ಉಡುಪಿ :ಮಂಗಳೂರು- ಉಡುಪಿ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 66 ರ ಪಡುಬಿದ್ರೆ ಚತುಃಷ್ಪಥ ಹೆದ್ದಾರಿಯ ಅರೆಬರೆ ಕಾಮಗಾರಿಯನ್ನು ತಿಂಗಳೊಳಗೆ ಪೂರ್ಣರ್ಗೊಳಿಸುವಂತೆ ಪಡುಬಿದ್ರಿ ಗ್ರಾ ಪಂ ಕಾಮಾಗಾರಿ ಗುತ್ತಿಗೆ ವಹಿಸಿದ್ದ ನವಯುಗ ಕಂಪೆನಿಗೆ ಎಚ್ಚರಿಕೆಯ ಮೂಲಕ ಸೂಚಿಸಿದ್ದಾರೆ.
ಪಡುಬಿದ್ರೆ ಗ್ರಾಮ ಪಂಚಾಯತ್ ಅಧ್ಯಕ್ಷ ರವಿ ಶೆಟ್ಟಿ ಪಾದೆಬೆಟ್ಟು ಅವರ ನೇತೃತ್ವದಲ್ಲಿ ಗ್ರಾಮ ಪಂಚಾಯತ್ 32 ಸದಸ್ಯರು ನವಯುಗ ಶಾಖಾ ಕಚೇರಿಗೆ ಮುತ್ತಿಗೆ ಹಾಕಿದರು.
ಪಡುಬಿದ್ರೆಯ ನವಯುಗ ಕಂಪೆನಿಗೆ ಹೋದಾಗ ನವಯುಗ ಯೋಜನಾ ಪ್ರಬಂಧಕ ಶ್ರೀನಿವಾಸ್ ಕಚೇರಿಯಲ್ಲಿ ಇಲ್ಲದನ್ನು ನೋಡಿ ಕೆಂಡಾ ಮಂಡಲವಾದ ಅಧ್ಯಕ್ಷರು ಮತ್ತು ಸದಸ್ಯರು ಕಚೇರಿಗೆ ಬೀಗ ಜಡಿಯಲು ನಿರ್ಧರಿಸಿದ್ದರು.
ಮೂರು ತಿಂಗಳಿನಿಂದ ಮನವಿ ಮಾಡಿಕೊಂಡರೂ ಕಂಪೆನಿ ಗ್ರಾ. ಪಂ ವಿನಂತಿಯನ್ನು ಕಡೆಗಣಿಸುತ್ತಿದೆ. ಹಾಗಾಗಿ ಅಧಿಕಾರಿ ಕಚೇರಿಗೆ ಬಾರದಿದ್ದಲ್ಲಿ ಕಚೇರಿಗೆ ಬೀಗ ಜಡಿಯುವುದು ಖಂಡಿತ ಎಂದು ಎಚ್ಚರಿಸಿದಾಗ ಯೋಜನಾ ಪ್ರಬಂಧಕ ಶ್ರೀನಿವಾಸ್ ತರಾತುರಿಯಲ್ಲಿ ಕಚೇರಿಗಾಗಮಿಸಿದರು.
ತಕ್ಷಣ ಅವರನ್ನು ಅವೈಜ್ಞಾನಿಕ ಕಾಮಗಾರಿಗಳು ನಡೆದ ಪಡುಬಿದ್ರಿಯ ಹೆದ್ದಾತಿಗೆ ಕರಕೊಂಡು ಹೋಗಿ ಪರಿಸ್ಥಿತಿಯನ್ನು ವಿವರಿಸಿ ಅದನ್ನು ಮುಗಿಸಲು ನವಯುಗ ಕಂಪೆನಿಗೆ ತಿಂಗಳ ಗಡುವನ್ನು ನೀಡಲಾಯಿತು.
ತಿಂಗಳೊಳಗೆ ಪರಿಹಾರವನ್ನು ಇಲ್ಲದೆ ಹೋದಲ್ಲಿ ಉಗ್ರ ಪ್ರತಿಭಟನೆಯನ್ನು ಸಂಘಟಿಸಲಾಗುವುದೆಂದು ಗ್ರಾಪಂ. ಅಧ್ಯಕ್ಷ ರವಿ ಶೆಟ್ಟಿ ನವಯುಗ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.