Saturday, May 21, 2022

ಪಾಕಿಸ್ತಾನದ ಸೂಪರ್ ಮಾಡೆಲ್ ನಯಾಬ್ ನದೀಂ ಭಟ್ ಬರ್ಬರ ಹತ್ಯೆ – ನಗ್ನ ಸ್ಥಿತಿಯಲ್ಲಿ ದೇಹ ಪತ್ತೆ..!

ಲಾಹೋರ್ : ಪಾಕಿಸ್ತಾನದ ಖ್ಯಾತ ರೂಪದರ್ಶಿ ಸೂಪರ್ ಮಾಡೆಲ್ ನಯಾಬ್ ನದೀಂ ಭಟ್ ಅವರು ನಿಗೂಢವಾಗಿ ಕೊಲೆಯಾಗಿದ್ದಾಳೆ. ಪಾಕಿಸ್ತಾನದ ಲಾಹೋರ್​ನಲ್ಲಿರುವ ತನ್ನ ಮನೆಯಲ್ಲಿ ನದೀಮ್ ಅವರ ಶವ ನಗ್ನ ಸ್ಥಿತಿಯಲ್ಲಿ ಪತ್ತೆಯಾಗಿದೆ.

29 ವರ್ಷದ ನದೀಂ ಅವರು ಏಕಾಂಗಿಯಾಗಿ ತಮ್ಮ ಮನೆಯಲ್ಲಿ ವಾಸಿಸುತ್ತಿದ್ದರು ಎನ್ನಲಾಗಿದೆ.

ದುಷ್ಕರ್ಮಿಗಳು ಮನೆಯೊಳಗೆ ನುಗ್ಗಿ ನದೀ ಅವರ ಉಸಿರು ಕಟ್ಟಿ ಕೊಲೆ ಮಾಡಿದ್ದು, ನಯಾಬ್ ನದೀಂ ಅವರ ಮೃತದೇಹ ನಗ್ನ ಸ್ಥಿತಿಯಲ್ಲಿ ಪತ್ತೆಯಾಗಿದೆ.

ನದೀಂ ಅವರ ಮಲ ಸಹೋದರ ಮೊಹಮ್ಮದ್ ಅಲಿ ನಾಸಿರ್ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ.

ರೂಪದರ್ಶಿ ನದೀಂ ಅವರನ್ನು ಭೇಟಿಯಾಗಲು ನಾಸಿರ್ ಆಕೆಯ ಮನೆಗೆ ತೆರಳಿದ್ದರು. ಫ್ಲಾಟ್​ನ ಬಾಗಿಲು ಲಾಕ್ ಆಗಿತ್ತು.

ಆಕೆಗೆ ಫೋನ್ ಮಾಡಿದರೂ ರಿಸೀವ್ ಮಾಡಲಿಲ್ಲ.  ಇದರಿಂದ ಅನುಮಾನಗೊಂಡ ಅವರು ಮನೆಯ ಹಿಂಬದಿಗೆ ಹೋಗಿ ನೋಡಿದ್ದರು.ನದೀಂಳ ಮನೆಯ ಹಿಂಭಾಗದಲ್ಲಿದ್ದ ಬಾತ್​ರೂಮಿನ ಕಿಟಕಿಯ ಗಾಜುಗಳು ಒಡೆದು, ಚೂರಾಗಿ ಬಿದ್ದಿದ್ದವು. ಇದರಿಂದ ಅನುಮಾನಗೊಂಡ ನಾಸಿರ್ ಅದೇ ಕಿಟಕಿಯಿಂದ ಆಕೆಯ ಮನೆಯೊಳಗೆ ಪ್ರವೇಶಿಸಿದ್ದಾರೆ.

ಆಗ ತನ್ನ ಸಹೋದರಿಯ ನಗ್ನ ದೇಹ ಹಾಲ್​ನಲ್ಲಿ ಬಿದ್ದಿರುವುದನ್ನು ಕಂಡು ಶಾಕ್ ಆಗಿದ್ದಾರೆ. ಬೆತ್ತಲಾಗಿ ಬಿದ್ದಿದ್ದ ಶವದ ಬಳಿ ಹೋಗಿ ನೋಡಿದಾಗ ಆಕೆ ಸಾವನ್ನಪ್ಪಿರುವುದು ಖಚಿತವಾಗಿತ್ತು.

ಹೀಗಾಗಿ, ತಕ್ಷಣ ಅವರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.  ರೂಪದರ್ಶಿ ನದೀಂ ಅವರ ಮೃತದೇಹದ ಮೇಲೆ ಗಾಯದ ಗುರುತುಗಳು ಪತ್ತೆಯಾಗಿವೆ. ಆಕೆಯ ಕೈ, ಕುತ್ತಿಗೆ, ಕಾಲಿನ ಮೇಲೆ ಗಾಯದ ಗುರುತುಗಳಿದ್ದು, ಆಕೆಯನ್ನು ಕತ್ತು ಹಿಸುಕಿ ಕೊಲೆ ಮಾಡಿರುವ ಅನುಮಾನ ವ್ಯಕ್ತವಾಗಿದೆ.

ಒಬ್ಬಂಟಿಯಾಗಿ ಮನೆಯಲ್ಲಿ ವಾಸಿಸುತ್ತಿದ್ದ ನದೀಂ ಅವರಿಗೆ ಇನ್ನೂ ಮದುವೆಯಾಗಿರಲಿಲ್ಲ. ಇತ್ತೀಚೆಗಷ್ಟೇ ಮಾಡೆಲಿಂಗ್​ನಲ್ಲಿ ಉತ್ತಮ ಅವಕಾಶಗಳು ಸಿಗಲಾರಂಭಿಸಿದ್ದವು ಎನ್ನಲಾಗಿದೆ.ಪ್ರಕರಣ ದಾಖಲಿಸಿರುವ ಪೊಲೀಸರು ಇದೀಗ ನದೀಂ ಅವರ ಹಂತಕರ ಬೆನ್ನು ಹತ್ತಿದ್ದಾರೆ.

LEAVE A REPLY

Please enter your comment!
Please enter your name here

Hot Topics

ಬಂಟ್ವಾಳ: ಅಪ್ರಾಪ್ತೆಯ ಮೇಲೆ ಅತ್ಯಾಚಾರ-ಫೊಕ್ಸೋ ಪ್ರಕರಣ ದಾಖಲು

ಬಂಟ್ವಾಳ: ಅಪ್ರಾಪ್ತ ಬಾಲಕಿಯನ್ನು ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ ಪರಿಣಾಮ ಆಕೆ ಗಂಡು ಮಗುವಿನ ಜನ್ಮ ನೀಡಲು ಕಾರಣನಾದ ಆರೋಪಿಯ ವಿರುದ್ಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ.ಕಿನ್ನಿಗೋಳಿ...

ಪಠ್ಯಪುಸ್ತಕದಲ್ಲಿ ನಾರಾಯಣ ಗುರು ವಿಷಯ ಕೈಬಿಟ್ಟಿಲ್ಲ: ಸುಳ್ಳು ವದಂತಿ ನಂಬಬೇಡಿ ಎಂದ ಸಚಿವ ಕೋಟ

ಬೆಂಗಳೂರು: ಶಾಲಾ ಪಠ್ಯಪುಸ್ತಕದಲ್ಲಿ ನಾರಾಯಣ ಗುರು ವಿಷಯ ಕೈಬಿಟ್ಟಿಲ್ಲ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಸ್ಪಷ್ಟನೆ ನೀಡಿದ್ದಾರೆ.ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು...

ತ್ರಿಬಲ್‌ ರೈಡ್‌: ಖಾಕಿ ಕಂಡು ಯೂಟರ್ನ್‌ ಹೊಡೆದವರು ಬಸ್‌ನಡಿಗೆ ಬಿದ್ದು ಛಿದ್ರ ಛಿದ್ರ

ಮೈಸೂರು: ಬೈಕ್‌ನಲ್ಲಿ ತ್ರಿಬಲ್‌ ರೈಡಿಂಗ್‌ ಹೋಗುತ್ತಿದ್ದಾಗ ಮುಂದೆ ಪೊಲೀಸ್‌ ಇದ್ದುದನ್ನು ಕಂಡು ಏಕಾಏಕಿ ಯೂಟರ್ನ್‌ ಹೊಡೆದಾಗ ಹಿಂದಿನಿಂದ ಬರುತ್ತಿದ್ದ ಬಸ್‌ ಢಿಕ್ಕಿ ಹೊಡೆದು ಇಬ್ಬರು ಸಾವನ್ನಪ್ಪಿ ಓರ್ವ ಗಂಭೀರ ಗಾಯಗೊಂಡು ಸಾವು ಬದುಕಿನ...