ಪಡುಬಿದ್ರಿ: ದ್ವಿಚಕ್ರ ವಾಹನಕ್ಕೆ ಕಾರೊಂದು ಡಿಕ್ಕಿಯಾಗಿ ಸವಾರ ಮೃತಪಟ್ಟ ಘಟನೆ ನಿನ್ನೆ ಪಡುಬಿದ್ರಿ ಡೌನ್‌ಟೌನ್ ಬಳಿ ನಡೆದಿದೆ.
ಮೃತ ವ್ಯಕ್ತಿಯನ್ನು ಬಾಲಕೃಷ್ಣ ಭಟ್ ಎಂದು ಗುರುತಿಸಲಾಗಿದೆ
ಘಟನೆ ಹಿನ್ನೆಲೆ
ನಿನ್ನೆ ಬೆಳಿಗ್ಗೆ 11 ಗಂಟೆಗೆ ಪಾದೆಬೆಟ್ಟು ಗ್ರಾಮದ ಬಾಲಕೃಷ್ಣ ಭಟ್ ರವರು ಕಾಪು ತಾಲೂಕು ನಡ್ಸಾಲು ಗ್ರಾಮದ ಪಡುಬಿದ್ರಿ ಕೆಳಪೇಟೆಯಿಂದ ಪಡುಬಿದ್ರಿ ಡೌನ್‌ಟೌನ್ ಎದುರು ತಲುಪಿ
ಅಲ್ಲಿಂದ ಹೆಜಮಾಡಿ ಕಡೆಗೆ ಹೋಗಲು ಸರ್ವಿಸ್ ರಸ್ತೆಯಿಂದಾಗಿ ತೆರೆದ ಡಿವೈಡರನ್ನು ದಾಟಿ ಮಂಗಳೂರು– ಉಡುಪಿ ರಾಷ್ಟ್ರೀಯ ಹೆದ್ದಾರಿ-66 ನ್ನು ತಲುಪಿದ್ದರು.
ಅಲ್ಲಿಂದ ಹೆಜಮಾಡಿ ಕಡೆಗೆ ಸ್ಕೂಟಿಯನ್ನು ಚಲಾಯಿಸಿಕೊಂಡು ಹೆಜಮಾಡಿ ಕಡೆಗೆ ಹೋಗುತ್ತಿರುವ ಸಮಯ ಉಡುಪಿ ಕಡೆಯಿಂದ ಹೆಜಮಾಡಿ ಕಡೆಗೆ ಬಂದ ಕಾರು ಬಾಲಕೃಷ್ಣ ಭಟ್ ರವರು ಚಲಾಯಿಸುತ್ತಿದ್ದ ಸ್ಕೂಟಿಯ ಹಿಂಭಾಗಕ್ಕೆ ಡಿಕ್ಕಿಹೊಡೆದಿದೆ.
ಪರಿಣಾಮ ಬಾಲಕೃಷ್ಣ ಭಟ್ ರಸ್ತೆಗೆ ಬಿದ್ದು ತಲೆಗೆ ಗಂಭೀರ ಗಾಯಗೊಂಡು ಪ್ರಜ್ಜಾಹೀನರಾಗಿದ್ದರು. ತಕ್ಷಣ ಪಡುಬಿದ್ರಿ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗೆ ಕರೆದೊಯ್ಯುತ್ತಿರುವಾಗ ದಾರಿ ಮಧ್ಯೆ ಮೃತಪಟ್ಟಿದ್ದಾರೆ.
ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ.