈ ವರ್ಷದ ಕಂಬಳ ಸೀಸನ್ ನ ಮೊದಲ ಕಂಬಳ ನವೆಂಬರ್ 22 ಮತ್ತು 23 ರಂದು ಸಿದ್ದಕಟ್ಟೆಯಲ್ಲಿ ನಡೆಯಿತು. ಇದು ಎರಡನೇ ವರ್ಷದ ಸಿದ್ಧಕಟ್ಟೆ ಕೊಡಂಗೆ ‘ವೀರ – ವಿಕ್ರಮ’ ಜೋಡುಕರೆ ಕಂಬಳ ಆಗಿದ್ದು, ಬರೋಬ್ಬರಿ 166 ಜೊತೆ ಕೋಣಗಳು ಭಾಗವಹಿಸಿದ್ದವು. ಕನೆಹಲಗೆ 6 ಜೊತೆ, ಅಡ್ಡಹಲಗೆ 6 ಜೊತೆ, ಹಗ್ಗ ಹಿರಿಯ 15 ಜೊತೆ, ನೇಗಿಲು ಹಿರಿಯ 34 ಜೊತೆ, ಹಗ್ಗ ಕಿರಿಯ 27 ಜೊತೆ, ನೇಗಿಲು ಕಿರಿಯ 78 ಜೊತೆ ಕೋಣಗಳು ಪಾಲ್ಗೊಂಡಿದ್ದವು.
ಪ್ರಶಸ್ತಿ ವಿವರ :
ಕನೆಹಲಗೆ ವಿಭಾಗದಲ್ಲಿ ಬೋಳಾರ ತ್ರಿಶಾಲ್ ಕೆ. ಪೂಜಾರಿ ಪ್ರಥಮ, ವಾಮಂಜೂರು ತಿರುವೈಲು ಗುತ್ತು ಅಭಿಷೇಕ್ ನವೀನ್ ಚಂದ್ರ ಆಳ್ವ ದ್ವಿತೀಯ ಸ್ಥಾನ ಪಡೆದರು. ಅಡ್ಡ ಹಲಗೆ ವಿಭಾಗದಲ್ಲಿ ನಾರಾವಿ ಯುವರಾಜ್ ಜೈನ್ ಪ್ರಥಮ ಹಾಗೂ ಆಲದ ಪದವು ಮೇಗಿನ ಮನೆ ಅಜ್ಜಾಡಿ ಬಾಬು ರಾಜೇಂದ್ರ ಶೆಟ್ಟಿ ‘ಬಿ’ ಅವರು ದ್ವಿತೀಯ ಸ್ಥಾನಿಯಾದರು.
ಹಗ್ಗ ಹಿರಿಯ ವಿಭಾಗದಲ್ಲಿ ನಂದಳಿಕೆ ಶ್ರೀಕಾಂತ್ ಭಟ್ ‘ಎ’ ಕೋಣಗಳು ಪ್ರಥಮ ಹಾಗೂ ಕೊಳಕೆ ಇರ್ವತ್ತೂರು ಭಾಸ್ಕರ ಎಸ್ ಕೋಟ್ಯಾನ್ ದ್ವಿತೀಯ ಸ್ಥಾನ ಪಡೆದರು. ಹಗ್ಗ ಕಿರಿಯ ವಿಭಾಗದಲ್ಲಿ ಬೆಳುವಾಯಿ ಪೆರೋಡಿ ಪುತ್ತಿಗೆ ಗುತ್ತು ಕೌಶಿಕ್ ದಿನಕರ ಬಿ. ಶೆಟ್ಟಿ ಪ್ರಥಮ, ಸುರತ್ಕಲ್ ಪಾಂಚಜನ್ಯ ಯೋಗೀಶ್ ಪೂಜಾರಿ ‘ಎ’ ಕೋಣಗಳು ದ್ವಿತೀಯ ಸ್ಥಾನ ಪಡೆದಿವೆ.
ನೇಗಿಲು ಹಿರಿಯ ವಿಭಾಗದಲ್ಲಿ ಹೊಸ್ಮಾರು ಸೂರ್ಯ ಶ್ರೀ ರತ್ನ ಸದಾಶಿವ ಶೆಟ್ಟಿ ಪ್ರಥಮ ಹಾಗೂ ಕಕ್ಕೆಪದವು ಪೆಂರ್ಗಾಲು ಬಾಬು ತನಿಯಪ್ಪ ಗೌಡ ದ್ವಿತೀಯ ಸ್ಥಾನ ಗೆದ್ದಿದ್ದಾರೆ. ನೇಗಿಲು ಕಿರಿಯ ವಿಭಾಗದಲ್ಲಿ ಮುನಿಯಾಲು ಉದಯ ಕುಮಾರ್ ಶೆಟ್ಟಿ ಪ್ರಥಮ ಹಾಗೂ ಎರ್ಮಾಳ್ ಪುಚ್ಚೊಟ್ಟು ಬೀಡು ಬಾಲಚಂದ್ರ ಲೋಕಯ್ಯ ಶೆಟ್ಟಿ ‘ಎ’ ಕೋಣಗಳು ದ್ವಿತೀಯ ಸ್ಥಾನ ಪಡೆದಿವೆ.
ಮಂಗಳೂರು/ಮಸ್ಕತ್ : ಬಿರುವ ಜವನೆರ್ ಮಸ್ಕತ್ ಆಯೋಜಿಸಿದ ಕರ್ನಾಟಕ ಪ್ರೀಮಿಯಾರ್ ಲೀಗ್ ನ 2024 ನೇ ಸಾಲಿನ ಕ್ರೀಡಾಕೂಟ ಮಸ್ಕತ್ ನ ಅಲ್ ಹೈಲ್ ಕ್ರೀಡಾಂಗಣದಲ್ಲಿ ನಡೆಯಿತು. ಕ್ರೀಡಾಕೂಟದ ಉದ್ಘಾಟನೆಯನ್ನು ಓಮನ್ ಕ್ರಿಕೆಟ್ ನ ಟಿ20 ತಂಡದ ನಾಯಕ ವಿನಾಯಕ್ ಶುಕ್ಲ ನೆರವೇರಿಸಿದರು.
ಈ ಸಂದರ್ಭ ಉತ್ತಮ್ ಕೋಟ್ಯಾನ್, ಮುಸ್ತಫಾ, ರಮಾನಂದ್ ಬಂಗೇರ, ಚಂದ್ರಕಾಂತ್ ಕೋಟ್ಯಾನ್, ದಾಮೋದರ್ ಶೆಟ್ಟಿ, ಪದ್ಮಾಕರ್ ಮೆಂಡನ್ ಮತ್ತಿತರರು ಉಪಸ್ಥಿತರಿದ್ದರು.
ಪುದರ್ ದೀತಿಜಿ ನಾಟಕದ ಪೋಸ್ಟರ್ ಬಿಡುಗಡೆ :
ಇದೇ ಸಂದರ್ಭದಲ್ಲಿ ಜನವರಿ 10 ರಂದು ಮಸ್ಕತ್ ನ ಆಲ್ ಫಾಜಾಜ್ ಹೋಟೆಲ್ ನಲ್ಲಿ ನಡೆಯಲಿರುವ ಕಾಪಿಕಾಡ್ ಅವರ ಚಾ ಪರ್ಕ ತಂಡದ ” ಪುದರ್ ದೀತಿಜಿ ” ನಾಟಕದ ಪೋಸ್ಟರ್ ಬಿಡುಗಡೆ ಹಾಗೂ ಪ್ರಚಾರ ಅಭಿಯಾನಕ್ಕೆ ಡಾ. ದೇವದಾಸ್ ಕಾಪಿಕಾಡ್ ಹಾಗೂ ಅರ್ಜುನ್ ಕಾಪಿಕಾಡ್ ಚಾಲನೆ ನೀಡಿದರು.
ಉಡುಪಿ : ರಿಷಬ್ ಶೆಟ್ಟಿ ಅಭಿನಯ ಮತ್ತು ನಿರ್ದೇಶನದ ಕಾಂತಾರ ಸಿನಿಮಾ ಕಲಾವಿದರಿದ್ದ ಬಸ್ ಪ*ಲ್ಟಿಯಾಗಿದ್ದು, ಆರು ಮಂದಿ ಗಂ*ಭೀರ ಗಾ*ಯಗೊಂಡಿರುವ ಘಟನೆ ಉಡುಪಿ ಜಿಲ್ಲೆಯ ಕುಂದಾಪುರದ ಮುದೂರಿನಲ್ಲಿ ನಡೆದಿದೆ.
ಕರಾವಳಿ ಭಾಗದ ಬೇರೆ ಬೇರೆ ಕಡೆಗಳಲ್ಲಿ ‘ಕಾಂತಾರ ಚಾಪ್ಟರ್ 1’ ಸಿನಿಮಾಗೆ ಶೂಟಿಂಗ್ ಮಾಡಲಾಗುತ್ತಿದೆ. ವಿವಿಧ ಕಲಾವಿದರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಮುದೂರಿನಲ್ಲಿ ಚಿತ್ರೀಕರಣ ಮುಗಿಸಿ ಕಲಾವಿದರು ಕೊಲ್ಲೂರಿಗೆ ಹೋಗುತ್ತಿದ್ದ ವೇಳೆ ಅ*ಪಘಾತ ಸಂಭವಿಸಿದೆ. ‘ಹೊಂಬಾಳೆ ಫಿಲ್ಮ್ಸ್’ ಮೂಲಕ ವಿಜಯ್ ಕಿರಗಂದೂರು ಅವರು ‘ಕಾಂತಾರ: ಚಾಪ್ಟರ್ 1’ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ರಿಷಬ್ ಶೆಟ್ಟಿ ಅವರು ನಿರ್ದೇಶನ ಮಾಡುವುದರ ಜೊತೆಗೆ ಮುಖ್ಯ ಭೂಮಿಕೆಯಲ್ಲೂ ನಟಿಸುತ್ತಿದ್ದಾರೆ. ‘ಕಾಂತಾರ’ ಚಿತ್ರದ ಪ್ರೀಕ್ವೆಲ್ ಆಗಿ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಮೂಡಿಬರುತ್ತಿದೆ. ಬಸ್ ಪ*ಲ್ಟಿ ಆಗಿದ್ದರಿಂದ ಚಿತ್ರತಂಡದಲ್ಲಿ ಬೇಸರ ಆವರಿಸಿದೆ.
ಪಲ್ಟಿಯಾದ ಹಿನ್ನಲೆ ಚಾಲಕನ ಮೇಲೆ ಹಲ್ಲೆಗೆ ವಾಹನದಲ್ಲಿದ್ದ ಹುಡುಗರು ಮುಂದಾಗಿದ್ದಾರೆ . ಬಸ್ ನಲ್ಲಿ ಹುಡುಗರು ವಾಹನ ಚಾಲಕ ನಿರ್ಲಕ್ಷದಿಂದ ವಾಹನ ಚಲಾಯಿಸಿದ್ದಾನೆ ಎಂದು ಆರೋಪಿಸಿ ಹ*ಲ್ಲೆ ನಡೆಸಿದ್ದಾರೆ. ಲೋಕಲ್ ಚಾಲಕನ ಮೇಲೆ ಹ*ಲ್ಲೆಯಾದ ಹಿನ್ನೆಲೆ ಸ್ಥಳೀಯರ ಅಕ್ರೋಶ, ರಿಷಬ್ ಶೆಟ್ಟಿ ಮಧ್ಯವರ್ತಿಯಲ್ಲಿ ಸಂಧಾನ ನಡೆದಿದ್ದು, ಎಲ್ಲರಿಗೂ ಕರೆದು ಮಾತನಾಡುತ್ತೇನೆ ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ ಎಂದು ತಿಳಿದು ಬಂದಿದೆ.
ಕಾಂತಾರ ಚಿತ್ರವು ದೈವ ಹಾಗೂ ದೈವಾರಾಧನೆಗೆ ಸಂಬಂಧಿಸಿದ ಕಥಾ ಹಂದರವನ್ನುಹೊಂದಿದ್ದು, ಈ ಚಿತ್ರ ಬಿಡುಗಡೆಗೊಂಡು ಬಹಳಷ್ಟು ಮೆಚ್ಚುಗೆಯನ್ನು ಗಳಿಸಿತ್ತು. ಚಿತ್ರ ಬಿಡುಗಡೆಗೊಂಡ ಬಳಿಕ ಹಲವುಕಡೆ ದೈವದ ವೇಷವನ್ನುಅಸಭ್ಯವಾಗಿ ತೊಟ್ಟು ಅಭಿಮಾನಿಗಳು ನರ್ತಿಸಿ ದೈವಕ್ಕೆ ಅಪಮಾನ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದ್ದು, ದೈವಾರಾಧಕರು ಚಿತ್ರದ ವಿರುದ್ಧ ಅಸಮಧಾನ ಹೊಂದಿದ್ದಾರೆ.
ಕಾಂತಾರ ಯಶಸ್ಸಿನ ಬಳಿಕ ರಿಷಬ್ ಶೆಟ್ಟಿ ‘ಕಾಂತಾರ ಚಾಪ್ಟರ್ – 1’ ಮಾಡುವುದಾಗಿ ಘೋಷಿಸಿದ ಬಳಿಕ ತುಳುನಾಡಿನ್ಲಿ ತೀವ್ರ ಆಕ್ರೋಷ ಕೇಳಿ ಬಂದಿತ್ತು. ಚಿತ್ರತಂಡವು ಚಿತ್ರೀಕರಣ ನಡೆಸುವ ಈ ಸಂದರ್ಭ ಹಲವು ವಿಘ್ನಗಳು ಎದುರಾಗುತ್ತಿದ್ದು, ಇದು ದೈವದ ಕೋಪವೋ, ಇಲ್ಲ ದೈವನರ್ತಕರ ಶಾಪವಿರಬೇಕು ಎಂಬ ಗುಮನಿಗಳು ಶುರುವಾಗಿದೆ.
ಚಿತ್ರೀಕರಣ ಮುಗಿಸಿ ತೆರಳುವಾಗ ಕೊಲ್ಲೂರು ಮಾರ್ಗದಲ್ಲಿ ಈ ದು*ರ್ಘಟನೆ ಸಂಭವಿಸಿದ್ದು, ಬಸ್‌ನಲ್ಲಿ 25 ಕಲಾವಿದರಿದ್ದರು. ಹಲವರು ಸಣ್ನ ಪುಟ್ಟ ಗಾ*ಯಗಳಿಂದ ಪಾರಾಗಿದ್ದರೆ, ಆರು ಜನರಿಗೆ ಗಂಭೀರ ಗಾ*ಯವಾಗಿದೆ. ಗಾಯಾಳುಗಳನ್ನು ಕುಂದಾಪುರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು. ಸ್ಥಳಕ್ಕೆ ಕೊಲ್ಲೂರು ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.