Thursday, March 23, 2023

ಮಂಗಳೂರು ಸ್ಪೋಟದ ಸಂತ್ರಸ್ತ ಆಟೋಚಾಲಕ ಪುರುಷೋತ್ತಮ ಪೂಜಾರಿ ಮೊಗದಲ್ಲಿ ಭರವಸೆಯ ಬೆಳಕು – ನೊಂದ ಮನಸ್ಸಿಗೆ ಆಸರೆಯಾದ ಪದ್ಮರಾಜ್..!

ಅಣ್ಣ ಇರೆಗ್ ಏರ್ ಇಜ್ಜಿಂಡಲ ಮಲ್ಲೆಜ್ಜಿ ಯಾನುಲ್ಲೆ, ಎಂಕ್ಲೆನಾ ಗುರುಬೆಳದಿಂಗಳು ಸಂಸ್ಥೆ ಉಂಡು… ಎನ್ನುವ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ನೀಡಿದ ಭರವಸೆಯ ಮಾತು ಆಟೋ ಕುಕ್ಕರ್‌ ಬಾಂಬ್ ಸ್ಪೋಟದ ಸಂತ್ರಸ್ತ ಪುರುಷೋತ್ತಮ ಪೂಜಾರಿಯವರ ಪಾಲಿಗೆ ಈಡೇರಿದ ಖುಷಿ… ಇದರಿಂದ ಅವರ ಇಡೀ ಕುಟುಂಬ ಸದಸ್ಯರ ಮೊಗದಲ್ಲಿ ವಿಶ್ವಾಸದ ಬೆಳಕು ಮೂಡಿದೆ.

ಮಂಗಳೂರು : ಅಣ್ಣ ಇರೆಗ್ ಏರ್ ಇಜ್ಜಿಂಡಲ ಮಲ್ಲೆಜ್ಜಿ ಯಾನುಲ್ಲೆ, ಎಂಕ್ಲೆನಾ ಗುರುಬೆಳದಿಂಗಳು ಸಂಸ್ಥೆ ಉಂಡು… ಎನ್ನುವ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ನೀಡಿದ ಭರವಸೆಯ ಮಾತು ಆಟೋ ಕುಕ್ಕರ್‌ ಬಾಂಬ್ ಸ್ಪೋಟದ ಸಂತ್ರಸ್ತ ಪುರುಷೋತ್ತಮ ಪೂಜಾರಿಯವರ ಪಾಲಿಗೆ ಈಡೇರಿದ ಖುಷಿ… ಇದರಿಂದ ಅವರ ಇಡೀ ಕುಟುಂಬ ಸದಸ್ಯರ ಮೊಗದಲ್ಲಿ ವಿಶ್ವಾಸದ ಬೆಳಕು ಮೂಡಿದೆ.

ಹೌದು ಇತ್ತೀಚೆಗೆ ಆಟೋ ರಿಕ್ಷಾದಲ್ಲಿ ಕುಕ್ಕರ್ ಸ್ಫೋಟಗೊಂಡು ಗಾಯಗೊಂಡ ಆಟೋ ಚಾಲಕ ಉಜ್ಜೋಡಿಯ ಪುರುಷೋತ್ತಮ ಪೂಜಾರಿಯವರನ್ನು ಗುರುಬೆಳದಿಂಗಳು ಫೌಂಡೇಶನ್ ಅಧ್ಯಕ್ಷ, ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್. ತಂಡದೊಂದಿಗೆ ಭೇಟಿಯಾದಾಗ ತನ್ನ ನೋವಿನ ಜತೆಗೆ ಬರುವ ಮೇ ತಿಂಗಳಿನಲ್ಲಿ ಮಗಳ ಮದುವೆ ನಿಗದಿಯಾಗಿದ್ದು, ಅದಕ್ಕಿಂತ ಮುನ್ನ ಮನೆ ನವೀಕರಣ ಮಾಡಬೇಕು ಎನ್ನುವ ನನ್ನ ಕನಸು ನನಸು ಮಾಡಲು ಸಾಧ್ಯವಾಗಿಲ್ಲ ಎಂಬ ನೋವಿನಿಂದ ಆತ್ಮವಿಶ್ವಾಸ ಕಳೆದುಕೊಂಡು ಮತ್ತಷ್ಟು ನೊಂದುಕೊಂಡು ದುಃಖವನ್ನು ವ್ಯಕ್ತಪಡಿಸಿದ್ದರು.

ಈ ವೇಳೆ ಮನೆಯನ್ನು ನವೀಕರಿಸುವ ಜವಾಬ್ದಾರಿಯನ್ನು ಗುರುಬೆಳದಿಂಗಳು ಫೌಂಡೇಶನ್ ವಹಿಸಲಿದೆ.

ಪುರುಷೋತ್ತಮ ಪೂಜಾರಿ

ನೀವು ಯಾವುದಕ್ಕೂ ಚಿಂತೆ ಮಾಡಬೇಡಿ. ಸರ್ಕಾರ ನಿಮಗೆ ಸ್ಪಂದಿಸದಿದ್ದರೂ ನಾವು ಸದಾ ನಿಮ್ಮೊಂದಿಗೆ ಇದ್ದೇವೆ ಎಂದು ಪದ್ಮರಾಜ್‌ರವರು ಅವರಿಗೆ ಮನೋಸ್ಥೈರ್ಯ ತುಂಬಿದ್ದರು.

ಮಾತು ಕೊಟ್ಟ ಮರುದಿನದಿಂದಲೇ ಮನೆಯನ್ನು ಸುಸಜ್ಜಿತವಾಗಿ ನವೀಕರಿಸಲು ಪ್ರಾರಂಭಿಸಿದ ಸಂಸ್ಥೆ ಇದೀಗ ಸುಮಾರು 6 ಲಕ್ಷ ರೂಪಾಯಿ ವೆಚ್ಚದಲ್ಲಿ ಸುಂದರವಾಗಿ ಮನೆ ನಿರ್ಮಿಸಿಕೊಟ್ಟಿದೆ‌.

ಮಾರ್ಚ್ 22ರ ಯುಗಾದಿ ಹಬ್ಬದಂದು ಬೆಳಗ್ಗೆ 10ಗಂಟೆಗೆ ಮನೆ ಹಸ್ತಾಂತರ ನಡೆಯಲಿದೆ.ನೊಂದವರ ಪಾಲಿಗೆ ಬೆಳದಿಂಗಳ ಆಸರೆಯಾದ ಗುರುಬೆಳದಿಂಗಳು ಭರವಸೆ ಮಾತ್ರವಲ್ಲ ನಂಬಿಕೆಯೂ, ವಿಶ್ವಾಸವೂ ಹೌದು.

LEAVE A REPLY

Please enter your comment!
Please enter your name here

Hot Topics

ಶ್ರವಣಬೆಳಗೊಳದ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಜಿನೈಕ್ಯ..!

ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೊಳ ಜೈನ ಮಠದ ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಆವರು ಜಿನೈಕ್ಯರಾಗಿದ್ದಾರೆ.ಹಾಸನ : ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೊಳ ಜೈನ ಮಠದ ಸ್ವಸ್ತಿ ಶ್ರೀ...

ಉಡುಪಿ : ಕಳವಾದ 74 ಲಕ್ಷ ರೂಪಾಯಿ ಸೊತ್ತುಗಳು ಮರಳಿ ಮಾಲಕರಿಗೆ ಹಸ್ತಾಂತರಿಸಿದ ಪೊಲೀಸರು.!

ಉಡುಪಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಕಳ್ಳತನ ,ದರೋಡೆ ಮತ್ತಿತರ ಕಾರಣಗಳಿಂದ ಸುತ್ತುಗಳನ್ನು ಕಳೆದುಕೊಂಡವರಿಗೆ ಅವರ ಚಿನ್ನಾಭರಣ ಸೊತ್ತು ಮತ್ತು ನಗದನ್ನು ಹಸ್ತಾಂತರಿಸಲಾಯಿತು.ಉಡುಪಿ : ಉಡುಪಿ ಜಿಲ್ಲೆಯ ವಿವಿಧ ಪೊಲೀಸ್...

40 ವರ್ಷಗಳಿಂದ ಅದೇ ಪೊಳ್ಳು ಭರವಸೆ : ಚುನಾವಣಾ ಬಹಿಷ್ಕಾರಕ್ಕೆ ಮುಂದಾದ ಸುಳ್ಯ ಅರಮನೆಗಾಯದ ಜನತೆ..!

ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನ ಈ ಗ್ರಾಮದ ಜನ ಕಳೆದ 40 ವರ್ಷಗಳಿಂದ ಬಿದಿರಿನ ತೂಗು ಸೇತುವೆಯ ಮುಖಾಂತರ ಜೀವ ಭಯದಲ್ಲಿ ಜೀವನ ನಡೆಸುತಿದ್ದಾರೆ.ಸುಳ್ಯ : ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ...