Sunday, March 26, 2023

ಪಾಕಿಸ್ತಾನದಲ್ಲಿ ಮತ್ತೆ ಹಿಂದೂ ದೇವಾಲಯಗಳ ಮೇಲೆ ದಾಳಿ : ಸ್ಥಳೀಯ ಮುಸಲ್ಮಾನರಿಂದ ಹಿಂದೂಗಳ ರಕ್ಷಣೆ

ಪಾಕಿಸ್ತಾನದಲ್ಲಿ ಮತ್ತೆ ಹಿಂದೂ ದೇವಾಲಯಗಳ ಮೇಲೆ ದಾಳಿ : ಸ್ಥಳೀಯ ಮುಸಲ್ಮಾನರಿಂದ ಹಿಂದೂಗಳ ರಕ್ಷಣೆ

ಕರಾಚಿ: ಪಾಕಿಸ್ತಾನದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಮುಂದುವರೆದಿದ್ದು, ಪಾಕಿಸ್ತಾನದ (Pakistan) ಮೂಲಭೂತವಾದಿಗಳು ಹಿಂದೂ ದೇವಾಲಯವನ್ನು ಮತ್ತೆ ಗುರಿಯಾಗಿಸಿಕೊಂಡಿದ್ದಾರೆ. ಗಲಭೆಕೋರರು ಮತ್ತೊಮ್ಮೆ ಸಿಂಧ್ (Sindh) ಪ್ರಾಂತ್ಯದ ಹಿಂದೂ ದೇವಾಲಯವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದಾರೆ.

ಸಿಂಧ್ ಪ್ರಾಂತ್ಯದ ಶೀತಲ್ ದಾಸ್ ಕ್ಯಾಂಪಸ್‌ನಲ್ಲಿ ಭಾನುವಾರ ಈ ಘಟನೆ ನಡೆದಿದೆ. ಈ ಮಧ್ಯೆ ಗಲಭೆಕೋರರು ಹಿಂದೂ ಕುಟುಂಬಗಳ ಮೇಲೂ ದಾಳಿ ಮಾಡಲು ಪ್ರಯತ್ನಿಸಿದವು, ಆದರೆ ಸ್ಥಳೀಯ ಮುಸ್ಲಿಮರ ವಿರೋಧದಿಂದಾಗಿ ಅದು ಸಾಧ್ಯವಾಗಲಿಲ್ಲ ಎಂದು ವರದಿಯಾಗಿದೆ.ಸ್ಥಳೀಯ ಮಾಧ್ಯಮಗಳ ಪ್ರಕಾರ ಮಾಹಿತಿ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ತಲುಪಿದರು. ಆದರೆ ಹಿಂದೂ ಕುಟುಂಬಗಳ ಮೇಲೆ ದೌರ್ಜನ್ಯಕ್ಕೆ ಮುಂದಾಗಿದ್ದ ಗಲಭೆಕೋರರ ವಿರುದ್ಧ ಆ ಪ್ರದೇಶದಲ್ಲಿ ವಾಸಿಸುವ ಮುಸ್ಲಿಮರ ವಿರೋಧದಿಂದಾಗಿ ಗಲಭೆಕೋರರು ತಪ್ಪಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ.

ಶೀತಲ್ ದಾಸ್ ಸಂಕೀರ್ಣದಲ್ಲಿ ಸುಮಾರು 300 ಹಿಂದೂ (Hindu) ಕುಟುಂಬಗಳು ಮತ್ತು 30 ಮುಸ್ಲಿಂ ಕುಟುಂಬಗಳು ವಾಸಿಸುತ್ತಿವೆ.ಕ್ಯಾಂಪಸ್‌ನ ಬಾಗಿಲಿನ ಹೊರಗೆ ಹೆಚ್ಚಿನ ಸಂಖ್ಯೆಯ ಜನರು ಜಮಾಯಿಸಿದ್ದರಿಂದ ಗಲಭೆಕೋರರು ಹೆದರಿ ಓಡಿಹೋದರು ಎಂದು ಆ ಪ್ರದೇಶದ ನಿವಾಸಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಘಟನೆ ಬಗ್ಗೆ ವಿವರಿಸಿರುವ ಅವರು ಗಲಭೆಕೋರರು ಇಲ್ಲಿನ ದೇವಾಲಯವನ್ನು (Temple) ಧ್ವಂಸ ಮಾಡಿದರು, ನಂತರ ಅವರು ಹಿಂದೂ ಕುಟುಂಬಗಳನ್ನು ಪ್ರವೇಶಿಸಲು ಮುಂದಾದರು. ಆದರೆ ಹತ್ತಿರ ವಾಸಿಸುತ್ತಿದ್ದ ಮುಸ್ಲಿಮರು ತಕ್ಷಣವೇ ಗೇಟ್ ಬಳಿ ಬಂದು ಹಿಂದೂಗಳ ರಕ್ಷಣೆಗೆ ಮುಂದಾಗಿದ್ದಾರೆ. ಜನಸಮೂಹವನ್ನು ಕಂಡು ಧಂಗಾದ ಗಲಭೆಕೋರರು ತಕ್ಷಣವೇ ಪರಾರಿಯಾದರು ಎಂದು ತಿಳಿದುಬಂದಿದೆ

ಪಾಕಿಸ್ತಾನದ ಪೇಶಾವರದಲ್ಲಿ ಪ್ರಬಲ ಸ್ಫೋಟ, 7 ಮಂದಿ ಸಾವು, 70ಕ್ಕೂ ಅಧಿಕ ಜನರಿಗೆ ಗಾಯ

ಗಲಭೆಕೋರರ ದಾಳಿಯಲ್ಲಿ ದೇವಾಲಯದ ಮೂರು ವಿಗ್ರಹಗಳು ಹಾನಿಗೊಂಡಿವೆ ಎಂದು ಘಟನೆ ಬಗ್ಗೆ ಪೊಲೀಸರು ದೃಢಪಡಿಸಿದ್ದು ಆರೋಪಿಗಳನ್ನು ಪತ್ತೆಹಚ್ಚಲು ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದರು. ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಮುಸ್ಲಿಂ ಕುಟುಂಬಗಳು ತಕ್ಷಣ ಸಹಾಯಕ್ಕಾಗಿ ತಲುಪಿದ್ದರಿಂದ ಅನಾಹುತ ತಪ್ಪಿದಂತಾಗಿದೆ ಎಂದು ಹೇಳಲಾಗಿದೆ.

ಅದೇ ಸಮಯದಲ್ಲಿ ಮಾಹಿತಿಯ ಪ್ರಕಾರ ಈ ಘಟನೆಯ ನಂತರ 60ಕ್ಕೂ ಹೆಚ್ಚು ಹಿಂದೂ ಕುಟುಂಬಗಳು ಶೀತಲ್ ದಾಸ್ ಕ್ಯಾಂಪಸ್ ಅನ್ನು ತೊರೆದು ನಗರದ ಇತರ ಪ್ರದೇಶಗಳಲ್ಲಿ ವಾಸಿಸಲು ತೆರಳಿದ್ದಾರೆ.

ಮೂರನೇ ದಾಳಿ:
ಮುಸ್ಲಿಂ ಬಹುಸಂಖ್ಯಾತ ಪಾಕಿಸ್ತಾನದ 220 ಮಿಲಿಯನ್ ಜನಸಂಖ್ಯೆಯಲ್ಲಿ ಸುಮಾರು ಎರಡು ಪ್ರತಿಶತ ಹಿಂದೂಗಳು ಮತ್ತು ಅವರಲ್ಲಿ ಹೆಚ್ಚಿನವರು ಸಿಂಧ್ ಪ್ರಾಂತ್ಯದಲ್ಲಿ ವಾಸಿಸುತ್ತಿದ್ದಾರೆ. ಸಿಂಧ್‌ನ ಹಿಂದೂ ದೇವಾಲಯದ ಮೇಲೆ ನಡೆದಿರುವ ಮೂರನೇ ದಾಳಿ ಇದಾಗಿದೆ. ಇದಕ್ಕೂ ಮುನ್ನ ಹಿಂದೂ ದೇವಾಲಯಗಳನ್ನು ಎರಡು ಬಾರಿ ಗುರಿಯಾಗಿಸಲಾಗಿದೆ. ಈ ದಾಳಿಗಳು ಪಾಕಿಸ್ತಾನ ಸರ್ಕಾರ ಅಲ್ಪಸಂಖ್ಯಾತರ ರಕ್ಷಣೆಯ ಹಕ್ಕುಗಳನ್ನು ಬಹಿರಂಗಪಡಿಸುತ್ತವೆ ಮತ್ತು ಇಮ್ರಾನ್ ಸರ್ಕಾರದ ಅವಧಿಯಲ್ಲಿ ಹಿಂದೂಗಳಿಗೆ ಬೆದರಿಕೆ ನಿರಂತರವಾಗಿ ಹೆಚ್ಚುತ್ತಿದೆ ಎಂಬುದಕ್ಕೆ ಕನ್ನಡಿ ಹಿಡಿದಂತಿದೆ.

LEAVE A REPLY

Please enter your comment!
Please enter your name here

Hot Topics