ಬೆಂಗಳೂರು: ಬಾಂಬೆ ಹೈಕೋರ್ಟ್‌ನ ನ್ಯಾಯಮೂರ್ತಿಯಾಗಿದ್ದ ಪಿ.ಬಿ.ವರಾಳೆ ಅವರನ್ನು ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯನ್ನಾಗಿ ನೇಮಿಸಲಾಗಿದೆ.
ಈ ವಿಚಾರವನ್ನು ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಅವರು ಟ್ವಿಟರ್ ಮೂಲಕ ತಿಳಿಸಿದ್ದಾರೆ. ಪ್ರಸನ್ನ ಬಿ.ವರಾಳೆ ಅವರು 1985 ರಲ್ಲಿ ವಕೀಲರಾಗಿ ಮುಂಬಯಿ ಕೋರ್ಟ್ ನಲ್ಲಿ ನೋಂದಣಿ ಮಾಡಿದ್ದರು.
ಔರಂಗಾಬಾದ್ ಅಂಬೇಡ್ಕರ್ ಲಾ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಮತ್ತು ಔರಂಗಾಬಾದ್‌ನ ಹೈಕೋರ್ಟ್ ಪೀಠದಲ್ಲಿ ಸಹಾಯಕ ವಕೀಲರಾಗಿ ಮತ್ತು ಹೆಚ್ಚುವರಿ ಸರಕಾರಿ ಆಭಿಯೋಜಕರಾಗಿ ಸೇವೆ ಸಲ್ಲಿಸಿದ್ದ ಅವರು ಕೇಂದ್ರ ಸರಕಾರದ ಅಡೀಶನಲ್ ಸ್ಟ್ಯಾಂಡಿಂಗ್ ಕೌನ್ಸೆಲ್ ಆಗಿದ್ದರು.
2008 ರಲ್ಲಿ ಬಾಂಬೆ ಹೈಕೋರ್ಟ್‌ನ ನ್ಯಾಯಧೀಶರಾಗಿ ನೇಮಕಗೊಂಡಿದ್ದರು.