Connect with us

LATEST NEWS

ಮದುವೆಗೆ ಮನೆಯವರ ವಿರೋಧ: ನೇಣಿಗೆ ಶರಣಾದ ಪ್ರೇಮಿಗಳು..!

Published

on

ಮದುವೆಗೆ ಮನೆಯವರ ವಿರೋಧ: ನೇಣಿಗೆ ಶರಣಾದ ಪ್ರೇಮಿಗಳು..!

ಹೈದರಾಬಾದ್ :  ಮದುವೆಗೆ ಹಿರಿಯರು ಒಪ್ಪದೆ ಇರುವುದನ್ನೇ ಕಾರಣವಾಗಿಸಿಕೊಂಡು ಪ್ರೇಮಿಗಳಿಬ್ಬರು ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದ ಸೂರ್ಯಪೇಟ್ ಜಿಲ್ಲೆಯಲ್ಲಿ ನಡೆದಿದೆ.ಭಗ್ನ ಪ್ರೇಮಿಗಳಿಬ್ಬರು ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಮುನಗಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.ಆತ್ಮಹತ್ಯೆಗೆ ಶರಣಾದ ಜೋಡಿಹಕ್ಕಿಗಳು ಸಮೀವಮ ಚಿವ್ವೆಂಲ ಮಂಡಲದ ಚಂದುಪಟ್ಲಕ್ಕೆ ಸೇರಿದ ನವೀನ ಹಾಗೂ ಆತನ ಪ್ರೇಯಸಿ ಎಂದು ಗುರುತಿಸಲಾಗಿದೆ.

ಮದುವೆಗೆ ಕುಟುಂಬದವರು ಒಪ್ಪದೆ  ಇರುವುದೇ ಯುವಜೋಡಿಗಳು ನೇಣಿಗೆ ಶರಣಾಗಲು ಕಾರಣ ಎಂದು ತಿಳಿದುಬಂದಿದೆ.  ಮುನಗಾಲ ಮಂಡಲಂ ಮುದ್ದುಲ ಕೆರೆ ಬಳಿಯ ಮರಕ್ಕೆ ಪ್ರೇಮಿಗಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಆ ಮೂಲಕ ಪ್ರೇಮಿಗಳಿಬ್ಬರು ಸಾವಿನಲ್ಲಿ ಒಂದಾಗಿದ್ದಾರೆ.

Click to comment

Leave a Reply

Your email address will not be published. Required fields are marked *

DAKSHINA KANNADA

ತ್ರಿಶೂರ್ ಪೂರಂ..! ದೇಶದ ಹೆಮ್ಮೆಯ ಉತ್ಸವ..!

Published

on

ವಿವಿಧತೆಯಲ್ಲಿ ಏಕತೆ ಕಾಣುವ ನಮ್ಮ ದೇಶ ಹಲವು ಸಂಸ್ಕೃತಿ, ಕಲೆ, ಆಚರಣೆ, ಭಾಷೆ, ಜಾತಿ, ಧರ್ಮದ ಮೂಲಕ ವಿಶ್ವದ ಗಮನ ಸೆಳೆದಿದೆ. ದಿಪಾವಳಿ, ಹೋಳಿ, ಈದ್ , ಕ್ರಿಸ್ಮಸ್‌, ಹೀಗೆ ಹಲವು ಹಬ್ಬಗಳು ರಾಷ್ಟ್ರೀಯ ಮಟ್ಟದಲ್ಲಿ ಆಚರಣೆ ಆದ್ರೆ, ಇನ್ನೂ ಕೆಲವು ಹಬ್ಬಗಳು ರಾಜ್ಯದಿಂದ ರಾಜ್ಯಕ್ಕೆ ಬೇರೆ ಬೇರೆಯಾಗಿದೆ. ಅದರಲ್ಲಿ ವಿಶೇಷ ಹಬ್ಬವಾಗಿ ಕೇರಳದಲ್ಲಿ ಆಚರಿಸುವ ತ್ರಿಶೂರ್ ಪೂರಂ ಸದ್ಯ ಏಷ್ಯಾದಲ್ಲೇ ಅತೀ ಹೆಚ್ಚು ಜನರು ಭಾಗವಹಿಸುವ ಉತ್ಸವವಾಗಿ ಜಗತ್ಪ್ರಸಿದ್ದಿಯನ್ನು ಪಡೆದುಕೊಂಡಿದೆ.

ಏನಿದು ತ್ರಿಶೂರ್ ಪೂರಂ ಹಬ್ಬ

ತ್ರಿಶೂರ್ ಪೂರಂ ಅನ್ನೋದು ತ್ರಿಶೂರಿನ ಶಿವ ದೇವಾಲಯದಲ್ಲಿ ನಡೆಯುವ ವಾರ್ಷಿಕ ಜಾತ್ರೋತ್ಸವ. ಮಲೆಯಾಳಂ ಕ್ಯಾಲೆಂಡರ್ ಪ್ರಕಾರ ಪೂರಂ ನಕ್ಷತ್ರದಲ್ಲಿ ಚಂದ್ರೋದಯದ ವೇಳೆಯಲ್ಲಿ ನಡೆಯುವ ಉತ್ಸವ ಇದು. ತ್ರಿಶೂರ್ ನಲ್ಲಿರೋ ವಡಕ್ಕುನಾಥನ್‌ ಅರ್ಥಾತ್ ಶಿವ ದೇವಸ್ಥಾನದಲ್ಲಿ ನಡೆಯುವ ವಾರ್ಷಿಕ ಜಾತ್ರೆ ಇದು. ಆನೆಗಳ ಮೂಲಕ ದೇವರನ್ನು ಹೊತ್ತುಕೊಂಡು ದೇವಸ್ಥಾನದ ಬಾಗಿಲು ಪ್ರವೇಶ ಮಾಡೋದು ಈ ಉತ್ಸವದ ವಿಶೇಷ. ಹೀಗಾಗಿ  ಸಾವಿರಾರು ವಿದೇಶಿಗರು ಉತ್ಸವ ನೋಡಲು ಆಗಮಿಸ್ತಾರೆ ಅನ್ನೋದೇ ವಿಶೇಷ.

ತ್ರಿಶೂರ್ ಪೂರಂ ಹಬ್ಬದ ಹಿನ್ನೆಲೆ

ರಾಮವರ್ಮ ಕುಂಞಿಪಿಳ್ಳೆ ಎಂಬ ಕೊಚ್ಚಿನ್ ಮಹಾರಾಜ 17 ನೇ ಶತಮಾನದಲ್ಲಿ ಅರುಟ್ಟುಪುಳ ಪೂರಂ ಎಂಬ ಉತ್ಸವವನ್ನು ನಡೆಸಿಕೊಂಡು ಬಂದಿದ್ದರು. ಅರುಟ್ಟುಪುಳ ಪೂರಂ ಎಂಬ ಒಂದು ದಿನದ ಉತ್ಸವಕ್ಕೆ ತ್ರಿಶೂರು ಸೇರಿದಂತೆ ಸುತ್ತಮುತ್ತಲಿನ ದೇವಸ್ತಾನಗಳು ಇದರಲ್ಲಿ ಭಾಗಿ ಆಗುತ್ತಿದ್ದವು. 1796 ರಲ್ಲಿ ಮಳೆಯ ಕಾರಣಿದಿಂದ ತ್ರಿಶೂರ್‌ನಿಂದ ಹೊರಟಿದ್ದ ದೇವಾಲಯ ತಂಡಗಳಿಗೆ ಅರುಟ್ಟುಪುಳ ಪೂರಂ ಉತ್ಸವದಲ್ಲಿ ಭಾಗವಹಿಸಲು ಅವಕಾಶ ನಿರಾಕರಿಸಲಾಗಿತ್ತು. ಇದರಿಂದ ಕೋಪಗೊಂಡಿದ್ದ ತ್ರಿಶೂರಿನ ರಾಜ ಶಕ್ತನ್ 1796 ರಲ್ಲೇ ತ್ರಿಶೂರಿನಲ್ಲೇ ಈ ಪೂರಂ ಉತ್ಸವ ಆರಂಭಿಸಿದ್ರು ಅನ್ನೋ ಐತಿಹಾಸಿಕ ಕಥೆ ಇದೆ. ಅಂದಿನಿಂದ ತ್ರಿಶೂರಿನ ಹತ್ತು ದೇವಾಲಯಗಳು ಒಟ್ಟಾಗಿ ತ್ರಿಶೂರ್ ಪೂರಂ ಆಚರಿಸಲು ಆರಂಭವಾಯ್ತು ಅನ್ನೋ ದಾಖಲೆಗಳು ಸಿಗುತ್ತದೆ.

ಧರ್ಮಾತೀತವಾಗಿ ನಡೆಯುವ ಪೂರಂ ಉತ್ಸವ

ತ್ರಿಶೂರ್ ಪೂರಂ ಅಂದ ತಕ್ಷಣ ನೆನಪಾಗುವುದು ಅಲ್ಲಿ ಕಾಣಸಿಗುವ ಸರ್ವಧರ್ಮ ಸಮನ್ವಯತೆ. ಇಂತಹ ದೃಶ್ಯ  ಬಹುಶಃ  ದೇಶದ ಬೇರೆಲ್ಲೂ ಕಾಣಲು ಸಿಗಲಾರದು. ತ್ರಿಶೂರ್ ಪೂರಂ ಉತ್ಸವದಲ್ಲಿ ಪ್ರತಿ ವರ್ಷ ಹೊಸ ಕೊಡೆಗಳನ್ನು ತಯಾರಿಸಲಾಗುತ್ತದೆ. ಕುಡವಟ್ಟಂ ಎಂದು ಕರೆಯುವ ಈ ಕೊಡೆಗಳ ವಿಶೇಷ ಆಕರ್ಷಣೆಗೆ ಕ್ರೈಸ್ತ ಸಮೂದಾಯದವರ ಕೊಡುಗೆ ಇದ್ರೆ, ಪೂರಂಗೆ ಬೇಕಾದ ಪೆಂಡಾಲ್ ಹಾಕೋದು ಇಲ್ಲಿನ ಮುಸ್ಲಿಂ ಸಮೂದಾಯದವರು. ಇನ್ನು ಉತ್ಸವ ನೋಡಲು ಹಿಂದೂ ಮುಸ್ಲಿಂ ಕ್ರೈಸ್ತ ಹೀಗೆ ಎಲ್ಲಾ ಧರ್ಮದವರೂ ಆಗಮಿಸುವುದು ಇಲ್ಲಿನ ವಿಶೇಷ. ಇದೇ ಕಾರಣಕ್ಕೆ ಈ ತ್ರಿಶೂರ್ ಪೂರಂ ಇಂದು ಜಗತ್ಪ್ರಸಿದ್ಧಿಯನ್ನು ಪಡೆದುಕೊಂಡಿದೆ.

ತ್ರಿಶೂರ್ ಪೂರಂ ಹಬ್ಬ ಹೇಗೆ ನಡೆಯುತ್ತದೆ

ತ್ರಿಶೂರು ಹಾಗೂ ಸುತ್ತಮುತ್ತಲಿನ ಹತ್ತು ದೇವಲಾಯಗಳಿಂದ ಆನೆಯ ಮೂಲಕ ದೇವರನ್ನು ಹೊತ್ತು ಶಿವ ದೇವಾಲಯಕ್ಕೆ ತರಲಾಗುತ್ತದೆ. ಒಂದೊಂದು ದೇವಸ್ಥಾನದಿಂದ ದೇವರನ್ನು ಹೊತ್ತು ಬಾಗಿಲು ದಾಟಿ ಬರುವ ಆನೆಗಳನ್ನು ನೋಡಲು ಸಾವಿರಾರು ಭಕ್ತರು ಕಾತರದಿಂದ ಕಾಯುತ್ತಿರುತ್ತಾರೆ. ಈ ವೇಳೆ ಮೊಳಗುವ ಪಂಚ ವಾದ್ಯಗಳನ್ನು ಕೇಳಲೆಂದೇ ಕೆಲವರು ಬರುವುದಿದೆ. ಕಣಿಮಂಗಲಂ ಶಾಸ್ತಾವು ದೇವಾಲಯದಿಂದ ಆರಂಭವಾಗುವ ಈ ಉತ್ಸವ ಬಳಿಕ ಒಂದೊಂದೆ ದೇವಸ್ಥಾನದಿಂದ ಬರಲು ಆರಂಭವಾಗುತ್ತದೆ. ಚಂಡೆ, ಮದ್ದಳೆ, ಕಹಳೆ,ತಾಳ ಹಾಗೂ ಎಡಕ್ಕ ಹೀಗೆ ಪಂಚವಾದ್ಯದ ಮೆರವಣಿಗೆ ನಡೆಯುತ್ತದೆ. ಹತ್ತು ಆನೆಗಳು ದೇವಾಲಯದ ಮುಂದೆ ನಿಂತಿದ್ದರೆ , ಐವತ್ತಕ್ಕೂ ಹೆಚ್ಚು ಆನೆಗಳು ಉತ್ಸವದಲ್ಲಿ ಭಾಗಿಯಾಗುತ್ತದೆ. ಚಿನ್ನದ ಹಣೆಪಟ್ಟಿ, ಚಿನ್ನದ ಪ್ರಭಾವಳಿಯನ್ನು ಹಿಡಿದು , ಪಾರೆಮೆಕ್ಕಾವು ಮತ್ತು ತಿರುವಂಬಾಡಿ ಎಂಬ ಎರಡು ತಂಡಗಳು ಪೂರಂ ನಡೆಯುವ ಸ್ಥಳದಲ್ಲಿ ಮುಖಾಮುಖಿಯಾಗಿ ನಿಂತು ಛತ್ರಿ ವಿನಿಯಮ ಮಾಡಿಕೊಳ್ಳುವ ದೃಶ್ಯ ಪೂರಂನಲ್ಲಿ ವಿಶೇಷ ಅನುಭವ ನೀಡುವ ದೃಶ್ಯ ಕೂಡಾ ಹೌದು. ಕುಡಮಟ್ಟಂ ಅಂತ ಇದನ್ನು ಕರೆಯಲಾಗುತ್ತಿದ್ದು ಶಿವದೇವಲಾಯದ ಪಶ್ಚಿಮ ಗೋಪುರದ ಬಳಿ ಇದು ಸಂಪನ್ನಗೊಳ್ಳುತ್ತದೆ.

 

Continue Reading

FILM

ಕನ್ನಡಕ್ಕೆ ಪಾದಾರ್ಪಣೆ ಮಾಡಲಿದ್ದಾರೆ ಟಾಲಿವುಡ್ ನ ಜನಮನಗೆದ್ದ ನಟಿ..!! ಡಾಲಿಯ ‘ಉತ್ತರಾಕಾಂಡ’ಕ್ಕೆ ನಟಿ ಯಾರು ಗೊತ್ತಾ?

Published

on

ಮೋಹಕತಾರೆ ರಮ್ಯ..  ಇವರ ಚಿತ್ತ ಯಾವತ್ತ ಅನ್ನೋದೆ ಇನ್ನೂ ಖಚಿತ ಆಗಿಲ್ಲ. ಈ ಮಧ್ಯೆ ಕೆಲವೊಂದು ಸಿನೆಮಾಕ್ಕೆ ನಟಿಯಾಗಿ ಕಾಣಿಸಿಕೊಳ್ಳಬೇಕಿದ್ದ ಇವರು ಹಲವು ಸಿನೆಮಾದಿಂದ ಕೈ ಬಿಟ್ಟಿದ್ದಾರೆ. ಇದರಲ್ಲಿ ಉತ್ತರಾಕಾಂಡ ಸಿನೆಮಾ ನಟನೆಯಿಂದ ಹೊರ ಬಂದಿರುವುದು ಈಗಾಗಲೇ ಸುದ್ದಿಯಾಗಿದೆ. ಆದರೆ ಇವರ ಬದಲಿಗೆ ಕಾಲಿವುಡ್ ನಟಿ ಬರಲಿದ್ದಾರೆ ಅನ್ನೋ ಸುದ್ದಿ ಎಲ್ಲೆಡೆ ಹಬ್ಬಿದೆ.

aishwarya rajesh

ರೊಹೀತ್ ಪದಕಿ ನಿರ್ದೇಶನದಲ್ಲಿ ಅನಾವರಣವಾಗಲಿರುವ ಬಯಲು ಸೀಮೆಯ ಉತ್ತರಾಕಾಂಡ ಕಥೆಗೆ ಕಾಲಿವುಡ್ ನ ಐಶ್ವರ್ಯ ರಾಜೇಶ್ ಬಣ್ಣ ಹಚ್ಚಲಿದ್ದಾರೆ ಎಂದು ಹೇಳಲಾಗಿದೆ.  ಕಾಕ ಮುತ್ತೈ , ವಡಾ ಚೆನ್ನೈ, ಕನಾ, ನಮ್ಮ ಮನೆ ಪಿಳ್ಳೈ ಹೀಗೆ ಹತ್ತಾರು ಚಿತ್ರ, ವೈವಿಧ್ಯಮಯ ಪಾತ್ರದ ಮೂಲಕ ಚಂದನವನದ ಚೆಂದದ ನಾಯಕಿಯರಿಗೆಲ್ಲರಿಗೂ ತನ್ನ ನಟನೆಯ ಮೂಲಕ ಜನ ಮನ ಗೆದ್ದ ಐಶ್ವರ್ಯ ರಾಜೇಶ್ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಸ್ಯಾಂಡಲ್‌ವುಡ್ ನಲ್ಲಿ ಸಂಚಲನ ಮೂಡಿಸ್ತಾರ ಅನ್ನೋ ಗಾಸಿಪ್ ಹರಿದಾಡ್ತಾ ಇದೆ.

uttharakanda

ಈ ಚಿತ್ರದಲ್ಲಿ ಚೈತ್ರಾ ಆಚಾರ್ ಲಚ್ಚಿ ಪಾತ್ರಕ್ಕೆ ಬಣ್ಣ ಹಚ್ತಿದ್ದಾರೆ. ದೂದ್ ಪೇಡಾ ದಿಗಂತ್  ಮಿರ್ಚಿ ಮಲ್ಲಿಗೆ ಎಂಬ ಹೆಸರಿನಿಂದ ಬಣ್ಣ ಹಚ್ಚಲಿದ್ದಾರೆ. ಸದಾ ಬಬ್ಲಿ ಕ್ಯಾರೆಕ್ಟರ್‌ ನಲ್ಲಿ ಕಾಣಿಸಿಕೊಳ್ಳುತ್ತಿದ್ದ ದಿಗಂತ್ ಈ  ಸಿನೆಮಾದಲ್ಲಿ ಡಿಫೆರೆಂಟ್ ಲುಕ್‌ನಲ್ಲಿ ಕಾಣಿಸಲಿದ್ದಾರೆ.

uttharakanda

ಮಲಯಾಳಂನ ನಿರ್ಮಾಪಕ ಮತ್ತು ಆಕ್ಟರ್ ವಿಜಯ್ ಬಾಬು ಕೂಡ ಇದೇ ಚಿತ್ರದ ಮೂಲಕ ಕನ್ನಡಕ್ಕೆ ಪಾಪಾರ್ಪಣೆ ಮಾಡಲಿದ್ದಾರಂತೆ. ಡಾಲಿ ಧನಂಜಯ್ ಜೊತೆ ಕರುನಾಡ ಚಕ್ರವರ್ತಿ ಕೂಡ ಚಿತ್ರದಲ್ಲಿದ್ದಾರೆ ಅನ್ನುವ ವಿಚಾರ ಈಗಾಗಲೇ ಸಿನಿ ಪ್ರಿಯರ ಕನಸಿಗೆ ಬಣ್ಣ ಹಚ್ಚಿದಂತಾಗಿದೆ.

Continue Reading

LATEST NEWS

UDUPI : ಕಾಂಗ್ರೆಸ್ ಪರ ದರ್ಶನ್ ಪ್ರಚಾರ; ಸುಮಲತಾ ಏನಂದ್ರು?

Published

on

ಉಡುಪಿ : ಕೋಟ ಶ್ರೀನಿವಾಸ ಪೂಜಾರಿ ಅವರ ಪರ ಉಡುಪಿಯಲ್ಲಿ ಪ್ರಚಾರ ಮಾಡಲು ನಟಿ ಸಂಸದೆ ಸುಮಲತಾ ಅವರು ಆಗಮಿಸಿದ್ದಾರೆ. ಮಹಿಳಾ ಸಮಾವೇಶದಲ್ಲಿ ಭಾಗವಹಿಸಿದ ಸುಮಲತಾ ಕೋಟ ಪರ ಮತಯಾಚನೆ ಮಾಡಿದ್ದಾರೆ.
ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಸುಮಲತಾ ನಟಿಯಾಗಿದ್ದಾಗ ಉಡುಪಿಗೆ ಶೂಟಿಂಗ್ ಅಂತ ಬರ್ತಾ ಇದ್ದದ್ದೇ, ಈ ಬಾರಿ ಚುನಾವಣಾ ಪ್ರಚಾರಕ್ಕೆ ಬಂದಿದ್ದೇನೆ. ಈ ಬಾರಿ ಮಂಡ್ಯದಲ್ಲಿ ಬಿಜೆಪಿಗೆ ಗೆಲುವಾಗಲಿದ್ದು, ಮೈಸೂರು, ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರಚಾರ ನಡೆಸುವುದಾಗಿ ಹೇಳಿದ್ದಾರೆ.


ದರ್ಶನ್ ಬಗ್ಗೆ ಏನಂದ್ರು?

ಈ ವೇಳೆ ಮಂಡ್ಯದಲ್ಲಿ ನಟ ದರ್ಶನ್ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡುತ್ತಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸುಮಲತಾ, ಅದು ದರ್ಶನ್ ಅವರ ವೈಯಕ್ತಿಕ ವಿಚಾರ. ನಾವು ಪ್ರತಿದಿನ ರಾಜಕೀಯ ವಿಚಾರ ಚರ್ಚೆ ಮಾಡುವುದಿಲ್ಲ. ಮಾತ್ರವಲ್ಲ, ಇಂತಹ ವಿಚಾರಗಳನ್ನು ದರ್ಶನ್ ಜೊತೆ ಚರ್ಚೆ ಮಾಡುವುದಿಲ್ಲ. ನಾನು ಹೋಗು ಅಥವಾ ಹೊಗಬೇಡ ಅನ್ನಲು ನಾನು ಯಾರು ಎಂದು ಕೇಳಿದ್ದಾರೆ.

ಕೆಲವರು ನಾನೇ ದರ್ಶನ್ ನನ್ನು ಕಾಂಗ್ರೆಸ್ ಪರ ಪ್ರಚಾರಕ್ಕೆ ಕಳುಹಿಸಿದ್ದಾಗಿ ಹೇಳ್ತಾರೆ, ಆದ್ರೆ ಅದಕ್ಕೂ ನನಗೂ ಸಂಬಂಧವಿಲ್ಲ ಎಂದು ಹೇಳಿದ್ದಾರೆ. ನಾನು ನನ್ನ ಇಚ್ಚೆಯಿಂದ ಬಿಜೆಪಿ ಪಕ್ಷಕ್ಕೆ ಬಂದಿದ್ದೇನೆ. ಇನ್ನು ಕುಮಾರಸ್ವಾಮಿ ಪರ ಪ್ರಚಾರ ಮಾಡಬೇಕಾ ಬೇಡ್ವಾ ಅಂತ ಪಕ್ಷ ತೀರ್ಮಾನಿಸುತ್ತದೆ ಎಂದು ಹೇಳಿದ್ದಾರೆ.

Continue Reading

LATEST NEWS

Trending