ತೀರ್ಥಹಳ್ಳಿ : ಕೋಳಿಯನ್ನು ಕುಯ್ದು ಸಾಂಬಾರು ಮಾಡಿ ತಿನ್ನೋದು ಮನುಷ್ಯನ ಸಾಮಾನ್ಯ ಆಹಾರ ಪದ್ಧತಿಯಲ್ಲಿ ಇರುವ ಕ್ರಮ. ಆದ್ರೆ ಇಲ್ಲೊಬ್ಬ ವ್ಯಕ್ತಿ ಆಹಾರ ಸೇವಿಸ್ತಾ ಇಲ್ಲಾ ಅಂತ ಕೋಳಿಗೇ ಅಪರೇಷನ್ ಮಾಡಿಸಿದ ವಿಶೇಷ ಘಟನೆ ನಡೆದಿದೆ.
ಸಾಮಾನ್ಯವಾಗಿ ಕೋಳಿ ಅನ್ನೋದು ಮನುಷ್ಯನ ಆಹಾರದ ವಸ್ತುವಾಗಿರೋ ಕಾರಣ ಕೋಳಿಗೆ ಅಸೌಖ್ಯ ಕಾಣಿಸಿದ್ರೆ ಅದನ್ನ ಕೊಂದು ಸಾಂಬಾರು ಮಾಡ್ತಾರೆ. ಆದ್ರೆ ತೀರ್ಥಹಳ್ಳಿಯಲ್ಲಿ ಆಸ್ಟೀಲ್ ತಳಿಯ ಕೋಳಿಯೊಂದಕ್ಕೆ ಅನಾರೋಗ್ಯ ಕಾಡಿದ್ದು, ಅದಕ್ಕೆ ಅಪರೇಷನ್ ಮಾಡಿಸಲಾಗಿದೆ. ಇಲ್ಲಿನ ಲಿಬಾಸ್ ಟೈಲರ್ ಅವರಿಗೆ ಸೇರಿದ್ದ ಕೋಳಿ ಇದಾಗಿದ್ದು, ಕೋಳಿ ಎರಡು ಮೂರು ದಿನಗಳಿಂದ ಆಹಾರ ಸೇವಿಸ್ತಾ ಇರಲಿಲ್ಲ. ಹೀಗಾಗಿ ಅನುಮಾನಗೊಂಡ ಹಿಬಾಸ್ ಟೈಲರ್ ಕೋಳಿಯನ್ನು ಪಶುವೈದರ ಬಳಿ ತಗೆದುಕೊಂಡು ಹೋಗಿದ್ದಾರೆ. ಈ ವೇಳೆ ಪರೀಕ್ಷೆ ನಡೆಸಿದ ಪಶುವೈದ್ಯ ಡಾ.ಯುವರಾಜ ಹೆಗಡೆ ಎಂಬವರು ಕೋಳಿಯ ಗಂಟಲಿನಲ್ಲಿ ಏನೋ ಸಿಲುಕಿಕೊಂಡಿದ್ದು ಆ ಕಾರಣದಿಂದ ಕೋಳಿ ಆಹಾರ ಸೇವಿಸ್ತಾ ಇಲ್ಲ ಅಂತ ಹೇಳಿದ್ದಾರೆ. ಬಳಿಕ ಲಿಬಾಸ್ ಟೈಲರ್ ಅವರ ಸಲಹೆಯಂತೆ ವೈದ್ಯರು ಕೋಳಿಗೆ ಅಪರೇಷನ್ ಮಾಡಿ 10 ಸೆ.ಮೀ ಉದ್ದದ ಮೀನಿನ ಮುಳ್ಳು ಹೊರತೆಗೆದಿದ್ದಾರೆ. ಕೋಳಿಯ ಮೇವಿನ ಚೀಲದಲ್ಲಿ ಈ ಮೀನಿನ ಮುಳ್ಳು ಇದ್ದು, ಅದು ಗೊತ್ತಿಲ್ಲದೆ ಕೋಳಿಯ ಗಂಟಲಿಗೆ ಇಳಿದಿತ್ತು. ಶಸ್ತ್ರ ಚಿಕಿತ್ಸೆಯ ಬಳಿಕ ಕೋಳಿ ಹಿಂದಿನಂತೆ ಆಹಾರ ಸೇವಿಸಲು ಆರಂಭಿಸಿದೆ. ಒಟ್ಟಾರೆ ಪಶು ವೈದ್ಯರಿಗೂ ಕೋಳಿ ಅಪರೇಷನ್ ಹೊಸದಾಗಿದ್ದು, ಸದ್ಯದ ಮಟ್ಟಿನಲ್ಲಿ ಕೋಳಿಯ ಪ್ರಾಣ ಉಳಿಸಲು ಶಸ್ತ್ರಕ್ರೀಯೆ ನಡೆಸಿದ ಏಕೈಕ ಪ್ರಕರಣವೂ ಆಗಿರಬಹುದು ಎನ್ನಲಾಗಿದೆ.
ಮಂಗಳೂರು/ಬೆಂಗಳೂರು : ರಾಜ್ಯವೇ ಬೆಚ್ಚಿ ಬೀಳುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಕ್ರೂ*ರಿ ತಾಯಿಯೊಬ್ಬಳು ತನ್ನ ಪುಟ್ಟ ಕಂದಮ್ಮಗಳನ್ನು ಕೊಂ*ದಿರುವ ಅಮಾನವೀಯ ಘಟನೆ ನಡೆದಿದೆ. ಅಲ್ಲದೇ ಬಳಿಕ ಆಕೆ ಆತ್ಮಹ*ತ್ಯೆಗೂ ಯತ್ನಿಸಿದ್ದಾಳೆ .
ಎಲ್ಲವೂ ಚೆನ್ನಾಗಿತ್ತು…ಅನುಮಾನ ಶುರುವಾಯ್ತು :
ಆ ಕುಟುಂಬ ಕಳೆದ ತಿಂಗಳಷ್ಟೇ ಜಾರ್ಖಂಡ್ ನಿಂದ ಬಂದು ಬೆಂಗಳೂರಿನ ಸುಬ್ರಹ್ಮಣ್ಯಪುರದಲ್ಲಿ ವಾಸವಾಗಿತ್ತು. ಪತಿ ಸುನೀಲ್ ಸಾಹೋ, ಪತ್ನಿ ಮಮತಾ ಸಾಹೋ, ಮಕ್ಕಳಾದ ಶಂಭು ಸಾಹೋ, ಶಿಯಾ ಸಾಹೋ…ಪುಟ್ಟ ಸಂಸಾರ…ಸಣ್ಣದೊಂದು ಬಾಡಿಗೆ ಮನೆಯಲ್ಲಿ ವಾಸ…ಆಟೋ ಚಾಲಕನಾಗಿ ದುಡಿಯುತ್ತಿದ್ದ ಸುನೀಲ್ ಸಾಹೋ..ಹೀಗೆ ಸಂಸಾರ ಸಾಗುತ್ತಿತ್ತು. ಎಲ್ಲವೂ ಸರಿಯಾಗಿತ್ತು. ಅದ್ಯಾವಾಗ ಗಂಡನ ಬಗ್ಗೆ ಅ*ನೈತಿಕ ಸಂಬಂಧದ ಅನುಮಾನ ಹುಟ್ಟಿಕೊಂತೋ ಎಲ್ಲವೂ ಎಕ್ಕುಟ್ಹೋಗಿತ್ತು. ಪತಿ ಬೇರೊಂದು ಯುವತಿಯೊಂದಿಗೆ ಮಾತಾಡುತ್ತಿರುವುದನ್ನು ಮಮತಾ ಕೇಳಿಸಿಕೊಂಡಿದ್ದಳಂತೆ. ಇದೇ ದಂಪತಿ ನಡುವೆ ನಿತ್ಯ ಜಗಳಕ್ಕೆ ಬುನಾದಿ ಹಾಕಿತ್ತಂತೆ. ನಿನ್ನೆಯೂ(ನ.21) ಜಗಳ ಮುಂದುವರಿದಾಗ ಸುನೀಲ್ ಆಟೋ ತೆಗೆದುಕೊಂಡು ಹೋಗಿದ್ದ ಎನ್ನಲಾಗಿದೆ.
ಗಂಡ ಹೊರಹೋದ ಮೇಲೆ ಬಾಗಿಲು ಹಾಕಿ, ಇತ್ತ ಮಕ್ಕಳಿಬ್ಬರನ್ನೂ ಕತ್ತು ಹಿಸುಕಿ ಮಮತಾ ಕೊಂ*ದಿದ್ದಾಳೆ. ಬಳಿಕ ತಾನೂ ಚಾ*ಕುವಿನಿಂದ ಕತ್ತು ಕೊ*ಯ್ದುಕೊಂಡಿದ್ದಾಳೆ. ಎಲ್ಲ ಆದ ಮೇಲೆ ತಪ್ಪಿನ ಅರಿವಾಗಿ ಪತಿಗೆ ಸೆಲ್ಫಿ ಫೋಟೋ ಕಳುಹಿಸಿದ್ದಾಳೆ. ಅಷ್ಟೇ ಅಲ್ಲ, ‘ಗಲತ್ ಹೋಗಯಾ…ಮಾಫ್ ಕರೋ’ ಅಂತ ಮೆಸೇಜ್ ಬೇರೆ ಹಾಕಿದ್ದಾಳೆ.
ಮೆಸೇಜ್ ನೋಡಿದ ತಕ್ಷಣ ಮನೆಯತ್ತ ದೌಡಾಯಿಸಿದ ಪತಿ ಬಾಗಿಲು ಒಡೆದು ಒಳ ಹೋಗಿ ಹೆಂಡತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ಸುಬ್ರಹ್ಮಣ್ಯ ಠಾಣೆಗೆ ಮಾಹಿತಿ ನೀಡಿದ್ದಾನೆ. ಸದ್ಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮಮತಾ ಸಾಹೋ ಪ್ರಾ*ಣಾ*ಪಾಯದಿಂದ ಪಾರಾಗಿದ್ದಾಳೆ. ಆದರೆ, ಏನೂ ಅರಿಯದ ಕಂದಮ್ಮಗಳು ಪತಿ – ಪತ್ನಿ ಜಗಳಕ್ಕೆ ಬ*ಲಿಯಾಗಿವೆ.
ಬೆಂಗಳೂರು : ಮಾದಕ ವಸ್ತು ಮಾರಾಟ, ಸಾಗಾಟ ಜಾಲದ ಮೇಲೆ ಕಣ್ಣಿಟ್ಟಿರುವ ಸಿಸಿಬಿ ಅಧಿಕಾರಿಗಳು ಬರೋಬ್ಬರಿ 6 ಕೋಟಿ ರೂ. ಮೌಲ್ಯದ ಮಾ*ದಕ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಪ್ರತ್ಯೇಕ ಪ್ರಕರಣದಲ್ಲಿ ಬೆಂಗಳೂರು ಪೊಲೀಸರು ಹಾಗೂ ಸಿಸಿಬಿ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಹೊಸ ವರ್ಷಕ್ಕೆ ಗಾಂ*ಜಾ ಸಪ್ಲೈ :
ಹೊಸ ವರ್ಷಾಚರಣೆಯ ಸಲುವಾಗಿ ಕ್ವಿಂಟಾಲ್ ಗಟ್ಟಲೆ ಗಾಂ*ಜಾ ಸಪ್ಲೈ ಮಾಡುತ್ತಿದ್ದ ಆರೋಪಿಗಳನ್ನು ಬೆಂಗಳೂರಿನ ಗೋವಿಂದಪುರ ಠಾಣೆ ಪೊಲೀಸರು ಸೆರೆ ಹಿಡಿದಿದ್ದಾರೆ. ಪೆಡ್ಲರ್ ಅಚ್ಚು ಹಾಗೂ ಜಮೀರ್, ರೇಷ್ಮಾ ದಂಪತಿ ಬಂಧಿತರು. ಆರೋಪಿಗಳಿಂದ 3.25 ಕೋಟಿ ರೂಪಾಯಿ ಮೌಲ್ಯದ 318 ಕೆಜಿ ಗಾಂಜಾ ಜಪ್ತಿ ಮಾಡಲಾಗಿದೆ.
ಮೂವರು ಆರೋಪಿಗಳು ಒಡಿಶಾ ಮತ್ತು ಆಂಧ್ರದಲ್ಲಿ ಗಾಂ*ಜಾ ಸಂಗ್ರಹಿಸಿದ್ದರು. ಹೊಸ ವರ್ಷಾಚರಣೆ ವೇಳೆ ಬೆಂಗಳೂರು, ಕೇರಳದಲ್ಲಿ ಮಾರಾಟ ಮಾಡಲು ಯೋಜಿಸಿದ್ದರು. ಜಮೀರ್ ಮತ್ತು ರೇಷ್ಮಾ ದಂಪತಿ ಬೆಂಗಳೂರಿನಲ್ಲಿ, ಪೆಡ್ಲರ್ ಅಚ್ಚು ಕೇರಳದಲ್ಲಿ ಗಾಂ*ಜಾ ಮಾರಲು ನಿರ್ಧರಿಸಿದ್ದ ಎಂಬುದು ವಿಚಾರಣೆ ವೇಳೆ ತಿಳಿದುಬಂದಿದೆ.
ಬೆಂಗಳೂರು ಮತ್ತು ಕೇರಳಕ್ಕೆ ಸಾಗಿಸಲು ಆರೋಪಿಗಳು ಸೆಲ್ಫ್ ಡ್ರೈವಿಂಗ್ ಕಾರು ಬಾಡಿಗೆಗೆ ಪಡೆದಿದ್ದರು. ಬಳಿಕ ಬೆಡ್ ಶೀಟ್ ನಲ್ಲಿ ಗಾಂಜಾ ತುಂಬಿ ಕಾರಿನಲ್ಲಿ ಬೆಂಗಳೂರಿಗೆ ತರುತ್ತಿದ್ದರು . ಗಾಂಜಾ ತರುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಗೋವಿಂದಪುರ ಠಾಣೆ ಪೊಲೀಸರು ಹೆಚ್ ಬಿ ಆರ್ ಲೇಔಟ್ ಬಳಿ ಕಾರನ್ನು ಅಡ್ಡ ಹಾಕಿದ್ದಾರೆ. ಪೊಲೀಸರು ಪರಿಶೀಲನೆ ನಡೆಸುವಾಗ ಕಾರಿನಲ್ಲಿ 3 ಕೋಟಿ ರೂ. ಮೌಲ್ಯದ ಗಾಂ*ಜಾ ಪತ್ತೆಯಾಗಿದೆ. ಕೂಡಲೇ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಡ್ರಗ್ ಪೆಡ್ಲರ್ ಅಚ್ಚು ಕೇರಳ ಪೊಲೀಸರಿಗೆ ಬೇಕಾದ ಮೋಸ್ಟ್ ವಾಂಟೆಡ್ ಆರೋಪಿ ಎಂಬುದು ವಿಚಾರಣೆ ವೇಳೆ ತಿಳಿದು ಬಂದಿದ್ದು, ಆತನ ವಿರುದ್ಧ ಕೇರಳದ ವಿವಿಧ ಠಾಣೆಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ ಎಂದು ತಿಳಿದುಬಂದಿದೆ.
ಇಬ್ಬರು ವಿದೇಶಿ ಡ್ರಗ್ ಪೆಡ್ಲರ್ಸ್ ಅರೆಸ್ಟ್ :
ಬೆಂಗಳೂರಿನಲ್ಲಿ ವಿದೇಶಿ ಡ್ರ*ಗ್ ಪೆಡ್ಲರ್ ಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರ ಬಳಿಯಿದ್ದ 3 ಕೋಟಿ ಮೌಲ್ಯದ ಸಿಂಥೆಟಿಕ್ ಡ್ರಗ್ಸ್ ಜಪ್ತಿ ಮಾಡಲಾಗಿದೆ. ಡ್ರಗ್ಸ್ ಸಂಗ್ರಹಿಸಿಟ್ಟಿದ್ದ ಮನೆ ಮೇಲೆ ದಾ*ಳಿ ನಡೆಸಿದ ಸಿಸಿಬಿ ಅಧಿಕಾರಿಗಳು, 1 ಕೆಜಿ 520 ಗ್ರಾಂ ಎಂಡಿಎಂಎ ಕ್ರಿಸ್ಟಲ್, 202 ಗ್ರಾಂ ಕೊಕೇನ್, 12 ಗ್ರಾಂ ಎಂಡಿಎಂಎ ಎಕ್ಸೆಟೆಸಿ ಪಿಲ್ಸ್ ಗಳನ್ನು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ : ಏನಾಶ್ಚರ್ಯ ? ಈ ಡಯಟ್ನಿಂದ ಪತ್ನಿಯ 4ನೇ ಸ್ಟೇಜ್ ಸ್ತನ ಕ್ಯಾನ್ಸರ್ ಮಾಯ !!
ಆರೋಪಿಗಳು ಮುಂಬೈನಿಂದ ಬೆಂಗಳೂರಿಗೆ ಡ್ರ*ಗ್ಸ್ ತರಿಸುತ್ತಿದ್ದರು. ಹೊಸ ವರ್ಷಾಚರಣೆಯಂದು ಬೆಂಗಳೂರಿನಲ್ಲಿ ಮಾರಲು ಸಜ್ಜಾಗಿದ್ದರು ಎಂದು ತಿಳಿದು ಬಂದಿದೆ. ಅಲ್ಲದೇ, ಈ ವಿದೇಶಿ ಪೆಡ್ಲರ್ ಗಳು ಮೆಡಿಕಲ್ ವೀಸಾದಡಿ ಭಾರತಕ್ಕೆ ಬಂದಿದ್ದರು ಎಂಬುದು ತನಿಖೆ ವೇಳೆ ಬಹಿರಂಗವಾಗಿದೆ.
ಫ್ರಿಜ್ಜಿನ್ನಲ್ಲಿರಿಸಿದ ಅಹಾರಗಳು ತಾಜಾತನವನ್ನು ಉಳಿಸಿಕೊಳ್ಳಲು ಕಾರಣವೆಂದರೆ ಶೀತಲೀಕರಣ. ಆದರೆ, ಈ ಪರಿ ಎಲ್ಲಾ ಬಗೆಯ ಅಹಾರಗಳಿಗೆ ಅನ್ವಯಿಸಲಾರದು. ಕೆಲವು ಫಲಗಳಂತೂ ಫ್ರಿಜ್ಜಿನಲ್ಲಿಟ್ಟರೇ ಸಾಕು, ಚೆನ್ನಾಗಿರುವ ಬದಲು ಹಾಳಾಗಲು ತೊಡಗುತ್ತವೆ. ಇಂದಿನ ಲೇಖನದಲ್ಲಿ ಈ ಗುಣವಿರುವ ಕೆಲವು ಫಲಗಳ ಬಗ್ಗೆ ವಿವರಿಸಲಾಗಿದೆ. ಇವನ್ನು ಫ್ರಿಜ್ಜಿನಲ್ಲಿಡುವ ಬದಲು ತಣ್ಣನೆಯ ಸ್ಥಳದಲ್ಲಿ ಗಾಳಿಯಾಡದಂತೆ ಶೇಖರಿಸಬೇಕು. ಈ ಫಲಗಳು ಯಾವುವು ಎಂಬುದನ್ನು ನೋಡೋಣ.
ಬಾಳೆಹಣ್ಣು
ಬಾಳೆಹಣ್ಣುಗಳನ್ನು ಎಂದಿಗೂ ಫ್ರಿಜ್ಜಿನಲ್ಲಿ ಸಂಗ್ರಹಿಸಬಾರದು. ಏಕೆಂದರೆ ಬಾಳೆಹಣ್ಣಿನ ತಾಪಮಾನ ಸಾಮಾನ್ಯ ತಾಪಮಾನಕ್ಕಿಂತ ಕಡಿಮೆಯಾದರೆ, ಇದರ ಸಿಪ್ಪೆ ಶೀಘ್ರವೇ ಕಪ್ಪಾಗುತ್ತದೆ ಹಾಗೂ ಸಿಪ್ಪೆಯ ಅಡಿಯಲ್ಲಿನ ತಿರುಳು ಕೂಡಾ ಕೊಳೆಯಲು ತೊಡಗುತ್ತದೆ.
ಕಲ್ಲಂಗಡಿ
ಬೇಸಿಗೆಯಲ್ಲಿ ಜನರು ಅತಿ ಹೆಚ್ಚಾಗಿ ಇಷ್ಟಪಡುವ ಫಲವಾದ ಕಲ್ಲಂಗಡಿಯನ್ನೂ ಫ್ರಿಜ್ಜಿನಲ್ಲಿ ಇರಿಸಬಾರದು. ಆದರೆ, ಸಾಮಾನ್ಯವಾಗಿ ಕಲ್ಲಗಂಡಿ ದೊಡ್ಡ ಗಾತ್ರದಲ್ಲಿದ್ದು ಇದನ್ನು ಕತ್ತರಿಸಿದಾಗ ದೊರಕುವ ಆಗಾಧ ಪ್ರಮಾಣವನ್ನು ಫ್ರಿಜ್ಜಿನಲ್ಲಿ ಸಂಗ್ರಹಿಸದೇ ಬೇರೆ ಮಾರ್ಗವಿಲ್ಲ. ಆದರೆ, ನಿಸರ್ಗಕ್ಕೆ ನಿಮ್ಮ ಈ ಅಗತ್ಯತೆಯ ಅರಿವಿಲ್ಲ. ಸೇಬನ್ನು ಕತ್ತರಿಸಿ ಕೊಂಚ ಹೊತ್ತು ಇರಿಸಿದಾಗ ಗಾಳಿಗೆ ತೆರೆದ ಭಾಗ ಕಪ್ಪಗಾಗುತ್ತದೆ. ಕಲ್ಲಂಗಡಿ ಹಣ್ಣಿನಲ್ಲಿಯೂ ಹೀಗೇ, ಗಾಳಿಗೆ ಒಡ್ಡಿದ ಭಾಗದ ಆಂಟಿ ಆಕ್ಸಿಡೆಂಟುಗಳು ರಾಸಾಯನಿಕ ಕ್ರಿಯೆಗೆ ಒಳಪಟ್ಟು ಶೀಘ್ರವೇ ಹುಳಿಯಾಗುತ್ತದೆ.
ಸೇಬು
ಸೇಬು ಹಣ್ಣುಗಳು 90% ತೇವಾಂಶವನ್ನು ಹೊಂದಿರುವ ಪರಿಸರದಲ್ಲಿ ಹೆಚ್ಚು ಹೊತ್ತು ಕೆಡದೇ ತಾಜಾತನವನ್ನುಉಳಿಸಿಕೊಳ್ಳುತ್ತವೆ. ಆದರೆ ನಮ್ಮ ರೆಫ್ರಿಜರೇಟರ್ ನೈಸರ್ಗಿಕ ಡಿಹೈಡ್ರೇಟರ್ ಅಥವಾ ತೇವಾಂಶ ಇರದ ಸ್ಥಳವಾಗಿದೆ. ಹಾಗಾಗಿ, ಫ್ರಿಜ್ಜಿನಲ್ಲಿಟ್ಟ ಸೇಬು ತೇವಾಂಶದ ಕೊರತೆಗೆ ಒಡ್ಡಿಕೊಳ್ಳುತ್ತವೆ. ಈ ಸ್ಥಿತಿಯಲ್ಲಿ ಸೇಬಿನಲ್ಲಿರುವ ಇಥೈಲೀನ್ ಹಾಗೂ ಇತರ ಕಿಣ್ವಗಳು ತಿರುಳನ್ನು ಅತಿ ಶೀಘ್ರವಾಗಿ ಹಣ್ಣಾಗಿಸುತ್ತವೆ ಹಾಗೂ ಕೊಳೆಯಲು ಪ್ರಾರಂಭಿಸುತ್ತದೆ.
ಮಾವಿನ ಹಣ್ಣು
ಮಾವಿನ ಹಣ್ಣನ್ನು ಫ್ರಿಜ್ಜಿನಲ್ಲಿ ಇರಿಸಿದರೆ ಇದರಲ್ಲಿರುವ ಆಂಟಿ ಆಕ್ಸಿಡೆಂಟುಗಳ ಪ್ರಮಾಣ ತಗ್ಗತೊಡಗುತ್ತದೆ. ಹಾಗಾಗಿ ಮಾವಿನ ಹಣ್ಣಿನ ಪೌಷ್ಟಿಕ ಮೌಲ್ಯಗಳು ಕಡಿಮೆಯಾಗುತ್ತವೆ. ಈ ಹಣ್ಣುಗಳನ್ನು ಫ್ರಿಜ್ಜಿನಲ್ಲಿರಿಸಿದರೆ ಮಾವಿನ ಹಣ್ಣು ವಿಷಕಾರಿ ಯಾಗ ಬಹುದು. ಬದಲಿಗೆ ಇನ್ನೂ ಕಾಯಿಯಾಗಿರುವ ಮಾವು ಗಳನ್ನು ತಂದು ಬೆಚ್ಚಗಿರುವ ಮತ್ತು ನೆರಳಿನ ಸ್ಥಳದಲ್ಲಿ ಇರಿಸಿ ಒಂದೆರಡು ದಿನಗಳ ಬಳಿಕ ಸ್ವಾಭಾವಿಕವಾಗಿ ಹಣ್ಣಾಗುವಂತೆ ಮಾಡಿ ಸೇವಿಸಿ.
ಲಿಚ್ಚಿ
ಬೇಸಿಗೆಯಲ್ಲಿ ಸೇವಿಸಲು ರುಚಿಕರವಾದ ಚಿಕ್ಕ ಗೋಲಿಗ ಳಂತಿರುವ ಲಿಚ್ಚಿ ಹಣ್ಣುಗಳನ್ನು ಎಂದಿಗೂ ಫ್ರಿಜ್ಜಿನಲ್ಲಿ ಇರಿಸ ಬಾರದು. ಏಕೆಂದರೆ, ತಂಪಾದ ತಾಪಮಾನದಲ್ಲಿ ಇದರ ತಿರುಳು ಕೊಳೆಯಲು ಆರಂಭಿಸುತ್ತದೆ. ಆದರೆ, ಸಿಪ್ಪೆ ಮಾತ್ರ ಹಾಳಾಗದೇ ಹಾಗೇ ಉಳಿದಿರುತ್ತದೆ. ಫ್ರಿಜ್ಜಿ ನಿಂದ ತೆಗೆದು ನೋಡಿದ ಲಿಚ್ಚಿಯ ಸಿಪ್ಪೆ ಚೆನ್ನಾಗಿರು ವಂತೆಯೇ ಕಂಡುಬಂದರೂ ಒಳಗಿನ ತಿರುಳು ಕೊಳೆತಿರುತ್ತದೆ.